ದಾವಣಗೆರೆ: ಅವಹೇಳನಕಾರಿ ಸ್ಟೇಟಸ್ ವಿಚಾರ; ಯುವಕನಿಗೆ ಮೊಳೆಯಿಂದ ಇರಿದು ಘರ್ಷಣೆ, ಪರಿಸ್ಥಿತಿ ನಿಭಾಯಿಸಲು ನಿಷೇಧಾಜ್ಞೆ ಜಾರಿ

TV9kannada Web Team

TV9kannada Web Team | Edited By: ganapathi bhat

Updated on: Feb 09, 2022 | 11:37 PM

ಯುವಕನ ಮೇಲೆ ಉದ್ರಿಕ್ತರ ಗುಂಪು ಹಿಗ್ಗಾಮುಗ್ಗಾ ಥಳಿಸಿದೆ. ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಯಾಳು ಯುವಕನನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮಲೇಬೆನ್ನೂರು ಪೊಲೀಸ್​ ಠಾಣೆ ಎದುರು ಜನರ ಜಮಾವಣೆ ಆಗಿದೆ. 2 ಗುಂಪಿನ ಮುಖಂಡರ ಜತೆ ಪೊಲೀಸರು ಸಭೆ ನಡೆಸಿದ್ದಾರೆ.

ದಾವಣಗೆರೆ: ಅವಹೇಳನಕಾರಿ ಸ್ಟೇಟಸ್ ವಿಚಾರ; ಯುವಕನಿಗೆ ಮೊಳೆಯಿಂದ ಇರಿದು ಘರ್ಷಣೆ, ಪರಿಸ್ಥಿತಿ ನಿಭಾಯಿಸಲು ನಿಷೇಧಾಜ್ಞೆ ಜಾರಿ
ಸಾಂಕೇತಿಕ ಚಿತ್ರ

ದಾವಣಗೆರೆ: ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್​ ಹಿನ್ನೆಲೆ ಮಲೇಬೆನ್ನೂರು ವೃತ್ತದಲ್ಲಿ ಯುವಕನಿಗೆ ಮೊಳೆಯಿಂದ ಇರಿಯಲಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರು ಎಂಬಲ್ಲಿ 23 ವರ್ಷದ ಯುವಕನಿಗೆ ಮೊಳೆಯಿಂದ ಇರಿದು ಘಾಸಿಗೊಳಿಸಲಾಗಿದೆ. ಅಲ್ಲದೆ, ಯುವಕನ ಮೇಲೆ ಉದ್ರಿಕ್ತರ ಗುಂಪು ಹಿಗ್ಗಾಮುಗ್ಗಾ ಥಳಿಸಿದೆ. ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಯಾಳು ಯುವಕನನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮಲೇಬೆನ್ನೂರು ಪೊಲೀಸ್​ ಠಾಣೆ ಎದುರು ಜನರ ಜಮಾವಣೆ ಆಗಿದೆ. 2 ಗುಂಪಿನ ಮುಖಂಡರ ಜತೆ ಪೊಲೀಸರು ಸಭೆ ನಡೆಸಿದ್ದಾರೆ.

ಅವಹೇಳನಕಾರಿ ಸ್ಟೇಟಸ್ ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಒಂದು ಗುಂಪಿನವರಿಂದ ಹಲ್ಲೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹರಿಹರ ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ನಿನ್ನೆ ಹರಿಹರ, ದಾವಣಗೆರೆಗೆ ಸೀಮಿತವಾಗಿದ್ದ ನಿಷೇಧಾಜ್ಞೆ ಇಂದು ಹರಿಹರ ತಾಲೂಕಿನಾದ್ಯಂತ ನಿಷೇಧಾಜ್ಞೆ ವಿಸ್ತರಣೆಗೊಳಿಸಲಾಗಿದೆ. ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ಮಹಾಂತೇಶ ಬೀಳಗಿ ಆದೇಶ ನೀಡಿದ್ದಾರೆ.

ಕೋಲಾರ ತಾಲೂಕು ಕಚೇರಿಯಲ್ಲಿ ಆರ್​ಐ ಎಸಿಬಿ ಬಲೆಗೆ

ಕೋಲಾರ ತಾಲೂಕು ಕಚೇರಿಯಲ್ಲಿ ಆರ್​ಐ ಎಸಿಬಿ ಬಲೆಗೆ ಬಿದ್ದಿದ್ದಾರೆ. 20,000 ರೂ. ಲಂಚ ಸ್ವೀಕರಿಸುವಾಗ ವಿಜಯದೇವ್​ ಬಲೆಗೆ ಬಿದ್ದಿದ್ದಾರೆ. ತೇರಹಳ್ಳಿಯ ಸೀನಪ್ಪನಿಂದ ಲಂಚ ಸ್ವೀಕರಿಸುವಾಗ RI ಬಲೆಗೆ ಸಿಕ್ಕಿದ್ದಾರೆ. ಖಾತೆ ಮಾಡಿಕೊಡಲು ₹60,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 60,000 ರೂ. ಪೈಕಿ 20,000 ರೂ. ಲಂಚ ಪಡೆವಾಗ ವಶಕ್ಕೆ ಪಡೆಯಲಾಗಿದೆ. ತಾಲೂಕು ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಆರ್​ಐಗೆ ಸಿಕ್ಕಿಬಿದ್ದಿದ್ದಾರೆ. ಕೋಲಾರ ಎಸಿಬಿ ಡಿವೈಎಸ್​ಪಿ ಸುಧೀರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಬಾಗಲಕೋಟೆ: ಪ್ರಾರ್ಥನಾ ಮಂದಿರದ ಮೇಲೆ ಕಲ್ಲೆಸೆದಿದ್ದಾರೆಂದು ಯುವಕನ ಮೇಲೆ ಹಲ್ಲೆ

ಪ್ರಾರ್ಥನಾ ಮಂದಿರದ ಮೇಲೆ ಕಲ್ಲೆಸೆದಿದ್ದಾರೆಂದು ಆರೋಪದಲ್ಲಿ ಬಾಗಲಕೋಟೆಯ ನವನಗರದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಉರ್ದು ಶಾಲೆ ಬಳಿ ಒಂದು ಗುಂಪಿನ ಯುವಕರಿಂದ ಹಲ್ಲೆ ನಡೆಸಲಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಹಲ್ಲೆ‌ ಮಾಡ್ತಿದ್ದ ಯುವಕನನ್ನ ಪೊಲೀಸರು ಕರೆದೊಯ್ದಿದ್ದಾರೆ. ಗಾಯಾಳು ಯುವಕನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೋಲಾರ: ಹುಚ್ಚುನಾಯಿ ದಾಳಿ ಹತ್ತಕ್ಕೂ ಜನರಿಗೆ ಗಾಯ

ಹುಚ್ಚುನಾಯಿ ದಾಳಿ ಹತ್ತಕ್ಕೂ ಜನರಿಗೆ ಗಾಯವಾದ ಘಟನೆ ಕೋಲಾರ ನಗರದ ಆರ್.ಜಿ. ಬಡಾವಣೆಯಲ್ಲಿ ನಡೆದಿದೆ. ಬಡಾವಣೆಯ ಒಂದು ಮಗು ಸೇರಿದಂತೆ ಹತ್ತಕ್ಕೂ ಹೆಚ್ಚುಜನರ ಮೇಲೆ ದಾಳಿ ಮಾಡಿದೆ. ಸಂಜೆ ವಾಕಿಂಗ್ ಹೋಗಿದ್ದವರ ಮೇಲೆಯೂ ನಾಯಿ ದಾಳಿ ಮಾಡಿದೆ. ಗಾಯಾಳುಗಳು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ರಾಜಕುಮಾರ ಪಾಟೀಲ್ ತೇಲ್ಕೂರ್​ಗೆ ಬ್ಲ್ಯಾಕ್​ಮೇಲ್​ ಪ್ರಕರಣದ ಬಗ್ಗೆ ಕಮಲ್ ಪಂತ್ ಮಾಹಿತಿ

ರಾಜಕುಮಾರ ಪಾಟೀಲ್ ತೇಲ್ಕೂರ್​ಗೆ ಬ್ಲ್ಯಾಕ್​ಮೇಲ್​ ಪ್ರಕರಣಕ್ಕೆ ಸಂಬಂಧಿಸಿ ಎರಡೂ ಕಡೆಯವರು ದೂರು ನೀಡಿದ್ದಾರೆ ಎಂದು ಬೆಂಗಳೂರು ಸಿಟಿ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ. ತೇಲ್ಕೂರ್ ನೀಡಿದ ದೂರಿನ ಬಗ್ಗೆ ಎಫ್​ಐಆರ್​​ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಮಹಿಳೆ ನೀಡಿದ್ದ ದೂರನ್ನು ಯಲಹಂಕ ಎಸಿಪಿಗೆ ವಹಿಸಲಾಗಿದೆ. ಅವರು ನೋಟಿಸ್ ನೀಡಿದ್ದರೂ ಮಹಿಳೆ ವಿಚಾರಣೆಗೆ ಬಂದಿಲ್ಲ. ಅವರು ಬಂದು ಏನಾಗಿದೆ ಎಂದು ಮಾಹಿತಿ ನೀಡಿದ್ರೆ ವಿಚಾರಣೆ ನಡಸಲಾಗುತ್ತದೆ. ಯಲಹಂಕ ಉಪ ವಿಭಾಗದ ಎಸಿಪಿ ವಿಚಾರಣೆ ನಡೆಸುತ್ತಾರೆ ಎಂದು ಬೆಂಗಳೂರು ಸಿಟಿ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

ಇದನ್ನೂ ಓದಿ: Crime Updates: ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ಹೈಟೆಕ್ ವೇಶ್ಯಾವಾಟಿಕೆ, ಪ್ರೇಮಿ ಜೊತೆ ಸೇರಿ ಗಂಡನ ಕೊಲೆ

ಇದನ್ನೂ ಓದಿ: Crime News: ಯುವತಿ ವಿಚಾರಕ್ಕೆ ವಿದ್ಯಾರ್ಥಿಗೆ ಚಾಕು ಇರಿತ, ಮೊಬೈಲ್ ಬಳಕೆ ಕಡಿಮೆ ಮಾಡಲು ಹೇಳಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada