Leopard Attack: ದಾವಣಗೆರೆಯಲ್ಲಿ ಚಿರತೆ ದಾಳಿಗೆ ಮಹಿಳೆ ಸಾವು
ತಾಂಡಾದ 7 ಜನ ಮಹಿಳೆಯರು ಮೆಕ್ಕೆಜೋಳದ ಜಮೀನಿನಲ್ಲಿ ಕಳೆ ತೆಗೆಯಲು ಹೋಗಿದ್ದರು. ಮಧ್ಯಾಹ್ನ ಚಿರತೆಯು ಕಮಲಾಬಾಯಿ ಅವರ ಕುತ್ತಿಗೆಗೆ ಬಾಯಿ ಹಾಕಿ 100 ಅಡಿ ದೂರ ಎಳೆದುಕೊಂಡು ಹೋಗಿದೆ.
ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಫಲವನಹಳ್ಳಿ ಗ್ರಾಮದಲ್ಲಿ ಮಂಗಳವಾರ ಚಿರತೆ ದಾಳಿಯಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಗ್ರಾಮದ ಕಮಲಾಬಾಯಿ ಜೀಕಾನಾಯ್ಕ(55) ಮೃತ ಮಹಿಳೆ.
ತಾಂಡಾದ 7 ಜನ ಮಹಿಳೆಯರು ಮೆಕ್ಕೆಜೋಳದ ಜಮೀನಿನಲ್ಲಿ ಕಳೆ ತೆಗೆಯಲು ಹೋಗಿದ್ದರು. ಮಧ್ಯಾಹ್ನ ಚಿರತೆಯು ಕಮಲಾಬಾಯಿ ಅವರ ಕುತ್ತಿಗೆಗೆ ಬಾಯಿ ಹಾಕಿ 100 ಅಡಿ ದೂರ ಎಳೆದುಕೊಂಡು ಹೋಗಿದೆ. ಈ ವೇಳೆ ಕಮಲಾಬಾಯಿ ಜೊತೆ ಹೋಗಿದ್ದ ಮಹಿಳೆಯರು ಕೂಗಾಡಿಕೊಂಡಿದ್ದಾರೆ. ಮಹಿಳೆಯರು ಕಿರುಚಾಡುವ ಸದ್ದಿಗೆ ಚಿರತೆ ಕಮಲಾಬಾಯಿಯ ದೇಹವನ್ನು ಬಿಟ್ಟು ಓಡಿ ಹೋಗಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ಮೂಗು, ಬಾಯಿಯಲ್ಲಿ ರಕ್ತ ಬಂದು ಕಮಲಾಬಾಯಿ ಮೃತಪಟ್ಟಿದ್ದರು ಎಂದು ಪ್ರತ್ಯಕ್ಷದರ್ಶಿ ಮಹಿಳೆಯರು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಆರ್‌ಎಫ್‌ಒ ಚೇತನ, ಡಿಸಿ ಕಾಪಶಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ದಾಳಿಗೆ ಮಹಿಳೆ ಬಲಿ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಮೃತ ಮಹಿಳೆಯ ಕುಟುಂಬ ಸದಸ್ಯರ ಜೊತೆ ಮಾತುಕತೆ ನಡೆಸಿ ಸಂತಾಪ ಸೂಚಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Belagavi News: ಚಿರತೆ ಸೆರೆಗೆ ಮುಂದುವರಿದ ಕಾರ್ಯಾಚರಣೆ, ಶೂಟರ್ಸ್ಗೆ ಬುಲಾವ್, ವಿಶೇಷ ಡ್ರೋಣ್ ಬಳಕೆ
ಬೆಳಗಾವಿ: ನಗರದ ಗಾಲ್ಫ್ ಮೈದಾನದಲ್ಲಿ ಕಾಣಿಸಿಕೊಂಡಿರುವ ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ (Leopard Catch) ಇಂದೂ (ಆಗಸ್ಟ್ 23) ಸಹ ಮುಂದುವರಿದಿದೆ. ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದು, ಹೆಚ್ಚುವರಿಯಾಗಿ ಇಬ್ಬರು ಶೂಟರ್ಗಳೂ ಪಾಲ್ಗೊಂಡಿದ್ದಾರೆ. ಚಿರತೆ ಸೆರೆ ಕಾರ್ಯಾಚರಣೆಗೆ ನೆರವಾಗಲೆಂದು ಸಂಜೆ ವೇಳೆಗೆ ಸಕ್ರೆಬೈಲ್‌ನಿಂದ ಆನೆಗಳು ಬರುವ ಸಾಧ್ಯತೆಯಿದೆ. 250 ಎಕರೆ ಪ್ರದೇಶ ವಿಸ್ತೀರ್ಣದ ಗಾಲ್ಫ್ ಮೈದಾನದಿಂದ ಚಿರತೆ ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರಿದಿದೆ. ನಿನ್ನೆ ಎರಡು ಬಾರಿ ಚಿರತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯಾಚರಣೆ (ಕೂಂಬಿಂಗ್) ನಡೆಸಿದ್ದರು. ಆನೆಗಳು ಬಂದ ನಂತರ ಚಿರತೆಗಾಗಿ ಆನೆಗಳ ನೆರವಿನೊಂದಿಗೆ ಮತ್ತೊಮ್ಮೆ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಲಿದ್ದಾರೆ.
ಗಾಲ್ಫ್ ಮೈದಾನಕ್ಕೆ ಬಂದಿರುವ ಹಂದಿ ಹಿಡಿಯುವ ಯುವಕರು ತಮ್ಮೊಂದು ಸುಮಾರು 20 ನಾಯಿಗಳನ್ನು ಕರೆತಂದಿದ್ದಾರೆ. ನಾಯಿಗಳ ನೆರವಿನೊಂದಿಗೆ ಅವರೂ ಶೋಧ ಕಾರ್ಯಾಚರಣೆ ನಡೆಸಿದ್ದರು. ಗಾಲ್ಫ್ ಮೈದಾನದಲ್ಲಿ ಚಿರತೆ ಪತ್ತೆಯಾಗದ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಮತ್ತು ಗ್ರಾಮೀಣ ವಲಯದ 22 ಶಾಲೆಗಳಿಗೆ ರಜೆಯನ್ನು ಮುಂದುವರಿಸಲು ತಾಲ್ಲೂಕು ಆಡಳಿತ ನಿರ್ಧರಿಸಿದೆ.
Published On - 10:11 pm, Tue, 23 August 22