ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಿದ ಸಂಸದ ಡಿಕೆ ಸುರೇಶ್‌; ಇಬ್ಭಾಗದ ಬಗ್ಗೆ ಮಾತನಾಡೋಕೆ ಕಾಂಗ್ರೆಸ್​ಗೆ ಯೋಗ್ಯತೆ ಇಲ್ಲ-ಪ್ರಮೋದ್​ ಮುತಾಲಿಕ್​

ಬಜೆಟ್‌ನಲ್ಲಿ ಹೊಸತೇನು ಇಲ್ಲ, ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗುತ್ತಿದೆ. ಹೀಗೆ ಅನ್ಯಾಯ ಆದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಸಂಸದ ಡಿಕೆ ಸುರೇಶ್‌ (DK Suresh) ಅಸಮಾಧಾನ ವ್ಯಕ್ತಪಡಿಸಿದ್ದರು.ಈ ಹಿನ್ನಲೆ ಕಿಡಿಕಾರಿದ ಪ್ರಮೋದ್​ ಮುತಾಲಿಕ್​, ‘ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ದೇಶದ್ರೋಹಿ ಹೇಳಿಕೆ ನೀಡಿದ್ದಾರೆ. ಈ ಹಿನ್ನಲೆ ಕೇಂದ್ರ ಗೃಹಸಚಿವರು ಕೂಡಲೇ ಅವರನ್ನು ಜೈಲಿಗೆ ಹಾಕಬೇಕು ಎಂದರು.

ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಿದ ಸಂಸದ ಡಿಕೆ ಸುರೇಶ್‌; ಇಬ್ಭಾಗದ ಬಗ್ಗೆ ಮಾತನಾಡೋಕೆ ಕಾಂಗ್ರೆಸ್​ಗೆ ಯೋಗ್ಯತೆ ಇಲ್ಲ-ಪ್ರಮೋದ್​ ಮುತಾಲಿಕ್​
ಪ್ರಮೋದ್​ ಮುತಾಲಿಕ್
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 01, 2024 | 6:14 PM

ದಾವಣಗೆರೆ, ಫೆ.01: ದಕ್ಷಿಣ ಭಾರತದ ಕೂಗು ಎತ್ತಬೇಕಾಗುತ್ತದೆ ಎಂಬ ಕಾಂಗ್ರೆಸ್ ಸಂಸದ ಡಿಕೆ ಸುರೇಶ್(DK Suresh)  ಹೇಳಿಕೆ ವಿಚಾರ ‘ ಇಬ್ಭಾಗದ ಬಗ್ಗೆ ಮಾತನಾಡೋಕೆ ಕಾಂಗ್ರೆಸ್​ಗೆ ಯೋಗ್ಯತೆ ಇಲ್ಲ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್ (Pramod Muthalik) ವಾಗ್ದಾಳಿ ನಡೆಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು ‘ಈಗಾಗಲೇ ದೇಶ ಇಬ್ಭಾಗಿಸಿ ಪಾಕಿಸ್ತಾನ ನಿರ್ಮಾಣ ಮಾಡಿದ್ದೀರಾ, ನಿಮಗೆ ತಾಕತ್ತಿದ್ದರೆ ಇಬ್ಭಾಗ ಮಾಡಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಡಿ.ಕೆ ಸುರೇಶ್ ದೇಶದ್ರೋಹಿ ಹೇಳಿಕೆ

ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ದೇಶದ್ರೋಹಿ ಹೇಳಿಕೆ ನೀಡಿದ್ದಾರೆ. ಈ ಹಿನ್ನಲೆ ಕೇಂದ್ರ ಗೃಹಸಚಿವರು ಕೂಡಲೇ ಅವರನ್ನು ಜೈಲಿಗೆ ಹಾಕಬೇಕು. ಈಗಾಗಲೇ ಪಾಕಿಸ್ತಾನ, ಬಾಂಗ್ಲಾದೇಶ ರಚಿಸಿ ಅನುಭವಿಸುತ್ತಿದ್ದೇವೆ. ಕೂಡಲೇ ತಮ್ಮ ಹೇಳಿಕೆ ಹಿಂಪಡೆದು ಡಿ.ಕೆ ಸುರೇಶ್ ಕ್ಷಮೆಯಾಚಿಸಲಿ ಎಂದು ಕಿಡಿಕಾರಿದರು.

ಇದನ್ನೂ ಓದಿ:ರಾಷ್ಟ್ರ ಒಡೆಯುವುದರಲ್ಲಿ ಕಾಂಗ್ರೆಸ್​ನವರು ನಿಸ್ಸೀಮರು-ಸಿಟಿ ರವಿ

ಚುನಾವಣಾ ರಾಜಕಾರಣದಿಂದ ಹಿಂದೆ ಸರಿದ ಪ್ರಮೋದ್ ಮುತಾಲಿಕ್

ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ, ನನ್ನ ರಾಜಕೀಯ ಬಾಗಿಲನ್ನು ಮುಚ್ಚಿದ್ದೇನೆ. ಏನೇ ಇದ್ದರೂ ದೇಶ, ಧರ್ಮ, ಹಿಂದುತ್ವದ ಕೆಲಸದಲ್ಲಿ ತೊಡಗುವೆ. ಸಮಾಜದಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲ, ದುಷ್ಟರು-ಭ್ರಷ್ಟರು ಇದ್ದಾರೆ. ಆದರೆ, ಕೇಂದ್ರದಲ್ಲಿ ಮೋದಿ ಬೇಕು, ಆ ನಿಟ್ಟಿನಲ್ಲಿ ಶತಪ್ರಯತ್ನ ಮಾಡುತ್ತೇನೆ.

ನರೇಂದ್ರ ಮೋದಿ ಗೆಲ್ಲಿಸಿ, ಭಾರತ ಉಳಿಸಿ ಅಭಿಯಾನ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನರೇಂದ್ರ ಮೋದಿ ಗೆಲ್ಲಿಸಿ, ಭಾರತ ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸಮಾವೇಶದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾದ್ರೆ ಮಾತ್ರ ನಮ್ಮ ದೇಶ ಉಳಿಯುತ್ತದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವಿಗೆ ಪ್ರಯತ್ನ ಮಾಡುತ್ತೇನೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ