ಡಿ ಸುಧಾಕರ್ ವಿರುದ್ಧ ದಾಖಲಾಗಿರುವುದು ಸುಳ್ಳು ಮೊಕದ್ದಮೆ; ಡಿಸಿಎಂ ಡಿಕೆ ಶಿವಕುಮಾರ್
ಚುನಾವಣೆ ಸಮಯದಲ್ಲಿ ಯಾರೋ ಹೋಗಿ ಕಂಪೌಂಡ್ ಹಾಕಿದ್ದಾರೆ. ಯಾರೋ ಹೋಗಿ ಅವರು ಇಲ್ಲದಿದ್ದಾಗ ದೂರು ನೀಡಿದ್ದಾರೆ. ಪರಿಶಿಷ್ಟ ಜಾತಿಯವರು ಕೊಟ್ಟಾಗ ಪಿಸಿಆರ್ ಹಾಕಿದ್ದಾರೆ. ಇದೊಂದು ಸುಳ್ಳು ಕೇಸ್. ನಾವು ಸಿಡಿಆರ್ ತನಿಖೆ ಮಾಡಿದ್ದೇವೆ. ಯಾರಾದ್ರೂ ತಪ್ಪು ಮಾಡಿದ್ರೆ ಕಾನೂನಿಗಿಂತ ದೊಡ್ಡವರಿಲ್ಲ. ಅಧಿಕಾರಿಗಳು ಹೇಳಿದ್ದಾರೆ, ಪರಿಶೀಲನೆ ಮಾಡಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 12: ಯೋಜನೆ ಹಾಗೂ ಸಾಂಖ್ಯಿಕ ಸಚಿವ ಡಿ ಸುಧಾಕರ್ ವಿರುದ್ಧ ಭೂಕಬಳಿಕೆ, ಹಲ್ಲೆ, ಜಾತಿ ನಿಂದನೆ ಆರೋದ ಅಡಿಯಲ್ಲಿ ಮೊಕದ್ದಮೆ ದಾಖಲಾಗಿರುವ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಡಿ ಸುಧಾಕರ್ (D Sudhakar) ವಿರುದ್ಧ ದಾಖಲಾಗಿರುವುದು ಸುಳ್ಳು ಮೊಕದ್ದಮೆ ಎಂದು ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ (DK Shivakumar), ಸುಧಾಕರ್ ವಿರುದ್ಧ ದಾಖಲಾಗಿರುವುದು ಸುಳ್ಳು ಮೊಕದ್ದಮೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಸಂಪೂರ್ಣ ಮಾಹಿತಿಯನ್ನು ಪಡೆದಿದ್ದೇನೆ. ಬಿಜೆಪಿಯವರು ಏನು ಬೇಕಾದರೂ ಕುತಂತ್ರ ಮಾಡಲಿ ಎಂದು ಹೇಳಿದ್ದಾರೆ.
ಈ ಘಟನೆ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ದೂರು ಕೊಟ್ಟಾಗ ಸಚಿವ ಡಿ ಸುಧಾಕರ್ ಎಲ್ಲಿ ಇದ್ದರು ಎಂಬುದೂ ಗೊತ್ತಿದೆ. ಇದು ಸುಳ್ಳು ಕೇಸ್ ಎಂಬುದು. ನನ್ನ ಮೇಲೂ ನಾಳೆ ದೂರು ಕೊಡ್ತಾರೆ, ಅದನ್ನು ನಂಬುವುದಕ್ಕೆ ಆಗುತ್ತದೆಯೇ? ರಾಜೀನಾಮೆ ಕೊಡ್ತಾರೆಂದು ಬಿಜೆಪಿಯವರು ಕನಸು ಕಾಣ್ತಿದ್ದಾರೆ, ಕಾಣಲಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಚುನಾವಣೆ ಸಮಯದಲ್ಲಿ ಯಾರೋ ಹೋಗಿ ಕಂಪೌಂಡ್ ಹಾಕಿದ್ದಾರೆ. ಯಾರೋ ಹೋಗಿ ಅವರು ಇಲ್ಲದಿದ್ದಾಗ ದೂರು ನೀಡಿದ್ದಾರೆ. ಪರಿಶಿಷ್ಟ ಜಾತಿಯವರು ಕೊಟ್ಟಾಗ ಪಿಸಿಆರ್ ಹಾಕಿದ್ದಾರೆ. ಇದೊಂದು ಸುಳ್ಳು ಕೇಸ್. ನಾವು ಸಿಡಿಆರ್ ತನಿಖೆ ಮಾಡಿದ್ದೇವೆ. ಯಾರಾದ್ರೂ ತಪ್ಪು ಮಾಡಿದ್ರೆ ಕಾನೂನಿಗಿಂತ ದೊಡ್ಡವರಿಲ್ಲ. ಅಧಿಕಾರಿಗಳು ಹೇಳಿದ್ದಾರೆ, ಪರಿಶೀಲನೆ ಮಾಡಿದ್ದೇನೆ. ದಾಖಲೆಗಳನ್ನು ತರಿಸಿ ಪರಿಶೀಲನೆ ಮಾಡಿದ್ದೇನೆ. ಧಮ್ಕಿ ಹಾಕುವುದಕ್ಕೂ ಪಿಸಿಆರ್ ಆ್ಯಕ್ಟ್ಗೂ ವ್ಯತ್ಯಾಸ ಇಲ್ಲವೇ. ನನಗೂ ಗಾಬರಿ ಆಯ್ತು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇನ್ನು ಸುಧಾಕರ್ ವಿರುದ್ಧ ಮೊಕದ್ದಮೆ ದಾಖಲಾಗಿರುವ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಜತೆಗೆ, ಸಚಿವರ ರಾಜೀನಾಮೆಗೂ ಆಗ್ರಹಿಸಿದೆ.
ಇದನ್ನೂ ಓದಿ: ಸಚಿವ ಡಿ.ಸುಧಾಕರ್ ವಿರುದ್ಧ ಎಫ್ಐಆರ್: ಮಹಿಳೆ ಜತೆ ಗಲಾಟೆ, ಏನಿದು ಪ್ರಕರಣ? ಇಲ್ಲಿದೆ ಡಿಟೇಲ್ಸ್
ಸಚಿವ ಶಿವರಾಜ ತಂಗಡಗಿ ಹೇಳಿದ್ದೇನು?
ಸಚಿವ ಡಿ ಸುಧಾಕರ್ ಪ್ರಕರಣ ಏನು ಎನ್ನುವುದೇ ನನಗೆ ಗೊತ್ತಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಸಿಎಂ, ಡಿಸಿಎಂ ಮಾಹಿತಿ ಪಡೆದುಕೊಂಡಿರುತ್ತಾರೆ. ಅಧಿಕಾರ ನಮ್ಮ ಕೈಯಲ್ಲಿದೆ ಎಂದು ಏನೇನೋ ಮಾಡಲು ಆಗಲ್ಲ. ರಾಜಕೀಯವಾಗಿ ಕೇಸ್ ದಾಖಲಿಸಿರಬಹುದು. ರಾಜಕೀಯ ಒತ್ತಡದಿಂದ ಕೇಸ್ ಆಗಿರಬಹುದು ಎಂದುಕೊಂಡಿದ್ದೇನೆ. ಮಂತ್ರಿಯಾಗಿರುವುದರಿಂದ ಸುದ್ದಿ ಆಗಬಹುದು ಎಂದು ಪ್ರಕರಣ ದಾಖಲಿಸಿರಬಹುದು. ವಿರೋಧ ಪಕ್ಷದವರ ಒತ್ತಡದಿಂದ ಕೇಸ್ ಹಾಕಿಸಿರಬಹುದು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ