ದೇವರ ಹೆಸರಲ್ಲಿ ಜಾಗಕ್ಕಾಗಿ ಆಟ ಕಾಟ! ದಶಕಗಳಿಂದ ನೆಲೆಸಿರುವ ಜಾಗದಿಂದ ವಕ್ಕಲೆಬ್ಬಿಸುವ ಭೀತಿ ಜನಕ್ಕೆ

ದಾವಣಗೆರೆ ತಾಲೂಕಿನ ದ್ಯಾಮೇನಹಳ್ಳಿ ಗ್ರಾಮದ ಜನರ ವಾಸ್ತವ ಸ್ಥಿತಿ ಇದು. ಈ ಗ್ರಾಮದಲ್ಲಿ ದಶಕಗಳಿಂದ ಹತ್ತಾರು ಕುಟುಂಬಗಳು ವಾಸವಾಗಿವೆ. ಬಹುತೇಕರು ಕೂಲಿ ಕಾರ್ಮಿಕರು. ಸರ್ಕಾರಿ ಗೋಮಾಳ ಎಂದು ದಶಕಗಳಿಂದ ನಿರ್ಗತಿಕ ಕುಟುಂಬಗಳು ಇಲ್ಲಿ ವಾಸವಾಗಿವೆ. ಆದ್ರೆ ಈ ಜಮೀನು ಗ್ರಾಮ ದೇವತೆ ದುರ್ಗಾಂಬಿಕಾ ದೇವಸ್ಥಾನಕ್ಕೆ ಸೇರಿದ್ದಾಗಿದೆ.

ದೇವರ ಹೆಸರಲ್ಲಿ ಜಾಗಕ್ಕಾಗಿ ಆಟ ಕಾಟ! ದಶಕಗಳಿಂದ ನೆಲೆಸಿರುವ ಜಾಗದಿಂದ ವಕ್ಕಲೆಬ್ಬಿಸುವ ಭೀತಿ ಜನಕ್ಕೆ
ದೇವರ ಹೆಸರಲ್ಲಿ ಜಾಗಕ್ಕಾಗಿ ಆಟ ಕಾಟ! ದಶಕಗಳಿಂದ ನೆಲೆಸಿರುವ ಜಾಗದಿಂದ ವಕ್ಕಲೆಬ್ಬಿಸುವ ಭೀತಿ ಜನಕ್ಕೆ
Follow us
TV9 Web
| Updated By: ಆಯೇಷಾ ಬಾನು

Updated on: Jan 26, 2022 | 12:05 PM

ದಾವಣಗೆರೆ: ಅಲ್ಲಿನ ಜನ ದಶಕಗಳಿಂದ ಸೂರಿಗಾಗಿ ಪರದಾಡುತ್ತಿದ್ದಾರೆ. ನಿಂತ ಜಾಗ ಯಾವಾಗ ಖಾಲಿ ಮಾಡ್ಬೇಕಾಗುತ್ತೋ ಎಂಬ ಆತಂಕದಲ್ಲೇ ದಿನದೂಡುತ್ತಿದ್ದಾರೆ. ಯಾರದ್ದೋ ಹಿತಾಸಕ್ತಿಗೆ ದೇವರ ಹೆಸರಲ್ಲಿ ಕೆಲವರು ಆಟವಾಡುತ್ತಿದ್ದಾರೆ.

ದಾವಣಗೆರೆ ತಾಲೂಕಿನ ದ್ಯಾಮೇನಹಳ್ಳಿ ಗ್ರಾಮದ ಜನರ ವಾಸ್ತವ ಸ್ಥಿತಿ ಇದು. ಈ ಗ್ರಾಮದಲ್ಲಿ ದಶಕಗಳಿಂದ ಹತ್ತಾರು ಕುಟುಂಬಗಳು ವಾಸವಾಗಿವೆ. ಬಹುತೇಕರು ಕೂಲಿ ಕಾರ್ಮಿಕರು. ಸರ್ಕಾರಿ ಗೋಮಾಳ ಎಂದು ದಶಕಗಳಿಂದ ನಿರ್ಗತಿಕ ಕುಟುಂಬಗಳು ಇಲ್ಲಿ ವಾಸವಾಗಿವೆ. ಆದ್ರೆ ಈ ಜಮೀನು ಗ್ರಾಮ ದೇವತೆ ದುರ್ಗಾಂಬಿಕಾ ದೇವಸ್ಥಾನಕ್ಕೆ ಸೇರಿದ್ದಾಗಿದೆ. ಹೀಗಾಗಿ ಈ ಜಮೀನು ದೇವಸ್ಥಾನಕ್ಕೇ ಸೇರಬೇಕೆಂಬ ವಾದ ಶುರುವಾಗಿದೆ. ಇದರಿಂದ ಇಲ್ಲಿ ವಾಸವಾಗಿರುವ ಜನರಿಗೆ ಆತಂಕ ಶುರುವಾಗಿದೆ. ಮುಂದೆ ನಮ್ಮ ಗತಿ ಏನೆಂದು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಗ್ರಾಮದ ಗ್ರಾಮ ಪಂಚಾಯತ್ ಉಪಾಧ್ಯಕ್ಷೆಯೇ ಗುಡಿಸಲಿನಲ್ಲಿ ವಾಸವಾಗಿದ್ದಾರೆ.

ಹೀಗೆ ನಾಲ್ಕು ದಶಕಗಳಿಂದ ಕೆಲವರು ಹಕ್ಕು ಪತ್ರಕೊಡಿಸುವುದಾಗಿ ಹೇಳಿ ಇಲ್ಲಿನ ಜನರನ್ನ ಸುಲಿಗೆ ಮಾಡ್ತಿದ್ದಾರೆ. ಮೇಲಾಗಿ ಈ ವಿಚಾರ ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ನ್ಯಾಯ ಪೀಠದಲ್ಲಿ ಸಹಚರ್ಚೆಗೆ ಬಂದಿದೆ. ಇದರಲ್ಲಿ ಕೆಲವರು ಕೋರ್ಟ್ ಮೊರೆ ಹೋದ ಹಿನ್ನೆಲೆ ಏನು ಮಾಡಲು ಆಗಲ್ಲ ಎಂಬ ಸಂದೇಶ ಬಂದಿದೆ. ಇಲ್ಲಿ ದೇವಸ್ಥಾನ ಸಮಿತಿಯವರು ಸಹ ನ್ಯಾಯ ಸಮ್ಮತವಾಗಿ ಇವರಿಗೆ ಸೈಟ್ ಬಿಟ್ಟು ಕೊಡುವ ಇಚ್ಚೆ ಹೊಂದಿದ್ದಾರೆ. ಆದ್ರೆ ಕೇಸ್ ಕೋರ್ಟ್ನಲ್ಲಿರುವುದೇ ಸಮಸ್ಯೆಯಾಗಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದಾಗ ಒಂದು ವಾರದೊಳಗೆ ಬರುತ್ತೇನೆ ಎಂದು ಭರವಸೆ ಕೊಟ್ಟವರು ಇನ್ನೂ ಬಂದಿಲ್ಲವಂತೆ. ಒಟ್ಟಾರೆ ಆದಷ್ಟು ಬೇಗ ಇಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ದೊರೆಯಬೇಕಾಗಿದೆ.

ವರದಿ: ಬಸವರಾಜ್ ದೊಡ್ಮನಿ, TV9, ದಾವಣಗೆರೆ

ಇದನ್ನೂ ಓದಿ: James Special Poster: ‘ಜೇಮ್ಸ್’​ ಹೊಸ ಪೋಸ್ಟರ್​ ರಿಲೀಸ್​; ಪುನೀತ್​ ಫ್ಯಾನ್ಸ್​ಗೆ ಗಣರಾಜ್ಯೋತ್ಸವದ ಗಿಫ್ಟ್

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ