
ದಾವಣಗೆರೆ, ಫೆಬ್ರವರಿ 08: ಒಡೆದ ಮನಸ್ಸುಗಳನ್ನು ಒಂದುಗೂಡಿಸಲು ಕರ್ನಾಟಕದಾದ್ಯಂತ ಯಾತ್ರೆ ಮಾಡುವೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು (Sriramulu) ಹೇಳಿದ್ದಾರೆ. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು, ಹಿಂದೂ ಮುಖಂಡರನ್ನು ಒಗ್ಗೂಡಿಸಲು ಶ್ರಮಿಸುವೆ. ಯಾವುದೋ ಕಾರಣಕ್ಕೆ ನೋವಾಗಿ ಒಡೆದ ಮನಸ್ಸುಗಳ ಒಂದು ಮಾಡುವೆ ಎಂದು ಹೇಳಿದ್ದಾರೆ.
ಸಮಾನ ಮನಸ್ಕರರನ್ನು ಒಂದುಗೂಡಿಸಲು ಕೆಲಸ ಮಾಡುವೆ. ಈಗಾಗಲೇ ಎಲ್ಲಾ ಕಡೆ ಕರೆ ಮಾಡಿ ಮಾತನಾಡಿದ್ದೇನೆ, ಯಾತ್ರೆ ಮಾಡುವೆ. ನನ್ನ ಯಾತ್ರೆ ಉದ್ದೇಶದಲ್ಲಿ ಸ್ವಾರ್ಥವಿಲ್ಲ, ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾತ್ರ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಕರೆದರೆ ನಾನು ಹೋಗಿ ಮಾತನಾಡುವೆ ಎಂದಿದ್ದಾರೆ.
ಇದನ್ನೂ ಓದಿ: ದಿಲ್ಲಿ ಚುನಾವಣೆಯಲ್ಲಿ ಬಿಜೆಪಿ ಕಮಾಲ್: ಮೋದಿ, ನಡ್ಡಾಗೆ ಪತ್ರದ ಮೂಲಕ ಅಭಿನಂದನೆ ತಿಳಿಸಿದ ಯಡಿಯೂರಪ್ಪ
ಜನಾರ್ದನರೆಡ್ಡಿ, ಶ್ರೀರಾಮುಲು ಮತ್ತೆ ಒಂದಾಗುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದು, ಈ ಯಾತ್ರೆಯಲ್ಲಿ ಎಲ್ಲರು ಬರುತ್ತಾರೆ. ಒಡೆದ ಮನಸ್ಸುಗಳು ಎಂದರೆ ಎಲ್ಲಾರೂ ಸೇರುತ್ತೇವೆ ಎನ್ನುವ ಮೂಲಕ ರೆಡ್ಡಿ ಮತ್ತು ಶ್ರೀರಾಮುಲು ಒಗ್ಗಟ್ಟು ಮಂತ್ರದ ಬಗ್ಗೆ ಹೇಳಿದ್ದಾರೆ.
ಇನ್ನು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ವಿಚಾರವಾಗಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ಗೆದ್ದಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಬಿಜೆಪಿಗೆ ಬಹುಮತ ಬರುತ್ತದೆ. ಭಾರತೀಯ ಜನತಾ ಪಕ್ಷ ಸಂಘಟಿಸಲು ರಾಜ್ಯಾದ್ಯಂತ ಯಾತ್ರೆ ಮಾಡುವೆ. ದೇಶ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.
ರಾಜ್ಯ ಬಿಜೆಪಿ ಘಟಕದಲ್ಲಿ ಆಂತರಿಕ ಕಚ್ಚಾಟ ವಿಚಾರವಾಗಿ ಕೊಪ್ಪಳ ತಾಲೂಕಿನ ಇರಕಲ್ಲಗಡಾದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಪ್ರತಿಕ್ರಿಯಿಸಿದ್ದು, ಪಕ್ಷದ ಹಿರಿಯ ನಾಯಕರು ಈಗಾಗಲೇ ಬೆಂಗಳೂರಿಗೆ ಬಂದಿದ್ದಾರೆ. ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ಪಕ್ಷದ ವರಿಷ್ಠರು ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಾರೆ. ಅವಕಾಶ ಸಿಕ್ಕರೆ ರಾಜ್ಯಾಧ್ಯಕ್ಷ ಆಗ್ತೇನೆಂದು ರಾಮುಲು ಹೇಳಿಕೆ ವಿಚಾರವಾಗಿ ಮಾತನಾಡಿದ್ದು, ಎಲ್ಲರಿಗೂ ಆಸೆ ಇರುತ್ತೆ, ಆದರೆ ಹಿರಿಯರು ತೀರ್ಮಾನ ಮಾಡಬೇಕು ಎಂದರು.
ಇದನ್ನೂ ಓದಿ: Delhi Assembly Poll Results; ಸಮಾಜದ ಎಲ್ಲ ವರ್ಗದವರು ಬಿಜೆಪಿಗೆ ವೋಟು ಮಾಡಿದ್ದಾರೆ: ಬಸವರಾಜ ಬೊಮ್ಮಾಯಿ
ಮೂಡಾ ವಿಚಾರದಲ್ಲಿ ಇಡಿ ವಿಚಾರಣೆ ಇನ್ನು ನಡೆಯುತ್ತಿದೆ. ಹೀಗಾಗಿ ಈಗಾಗಲೇ ಅವರು ವಿಜಯೋತ್ಸವ ಆಚರಣೆ ಮಾಡುವ ಅವಶ್ಯಕತೆ ಇಲ್ಲ. ಇಡಿ ಬಹಳ ಗಂಭೀರವಾಗಿ ತನಿಖೆ ನಡೆಸುತ್ತಿದೆ. ಸಿದ್ದರಾಮಯ್ಯ ಒಬ್ಬರೇ ಜೈಲಿಗೆ ಹೋಗುತ್ತಾರಾ, ಇಲ್ಲಾ ಎಷ್ಟು ಜನ ಹೋಗುತ್ತಾರೆ ಅನ್ನೋದು ಮುಂದಿನ ದಿನದಲ್ಲಿ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.