ಕೌಟುಂಬಿಕ ಕಲಹ: ಅಣ್ಣನಿಂದಲೇ ತಮ್ಮನ ಕೊಲೆ; ಪೊಲೀಸರೆದುರು ತಪ್ಪೊಪ್ಪಿಗೆ

ತಮ್ಮ ಗುರುಸ್ವಾಮಿಯ ಕಣ್ಣಿಗೆ ಖಾರದಪುಡಿ ಎರಚಿ ಕೊಲೆ, ಟವಲ್‌ನಿಂದ ಕುತ್ತಿಗೆ ಬಿಗಿದು ಮಹದೇವಸ್ವಾಮಿ ಹತ್ಯೆಗೈದಿದ್ದ ಎಂದು ಹೇಳಲಾಗಿದೆ.

ಕೌಟುಂಬಿಕ ಕಲಹ: ಅಣ್ಣನಿಂದಲೇ ತಮ್ಮನ ಕೊಲೆ; ಪೊಲೀಸರೆದುರು ತಪ್ಪೊಪ್ಪಿಗೆ
ಸಾಂಕೇತಿಕ ಚಿತ್ರ

ಮೈಸೂರು: ಕೌಟುಂಬಿಕ ಕಲಹದ ಕಾರಣ ಅಣ್ಣನೇ ತಮ್ಮನನ್ನು ಕೊಲೆಗೈದು ಆನಂತರ ತಪ್ಪೊಪ್ಪಿಕೊಂಡ ದಾರುಣ ಘಟನೆ ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಬಾಡಗ ಗ್ರಾಮದಿದೆ. ಬಾಡಗ ಗ್ರಾಮದ ಜಮೀನಿನಲ್ಲಿ ತನ್ನದೇ ತಮ್ಮನಾಗಿರುವ ಗುರುಸ್ವಾಮಿ ಎಂಬಾತನನ್ನು ಮಹದೇವಸ್ವಾಮಿ ಎಂಬಾತ ಹತ್ಯೆಗೈದು ಪೊಲೀಸರಿಗೆ ದೂರು ನೀಡಿದ್ದ.

ತಮ್ಮ ಗುರುಸ್ವಾಮಿಯ ಕಣ್ಣಿಗೆ ಖಾರದಪುಡಿ ಎರಚಿ ಕೊಲೆ, ಟವಲ್‌ನಿಂದ ಕುತ್ತಿಗೆ ಬಿಗಿದು ಮಹದೇವಸ್ವಾಮಿ ಹತ್ಯೆಗೈದಿದ್ದ ಎಂದು ಹೇಳಲಾಗಿದೆ. ಬಳಿಕ ಮಹದೇವಸ್ವಾಮಿ ಗ್ರಾಮಸ್ಥರ ಜತೆ ಸೇರಿ ತಮ್ಮನನ್ನು ಹುಡುಕುವ ನಾಟಕ ಮಾಡಿದ್ದ. ತನ್ನ ತಮ್ಮನನ್ನು ಯಾರೋ ಹತ್ಯೆಗೈದಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದ.

ಆದರೆ ಅನುಮಾನಗೊಂಡ ಪೊಲೀಸರು ಮಹದೇವಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ತಾನೇ ಕೊಲೆ ಮಾಡಿರುವುದಾಗಿ ಮಹದೇವಸ್ವಾಮಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಲಿಹಾಳದಲ್ಲಿ ಕಾಲುಜಾರಿ ಕೆರೆಯಲ್ಲಿ ಬಿದ್ದು ಶಿಕ್ಷಕ ಸಾವು‌
ರಾಯಚೂರು: ಸರ್ಕಾರಿ ಶಾಲೆ ಶಿಕ್ಷಕ ಶೇಖರಪ್ಪ ಹೆಡಗಿನಾಳ(45) ಎಂಬುವವರು ಕಾಲುಜಾರಿ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ ದುರ್ಘಟನೆಯೊಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಭೀಮರಾಜ ಕ್ಯಾಂಪ್ ಸರ್ಕಾರಿ ಶಾಲೆ ಶಿಕ್ಷಕರಾಗಿದ್ದರು. ತುರವಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಲಾರಿ ಅಪಘಾತ; ಚಾಲಕ ಮೃತ್ಯು
ಚಾಲಕನ ನಿಯಂತ್ರಣ ತಪ್ಪಿ ಚೆಕ್‌ಪೋಸ್ಟ್‌ಗೆ ನುಗ್ಗಿದ ಪರಿಣಾಮ ಲಾರಿ ಚಾಲಕ ನೌಷಾದ್(22) ಎಂಬುವವರು ಸಾವನ್ನಪಿದ ದುರ್ಘಟನೆ ರಾಯಚೂರ ತಾಲೂಕಿನ ಶಕ್ತಿನಗರ ಚೆಕ್‌ಪೋಸ್ಟ್‌ನಲ್ಲಿ ನಡೆದಿದೆ. ಅವಘಡದಲ್ಲಿ ಲಾರಿಯ ಕ್ಲೀನರ್‌ಗೆ ಗಾಯವಾಗಿದೆ. ಅವರಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 

ಮೈಸೂರು: ರೆಡ್ ಬುಲ್ ಪಕ್ಷಿ ಮರಿಗಳಿಗೆ ಆಹಾರ ನೀಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ; ವಿಡಿಯೋ ವೈರಲ್​

ಪ್ರಭಾಸ್ ನಟನೆಯ ‘ಆದಿಪುರುಷ್’ ಚಿತ್ರ ಯಾವ ಹಂತದಲ್ಲಿದೆ? ಇಲ್ಲಿದೆ ಕುತೂಹಲಕರ ಮಾಹಿತಿ

(Mysuru Family quarrel man kills his brother himself confessed in front of police)

Read Full Article

Click on your DTH Provider to Add TV9 Kannada