ಬಾಲಕಿ ಮೇಲೆ ಅತ್ಯಾಚಾರ- ಪೋಕ್ಸೊ ಕಾಯ್ದೆಯಡಿ ಶಾಲೆಯಲ್ಲೇ ಶಿಕ್ಷಕ ಅರೆಸ್ಟ್​

ಅನಾರೋಗ್ಯಕ್ಕೀಡಾದ ಮಗುವಿಗೆ ಚಿಕಿತ್ಸೆ ಕೊಡಿಸಲು ಪೋಷಕರು ಸರ್ಕಾರಿ ಆಸ್ಪತ್ರೆಗೆ ತೆರಳಿದಾಗ ಅಲ್ಲಿನ ವೈದ್ಯರು ಈ ಸೂಕ್ಷ್ಮ ಘಟನೆಯನ್ನು ಬಾಲಕಿಯ ಪೋಷಕರಿಗೆ ತಿಳಿಸಿದ್ದಾರೆ. ಬಳಿಕ ಬಾಲಕಿಯಿಂದ ಪೋಷಕರು ಮಾಹಿತಿ ಪಡೆದಿದ್ದಾರೆ. ತಡಮಾಡದೆ ಪೋಷಕರು ಹಾಗು ವೈದ್ಯರು ಮಹಿಳಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಾಲಕಿ ಮೇಲೆ ಅತ್ಯಾಚಾರ- ಪೋಕ್ಸೊ ಕಾಯ್ದೆಯಡಿ ಶಾಲೆಯಲ್ಲೇ ಶಿಕ್ಷಕ ಅರೆಸ್ಟ್​
ಸಾಂದರ್ಭಿಕ ಚಿತ್ರ
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಸಾಧು ಶ್ರೀನಾಥ್​

Updated on: Nov 04, 2023 | 1:34 PM

ದಾವಣಗೆರೆ: ಜಿಲ್ಲೆಯಲ್ಲಿ ನಾಗರಿಕರು ತಲೆತಗ್ಗಿಸುವ ಘಟನೆ ನಡೆದುಹೋಗಿದೆ. ಗುರುವಿನ ಸ್ಥಾನದಲ್ಲಿ ನಿಂತು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡ್ಬೇಕಾಗಿದ್ದ ಶಿಕ್ಷಕನೋರ್ವ ವಿದ್ಯಾರ್ಥಿನಿಯ ( minor student) ಮೇಲೆ ಶಾಲೆಯಲ್ಲೇ ನಿರಂತರ ಅತ್ಯಾಚಾರ ಎಸಗಿ ಪೊಲೀಸರ ಅತಿಥಿಯಾಗಿದ್ದಾನೆ. ದಾವಣಗೆರೆ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಯೊಂದರಲ್ಲಿ ಈ ದುರ್ಘಟನೆ ನಡೆದಿದೆ. ಈ ಘಟನೆ ನಡೆದು ವಾರದ ಬಳಿಕವೇ ವಿದ್ಯಾರ್ಥಿ ತನ್ನ ಪೋಷಕರ ಬಳಿ ಹೇಳಿಕೊಂಡ ಬಳಿಕವೇ ಈ ವಿಚಾರ ಬೆಳಕಿಗೆ ಬಂದಿದೆ.

ಪೋಷಕರು ಪೊಲೀಸರಿಗೆ ವಿಷಯ ತಿಳಿಸಿದ ಬೆನ್ನಲ್ಲೇ ಮಹಿಳಾ ಠಾಣೆಯ ಪೊಲೀಸರು ಅಪ್ರಾಪ್ತ ಬಾಲಕಿ ಹೇಳಿಕೆ ಪಡೆದು ಶಾಲೆಯಲ್ಲಿದ್ದ ಶಿಕ್ಷಕನನ್ನು ಬಂಧಿಸಿ ( Protection of Children from Sexual Offences Act -POCSO) ಜೈಲಿಗಟ್ಟಿದ್ದಾರೆ. ಈ ಘಟನೆಯಿಂದ ದಾವಣಗೆರೆ ಜಿಲ್ಲೆಯ ನಾಗರಿಕರು ಹಾಗು ಶಿಕ್ಷಕ ವರ್ಗ ತಲೆತಗ್ಗಿಸುವಂತಾಗಿದೆ. ಇನ್ನು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಈ ಘಟನೆಯಿಂದ ಹಿಂದೇಟು ಹಾಕುವಂತಾಗಿದೆ.

ಬಾಲಕಿ ಅನಾರೋಗ್ಯಕ್ಕೀಡಾದಾಗ ಘಟನೆ ಬೆಳಕಿಗೆ…

ಅಪ್ರಾಪ್ತ ಬಾಲಕಿ ಮೇಲೆ ರಾಕ್ಷಸ ಕೃತ್ಯ ಎಸಗಿರುವ ಶಿಕ್ಷಕನನ್ನ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದು ಒಂದು ವಾರದ ಬಳಿಕವೇ ಅದು ಬೆಳಕಿಗೆ ಬಂದಿದೆ. ಅತ್ಯಾಚಾರ ಎಸಗಿದ ಕೆಲದಿನಗಳ ಬಳಿಕ ಅಪ್ರಾಪ್ತ ವಯಸಿನ ಬಾಲಕಿ ಅನಾರೋಗ್ಯಕ್ಕೀಡಾಗಿದ್ದಾಳೆ. ಅದ್ರೂ ಕೂಡ ಶಿಕ್ಷಕನ ಬೆದರಿಕೆಗೆ ಹೆದರಿ ಬಾಲಕಿ ಈ ವಿಚಾರ ಪೋಷಕರ ಬಳಿ ಬಾಯಿ ಬಿಟ್ಟಿಲ್ಲ. ಅದ್ರೇ ಅನಾರೋಗ್ಯಕ್ಕೀಡಾದ ಮಗುವಿಗೆ ಚಿಕಿತ್ಸೆ ಕೊಡಿಸಲು ಪೋಷಕರು ಸರ್ಕಾರಿ ಆಸ್ಪತ್ರೆಗೆ ತೆರಳಿದಾಗ ಅಲ್ಲಿನ ವೈದ್ಯರು ಈ ಸೂಕ್ಷ್ಮ ಘಟನೆಯನ್ನು ಬಾಲಕಿಯ ಪೋಷಕರಿಗೆ ತಿಳಿಸಿದ್ದಾರೆ.

Also Read: ವಿಧವೆ ಬಾಳಲ್ಲಿ ವಿಧಿಯಾಟ, ಬಾಳು ಕೊಡುವೆ ಎಂದು ಬಂದ ವಿವಾಹಿತ ಅವಳಿಗೆ ಕೈಕೊಟ್ಟ, ದಾವಣಗೆರೆ ಪೊಲೀಸ್​ ಠಾಣೆ ಮೆಟ್ಟಿಲು ಹತ್ತಿದ ಮಹಿಳೆ

ಬಳಿಕ ಬಾಲಕಿಯಿಂದ ಪೋಷಕರು ಮಾಹಿತಿ ಪಡೆದಿದ್ದಾರೆ. ಶಿಕ್ಷಕನ ಕುಕೃತ್ಯದ ಬಗ್ಗೆ ಪೋಷಕರಿಗೆ ಬಾಲಕಿ ಮಾಹಿತಿ ನೀಡಿದ್ದಾಳೆ. ತಡಮಾಡದೆ ಪೋಷಕರು ಹಾಗು ವೈದ್ಯರು ಮಹಿಳಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಿಂದ ಆರೋಪಿ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳಿಸಿದ್ದೇವೆ ಎಂದು ಮಹಿಳಾ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​​​​ ನೂರ್ ಅಹ್ಮದ್ ಮಾಹಿತಿ ನೀಡಿದ್ದಾರೆ.

ಮಹಿಳಾ ಠಾಣೆ ಪಿಐ ಹೇಳಿದ್ದೇನು…!

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಮಹಿಳಾ ಠಾಣೆಯ ಪಿಐ ನೂರ್ ಅಹ್ಮದ್ (Police Inspector Noor Ahmed) ರವರು ಘಟನೆಗೆ ಸಂಬಂಧಿಸಿದಂತೆ ಬಾಲಕಿ ಹೇಳಿಕೆ ಪಡೆದು ಶಿಕ್ಷಕನನ್ನು ಬಂಧಿಸಿದ್ದೇವೆ, ಪೋಷಕರು ದೂರು ಸಲ್ಲಿಸಿದ್ದರಿಂದ ಎಫ್ಐಆರ್ ದಾಖಲಿಸಿಕೊಂಡು ಶಾಲೆಯಿಂದಲೇ ಶಿಕ್ಷಕನನ್ನು ಬಂಧಿಸಿದ್ದೇವೆ, ಸದ್ಯ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ, ತನಿಖೆ ಮುಂದುವರೆದಿದೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ