ವಕ್ಫ್ ಆಸ್ತಿಯಾದ ದಾವಣಗೆರೆ ಪಿಜೆ ಬಡಾವಣೆಯ ಈಗಿನ ಮಾರುಕಟ್ಟೆ ದರ ಕೇಳಿದ್ರೆ ಶಾಕ್ ಆಗುತ್ತೆ!
ಕರ್ನಾಟಕದಲ್ಲಿ ಈಗ ಎಲ್ಲಿ ನೋಡಿದರಲ್ಲಿ ವಕ್ಫ್ ಆಸ್ತಿ ವಿಚಾರ ಚರ್ಚೆ ಆಗುತ್ತಿದೆ. ಇತ್ತೀಚಿಗೆ ರಾಜ್ಯದಲ್ಲಿ ವಕ್ಫ ಆಸ್ತಿ ಶೇಖಡಾ 32 ರಷ್ಟು ಹೆಚ್ಚಾಗಿದೆ ಎನ್ನಲಾಗಿದೆ. ಇದರ ಮಧ್ಯ ದಾವಣಗೆರೆ ಜಿಲ್ಲಾ ಕೇಂದ್ರದ ಹೃದಯ ಭಾಗದ ಪ್ರತಿಷ್ಟಿತ ಬಡಾವಣೆ, ಪ್ರಮುಖ ವಾಣಿಜ್ಯ ಪ್ರದೇಶದ ಸಾವಿರಾರು ಆಸ್ತಿ ವಕ್ಫ್ ಆಸ್ತಿಯಾದ ಸಂಗತಿ ಬೆಳಕಿಗೆ ಬಂದಿದೆ. ಇನ್ನು ಇದರ ಮಾರುಕಟ್ಟೆ ಮೌಲ್ಯ ಕೇಳಿದ್ರೆ ಒಂದು ಕ್ಷಣ ಶಾಕ್ ಆಗುವುದಂತೂ ಗ್ಯಾರಂಟಿ.
ದಾವಣಗೆರೆ, (ನವೆಂಬರ್ 12): ಬೆಣ್ಣೆ ನಗರಿ ದಾವಣಗೆರೆಗೂ ಸಹ ವಕ್ಫ್ ವಿವಾದ ಕಾಲಿಟ್ಡಿದೆ. ಹೌದು.. ನಗರದ ಪ್ರತಿಷ್ಠಿತ ಪಿಜೆ ಬಡಾವಣೆಯ ಒಂದು ಏರಿಯಾ ಸಂಪೂರ್ಣ ವಕ್ಪ್ ಹೆಸರಿಗೆ ಆಗಿದೆ. ಹೌದು.. ಪಿಜೆ ಬಡಾವಣೆಯ ಸರ್ವೇ ನಂಬರ್ 53 ರಲ್ಲಿ ಬರುವ 4 ಎಕರೆ 13 ಗುಂಟೆ ಜಾಗದ ಪಹಣಿಯಲ್ಲಿ ವಕ್ಫ್ ಎಂದು ಬಂದಿದೆ. 1992-93ರಲ್ಲಿ ಈ ಪಿಜೆ ಬಡಾವಣೆ ಬೀರದೇವರ ಪೂಜಾರಿ ಎಂದು ಕೈ ಬರಹದ ಪಹಣಿಯಲ್ಲಿ ಕಾಣಿಸಿಕೊಂಡಿದೆ. ಆದ್ರೆ, ಈ ವಕ್ಫ್ ಎಂದು ನಮೂದಾಗಿದೆ. ಒಟ್ಟು ನಾಲ್ಕು ಎಕರೆ 13 ಗುಂಟೆ ಜಮೀನು. ಒಂದು ಲಕ್ಷ 88 ಸಾವಿರದ 397 ಚದರ್ ಅಡಿ ಇದ್ದು, ಒಂದು ಚದರ್ ಅಡಿಗೆ 15 ಸಾವಿರ ರೂಪಾಯಿ ಇದೆ. ಹೀಗಾಗಿ ಇದರ ಒಟ್ಟು ಮೌಲ್ಯ 565 ಕೋಟಿ ರೂಪಾಯಿ.
565 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿ
ಪಿಜೆ ಬಡಾವಣೆಯ ಸರ್ವೇ ನಂಬರ್ 53 ರಲ್ಲಿ ಬರುವ 4 ಎಕರೆ 13 ಗುಂಟೆ ಜಾಗದ ಪಹಣಿಯಲ್ಲಿ ವಕ್ಫ್ ಎಂದು ಬಂದಿದೆ. 1992-93ರಲ್ಲಿ ಈ ಪಿಜೆ ಬಡಾವಣೆ ಬೀರದೇವರ ಪೂಜಾರಿ ಎಂದು ಕೈ ಬರಹದ ಪಹಣಿಯಲ್ಲಿ ಕಾಣಿಸಿಕೊಂಡಿದೆ. ಆದ್ರೆ, ಈ ವಕ್ಫ್ ಎಂದು ನಮೂದಾಗಿದೆ. ಒಟ್ಟು ನಾಲ್ಕು ಎಕರೆ 13 ಗುಂಟೆ ಜಮೀನು. ಒಂದು ಲಕ್ಷ 88 ಸಾವಿರದ 397 ಚದರ್ ಅಡಿ ಇದ್ದು, ಒಂದು ಚದರ್ ಅಡಿಗೆ 15 ಸಾವಿರ ರೂಪಾಯಿ ಇದೆ. ಹೀಗಾಗಿ ಇದರ ಒಟ್ಟು ಮೌಲ್ಯ 565 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಇಷ್ಟೊಂದು ಬೆಲೆ ಬಾಳುವ ಈ ಪ್ರದೇಶದ ವಿಚಾರ ಬಿರುಗಾಳಿ ಎಬ್ಬಿಸಿರುವುದು ಸುಳ್ಳಲ್ಲ.
9 ವರ್ಷಗಳ ಹಿಂದೆ ಪಹಣಿಯಲ್ಲಿ ವಕ್ಫ್ ಮಂಡಳಿ ಆಸ್ತಿಯೆಂದು ಹೆಸರು ಸೇರ್ಪಡೆಯಾಗಿದೆ. ಪಿಜೆ ಬಡಾವಣೆಯ ರಿ.ಸ.ನಂ.53ರ ಪಹಣಿಯಲ್ಲಿ ವಕ್ಫ್ ಹೆಸರು ಬಂದಿದೆ. ಖಬರಸ್ಥಾನ ಸುನ್ನಿ ವಕ್ಫ್ ಸಂಸ್ಥೆ ಹೆಸರಲ್ಲಿ ನೋಂದಣಿಯಾಗಿದ್ದು, ದಾಖಲೆಗಳಲ್ಲಿ ಕಂಡುಬರುತ್ತಿದೆ. 2015ರಲ್ಲಿ ಮ್ಯೂಟೇಷನ್ ರಿಜಿಸ್ಟರ್, ಕೋರ್ಟ್ ಆದೇಶದಂತೆ ಮ್ಯೂಟೇಷನ್ ಅಂತಾ ದಾಖಲೆಗಳಲ್ಲಿ ಉಲ್ಲೇಖ ಮಾಡಲಾಗಿದೆ.
1985-86ರಲ್ಲಿ ಎಂಆರ್ ನಂಬರ್ 54/85-86ರಡಿ 4.13 ಎಕರೆಯನ್ನು ಖಬರಸ್ಥಾನ ಸುನ್ನಿ ವಕ್ಫ್ ಸಂಸ್ಥೆಯೆಂದು ಪಹಣಿಯಲ್ಲಿ ಇರುತ್ತದೆ. ಪಿ.ಜೆ. ಬಡಾವಣೆಯ ಒಂದು ಇಡೀ ಭಾಗವೇ ವಕ್ಫ್ ಹೆಸರಿಗೆ ಹೋಗಿದ್ದು ಹೇಗೆ ಎನ್ನುವುದದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ