AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲೂ ಇಳಿಮುಖವಾದ ಸಕ್ರಿಯ ಕೊರೊನಾ ಪ್ರಕರಣಗಳು: ಇಂದು ದೃಢಪಟ್ಟ ಕೇಸ್​​ಗಳೆಷ್ಟು?

ಬೆಂಗಳೂರಿನಲ್ಲಿಂದು 659 ಹೊಸ ಕೊರೊನಾ ಕೇಸ್ ಪತ್ತೆ ಆಗಿದೆ. 5 ಜನರ ಪೈಕಿ ಇಬ್ಬರು ಬೆಂಗಳೂರಿನಲ್ಲೇ ಮೃತಪಟ್ಟಿದ್ದಾರೆ. ರಾಮನಗರದಲ್ಲಿ ಅತಿ ಕಡಿಮೆ ಎಂದರೆ 1 ಕೊರೊನಾ ಕೇಸ್​ ಪತ್ತೆ ಆಗಿದೆ.

ರಾಜ್ಯದಲ್ಲೂ ಇಳಿಮುಖವಾದ ಸಕ್ರಿಯ ಕೊರೊನಾ ಪ್ರಕರಣಗಳು: ಇಂದು ದೃಢಪಟ್ಟ ಕೇಸ್​​ಗಳೆಷ್ಟು?
ಪ್ರಾತಿನಿಧಿಕ ಚಿತ್ರ
ರಾಜೇಶ್ ದುಗ್ಗುಮನೆ
| Edited By: |

Updated on:Dec 20, 2020 | 8:30 PM

Share

ಬೆಂಗಳೂರು: ರಾಜ್ಯದಲ್ಲಿ ಮಿತಿಮೀರಿದ್ದ ಕೊರೊನಾ ಹಾವಳಿ ನಿಧಾನವಾಗಿ ತಗ್ಗತ್ತಿದೆ. ಕಳೆದ ಕೆಲ ವಾರಗಳಿಂದ ರಾಜ್ಯದಲ್ಲಿ ಸಾವಿರದ ಆಸುಪಾಸಿನಲ್ಲಿ ಹೊಸ ಪ್ರಕರಣ ಪತ್ತೆ ಆಗುತ್ತಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 1194 ಜನರಿಗೆ ಕೊರೊನಾ ದೃಢವಾಗಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 9,09,469 ಕ್ಕೇರಿದೆ.

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 5 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವುದು ನಿಟ್ಟುಸಿರು ಬಿಡುವಂತೆ ಮಾಡಿದೆ.

ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 12,009 ಜನರ ಸಾವನಪ್ಪಿದ್ದಾರೆ. ಸೋಂಕಿತರ ಪೈಕಿ 8,82,944  ಜನ ಗುಣಮುಖರಾಗಿ ಡಿಸ್​ಚಾರ್ಜ್ ಆಗಿದ್ದಾರೆ. 14,497 ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 219 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿತ್ಯ ರಾಜ್ಯದಲ್ಲಿ ಆ್ಯಕ್ಟಿವ್​ ಕೇಸ್​ಗಳ ಸಂಖ್ಯೆ ಕೂಡ ಕಡಿಮೆ ಆಗುತ್ತಿರುವುದು ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಬೆಂಗಳೂರಿನಲ್ಲಿಂದು 659 ಹೊಸ ಕೊರೊನಾ ಕೇಸ್ ಪತ್ತೆ ಆಗಿದೆ. 5 ಜನರ ಪೈಕಿ ಇಬ್ಬರು ಬೆಂಗಳೂರಿನಲ್ಲೇ ಮೃತಪಟ್ಟಿದ್ದಾರೆ. ರಾಮನಗರದಲ್ಲಿ ಅತಿ ಕಡಿಮೆ ಎಂದರೆ 1 ಕೊರೊನಾ ಕೇಸ್​ ಪತ್ತೆ ಆಗಿದೆ. ಇನ್ನು ಭಾರತದಲ್ಲೂ ಸಕ್ರಿಯ ಕೊರೊನಾ ಪ್ರಕರಣ ಇಳಿಮುಖವಾಗಿದೆ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.95.51ಕ್ಕೆ ಏರಿಕೆಯಾಗಿದ್ದು ಒಂದು ಖುಷಿಯಾದರೆ ಇನ್ನೊಂದು ಕೊರೊನಾ ಸೋಂಕಿತರ ಸಂಖ್ಯೆ 1 ಕೋಟಿ ದಾಟಿದ್ದರೂ ಸಕ್ರಿಯ ಪ್ರಕರಣಗಳು ತೀವ್ರ ಇಳಿಮುಖವಾಗಿದ್ದು  ಸಂತಸದ ಸಂಗತಿ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳು 3.05ಲಕ್ಷ; ಚೇತರಿಕೆ ಪ್ರಮಾಣದಲ್ಲಿ ಗಣನೀಯ ಏರಿಕೆ

Published On - 8:30 pm, Sun, 20 December 20

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More