ಕ್ರಿಶ್ಚಿಯನ್, ಇಸ್ಲಾಂ ಬಗ್ಗೆ ಮಾತನಾಡಿದ್ರೆ ಇಷ್ಟೊತ್ತಿಗೆ ಗೋರಿಯಲ್ಲಿ ಇರುತ್ತಿದ್ರು: ಸತೀಶ್ ಜಾರಕಿಹೊಳಿ ಹೇಳಿಕೆಗೆ ಮುತಾಲಿಕ್ ಕಿಡಿ
ಹಿಂದು ಪದ ಪರ್ಶಿಯನ್ ಪದ ಅದರ ಅರ್ಥ ಅಶ್ಲೀಲವಾಗಿದೆ ಎಂಬ ಶಾಸಕ ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಕೆಂಡಾಮಂಡಲರಾಗಿದ್ದಾರೆ.
ದಾವಣಗೆರೆ: ಹಿಂದು (Hindu) ಪದ ಪರ್ಶಿಯನ್ ಪದ ಅದರ ಅರ್ಥ ಅಶ್ಲೀಲವಾಗಿದೆ ಎಂಬ ಶಾಸಕ ಶಾಸಕ ಸತೀಶ್ ಜಾರಕಿಹೊಳಿ(satish jarkiholi) ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಬಿಜೆಪಿ ನಾಯಕರು ಸತೀಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದಾರೆ. ಇನ್ನು ಈ ಬಗ್ಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ )Pramod Muthalik), ಸತೀಶ್ ಜಾರಕಿಹೊಳಿ ಹೇಳಿಕೆಗೆ ಕೆಂಡಾಮಂಡಲರಾಗಿದ್ದಾರೆ.
ಇಂದು(ನ.08) ದಾವಣಗೆರೆ ಜಿಲ್ಲೆ ಹೊನ್ನಾಳಿಯ ಶಾಸಕ ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ಕೊಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರಾನ್ ಬಗ್ಗೆ ಬೈಬಲ್ ಬಗ್ಗೆ ಮಾತನಾಡಲಿ. ಕ್ರಿಶ್ಚಿಯನ್ ಇಸ್ಲಾಂ ಬಗ್ಗೆ ಮಾತನಾಡಿದ್ರೆ ಇಷ್ಟೊತ್ತಿಗೆ ಗೋರಿಯಲ್ಲಿ ಇರುತ್ತಿದ್ದರು. ಹಿಂದುಗಳಿಗೆ ತಾಳ್ಮೆ ಜಾಸ್ತಿಯಿದೆ ಹಿಂದು ಸಮಾಜದ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ಪಟ್ಟು ಬಿಡದ ಸತೀಶ್ ಜಾರಕಿಹೊಳಿ: ಹಿಂದೂ ಪದದ ಅರ್ಥ ಸೋತವರು, ಗುಲಾಮರು, ಡಕಾಯಿತರು ಎಂಬ ದಾಖಲೆ ಬಿಡುಗಡೆ
ಸ್ಮಶಾನದಲ್ಲಿ ಅಡಿಗೆ ಮಾಡ್ತಾರೆ ಊಟ ಮಾಡ್ತಾರೆ ಮದ್ವೆ ಮಾಡಿಸುತ್ತಾರೆ. ಅದು ಸ್ಮಶಾಸ ಅನ್ನೋದು ಅವರಿಗೆ ಅರಿವು ಇಲ್ವಾ.? ಮೂಡ ನಂಬಿಕೆ ತಗೆಯೋ ಸ್ಥಳ ಅದಲ್ಲ ಎಂದು ಟಾಂಗ್ ಕೊಟ್ಟರು.
ಹಿಂದೂ ಶಬ್ಧ ಬಹಳ ಹಳೆಯದು ಎಂದು 2400 ವರ್ಷಗಳ ಹಿಂದೆ ಪುರಾಣದಲ್ಲಿ ಉಲ್ಲೇಖವಾಗಿದೆ. ಹಿಂದೂ ಪದದ ವಿರುದ್ದ ಹಿಂದೆ ಏಕೆ ಮಾತನಾಡಲಿಲ್ಲ.? ಈಗ ಚುನಾವಣೆ ಬರ್ತಾಯಿದೆ ಅಂತ ಮಾತನಾಡುತ್ತಿದ್ದೀರಾ. ಮುಂಬರುವ ಚುನಾವಣೆಯಲ್ಲಿ ಎಲ್ಲಾ ಹಿಂದುಗಳು ತಕ್ಕ ಶಾಸ್ತಿ ಮಾಡ್ಬೇಕು. ಚುನಾವಣೆಯಲ್ಲಿ ಅವರನ್ನ ಮೂಲೆಗೆ ಸೇರಿಸಬೇಕಿದೆ ಎಂದು ಕರೆಕೊಟ್ಟರು.
ಇನ್ನು ಇದೇ ವೇಳೆ ದೈವಿಕ ನರ್ತಕರಿಗೆ 2 ಸಾವಿರ ಮಾಶಾಸನ ನೀಡುವುದು ತಪ್ಪು ಎಂಬ ಬಿಟಿ ಲಲಿತಾ ನಾಯ್ಕ ಹೇಳಿಕೆಗೆ ಪ್ರತಿಕ್ರಿಯಿಸಿ,ಮಸೀದಿಯಲ್ಲಿ ಮೈಕ್ ನಲ್ಲಿ ಆಜಾನ್ ಕೂಗುವ ಮುಸ್ಲಿಂರಿಗೂ ಸರ್ಕಾರ ಮಾಶಾಸನ ನೀಡುತ್ತಿದೆ. ತಾಕತ್ ಇದ್ರೆ ಅದರ ಬಗ್ಗೆಯೂ ಮಾತಾಡಿ ಅದನ್ನ ಹೊರತು ಪಡಿಸಿ ಎಂದು ಸವಾಲ್ ಹಾಕಿದರು.
ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಭಾನುವಾರ ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸತೀಶ್ ಜಾರಕಿಹೊಳಿ ಹಿಂದೂ ಪದ ಅಶ್ಲೀಲ ಅರ್ಥವನ್ನು ಹೊಂದಿದೆ. ಭಾರತದೊಂದಿಗೆ ಯಾವುದೇ ಸಂಬಂಧ ಹೊಂದಿರದ ಪದವನ್ನು ಹೇಗೆ ಒಪ್ಪಿಕೊಂಡರು ಎಂದು ಪ್ರಶ್ನಿಸಿದ್ದರು.
“ಹಿಂದೂ ಪದ ಎಲ್ಲಿಂದ ಬಂತು ಗೊತ್ತಾ? ಅದು ನಮ್ಮದಾ? ಹಿಂದೂ ಎಂಬ ಪದ ನಮ್ಮದಲ್ಲ. ಅದು ಇರಾನ್, ಇರಾಕ್, ಉಜ್ಬೇಕಿಸ್ತಾನ್, ಕಝಕಿಸ್ತಾನ್ ಪ್ರದೇಶದಲ್ಲಿ ಬಳಸುತ್ತಿದ್ದ ಪರ್ಷಿಯನ್ ಪದ. ಭಾರತಕ್ಕೂ ಮತ್ತು ಹಿಂದೂ ಎಂಬ ಪದಕ್ಕೂ ಏನು ಸಂಬಂಧ? ಅದನ್ನು ಹೇಗೆ ಒಪ್ಪಿಕೊಂಡರು? ಎಂಬುದು ಚರ್ಚೆಯಾಗಬೇಕು ಎಂದ ಅವರು, ಹಿಂದೂ ಪದದ ಅರ್ಥ ತಿಳಿದರೆ ನಿಮಗೆ ನಾಚಿಕೆಯಾಗುತ್ತದೆ ಎಂದು ಕೂಡ ಹೇಳಿದ್ದರು.
ಸಮಜಾಯಿಷಿ ನೀಡಿದ ಜಾರಕಿಹೊಳಿ
ಈ ಹೇಳಿಕೆಗೆ ಭಾರೀ ವಿರೋಧ ಸೃಷ್ಟಿಯಾಗಿದ್ದು, ಅವರು ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಗಳ ವ್ಯಕ್ತವಾದ ಬೆನ್ನಲ್ಲೇ ಇದಕ್ಕೆ ಸತೀಶ್ ಜಾರಕಿಹೊಳಿ ಸಮಜಾಯಿಷಿ ನೀಡಿದ್ದಾರೆ. ಅಲ್ಲದೇ
ಹಿಂದೂ ಎಂಬುದು ಪರ್ಷಿಯನ್ ಭಾಷೆಯಿಂದ ಬಂದ ಶಬ್ದ. ಹಿಂದೂ ಪದದ ಬಗ್ಗೆ ಶಬ್ದಕೋಶದಲ್ಲಿ, ವಿಕಿಪಿಡಿಯಾದಲ್ಲಿ ಇರುವ ವಿವರಣೆಯನ್ನೇ ನಾನು ಹೇಳಿದ್ದೇನೆ. ಹಿಂದೂ ಪದದ ಬಗ್ಗೆ ಚರ್ಚೆಯಾಗಬೇಕು. ನಾನು ಏನು ಹೇಳಿದ್ದೇನೆಯೋ ಅದರ ಬಗ್ಗೆ ಅಥವಾ ಹಿಂದೂ ಪದದ ನಿಜವಾದ ಅರ್ಥದ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬೇರೆ ಯಾವ್ಯಾವುದೋ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಾನು ತಪ್ಪು ಹೇಳಿದ್ದೇನೆಂದು ಸಾಬೀತುಪಡಿಸಿದರೆ ಕ್ಷಮೆಯಾಚಿಸುವುದಷ್ಟೇ ಅಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:31 pm, Tue, 8 November 22