ದಾವಣಗೆರೆ: ಬೈಕ್ನಲ್ಲಿ ಹಳ್ಳ ದಾಟುತ್ತಿದ್ದಾಗ ಯುವಕನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ-ದೊಡ್ಡಘಟ್ಟದ ಮಧ್ಯೆ ಇರುವ ಹಳ್ಳದಲ್ಲಿ ನಡೆದಿದೆ. ಸಿ ಶಿವರಾಜ್ ಎಂಬುವವರು ನೀರುಪಾಲಾದ ಯುವಕ. ಯುವಕನ ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರಿಂದ ಶೋಧಕಾರ್ಯ ನಡೆಯುತ್ತಿದೆ. ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಹಳ್ಳ ಸೂಳೆಕೆರೆಗೆ ಕೊಡಿ ಬಿದ್ದು ತುಂಬಿ ಹರಿಯುತ್ತಿದೆ. ಹಳ್ಳದ ನೀರಿನ ರಭಸಕ್ಕೆ ಕುಳಗಟ್ಟ ಗ್ರಾಮದ ಯುವಕ ಶಿವರಾಜ್ ಕೊಚ್ಚಿ ಹೋಗಿದ್ದಾರೆ. ಕತ್ತಲು ಆವರಿಸಿದ ಹಿನ್ನೆಲೆ ಶೋಧ ಕಾರ್ಯದಲ್ಲಿ ವಿಳಂಬವಾಗಿದೆ.
ಕೆಆರ್ಎಸ್ ಜಲಾಶಯ ಭರ್ತಿ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯ ಭರ್ತಿಯಾಗಿದೆ. 11 ವರ್ಷಗಳ ನಂತರ ಅಕ್ಟೋಬರ್ನಲ್ಲಿ ಡ್ಯಾಂ ಭರ್ತಿಯಾಗಿದೆ. 2010ರಲ್ಲಿ ಅಕ್ಟೋಬರ್ನಲ್ಲಿ ಕೆಆರ್ಎಸ್ ಡ್ಯಾಂ ಭರ್ತಿಯಾಗಿತ್ತು. ನ.2ರಂದು ಸಿಎಂ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಿದ್ದರು. ಕೆಆರ್ಎಸ್ ಜಲಾಶಯದ ಇಂದಿನ ಮಟ್ಟ 124.50 ಅಡಿಯಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿ, ಒಳ ಹರಿವು 11,345 ಕ್ಯೂಸೆಕ್, ಹೊರಹರಿವು 3661 ಕ್ಯೂಸೆಕ್ ಇದೆ.
ಶಾರ್ಟ್ಸರ್ಕ್ಯೂಟ್ನಿಂದ ಹಸು, ಎಮ್ಮೆ ಸಾವು
ಶಾರ್ಟ್ಸರ್ಕೂಟ್ನಿಂದ ಕೊಟ್ಟಿಗೆಯಲ್ಲೇ ಹಸು ಮತ್ತು ಎಮ್ಮೆ ಮೃತಪಟ್ಟಿವೆ. ಚನ್ನಗಿರಿ ತಾಲೂಕಿನ ನವಲೇಹಾಳು ಗ್ರಾಮದ ಮಂಜುನಾಥ್ಗೆ ಸೇರಿದ ಜಾನುವಾರು ಸಾವನ್ನಪ್ಪಿವೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿದೆ. 1 ಲಕ್ಷ 40 ಸಾವಿರ ಬೆಲೆಯ 2 ಜರ್ಸಿ ಆಕಳು, 10 ಸಾವಿರ 1 ಕರು 50 ಸಾವಿರದ 1 ಎಮ್ಮೆ ಸಾವನ್ನಪ್ಪಿವೆ. ಜಾನುವಾರಗಳ ಸಾವಿಗೆ ಮಾಲೀಕ ಮಂಜುನಾಥ್ ಕುಟುಂಬ ಕಣ್ಣೀರು ಹಾಕಿದೆ.
ಇದನ್ನೂ ಓದಿ
ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಇಬ್ಬರು ಆರೋಪಿಗಳು ಅರೆಸ್ಟ್!
ಭಾರತದಲ್ಲಿ ಟ್ಯಾಬ್ಲೆಟ್ ಪೋರ್ಟ್ಫೋಲಿಯೋ ಹೆಚ್ಚಿಸಿಕೊಳ್ಳುತ್ತಿರುವ ಲೆನೊವೊ ಹೊಸ ಟ್ಯಾಬ್ ಕೆ10 ಲಾಂಚ್ ಮಾಡಿದೆ