ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಯಾರೇ ಗೆದ್ದರು ಸಂಸತ್ತಿಗೆ ಹೋಗುವುದು ಮಹಿಳೆಯರೇ

ದೇಶದ 12 ರಾಜ್ಯಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ರಾಜಕಾರಣಿಗಳು ಮಹಿಳೆಯ ಕಡೆ ಗಮನ ಹರಿಸುತ್ತಿದ್ದಾರೆ. ಬೆಣ್ಣೆ ನಗರಿ ದಾವಣಗೆರೆ ಇವರೆಲ್ಲರಿಗಿಂತ ವಿಶೇಷ ಮತ್ತು ವಿಶಿಷ್ಟವಾದ ಕ್ಷೇತ್ರ. ಇನ್ನು ಮಹಿಳಾ ಮೀಸಲಾತಿ ಜಾರಿಗೆ ಬಂದಿಲ್ಲ. ಆದರೆ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಅದು ಜಾರಿಗೆ ಬಂದಂತೆ ಕಂಡು ಬರುತ್ತದೆ. ಇಲ್ಲಿ ಯಾರೇ ಗೆದ್ದರು ಸಂಸತ್ತಿಗೆ ಮಹಿಳೆಯರೇ ಹೋಗುತ್ತಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಯಾರೇ ಗೆದ್ದರು ಸಂಸತ್ತಿಗೆ ಹೋಗುವುದು ಮಹಿಳೆಯರೇ
ಗಾಯತ್ರಿ ಸಿದ್ದೇಶ್ವರ, ಡಾ. ಪ್ರಭಾ ಮಲ್ಲಿಕಾರ್ಜುನ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Apr 07, 2024 | 4:02 PM

ದಾವಣಗೆರೆ, ಏಪ್ರಿಲ್ 07: ರಾಜ್ಯದ ಬಹುತೇಕ ಗ್ಯಾರೆಂಟಿಗಳು ಸ್ತ್ರೀ ಕೇಂದ್ರಿತವಾಗಿವೆ. ಮೇಲಾಗಿ ದೇಶದ ಹನ್ನೆರಡು ರಾಜ್ಯಗಳಲ್ಲಿ ಮಹಿಳಾ ಮತದಾರ ಸಂಖ್ಯೆ ಹೆಚ್ಚಿದೆ. ವಿಶೇಷ ನೋಡಿ ರಾಜ್ಯದ 28 ಲೋಕ ಸಭಾ ಕ್ಷೇತ್ರಗಳಲ್ಲಿ 17ರಲ್ಲಿ ಮಹಿಳೆಯರ ಸಂಖ್ಯೆ ಜಾಸ್ತಿ ಇದೆ. ಇದು ಕಳೆದ ಲೋಕಸಭೆ ಚುನಾವಣೆಗಿಂತ ಈ ಸಲ ಶೇಕಡಾ 7 ರಷ್ಟು ಜಾಸ್ತಿ ಆಗಿದೆ. ಇದರಲ್ಲಿ ವಿಶೇಷ ಅಂದ್ರೆ ದಾವಣಗೆರೆ (Davanagere). ಇಲ್ಲಿ ಸ್ಪರ್ಧಾಳುಗಳು ಸಹ ಮಹಿಳೆಯರೇ, ಹೆಚ್ಚಿನ ಮತದಾರರು ಮಹಿಳೆ. ಎಸ್ಪಿ, ಎಡಿಸಿ ಸೇರಿದಂತೆ ಬಹುತೇಕ ಇಲಾಖೆ ಅಧಿಕಾರಿಗಳು ಮಹಿಳೆಯರೇ. ಈ ಕುರಿತಾದ ವಿಶೇಷ ವರದಿ ಇಲ್ಲಿದೆ.

ರಾಜ್ಯದಲ್ಲಿ 54208088 ಮತದಾರರಿದ್ದಾರೆ. ಇವರಲ್ಲಿ 27121407 ಪುರುಷರು, 27081750 ಮಹಿಳಾ ಮತದಾರರಿದ್ದಾರೆ. ಅಂದ್ರೆ ಮತದಾರರ ಪಟ್ಟಿ ಪ್ರಕಾರ ರಾಜ್ಯದಲ್ಲಿ 39657 ಮಾತ್ರ ಪುರುಷರ ಸಂಖ್ಯೆ ಹೆಚ್ಚಾಗಿದೆ. ರಾಜ್ಯದ 28 ಲೋಕ ಸಭಾ ಕ್ಷೇತ್ರಗಳಲ್ಲಿ 17 ರಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. ಇದರಲ್ಲಿ ದಾವಣಗೆರೆ ಕೂಡಾ ಒಂದು. ವಿಶೇಷ ಅಂದ್ರೆ ದೇಶದ 12 ರಾಜ್ಯಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ರಾಜಕಾರಣಿಗಳು ಮಹಿಳೆಯ ಕಡೆ ಗಮನ ಹರಿಸುತ್ತಿದ್ದಾರೆ. ಬೆಣ್ಣೆ ನಗರಿ ದಾವಣಗೆರೆ ಇವರೆಲ್ಲರಿಗಿಂತ ವಿಶೇಷ ಮತ್ತು ವಿಶಿಷ್ಟವಾದ ಕ್ಷೇತ್ರ. ಇನ್ನು ಮಹಿಳಾ ಮೀಸಲಾತಿ ಜಾರಿಗೆ ಬಂದಿಲ್ಲ. ಆದ್ರೆ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಅದು ಜಾರಿಗೆ ಬಂದಂತೆ ಕಂಡು ಬರುತ್ತದೆ.

ಇದನ್ನೂ ಓದಿ: ಅಡುಗೆ ಮಾಡುವುದಕ್ಕೆ ಲಾಯಕ್ಕು: ಬಿಜೆಪಿ ಅಭ್ಯರ್ಥಿ ವಿರುದ್ಧದ ಹೇಳಿಕೆ ಬಗ್ಗೆ ಚುನಾವಣಾ ಆಯೋಗಕ್ಕೆ ಶಾಮನೂರು ಸ್ಪಷ್ಟನೆ

ಇಲ್ಲಿ ಯಾರೇ ಗೆದ್ದರು ಸಂಸತ್ತಿಗೆ ಮಹಿಳೆಯರೇ ಹೋಗುತ್ತಾರೆ. ಕಾಂಗ್ರೆಸ್ಸಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ. ಇತ್ತ ಬಿಜೆಪಿಯಿಂದ ಸಂಸದ ಜಿಎಂ ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಕಣದಲ್ಲಿ ಇದ್ದಾರೆ. ಇಬ್ಬರು ಮಹಿಳೆಯರು. ಮೇಲಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಹೊನ್ನಾಳಿ, ಚನ್ನಗಿರಿ ಮಾಯಕೊಂಡ, ಜಗಳೂರು ಹರಿಹರ ಹಾಗೂ ಹರಪನಹಳ್ಳಿ ಹೀಗೆ ಎಂಟು ವಿಧಾನ ಸಭಾ ಕ್ಷೇತ್ರದಲ್ಲಿ 1679746 ಮತದಾರರಿದ್ದಾರೆ. ಇವರಲ್ಲಿ 840340 ಹಿಳೆಯರು, 83870ಪುರುಷ ಮತದಾರರಿದ್ದಾರೆ. ಇದರಿಂದ ಗೊತ್ತಾಗುತ್ತೆ ಮಹಿಳೆಯರೇ ಹೆಚ್ಚಾಗಿದ್ದಾರೆ. ಇಬ್ಬರು ಅಭ್ಯರ್ಥಿಗಳು ಸಹ ಮಹಿಳೆಯರೇ.

ಇನ್ನೊಂದು ವಿಶೇಷ ಅಂದ್ರೆ ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆ ಮತದಾರ ಸಂಖ್ಯೆ ಹೆಚ್ಚಿದೆ. ಇದೇ ಲೋಕ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹರಪನಹಳ್ಳಿ ಕ್ಷೇತ್ರ ಶಾಸಕ ಲತಾ ಮಲ್ಲಿಕಾರ್ಜುನ ಸಹ ಮಹಿಳೆ. ದಾವಣಗೆರೆ ಜಿಲ್ಲಾ ಪ್ರಧಾನ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರಿ ಎನ್ ಹೆಗಡೆ ಮಹಿಳೆ, ದಾವಣಗೆರೆ ಎಸ್ಪಿ ಉಮಾ ಪ್ರಶಾಂತ ಮಹಿಳೆ, ಎಡಿಸಿ ಮಹಿಳೆ, ಮಹಾನಗರ ಪಾಲಿಕೆ ಆಯುಕ್ತ ರೇಣಾಕಾ ಮಹಿಳೆ, ಉಪವಿಭಾಗಾಧಿಕಾರಿ ದುರ್ಗಶ್ರೀ ಮಹಿಳೆ. ಮಹಿಳಾ ಮತ್ತು ಮಕ್ಕಳ ಕಲ್ಯಾ ಇಲಾಖೆ ಜೆಡಿ ಮಹಿಳೆ ಹೀಗೆ ದಾವಣಗೆರೆ ಜಿಲ್ಲೆಯಲ್ಲಿ ಮಹಿಳಾ ಪಡೆಯೇ ಮನೆ ಮಾಡಿದೆ.

ಇದನ್ನೂ ಓದಿ: ಆಧಾರ್​​ ಕಾರ್ಡ್​ ತೋರಿಸಿ ದಾವಣಗೆರೆ ಸಿಟಿ ಬಸ್​​ನಲ್ಲಿ ಪ್ರಯಾಣಿಸಿದ ಕಾಂಗ್ರೆಸ್​ ಅಭ್ಯರ್ಥಿ

ಹೀಗೆ ದೇಶದಲ್ಲಿ ದಿನದಿಂದ ದಿನಕ್ಕೆ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲ ಸಮಾಜಗಳಲ್ಲಿ ಕನ್ಯಾಕ್ಷಾಮ ಶುರುವಾಗಿದೆ. ಮಹಿಳೆಯ ಸಂಖ್ಯೆ ಹೆಚ್ಚಿದ್ದರು ಸಹ ಮದುವೆ ಆಗಲು ಹೆಣ್ಣು ಸಿಗುತ್ತಿಲ್ಲ. ಇದಕ್ಕೆ ಕಾರಣ ಜಾತಿ ವ್ಯವಸ್ಥೆ. ದೇಶದಲ್ಲಿನ ದಾಖಲೆಗಳ ಪ್ರಕಾರ ಸಂವಿಧಾನ ಜಾರಿಗೆ ಬಂದಾಗಿನಿಂದ ಕೇವಲ ಶೇಖಡ ಒಂಬತ್ತರಷ್ಟು ಮಾತ್ರ ಅಂತರ್ಜಾತಿ ವಿವಾಹಗಳಾಗಿವೆ. ಮಹಿಳೆಯರ ಸಂಖ್ಯೆ ಹೆಚ್ಚಾದಂತೆ ಹೆಚ್ಚು ಹೆಚ್ಚು ಮಹಿಳೆಯರು ರಾಜಕೀಯ ಅಧಿಕಾರ ಹಿಡಿಯಬೇಕು. ಅದು ಗಂಡನ ಅಣತಿಯಿಂದ ಬದುಕುವುದು ಆಗಬಾರದು. ಸದ್ಯಕ್ಕಂತು ದಾವಣಗೆರೆಯಲ್ಲಿ ಮಹಿಳಾ ದರ್ಬಾರ ಜೋರಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ