Journalist P Sainath: ಕರ್ನಾಟಕದ ಪ್ರಗತಿಪರ ಚಿಂತಕರು, ಸಾಹಿತಿಗಳು ದೇಶಕ್ಕೆ ಮಾದರಿ ಆಗಿದ್ದಾರೆ: ಹಿರಿಯ ಪತ್ರಕರ್ತ ಪಿ ಸಾಯಿನಾಥ

| Updated By: ಸಾಧು ಶ್ರೀನಾಥ್​

Updated on: May 27, 2022 | 7:06 PM

ಪ್ರಧಾನಿ ಮೋದಿ ಆಡಳಿತಾವಧಿ ಭಾರತದ ಇತಿಹಾಸದಲ್ಲಿಯೇ ಕಪ್ಪು ಚುಕ್ಕೆ. ಅವರು ಮಾಡಿದ ನೋಟ್ ಬ್ಯಾನ್ ಸೇರಿದಂತೆ ಹತ್ತಾರು ಕಾರಣಕ್ಕೆ 130 ಕೋಟಿ ಜನ ಶಿಕ್ಷೆ ಅನುಭವಿಸಬೇಕಾಗಿದೆ ಎಂದು ದಾವಣಗೆರೆಯಲ್ಲಿ ಹಿರಿಯ ಪತ್ರಕರ್ತ ಪಿ ಸಾಯಿನಾಥ ಹೇಳಿಕೆ

Journalist P Sainath: ಕರ್ನಾಟಕದ ಪ್ರಗತಿಪರ ಚಿಂತಕರು, ಸಾಹಿತಿಗಳು ದೇಶಕ್ಕೆ ಮಾದರಿ ಆಗಿದ್ದಾರೆ: ಹಿರಿಯ ಪತ್ರಕರ್ತ ಪಿ ಸಾಯಿನಾಥ
ಕರ್ನಾಟಕದ ಪ್ರಗತಿಪರ ಚಿಂತಕರು, ಸಾಹಿತಿಗಳು ದೇಶಕ್ಕೆ ಮಾದರಿ ಆಗಿದ್ದಾರೆ: ಹಿರಿಯ ಪತ್ರಕರ್ತ ಪಿ ಸಾಯಿನಾಥ
Follow us on

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿ ಒಂದು ರೀತಿಯಲ್ಲಿ ಭಾರತದ ಇತಿಹಾಸದಲ್ಲಿಯೇ ಕಪ್ಪು ಚುಕ್ಕೆ. ಅವರು ಮಾಡಿದ ನೋಟ್ ಬ್ಯಾನ್ ಸೇರಿದಂತೆ ಹತ್ತಾರು ಕಾರಣಕ್ಕೆ 130 ಕೋಟಿ ಜನ ಶಿಕ್ಷೆ ಅನುಭವಿಸಬೇಕಾಗಿದೆ. ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿ ಆದ ಮೋದಿ ಒಂದೇ ಒಂದು ಸುದ್ದಿಗೋಷ್ಠಿ ನಡೆಸಿದ ಇತಿಹಾಸವಿಲ್ಲ ಎಂದು ದಾವಣಗೆರೆಯಲ್ಲಿ (Davanagere) ಹಿರಿಯ ಪತ್ರಕರ್ತ ಪಿ‌. ಸಾಯಿನಾಥ್ (Senior Journalist P Sainath) ಜರಿದಿದ್ದಾರೆ.

ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ನಡೆದ ಸಂವಾದದಲ್ಲಿ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪಿ. ಸಾಯಿನಾಥ್ ಭಾರತೀಯ ಪತ್ರಿಕೋದ್ಯಮಕ್ಕೆ 20 ವರ್ಷಗಳ ಇತಿಹಾಸ ಇದೆ. 170 ವರ್ಷಗಳ ಕಾಲ ಪತ್ರಿಕೋದ್ಯಮ ಚೆನ್ನಾಗಿಯೇ ಇತ್ತು. ಆದ್ರೆ ಕಳೆದ 20 ವರ್ಷಗಳಿಂದ ಇಡಿ ಪತ್ರಿಕೋದ್ಯಮ ದಾರಿ ತಪ್ಪಿದೆ.

ಬಹುತೇಕ ಮಾಧ್ಯಮಗಳು ಅದಾನಿ-ಅಂಬಾನಿಯಂತಹವರ ಕೈಗೆ ಸಿಕ್ಕಿವೆ. ಹೀಗಾಗಿ ಪತ್ರಕರ್ತರು ಕೋರ್ಟ್ ನಲ್ಲಿನ ಶೀಘ್ರ ಲಿಪಿಕಾರರಾಗಿದ್ದಾರೆ. ಇಲ್ಲಿ ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದ್ರೆ ನಾನು ನಮ್ಮ ಅಭಿವ್ಯಕ್ತಿ ವ್ಯಕ್ತಪಡಿಸಿದ ಮೇಲೆ ಗಂಡಾಂತರಗಳು ಎದುರಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯಲ್ಲಿ ರೈತರು ಫಲಾನುಭವಿಗಳಾಗಬೇಕು. ಆದ್ರ ಬಹುರಾಷ್ಟ್ರೀಯ ನಾಲ್ಕು ಕಂಪನಿಗಳು 17 ಸಾವಿರ ಕೋಟಿ ಲಾಭ ಗಳಿಸಿವೆ. ಗಂಗಾನದಿಯಲ್ಲಿ ಶವ ತೇಲಾಡುವ ಬಗ್ಗೆ ಅದೊಂದು ದಿನ ಮಾಧ್ಯಮಗಳು ಚೆನ್ನಾಗಿ ವರದಿ ಮಾಡಿದವು‌. ಮರು ದಿನ ಸುಮ್ಮನಾದವು! ಕಾರಣ ಯುಪಿ ಸಿಎಂ ಯೋಗಿ ಆದಿತ್ಯನಾಥನ್ ಸರ್ಕಾರಿ ಜಾಹಿರಾತು ನೀಡುವುದನ್ನು ನಿಲ್ಲಿಸಿಬಿಟ್ಟಿದ್ದರು. ಇಡೀ ಮಾಧ್ಯಮ ಕ್ಷೇತ್ರ ಕೆಲ ಜನರ ಕೈಯಲ್ಲಿವೆ. ಹೀಗೆ ಮಾಧ್ಯಮಗಳನ್ನ ಕೈಯಲ್ಲಿ ಇಟ್ಟುಕೊಂಡ ಜನ ಮೋದಿ ಹಾಗೂ ಅಮಿತ್ ಶಾ ಅವರ ಆತ್ಮೀಯರಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಮಾಧ್ಯಮಗಳಲ್ಲಿ ಬರುವುದು ಕಷ್ಟ ಎಂದು ಪತ್ರಕರ್ತ ‌ಪಿ. ಸಾಯಿನಾಥ ತೀವ್ರ ವಾಗ್ದಾಳಿ ನಡೆಸಿದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದ ಪ್ರಗತಿಪರ ಚಿಂತಕರು, ಸಾಹಿತಿಗಳು ದೇಶಕ್ಕೆ ಮಾದರಿ ಆಗಿದ್ದಾರೆ: ಸಾಯಿನಾಥ್

ಮಾಧ್ಯಮಗಳು ಬಹುಸಂಖ್ಯಾತ ಗ್ರಾಮೀಣ ಪ್ರದೇಶದ ಜನತೆಯ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬದಲಿಗೆ ಸ್ಥಿತಿವಂತರ ಕಡೆ ವಾಲಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಪಟ್ಟಿಯಲ್ಲಿ ಭಾರತ ಈಗ 142ನೇ ಸ್ಥಾನದಲ್ಲಿದೆ ಎಂದು ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ವಿಷಾದಿಸಿದರು. ದಾವಣಗೆರೆ ‌ನಗರದ ತಾಜ್ ಪ್ಯಾಲೆಸ್ ನಲ್ಲಿ ನಡೆದ ಮೇ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ದೇಶದ ಜಿಡಿಪಿಗಿಂತ ಅಂಬಾನಿ ಹಾಗೂ ಅದಾನಿ ಆಸ್ತಿಗಳು ಹೆಚ್ಚಾಗಿವೆ‌. 1991ಕ್ಕಿಂತ ಮೊದಲು ದೇಶದಲ್ಲಿ ಬಿಲೆನಿಯರ್ ಗಳೇ ಇರಲಿಲ್ಲ. ಆದ್ರೆ ಈಗ ದೇಶದಲ್ಲಿ 53 ನೇ ಡಾಲರ್ ಬಿಲೆನಿಯರ್ ಗಳಿದ್ದಾರೆ. ಅದಾನಿ ಆಸ್ತಿ ಶೇ. 400 ರಷ್ಟು ಹೆಚ್ಚಾಗಿದೆ. ಇವರೆಲ್ಲಾ ಹೆಚ್ಚಾಗಿ ದುಡಿದಿದ್ದು ಕೋವಿಡ್ ಸೋಂಕಿನ ಎರಡೂವರೆ ವರ್ಷದ ಅವಧಿಯಲ್ಲಿ. ಬಡವರ ಮಕ್ಕಳು, ಆದಿವಾಸಿಗಳ ಮಕ್ಕಳು ಓದುತ್ತಿರುವುದು ಸರ್ಕಾರಿ ಶಾಲೆಯಲ್ಲಿ. ಕೋವಿಡ್ ವೇಳೆ ಅವರಿಗೆ ಆನ್ ಲೈನ್ ವ್ಯವಸ್ಥೆ ಇರಲಿಲ್ಲ. ಯುವ ಜನಾಂಗ ಇಂತಹ ವ್ಯವಸ್ಥೆ ಬದಲಾವಣೆಗೆ ಮುಂದಾಗಬೇಕಿದೆ. ಕರ್ನಾಟಕದ ಪ್ರಗತಿಪರ ಚಿಂತಕರು ಹಾಗೂ ಸಾಹಿತಿಗಳು (Progressive thinkers and Laureates) ದೇಶಕ್ಕೆ ಮಾದರಿ (Role Models) ಆಗಿದ್ದಾರೆ ಎಂದು ಪಿ. ಸಾಯಿನಾಥ್ ಸಮಾಧಾನ ವ್ಯಕ್ತಪಡಿಸಿದರು.

Also Read:

ಸಖೇದಾಶ್ಚರ್ಯದ ಸಂಗತಿ: ನಿಮಿಷಾಂಭ ದೇಗುಲ ಬಳಿ ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ ಬೆಂಗಳೂರಿನ ಬಿಎಂಡಬ್ಲ್ಯೂ ಕಾರು ಪತ್ತೆ!

ಅಲ್ಲಾವುದ್ದೀನನ ಅದ್ಭುತ ದೀಪದಿಂದ ಎದ್ದುಬಂದಂತೆ ಮತ್ತೆ ಹಿಜಾಬ್​ vs ಸಮವಸ್ತ್ರ ವಿವಾದ ಎದ್ದಿದೆ -ಮುಂದೇನು? -ಟಿವಿ 9 ಕನ್ನಡ ಡಿಜಿಟಲ್​ ಲೈವ್​ ಚರ್ಚೆ