ದಾವಣಗೆರೆಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ!

ದಾವಣಗೆರೆಯ ಭರತ್ ಕಾಲೋನಿಯಲ್ಲಿ 35 ವರ್ಷದ ಕೃಷ್ಣ ನಾಯ್ಕ್, ಹೆಂಡತಿ ಸುಮ ಮತ್ತು ಆರು ವರ್ಷದ ಮಗು ದೃವ ಆತ್ಮಹತ್ಯಗೆ ಶರಣಾಗಿದ್ದಾರೆ.

ದಾವಣಗೆರೆಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ!
ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಮನೆ ಮುಂದೆ ಜನರು ಸೇರಿದ್ದಾರೆ
Updated By: sandhya thejappa

Updated on: Sep 20, 2021 | 10:25 AM

ದಾವಣಗೆರೆ: ಇತ್ತೀಚೆಗೆ ಕುಟುಂಬದ ಸದಸ್ಯರು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಪ್ರಕರಣ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಒಂದೇ ಕುಟುಂಬದ ಮೂವರು ಸದ್ಯಸ್ಯರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ದಾವಣಗೆರೆಯ ಭರತ್ ಕಾಲೋನಿಯಲ್ಲಿ 35 ವರ್ಷದ ಕೃಷ್ಣಾ ನಾಯ್ಕ್, ಹೆಂಡತಿ ಸುಮಾ ಮತ್ತು ಆರು ವರ್ಷದ ಮಗು ದೃವ ಆತ್ಮಹತ್ಯಗೆ ಶರಣಾಗಿದ್ದಾರೆ. ಮಗು ಮತ್ತು ತನ್ನ ಹೆಂಡತಿಗೆ ವಿಷ ಕುಡಿಸಿ ಕೃಷ್ಣಾ ನಾಯ್ಕ್ ನೇಣು ಹಾಕಿಕೊಂಡಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿದೆ.  ಆರ್​ಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಕೃಷ್ಣಾ ನಾಯ್ಕ್ ಲಾರಿ ಚಾಲಕನಾಗಿದ್ದ. ಪತ್ನಿ ಸುಮಾ ಅನಾರೋಗ್ಯದಿಂದ ಬಳಲುತ್ತಿದ್ದಳು.‌ ಹೀಗಾಗಿ ಆಸ್ಪತ್ರೆಗೆ ಅಲೆದಾಡುತ್ತಿದ್ದ. ಜೊತೆಗೆ ಖರ್ಚು ವೆಚ್ಚವು ಬಹಳ ಆಗಿತ್ತು. ಇದಕ್ಕಾಗಿ ಆತ್ಮಹತ್ಯೆಗೆ ಶರಣಾಗಿರುವ ಅನುಮಾನ ಮೂಡಿದೆ.

ಕೃಷ್ಣಾ ನಾಯ್ಕ್​ ಖಾಸಗಿ ಫ್ಯಾಕ್ಟರಿಯಲ್ಲಿ ಲಾರಿ ಚಾಲಕನಾಗಿದ್ದ. ನಾಲ್ಕು ತಿಂಗಳ ಹಿಂದೆ ಕೆಲಸದಿಂದ ತೆಗೆದು ಹಾಕಿದ್ದರು. ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು. ಮೇಲಾಗಿ ಫ್ಯಾಕ್ಟರಿಯಿಂದ ಪರಿಹಾರ ಸಹ ನೀಡಿರಲಿಲ್ಲ.

ಇದನ್ನೂ ಓದಿ

ತರಬೇತಿಗೆ ಬಾರದೆ ಸತಾಯಿಸುತ್ತಿದ್ದ ಎಂದು ಹಾಕಿ ಸ್ಟಿಕ್‌ನಿಂದ ಹಲ್ಲೆ ಮಾಡಿದ ಕೋಚ್, ವಿದ್ಯಾರ್ಥಿ ಕೈಮುರಿತ

ಕೌಟುಂಬಿಕ ಕಲಹ: ಅಣ್ಣನಿಂದಲೇ ತಮ್ಮನ ಕೊಲೆ; ಪೊಲೀಸರೆದುರು ತಪ್ಪೊಪ್ಪಿಗೆ

(Three members of the same family have committed suicide in Davanagere)

Published On - 9:08 am, Mon, 20 September 21