AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ದಿನವೇ ಕಾರ್ಮಿಕರ ಪ್ರತಿಭಟನೆ!

ರಜೆ ಸೇರಿ ಯಾವುದೇ ಸೌಲಭ್ಯ ನೀಡುತ್ತಿಲ್ಲ ಅಂತ ಆರೋಪಿಸಿ ಜಿಂದಾಲ್ ಕಂಪನಿಗೆ ಸೇರಿದ ಸೋಲಾರ್ ಪ್ಲಾಂಟ್​ನಲ್ಲಿ ಕೆಲಸ ಮಾಡುವ ಕಾರ್ಮಿಕರು ಪ್ರತಿಭಟನೆ ಮಾಡುತ್ತಿದ್ದಾರೆ.

ದಾವಣಗೆರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ದಿನವೇ ಕಾರ್ಮಿಕರ ಪ್ರತಿಭಟನೆ!
ಪ್ರತಿಭಟನೆ ನಡೆಸುತ್ತಿರುವ ಕಾರ್ಮಿಕರು
TV9 Web
| Updated By: sandhya thejappa|

Updated on: Aug 15, 2021 | 2:47 PM

Share

ದಾವಣಗೆರೆ: ಸ್ವಾತಂತ್ರ್ಯ ದಿನಾಚರಣೆ ದಿನವೇ ದಾವಣಗೆರೆ ತಾಲೂಕಿನ ಬಾವಿಹಾಳ್ ಗ್ರಾಮದಲ್ಲಿ ಕಾರ್ಮಿಕರು ಪ್ರತಿಭಟನೆ (Protest) ಮಾಡುತ್ತಿದ್ದಾರೆ. ಸೋಲಾರ್ ಪ್ಲಾಂಟ್​ನಲ್ಲಿ (Solar Plant) ಕನಿಷ್ಠ ವೇತನ ನೀಡುತ್ತಿಲ್ಲ. ರಜೆ ಸೇರಿ ಯಾವುದೇ ಸೌಲಭ್ಯ ನೀಡುತ್ತಿಲ್ಲ ಅಂತ ಆರೋಪಿಸಿ ಜಿಂದಾಲ್ ಕಂಪನಿಗೆ ಸೇರಿದ ಸೋಲಾರ್ ಪ್ಲಾಂಟ್​ನಲ್ಲಿ ಕೆಲಸ ಮಾಡುವ ಕಾರ್ಮಿಕರು ಪ್ರತಿಭಟನೆ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಸೋಲಾರ್ ಪ್ಲಾಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಯಾವುದೇ ರೀತಿಯ ಸೌಲಭ್ಯ ಸಿಗುತ್ತಿಲ್ಲವೆಂದು ನಾಲ್ಕು ದಿನಗಳಿಂದ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ಇನ್ನು ಮಂಡ್ಯದಲ್ಲೂ ಸ್ವಾತಂತ್ರ್ಯ ದಿನದಂದು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ ರೈತ ಸಂಘದ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿದ ಧರಣಿ ಮಾಡುತ್ತಿದ್ದಾರೆ. ಮನ್ಮುಲ್ ಹಗರಣ ಸಿಬಿಐಗೆ ವಹಿಸಬೇಕು. ಜಿಲ್ಲೆಯ ಎಲ್ಲಾ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಬೇಕು ಅಂತ ಒತ್ತಾಯಿಸಿ ಮಂಡ್ಯದ ಸಂಜಯ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ಅರೆಬೆತ್ತಲೆಯಾಗಿ ಉರುಳು ಸೇವೆ ವಿದ್ಯುತ್ ಖಾಸಗೀಕರಣ ವಿರೋಧಿಸಿ ಆಗಸ್ಟ್ 10ಕ್ಕೆ ಬೆಳಗಾವಿಯ ರೈತರು ಚೆನ್ನಮ್ಮ ವೃತ್ತದಲ್ಲಿ ಅರೆಬೆತ್ತಲೆಯಾಗಿ ಉರುಳು ಸೇವೆ ಮಾಡಿ ಪ್ರತಿಭಟನೆ ನಡೆಸಿದರು. ರೈತ ಮುಖಂಡ ಸೋಮು ರೈನಾಪುರೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ಬೆಳಗಾವಿ ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೂ ಉರುಳು ಸೇವೆ, ಪ್ರತಿಭಟನೆ ಮಾಡಿದ್ದರು. ಕೇಂದ್ರ ಸರ್ಕಾರ, ಪ್ರಧಾನಿಮಂತ್ರಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ವಿದ್ಯುತ್ ಖಾಸಗೀಕರಣ ನಿರ್ಧಾರ ರೈತ ವಿರೋಧಿಯಾಗಿದೆ. ತಕ್ಷಣವೇ ಸರ್ಕಾರ ಈ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ರೈತ ಪ್ರತಿಭಟನಾಕಾರರು, ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ

Independence Day: ಭಾರತದ ಜೊತೆ ಈ ದೇಶಗಳಿಗೂ ಇಂದು ರಾಷ್ಟೀಯ ದಿನದ ಸಂಭ್ರಮ

ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತರಿಂದ ಅರೆಬೆತ್ತಲೆ ಪ್ರತಿಭಟನೆ

(Solar plant workers are protesting in Davanagere)

ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಗಣ್ಯರಿಗೆ ಖಾಸಗಿ ಆಸ್ಪತ್ರೆಗಳೇ ಯಾಕೆ? ಸರ್ಕಾರೀ ಆಸ್ಪತ್ರೆ ಯಾಕೆ ಬೇಡ?
ಗಣ್ಯರಿಗೆ ಖಾಸಗಿ ಆಸ್ಪತ್ರೆಗಳೇ ಯಾಕೆ? ಸರ್ಕಾರೀ ಆಸ್ಪತ್ರೆ ಯಾಕೆ ಬೇಡ?