AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಧನಕ್ಕೆ ಬಂದ ಪೊಲೀಸರ ಮೇಲೆಯೇ ‘ಕೈ’ ಮುಖಂಡನ ಪುತ್ರನಿಂದ ನಡೀತಾ ಹಲ್ಲೆ?

ದಾವಣಗೆರೆಯಲ್ಲಿ ಕಾಂಗ್ರೆಸ್ ನಾಯಕರೋರ್ವರ ಪುತ್ರ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆಸ್ಪತ್ರೆ ಆವರಣದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಬಂಧಿಸಲು ಬಂದಾಗ ಪೊಲೀಸರ ಮೇಲೆ ದಾಳಿ ನಡೆದಿದೆ ಎನ್ನಲಾಗಿದ್ದು, ಈ ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಜಿಲ್ಲಾ ಆಸ್ಪತ್ರೆ ಆವರಣದಲ್ಲಿನ ಗಲಾಟೆ ವಿಚಾರವಾಗಿ ಬಿಗುವಿನ ವಾತಾರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್​​ ಕೈಗೊಳ್ಳಲಾಗಿದೆ.

ಬಂಧನಕ್ಕೆ ಬಂದ ಪೊಲೀಸರ ಮೇಲೆಯೇ 'ಕೈ' ಮುಖಂಡನ ಪುತ್ರನಿಂದ ನಡೀತಾ ಹಲ್ಲೆ?
ಆರೋಪಿ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on:Jan 31, 2026 | 10:35 PM

Share

ದಾವಣಗೆರೆ, ಜನವರಿ 31: ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಯುವಕರ ಮೇಲೆ ದಾಳಿ ಪ್ರಕರಣ ಸಂಬಂಧ ಬಂಧಿಸಲು ಬಂದ ಪೊಲೀಸರ ಮೇಲೆಯೇ ಕಾಂಗ್ರೆಸ್​​ ಮುಖಂಡ, ಸಚಿವರ ಆಪ್ತನ ಮಗ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಪೈಲ್ವಾನ್ ಪುತ್ರ ಹಸನ್ ಆರೋಪಿಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಆಪ್ತರೂ ಆಗಿರುವ ಅಯೂಬ್ ಪೈಲ್ವಾನ್ ಮನೆ ಮುಂದೆ ಭಾರಿ ಹೈಡ್ರಾಮಾ ನಡೆದಿದೆ. ಅಂತಿಮವಾಗಿ ಹಸನ್​​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ದಾವಣಗೆರೆ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಎದುರು ಕ್ಷುಲ್ಲಕ ಕಾರಣಕ್ಕೆ ಒಂದೇ ಕೋಮಿನ ಎರಡು ಗುಂಪು ಬಡಿದಾಡಿಕೊಂಡಿತ್ತು.ಗಲಾಟೆಯಲ್ಲಿ 6 ಜನರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದರು. ಯುವಕರ ಮೇಲೆ ದಾಳಿ ಮಾಡಿರೋದು ಅಯೂಬ್ ಪೈಲ್ವಾನ್ ಪುತ್ರರು ಎಂಬ ಕಾರಣಕ್ಕೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಬಡಾವಣೆ ಠಾಣೆ ಇನ್ಸ್​​ಪೆಕ್ಟರ್​​ ಗಾಯತ್ರಿ, ಕಾನ್ಸ್​ಟೇಬಲ್​​ಗಳಾದ ಕೆಂಚಪ್ಪ ಮತ್ತು ಹರೀಶ್ ಸೇರಿ ತಂಡ ತೆರಳಿತ್ತು. ಈ ವೇಳೆ ಮನೆಯಲ್ಲಿದ್ದ ಆರೋಪಿ ಹಸನ್, ಪೊಲೀಸರ ಮೇಲೆಯೇ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡಿರೋ ಪೊಲೀಸ್​​ ಸಿಬ್ಬಂದಿಗಳಾದ ಕೆಂಚಪ್ಪ ಮತ್ತು ಹರೀಶ್​​ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಇದನ್ನೂ ಓದಿ: ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ

ಜಿಲ್ಲಾ ಆಸ್ಪತ್ರೆ ಆವರಣದಲ್ಲಿನ ಗಲಾಟೆ ವಿಚಾರವಾಗಿ ಹಳೇ ದಾವಣಗೆರೆಯಲ್ಲಿ ಬಿಗುವಿನ ವಾತಾರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್​​ ಕೈಗೊಳ್ಳಲಾಗಿದೆ. ಇನ್ನು ನಗರದಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳಲ್ಲಿ ಮೇಲಿಂದ ಮೇಲೆ ಸಚಿವರ ಆಪ್ತರ ಹೆಸರು ಕೇಳಿಬರುತ್ತಿದೆ. ಇತ್ತೀಚಿಗೆ ಡ್ರಗ್ಸ್ ಕೇಸ್​​ನಲ್ಲಿ ಶಾಮನೂರು ವೇದಮೂರ್ತಿ, ಅನ್ವರ್ ಪಾಷಾ ಜೈಲು ಸೇರಿದ್ದಾರೆ. ಅಕ್ಕಿ ಸಾಗಾಣಿಕೆಯಲ್ಲಿ ಜಮೀರ್ ಎಂಬಾತ ಸಿಕ್ಕಿ ಬಿದ್ದಿದ್ದ. ಈ ನಡುವೆ ಅಯೂಬ್ ಪೈಲ್ವಾನ್ ಪುತ್ರ ಹಾಡುಹಗಲೇ ಆಸ್ಪತ್ರೆ ಆವರಣದಲ್ಲಿ ಹೊಡೆದಾಟ ನಡೆಸಿದ್ದಾನೆ. ಜೊತೆಗೆ ಪೊಲೀಸರ ಮೇಲೆ ಹಲ್ಲೆಯ ಆರೋಪವೂ ಕೇಳಿಬಂದಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 10:23 pm, Sat, 31 January 26

ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್