ರೈಲ್ವೆ ಹಳಿ ಮೇಲೆ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದಾಗ ರೈಲು ಡಿಕ್ಕಿ; ಯುವಕ ಸ್ಥಳದಲ್ಲೇ ಸಾವು

ರೈಲ್ವೆ ಹಳಿ ಮೇಲೆ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದಾಗ ರೈಲು ಡಿಕ್ಕಿ; ಯುವಕ ಸ್ಥಳದಲ್ಲೇ ಸಾವು
ಯುವಕನಿಗೆ ರೈಲು ಡಿಕ್ಕಿ ಸ್ಥಳದಲ್ಲೇ ಸಾವು

ಸ್ನೇಹಿತರ ಜೊತೆ ಫೋಟೋ ಶೂಟ್‌ಗೆ ಹೋಗಿದ್ದ ಸಚಿನ್‌ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಸದ್ಯ  ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.

TV9kannada Web Team

| Edited By: preethi shettigar

Jan 23, 2022 | 9:34 PM

ದಾವಣಗೆರೆ: ರೈಲ್ವೆ ಹಳಿ ಮೇಲೆ ಫೋಟೋ ಶೂಟ್ (Photo shoot) ಮಾಡಿಸಿಕೊಳ್ಳುತ್ತಿದ್ದ ಯುವಕನಿಗೆ ರೈಲು (Train) ಡಿಕ್ಕಿ ಹೊಡೆದ ಘಟನೆ ದಾವಣಗೆರೆ ಜಿಲ್ಲೆಯ ಡಿಸಿಎಂ ಟೌನ್‌ ಶಿಪ್ ಬಳಿ ನಡೆದಿದೆ. ಹಳಿ ಮೇಲೆ ಫೋಟೋ ತೆಗಿಸಿಕೊಳ್ತಿದ್ದ ಸಚಿನ್‌(16) ಮೃತ ದುರ್ದೈವಿ. ಪಕ್ಕದ ಹಳಿಯಲ್ಲಿ ರೈಲು ಹೋಗುತ್ತದೆ ಎಂದು ಅಲ್ಲಿಯೇ ನಿಂತ ಪರಿಣಾಮ  ರೈಲು ಡಿಕ್ಕಿಯಾಗಿದೆ. ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಒಳ್ಳೆಯ ಬ್ಯಾಗ್ರೌಂಡ್ (Background) ಸಿಗುತ್ತದೆ ಎಂದು ಹಳಿ ಮೇಲೆ ನಿಂತಿದ್ದ. ಆದರೆ ಯುವಕ ನಿಂತಿದ್ದ ಟ್ರ್ಯಾಕ್ ಮೇಲೆಯೇ ಬಂದ ರೈಲು ಡಿಕ್ಕಿಯಿಂದ ಯುವಕ ಸಚಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸ್ನೇಹಿತರ ಜೊತೆ ಫೋಟೋ ಶೂಟ್‌ಗೆ ಹೋಗಿದ್ದ ಸಚಿನ್‌ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಸದ್ಯ  ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.

ನೆಲಮಂಗಲ: ಆಟೋ, ಬೊಲೆರೊ, ಬೈಕ್ ನಡುವೆ ಡಿಕ್ಕಿ; ಸವಾರ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಪೆಮ್ಮನಹಳ್ಳಿ ಬಳಿ ಆಟೋ, ಬೊಲೆರೊ, ಬೈಕ್ ನಡುವೆ ಡಿಕ್ಕಿಯಾಗಿದ್ದು, ತುಮಕೂರು ಜಿಲ್ಲೆ ಹುಳ್ಳೇನಹಳ್ಳಿಯ ಬೈಕ್ ಸವಾರ ತಿಮ್ಮಪ್ಪ(60) ಸಾವನ್ನಪ್ಪಿದ್ದಾರೆ. ಬೈಕ್​ನಲ್ಲಿದ್ದ ಗೌರಮ್ಮ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು: ವಿದ್ಯುತ್​ ಶಾರ್ಟ್ ​ಸರ್ಕ್ಯೂಟ್​ನಿಂದ ಕಾಫಿ ತೋಟಕ್ಕೆ ಬೆಂಕಿ

ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ನಿಂದ ಕಾಫಿ ತೋಟಕ್ಕೆ ಬೆಂಕಿ ಹತ್ತಿಕೊಂಡ ಘಟನೆ ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ16 ವರ್ಷದಿಂದಲೂ ಪಾಲನೆ ಮಾಡಿಕೊಂಡು ಬಂದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ, ಮೆಣಸು ಬೆಳೆ ನಾಶವಾಗಿದೆ. ಪ್ರಸನ್ನ, ಸಂಧ್ಯಾ ಎಂಬುವವರ ಎರಡೂವರೆ ಎಕರೆ ತೋಟ ನಾಶವಾಗಿದೆ. ಸದ್ಯ ಸ್ಥಳಕ್ಕೆ ಭೇಟಿ ನೀಡದ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ವಿಜಯಪುರ: ಶಾರ್ಟ್​ ಸರ್ಕ್ಯೂಟ್​​ನಿಂದ 5 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಭಸ್ಮ

ಶಾರ್ಟ್​ ಸರ್ಕ್ಯೂಟ್​​ನಿಂದ 5 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗೆ ಆಹುತಿಯಾದ ಘಟನೆ ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಯರನಾಳ ಗ್ರಾಮದಲ್ಲಿ ನಡೆದಿದೆ. ರೈತ ಶಂಕರಗೌಡ ಪಾಟೀಲ್​​ಗೆ ಸೇರಿದ ಕಬ್ಬು ಬೆಳೆ ಸುಟ್ಟುಭಸ್ಮವಾಗಿದ್ದು, ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

ತುಮಕೂರು: ಅಪಘಾತದಲ್ಲಿ ಮೂವರ ಸಾವಿಗೆ ಕಾರಣನಾಗಿದ್ದ ಲಾರಿ ಚಾಲಕ 16 ವರ್ಷಗಳ ಬಳಿಕ ಪೊಲೀಸರ ವಶಕ್ಕೆ!

ಕೋಲಾರ: ಬೆಳಗಿನ ಜಾವ ಸಂಭವಿಸಿದ ಅಪಘಾತದಲ್ಲಿ ಇಬ್ಬರ ದುರ್ಮರಣ; ತಿರುಪತಿಯಿಂದ ವಾಪಸಾಗುವಾಗ ಘಟನೆ

Follow us on

Related Stories

Most Read Stories

Click on your DTH Provider to Add TV9 Kannada