ನಾಲ್ಕು ವರ್ಷದ ಹಿಂದೆ ನಾಪತ್ತೆಯಾದ‌ ಮಹಿಳೆ ತನಿಖೆಗೆ ಅನಾಮಧೇಯ ಶವ ತೆಗೆದು ಡಿಎನ್​ಎ ಪರೀಕ್ಷೆ

2020ರಲ್ಲಿ 40 ವರ್ಷದ ಅರೆಬರೆ ಕೊಳೆತ ಮಹಿಳೆಯ ಶವ ಭದ್ರನಾಲೆ ಮುಖಾಂತರ ದಾವಣಗೆರೆ ಜಿಲ್ಲೆಯ ವ್ಯಾಪ್ತಿಯ ಸೂಳೆಕೆರೆ ತಲುಪಿತ್ತು. ಗುರುತು ಸಿಗದ ಹಿನ್ನೆಲೆ ಪೊಲೀಸರು ಶವ ಹೂತಿದ್ದರು. ಆದರೆ ನಾಲ್ಕು ವರ್ಷದ ಹಿಂದೆ ನಾಪತ್ತೆಯಾದ ಮಹಿಳೆಯ ಗುರುತು ಹಾಗೂ ಶವದ ಗುರುತು ಸಾಮ್ಯತೆ ಇದ್ದು ಶವ ಹೊರಕ್ಕೆ ತೆಗೆದು ತನಿಖೆ ನಡೆಸಲಾಗುತ್ತಿದೆ.

ನಾಲ್ಕು ವರ್ಷದ ಹಿಂದೆ ನಾಪತ್ತೆಯಾದ‌ ಮಹಿಳೆ ತನಿಖೆಗೆ ಅನಾಮಧೇಯ ಶವ ತೆಗೆದು ಡಿಎನ್​ಎ ಪರೀಕ್ಷೆ
ಶವ ಹೊರ ತೆಗೆದ ಅಧಿಕಾರಿಗಳು
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಆಯೇಷಾ ಬಾನು

Updated on: Feb 03, 2024 | 10:55 AM

ದಾವಣಗೆರೆ, ಫೆ.03: ಡಿಎನ್‌ಎ (DNA) ಪರೀಕ್ಷೆಗಾಗಿ ಹೂತ ಶವ ಹೊರಕ್ಕೆ ತೆಗೆದು ವೈದ್ಯರು, ಅಧಿಕಾರಿಗಳು ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಹೂತಿರುವ ಅನಾಮಧೇಯ ಶವ ಹಾಗೂ ನಾಲ್ಕು ವರ್ಷದ ಹಿಂದೆ ‌ನಾಪತ್ತೆಯಾದ ಮಹಿಳೆಗೆ ಸಾಮ್ಯತೆ ಇರುವ ಹಿನ್ನೆಲೆ ಕೋರ್ಟ್ ಆದೇಶ ನೀಡಿದ್ದು ನ್ಯಾಯಾಲಯದ ಆದೇಶದ ಹಿನ್ನೆಲೆ ಹೂತ ಶವ (Dead Body) ಹೊರಕ್ಕೆ ತೆಗೆಯಲಾಗಿದೆ. ಜಿಲ್ಲೆಯ ಚನ್ನಗಿರಿ ತಾಲೂಕು ಐತಿಹಾಸಿಕ ಸೂಳೆಕೆರೆ ಬದಿಯಲ್ಲಿ ವಾರಸುದಾರರು ಇಲ್ಲದ ಹಿನ್ನೆಲೆ ಪೊಲೀಸರು ನಿಯಮಾನುಸಾರ ಮಹಿಳೆಯ ಶವವನ್ನು ಹೂತಿದ್ದರು.

2020ರಲ್ಲಿ ಸುಮಾರು 40 ವರ್ಷದ ಅನಾಮಧೇಯ ಮಹಿಳೆಯ ಶವವನ್ನು ಹೂತಲಾಗಿತ್ತು. ತನಿಖೆಗಾಗಿ ಶವ ಹೊರಕ್ಕೆ ತೆಗೆಯಲಾಗಿದೆ. 2020ರಲ್ಲಿ 40 ವರ್ಷದ ಅರೆಬರೆ ಕೊಳೆತ ಮಹಿಳೆಯ ಶವ ಭದ್ರನಾಲೆ ಮುಖಾಂತರ ದಾವಣಗೆರೆ ಜಿಲ್ಲೆಯ ವ್ಯಾಪ್ತಿಯ ಸೂಳೆಕೆರೆ ತಲುಪಿತ್ತು. ಆಗ ಗುರುತಿಸಲಾಗದಂತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ವಾರಸುದಾರರು ಇಲ್ಲದ ಹಿನ್ನೆಲೆ ಅಧಿಕಾರಿಗಳೇ ಶವಸಂಸ್ಕಾರ ಮಾಡಿದ್ದರು. ಆದರೆ ಈಗ ನಾಲ್ಕು ವರ್ಷದ ಹಿಂದೆ ಕಾಣೆಯಾದ ಶಿವಮೊಗ್ಗ ಜಿಲ್ಲೆಯ ಓರ್ವ ಮಹಿಳೆಗೆ ಹೂತ್ತಿದ್ದ ಮೃತದೇಹ ಸಾಮ್ಯತೆಯಾಗಿರುವ ಇರುವ ಹಿನ್ನೆಲೆ ಶವ ಹೊರತೆಗೆದು ಡಿಎನ್ಎ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಅರತೋಳಲು ಕೈಮರದ ನಾಗರತ್ನಮ್ಮ ಕಾಣೆಯಾದ ಬಗ್ಗೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ಮಹಿಳೆಯ ಭಾವಚಿತ್ರ, ಸೂಳೆಕೆರೆ ಸಮೀಪದ ಭದ್ರಾ ನಾಲೆಯಲ್ಲಿ ದೊರೆತ ಅನಾಮದೇಯ ಶವ ಭಾಗಶಃ ಹೋಲಿಕೆಯಾಗಿದೆ. ಹೋಲಿಕೆ, ಶಂಕೆ ಹಿನ್ನೆಲೆ ಚನ್ನಗಿರಿ ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಆದೇಶದ ಮೇರೆಗೆ ದಾವಣಗೆರೆ ಎಫ್ ಎಸ್ ಎಲ್ ತಜ್ಞರು ಮತ್ತು ಚಿಗಟೇರಿ ಆಸ್ಪತ್ರೆಯ ವೈದ್ಯರ ಸಮ್ಮುಖದಲ್ಲಿ ಶವ ಹೊರಕ್ಕೆ ತೆಗೆಯಲಾಗಿದೆ. ಡಿಎನ್ಎ ಪರೀಕ್ಷೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮೃತದೇಹ ರವಾನಿಸಲಾಗಿದೆ.

ಇದನ್ನೂ ಓದಿ: ಚಾಮರಾಜನಗರ: ಕಾರ್ಯಾಚರಣೆಯಲ್ಲಿ ಸೆರೆ ಹಿಡಿಯಲಾಗಿದ್ದ ಆನೆ ಬಂಡೀಪುರದ ರಾಮಾಪುರ ಬಿಡಾರದಲ್ಲಿ ಸಾವು

ಕ್ಷುಲ್ಲಕ ಕಾರಣಕ್ಕೆ ಬಾಲಕನ ಮೇಲೆ ಮಚ್ಚಿನಿಂದ ಹಲ್ಲೆ

ಕ್ಷುಲ್ಲಕ ಕಾರಣಕ್ಕೆ ಬಾಲಕನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಕೀಲುಕೊಪ್ಪದಲ್ಲಿ ಘಟನೆ ನಡೆದಿದ್ದು, ಗೌತಮ್ ಎಂಬುವವನು ಗಂಭೀರವಾಗಿ ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ತೆಗೆಯುವ ವಿಚಾರಕ್ಕೆ ರವಿಕುಮಾರ್ ಮತ್ತು ಗೌತಮ್ ಮಧ್ಯೆ ಗಲಾಟೆ ಶುರುವಾಗಿದೆ. ಈ ವೇಳೆ ಗೌತಮ್​ಗೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ