ದಾವಣಗೆರೆ: ಹಸಿರು ಬೆಳೆಸುವ ವಿಶಿಷ್ಟ ಕಾರ್ಯ ನಡೆಸಲು ದಾವಣಗೆರೆ ಮಹಾನಗರ ಪಾಲಿಕೆ ಮುಂದಾಗಿದೆ. ಜಿಲ್ಲೆಯಲ್ಲಿ ಹಸಿರು ಬೆಳೆಸುವ ಹೊಸ ಯೋಜನೆ, ದಾವಣಗೆರೆಯನ್ನು ಗ್ರೀನ್ ಸಿಟಿ ಮಾಡುವ ಯೋಚನೆ ರೂಪ ಪಡೆದಿದೆ. ಜಪಾನ್ ಮಿಯಾ ವಾಕಿ ಮಾದರಿಯಲ್ಲಿ ಮರ ಬೆಳೆಸಲು ದಾವಣಗೆರೆ ಮಹಾನಗರ ಪಾಲಿಕೆ ಮುಂದಾಗಿದೆ. ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ 1000ಗಿಡ ನೆಡುವ ಕಾರ್ಯಕ್ರಮಕ್ಕೆ ಇಂದು (ಆಗಸ್ಟ್ 9) ಚಾಲನೆ ದೊರೆತಿದೆ.
ನಗರದ ಶಾಮನೂರ ಬಳಿಯ ಡಾಲರ್ಸ್ ಕಾಲೋನಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಮಹಾನಗರ ಪಾಲಿಕೆ ಮೇಯರ್ ಎಸ್.ಟಿ ವೀರೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಕ್ರೂಢೀಕೃತ ಅರಣ್ಯ ನಿರ್ಮಾಣಕ್ಕೆ ನಗರದಲ್ಲಿ 15 ಕಡೆ ಪಾಲಿಕೆ ಸ್ಥಳಗಳನ್ನು ನಿಗದಿ ಮಾಡಿದೆ. ನಗರವನ್ನ ಹಸಿರು ನಗರ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಯೋಜನೆಯ ಉದ್ದೇಶವನ್ನು ಮೇಯರ್ ಎಸ್.ಟಿ ವೀರೇಶ್ ಮಾಹಿತಿ ನೀಡಿದ್ದಾರೆ.
ಕೆಆರ್ಎಸ್ ಪಕ್ಷದ ಮೂರು ಕಾರ್ಯಕರ್ತರ ಬಂಧನ
ಜಿಲ್ಲೆಯ ನಿಟುವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಗಲಭೆಗೆ ಪ್ರಚೋದನೆ ನೀಡಿ ಅದನ್ನು ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟು,ಅನೈತಿಕ ಪೊಲೀಸ್ಗಿರಿ ಮಾಡುತ್ತಿದ್ದ ಕೆಆರ್ಎಸ್ (ಕರ್ನಾಟಕ ರಾಷ್ಟ್ರೀಯ ಸಮಿತಿ) ಪಕ್ಷದ ಮೂವರು ಕಾರ್ಯಕರ್ತರನ್ನು ದಾವಣಗೆರೆ ಜಿಲ್ಲೆಯ ಕೆಟಿಜೆ ನಗರ ಪೊಲೀಸರು ನಿನ್ನೆ (ಆಗಸ್ಟ್ 8) ಬಂಧಿಸಿದ್ದಾರೆ.
ಎಚ್ಕೆಆರ್ ಸರ್ಕಲ್ನ ಮಾಲತೇಶ, ಶಶಿಕುಮಾರ ಹಾಗೂ ನಿಟುವಳ್ಳಿಯ ಅಭಿಷೇಕ್ ಬಂಧಿತರು. ನಿಟುವಳ್ಳಿ ಆರೋಗ್ಯ ಕೇಂದ್ರದ ಬಳಿ ಜುಲೈ 31 ರಂದು ಲಸಿಕೆ ಅಭಿಯಾನ ನಡೆಯುವ ವೇಳೆ ಆಸ್ಪತ್ರೆಯವರು ಭ್ರಷ್ಟರಿದ್ದಾರೆ ಒಳಗೆ ನುಗ್ಗಿ ನಾವು ಫೇಸ್ಬುಕ್ನಲ್ಲಿ ಲೈವ್ ಮಾಡುತ್ತೇವೆ ಎಂದು ಹೇಳಿ ವಿಡಿಯೋ ಮಾಡಿದ್ದರು. ಅಲ್ಲದೆ ಗಲಭೆಗೆ ಪ್ರಚೋದನೆ ನೀಡಿದ್ದರು. ಹೀಗಾಗಿ ಈ ಮೂವರನ್ನು ಠಾಣೆಗೆ ಕರೆತಂದ ಪೊಲೀಸರು ಪ್ರಕರಣ ದಾಖಲಿಸಿ ತಹಶೀಲ್ದಾರ್ಗೆ ವರದಿ ನೀಡಿದ್ದು, ವರದಿ ವಿಚಾರಣೆಯ ಹಂತದಲ್ಲಿದೆ.
ಇದನ್ನೂ ಓದಿ: ದಾವಣಗೆರೆ: ಅಜ್ಜಿ ಹಬ್ಬದ ವಿಶೇಷತೆ ಏನು? ಮಳೆಗಾಲದಲ್ಲಿಯೇ ಈ ಹಬ್ಬ ಆಚರಿಸಲು ಅನೇಕ ಕಾರಣಗಳಿವೆ
Davanagere: 4 ಜಾನುವಾರುಗಳನ್ನು ತಿಂದಿದ್ದ ಚಿರತೆಯನ್ನು ರೈತರೇ ಸೆರೆಹಿಡಿದರು!
(Mahanagara Palike Municipality of Davanagere inaugurates new project on Green City)
Published On - 5:39 pm, Mon, 9 August 21