ಹತ್ತಾರು ವರ್ಷ ಪೊಲೀಸ್​ ಸೇವೆ ಸಲ್ಲಿಸಿದ ಇವರಿಬ್ಬರೂ ರಾಜಕೀಯಕ್ಕೆ ಧುಮುಕಿ ಜಗಳೂರು, ಹರಿಹರ ಕ್ಷೇತ್ರದಲ್ಲಿ ಹಾಲಿಗಳಿಗೆ ಭರ್ಜರಿ ಸವಾಲ್ ಒಡ್ಡಿದ್ದಾರೆ!

ಹೀಗೆ ಹತ್ತಾರು ವರ್ಷಗಳ ಕಾಲ ಮೈ ಮೇಲೆ ಖಾಕಿ ಹಾಕಿಕೊಂಡು ಅಧಿಕಾರ ಮಾಡಿದವರಿಗೆ ಒಂದು ವಿಷಯ ಪಕ್ಕಾ ಅರಿವಾದಂತಿದೆ. ಅಧಿಕಾರದ ಖಾಕಿಗಿಂತ, ಖಾದಿ ಅಧಿಕಾರದ್ದೇ ದರ್ಬಾರು ಜಾಸ್ತಿ ಇದೆ ಎಂದು ಅವರು ಬಗೆದಿದ್ದಾರೆ. ಏನೇ ಆಗಲಿ ಪಕ್ಷದ ವರಿಷ್ಠರು ಹಾಗೂ ಅಂತಿಮವಾಗಿ ಮತದಾರರು ಕೈಗೊಳ್ಳುವ ನಿರ್ಧಾರ ಮುಖ್ಯವಾಗಲಿದೆ.

ಹತ್ತಾರು ವರ್ಷ ಪೊಲೀಸ್​ ಸೇವೆ ಸಲ್ಲಿಸಿದ ಇವರಿಬ್ಬರೂ ರಾಜಕೀಯಕ್ಕೆ ಧುಮುಕಿ ಜಗಳೂರು, ಹರಿಹರ ಕ್ಷೇತ್ರದಲ್ಲಿ ಹಾಲಿಗಳಿಗೆ ಭರ್ಜರಿ ಸವಾಲ್ ಒಡ್ಡಿದ್ದಾರೆ!
ಪೊಲೀಸ್ ಅಧಿಕಾರಿಗಳಾದ ಓಬಿ ಕಲ್ಲೇಶಪ್ಪ - ಕುಣೆಬೆಳಕೆರೆ ದೇವೇಂದ್ರಪ್ಪ ರಾಜಕೀಯಕ್ಕೆ
Follow us
ಸಾಧು ಶ್ರೀನಾಥ್​
|

Updated on: Feb 28, 2023 | 11:49 AM

ನಕ್ಸಲ್ ನಿಗ್ರಹ ದಳ, ವೀರಪ್ಪನ್ ಕಾರ್ಯಾಚರಣೆ ಅಂತಹ ಹತ್ತಾರು ಕಷ್ಟಕರ ವಿಭಾಗಗಳಲ್ಲಿ ಬರೋಬರಿ 30 ವರ್ಷ ಸೇವೆ ಸಲ್ಲಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಅವರು. ಇನ್ನೊಬ್ಬರು, ಇನ್ಸ್​​ಪೆಕ್ಟರ್​​​ ಆಗಿ ಬಳ್ಳಾರಿ ಕೊಲ್ಹಾರ ಸೇರಿದಂತೆ ಹತ್ತಾರು ಕಡೆ ಕೆಲ್ಸ ಮಾಡಿ ಇನ್ನೂ 18 ವರ್ಷ ಸೇವೆ ಬಾಕಿ ಹೊಂದಿರುವವರು. ಹೀಗೆ ಇನ್ನೂ ಸೇವೆಯಲ್ಲಿರುವ ಈ ಇಬ್ಬರು ಪೊಲೀಸ್ ಅಧಿಕಾರಿಗಳು (Karnataka Police) ಇದಕ್ಕಿದ್ದಂತೆ ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಧುಮುಕಿದ್ದಾರೆ (Karnataka Assembly Elections 2023). ಆದ್ರೆ ಇವರಿಬ್ಬರೂ ತಮ್ಮ ಕ್ಷೇತ್ರಗಳ ಹಾಲಿ ಶಾಸಕರ ವಿರುದ್ಧವೇ ಟಿಕೆಟ್ ಕೇಳುತ್ತಿದ್ದಾರೆ. ಇಲ್ಲಿದೆ ನೋಡಿ ಪೊಲೀಸ್ ಪಾಲಿಟಿಕ್ಸ್ ಸ್ಟೋರಿ.

ತಾಲೂಕು ಕೇಂದ್ರಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಒಂದಿಷ್ಟು ಜಮೀನು ತೆಗೆದುಕೊಂಡು ಅಲ್ಲಿಯೇ ಮನೆ ಕಟ್ಟಿಕೊಂಡು ಕುರಿ ಫಾರ್ಮ ಮಾಡಿಕೊಂಡ ಇವರ ಹೆಸರು ಓಬಿ ಕಲ್ಲೇಶಪ್ಪ (OB Kalleshappa). ಹಾಲಿ ಇರುವ ರಾಯಚೂರ ಜಿಲ್ಲಾ ಲೋಕಾಯುಕ್ತದಲ್ಲಿ ಡಿವೈ ಎಸ್ಪಿ. ರಾಯಚೂರಿಗೆ ಹೋಗುವ ಮೊದಲು ಸಿಎಂ ಕ್ಷೇತ್ರ ಶಿಗ್ಗಾವಿಯಲ್ಲಿ ಮೂರು ವರ್ಷ ಸೇವೆ. ಇದ್ದಕ್ಕಿದಂತೆ ಸೇವೆಗೆ ರಾಜೀನಾಮೆ ನೀಡಿ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಅದೂ ದಾವಣಗೆರೆ ಜಿಲ್ಲೆಯ ಜಗಳೂರು (Jagalur) ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ.

ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯದಲ್ಲಿ ಯಶಸ್ವಿ ಆಗಿದ್ದು ಅಲ್ಲೊಂದು ಇಲ್ಲೊಂದು ಉದಾಹರಣೆಗಳನ್ನು ನೋಡಬಹುದಷ್ಟೇ. ಎಸ್ಪಿ ಸಾಂಗ್ಲಿಯಾನಾ, ಕೋದಂಡ ರಾಮಯ್ಯ, ಬಿಸಿ ಪಾಟೀಲ್, ಶಾಸಕ ಪಿ. ರಾಜೀವ್ ಹೇಗೆ ಕೆಲವರನ್ನ ಬಿಟ್ಟರೇ ಹೆಚ್ಚಿನವರಿಗೆ ಯಶ ಸಿಕ್ಕಿಲ್ಲ. ವಾಲ್ಮೀಕಿ ಸಮಾಜದ ಕಲ್ಲೇಶಪ್ಪ ನಕ್ಸಲ್ ನಿಗ್ರಹದಳ, ವೀರಪ್ಪನ್ ಕಾರ್ಯಾಚರಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಇನ್ನೂ ಎರಡು ವರ್ಷ ಸೇವೆ ಇವೆ. ಇನ್ನೇನು ಎಸ್ಪಿ ಆಗಿ ಬಡ್ತಿ ಹೊಂದಬೇಕಿದೆ. ಜಿಲ್ಲೆಯಲ್ಲಿ ತಮ್ಮ ಆಡಳಿತ ದಂಡವನ್ನು ಝಳಪಿಸಬಹುದಿತ್ತು. ಆದ್ರೆ ಅದು ಬಿಟ್ಟು ಕೇಸರಿ ಪಕ್ಷದ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಈ ಹಿಂದೆ ಇವರ ಪತ್ನಿ ಜಿಲ್ಲಾ ಪಂಚಾಯತ್​ ಸದಸ್ಯೆ ಆಗಿದ್ದರು. ಆದ್ರೆ ಇಲ್ಲಿ ಹಾಲಿ ಶಾಸಕ ಬಿಜೆಪಿ ಎಸ್ ವಿ ರಾಮಚಂದ್ರ ಇದ್ದಾರೆ. ಆದರೂ ಇವರು ಸೇವೆಗೆ ರಾಜೀನಾಮೆ ಕೊಟ್ಟು ಬಂದಿದ್ದು, ಸಿಎಂ ಸೇರಿದಂತೆ ಪಕ್ಷದ ಹೈ ಕಮಾಂಡ್​ ಮಟ್ಟದಲ್ಲಿ ವರ್ಚಸ್ಸು ಇಟ್ಟುಕೊಂಡಿದ್ದಾರಂತೆ.

ಮೀಸಲು ಕ್ಷೇತ್ರ ಹರಿಹರದಲ್ಲಿ ಕುಣೆಬೆಳಕೆರೆ ದೇವೇಂದ್ರಪ್ಪ ಅವರಿಂದ ಕೈ ಪಕ್ಷದ ಹಾಲಿ ಶಾಸಕರಿಗೆ ನಡುಕ:

ಹೀಗೆ ಪರಿಶಿಷ್ಟ ಪಂಗಡ ಜಗಳೂರು ಕ್ಷೇತ್ರದಲ್ಲಿ ಖಾಕಿ ಅಧಿಕಾರಿ ಕಲ್ಲೇಶಪ್ಪ ಎಂಟ್ರಿಯಾಗಿ ಕೇಸರಿ ಪಡೆಯ ಹಾಲಿ ಶಾಸಕರಿಗೆ ನಡುಕ ಹುಟ್ಟಿಸಿದರೆ, ಅತ್ತ ಇನ್ನೊಂದು ಕಡೆ ಹರಿಹರ ಕ್ಷೇತ್ರದಲ್ಲಿ ಇನ್ನೊಬ್ಬ ಪೊಲೀಸ್ ಅಧಿಕಾರಿ ಕುಣೆಬೆಳಕೆರೆ ದೇವೇಂದ್ರಪ್ಪ (Kunibelakere Devendrappa) ಕೈ ಪಕ್ಷದ ಹಾಲಿ ಶಾಸಕರಿಗೆ ನಡುಕ ಹುಟ್ಟಿಸಿದ್ದಾರೆ. ಬಳ್ಳಾರಿ ಕೊಲ್ಹಾರ ಸೇರಿದಂತೆ ಹತ್ತಾರು ಕಡೆ ಕೆಲ್ಸಾ ಮಾಡಿದ ಅವರಿಗೆ ಇವರು ಇನ್ನೂ 18 ವರ್ಷ ಇಲಾಖೆಯಲ್ಲಿ ಸೇವೆ ಸಲ್ಲಿಸಬಹುದಿತ್ತು. ಆದ್ರೆ ಈ ಹಿಂದೆ ಬಳ್ಳಾರಿ ರೆಡ್ಡಿ ಹಾಗೂ ಶ್ರೀರಾಮಲು ಜೊತೆ ಗುರ್ತಿಸಿಕೊಂಡು ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಲು ಯತ್ನಿಸಿದ್ದರು.

ಅದು ಅಸಾಧ್ಯ ಎಂಬುದು ಗೊತ್ತಾಗಿ ಈಗ ಕಾಂಗ್ರೆಸ್ ಟಿಕೆಟ್ ಅರ್ಜಿ ಸಲ್ಲಿಸಿದ್ದಾರೆ. ಹರಿಹರ (Harihara) ಕ್ಷೇತ್ರದಲ್ಲಿ ಎಸ್ ರಾಮಪ್ಪ ಕಾಂಗ್ರೆಸ್ಸಿನ ಹಾಲಿ ಶಾಸಕ. ಈ ಕ್ಷೇತ್ರದಲ್ಲಿ ಪ್ರಬಲ ಆಗಿರುವ ಕುರುಬ ಸಮಾಜಕ್ಕೆ ಸೇರಿದವರು. ಈ ಪೊಲೀಸ್ ಅಧಿಕಾರಿ ಸಹ ಕುರುಬ ಸಮಾಜಕ್ಕೆ ಸೇರಿದವರು. ಟಿಕೆಟ್ ಗಾಗಿ ದೆಹಲಿಯಲ್ಲಿ ಟೆಂಟ್ ಹಾಕಿದ್ದಾರೆ. ಇತ್ತ ಜಗಳೂರು ಶಾಸಕ ಎಸ್ ವಿ ರಾಮಚಂದ್ರ ಮಾತ್ರ ಯಾವುದೇ ಕಾರಣಕ್ಕೂ ನನಗೆ ಟಿಕೇಟ್ ತಪ್ಪಲ್ಲ ಎನ್ನುತ್ತಿದ್ದಾರೆ.

ಹೀಗೆ ಹತ್ತಾರು ವರ್ಷಗಳ ಕಾಲ ಮೈ ಮೇಲೆ ಖಾಕಿ ಹಾಕಿಕೊಂಡು ಅಧಿಕಾರ ಮಾಡಿದವರಿಗೆ ಒಂದು ವಿಷಯ ಪಕ್ಕಾ ಅರಿವಾದಂತಿದೆ. ಅಧಿಕಾರದ ಖಾಕಿಗಿಂತ, ಖಾದಿ ಅಧಿಕಾರದ್ದೇ ದರ್ಬಾರು ಜಾಸ್ತಿ ಇದೆ ಎಂದು ಅವರು ಬಗೆದಿದ್ದಾರೆ. ಹಾಗಾಗಿ ಈ ಇಬ್ಬರೂ ಅಧಿಕಾರಿಗಳು ತಾವೇ ಖಾದಿಗೆ ಬಂದ್ರೆ ಹೇಗೆ ಎಂದು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಏನೇ ಆಗಲಿ ಪಕ್ಷದ ವರಿಷ್ಠರು ಹಾಗೂ ಅಂತಿಮವಾಗಿ ಮತದಾರರು ಕೈಗೊಳ್ಳುವ ನಿರ್ಧಾರವೇ ಅಂತಿಮ ಆಗಲಿದೆ.

ವರದಿ: ಬಸವರಾಜ್ ದೊಡ್ಮನಿ, ಟಿವಿ9, ದಾವಣಗೆರೆ 

ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!