2027ಕ್ಕೆ ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಲೋಕಾರ್ಪಣೆ: ಬೆಣ್ಣೆ ನಗರಿಯಿಂದ ಬೆಂಗಳೂರಿಗೆ ಇನ್ನು ಕೇವಲ 2.5 ಗಂಟೆ ಮಾತ್ರ!

ಮಧ್ಯ ಕರ್ನಾಟಕದ ಜನತೆಯ ಬಹುದಿನಗಳ ಕನಸಾದ ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗವು 2027ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. ಈ ಹೊಸ ಮಾರ್ಗದಿಂದ ಕೇವಲ ಎರಡೂವರೆ ಗಂಟೆಯಲ್ಲಿ ದಾವಣಗೆರೆಯಿಂದ ಬೆಂಗಳೂರು ತಲುಪಬಹುದು. ಕೇಂದ್ರ ಸಚಿವ ವಿ. ಸೋಮಣ್ಣ ಅವರು ಕಾಮಗಾರಿಯನ್ನು ಪರಿಶೀಲಿಸಿದ್ದು, ಪ್ರಯಾಣಿಕರ ಸಮಯ ಹಾಗೂ ದೂರ ಭಾರೀ ಪ್ರಮಾಣದಲ್ಲಿ ತಗ್ಗಲಿದೆ.

2027ಕ್ಕೆ ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಲೋಕಾರ್ಪಣೆ: ಬೆಣ್ಣೆ ನಗರಿಯಿಂದ ಬೆಂಗಳೂರಿಗೆ ಇನ್ನು ಕೇವಲ 2.5 ಗಂಟೆ ಮಾತ್ರ!
2027ಕ್ಕೆ ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಲೋಕಾರ್ಪಣೆ
Edited By:

Updated on: Oct 17, 2026 | 11:58 AM

ಮುಖ್ಯಾಂಶಗಳು

  • 2027ರ ಡಿಸೆಂಬರ್ ಒಳಗೆ ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಪೂರ್ಣಗೊಳ್ಳಲಿದೆ.
  • ಹೊಸ ರೈಲು ಮಾರ್ಗದ ಮೂಲಕ ಕೇವಲ ಎರಡೂವರೆ ಗಂಟೆಯಲ್ಲಿ ಬೆಂಗಳೂರು ತಲುಪಬಹುದು.
  • ದಾವಣಗೆರೆ ಜಿಲ್ಲೆಯ ತೋಳಹುಣಸೆಯಿಂದ ರೈಲು ಮಾರ್ಗದ ಕಾಮಗಾರಿ ಪರಿಶೀಲನೆ ನಡೆಸಲಾಗಿದೆ.

ದಾವಣಗೆರೆ, ಅಕ್ಟೋಬರ್ 17: ಮಧ್ಯ ಕರ್ನಾಟಕದ ಜನತೆಯ ದೀರ್ಘಕಾಲದ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗದ ಕಾಮಗಾರಿ ಭರದಿಂದ ಸಾಗಿದ್ದು, 2027ರ ಡಿಸೆಂಬರ್ ವೇಳೆಗೆ ಈ ಮಹತ್ವಾಪೇಕ್ಷೆಯ ಯೋಜನೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ದಾವಣಗೆರೆಯ ತೋಳಹುಣಸೆಯಿಂದ ಆನಗೋಡುವಿನವರೆಗೆ ಮೋಟಾರ್ ಟ್ರ್ಯಾಲಿಯಲ್ಲಿ ಸಂಚರಿಸಿ ಸಚಿವರು ಕಾಮಗಾರಿಯನ್ನು ಖುದ್ದು ಪರಿಶೀಲನೆ ನಡೆಸಿದ್ದಾರೆ.

ಹೊಸ ಮಾರ್ಗ ಬಂದರೆ ಎಷ್ಟು ಅನುಕೂಲ?

ಈ ನೂತನ ನೇರ ರೈಲು ಮಾರ್ಗವು ಮಧ್ಯ ಕರ್ನಾಟಕದ ಅಭಿವೃದ್ಧಿಗೆ ಹೊಸ ಕ್ರಾಂತಿಯನ್ನೇ ಸೃಷ್ಟಿಸಲಿದೆ. ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಜನರಿಗೆ ಬೆಂಗಳೂರು ಸಂಪರ್ಕ ಅತ್ಯಂತ ಸುಲಭವಾಗಲಿದೆ. ಬ್ಯುಸಿನೆಸ್, ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ನಿತ್ಯ ಓಡಾಡುವವರಿಗೆ ಇದು ವರದಾನವಾಗಲಿದ್ದು, ಪ್ರಯಾಣಿಕರ ಸಮಯ ಹಾಗೂ ಹಣ ಎರಡೂ ಉಳಿತಾಯವಾಗಲಿದೆ. ಅಲ್ಲದೆ, ಭವಿಷ್ಯದ ಜನಸಂಖ್ಯೆ ಬೆಳವಣಿಗೆಯ ದೃಷ್ಟಿಯಿಂದ ನಿಲ್ದಾಣಗಳಲ್ಲಿ ಕನಿಷ್ಠ 21 ಬೋಗಿಗಳು ನಿಲ್ಲುವಂತೆ ವಿಸ್ತರಿಸಲಾಗುತ್ತಿದೆ.

YouTube video player

ಮೊದಲು ರೈಲುಗಳು ಹೇಗೆ ಸಂಚರಿಸುತ್ತಿದ್ದವು?

ಈ ಹಿಂದೆ ದಾವಣಗೆರೆಯಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳಬೇಕಾದರೆ ಅರಸೀಕೆರೆ ಅಥವಾ ಹುಬ್ಬಳ್ಳಿ ಮಾರ್ಗದಲ್ಲಿ ಸುತ್ತು ಹಾಕಿ ಸಂಚರಿಸಬೇಕಾಗುತ್ತಿತ್ತು. ಇದರಿಂದ ಪ್ರಯಾಣದ ದೂರ ಹಾಗೂ ಸಮಯ ಎರಡೂ ಅಧಿಕವಾಗಿತ್ತು. ಇನ್ನು ರಸ್ತೆ ಮಾರ್ಗದ ಮೂಲಕ ಬಸ್ಸಿನಲ್ಲಿ ಪ್ರಯಾಣಿಸಲು ಕನಿಷ್ಠ 4 ರಿಂದ 5 ಗಂಟೆಗಳು ಹಾಗೂ ಕಾರಿನಲ್ಲಿ ತೆರಳಲು 3 ರಿಂದ 4 ಗಂಟೆಗಳವರೆಗೆ ಸಮಯ ಹಿಡಿಯುತ್ತಿತ್ತು.

ಹೊಸ ಮಾರ್ಗದಿಂದ ಸಮಯ ಉಳಿತಾಯ

ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಪೂರ್ಣಗೊಂಡ ಬಳಿಕ, ದಾವಣಗೆರೆಯಿಂದ ಹೊರಡುವ ರೈಲುಗಳು ನೇರವಾಗಿ ಬೆಂಗಳೂರು ತಲುಪಲಿವೆ. ಈ ಹೊಸ ಮಾರ್ಗದ ಮೂಲಕ ಪ್ರಯಾಣಿಸಿದರೆ ಕೇವಲ ಎರಡೂವರೆ ಗಂಟೆಗಳಲ್ಲಿ ದಾವಣಗೆರೆಯಿಂದ ಬೆಂಗಳೂರು ತಲುಪಬಹುದು. ಇದು ಪ್ರಯಾಣದ ದೂರವನ್ನು ಗಣನೀಯವಾಗಿ ಕಡಿಮೆ ಮಾಡಲಿದ್ದು, ಮಧ್ಯ ಕರ್ನಾಟಕದ ಜನರಿಗೆ ಇದು ಐತಿಹಾಸಿಕ ಸಂಚಾರ ಸೌಲಭ್ಯವಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
Loading...
Unable to load recommendations.
Follow Us