ಗ್ರಾ.ಪಂ. ಚುನಾವಣೆಯಲ್ಲಿ ಪತ್ನಿ ಸೋಲು, ಸಾಲಗಾರರ ಕಾಟ: ರೈಲಿಗೆ ತಲೆಕೊಟ್ಟು ಪತಿ ಆತ್ಮಹತ್ಯೆ

ಕರಬಸಪ್ಪ (61) ಪತ್ನಿ ಸಂಗಮ್ಮ, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋತಿದ್ದರು. ಜೊತೆಗೆ, ಸಾಲಗಾರರ ಕಾಟದಿಂದ ಮಾನಸಿಕವಾಗಿ ಕುಗ್ಗಿದ್ದರು.

ಗ್ರಾ.ಪಂ. ಚುನಾವಣೆಯಲ್ಲಿ ಪತ್ನಿ ಸೋಲು, ಸಾಲಗಾರರ ಕಾಟ: ರೈಲಿಗೆ ತಲೆಕೊಟ್ಟು ಪತಿ ಆತ್ಮಹತ್ಯೆ
ಮೃತ ಕರಬಸಪ್ಪ
Follow us
TV9 Web
| Updated By: ganapathi bhat

Updated on:Apr 06, 2022 | 9:23 PM

ಕಲಬುರಗಿ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪತ್ನಿಯ ಸೋಲು ಹಾಗೂ ಸಾಲದಿಂದ ಮನನೊಂದ ಪತಿ ಆತ್ಮಹತ್ಯೆಗೆ ಶರಣಾದ ದುರ್ಘಟನೆ ನಡೆದಿದೆ. ಜಿಲ್ಲೆಯ, ಚಿತ್ತಾಪುರ ತಾಲೂಕಿನ, ಇಟಗಾ ಗ್ರಾಮದಲ್ಲಿ ರೈಲಿಗೆ ತಲೆಕೊಟ್ಟು ಪತಿ ಕರಬಸಪ್ಪ ಪಾಟೀಲ್‌(61) ಆತ್ಮಹತ್ಯೆ ಮಾಡಿಕೊಂಡ ಘಟನೆ  ನಡೆದಿದೆ.

ಕರಬಸಪ್ಪ ಪತ್ನಿ ಸಂಗಮ್ಮ, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋತಿದ್ದರು. ಜೊತೆಗೆ, ಸಾಲಗಾರರ ಕಾಟದಿಂದ ಮಾನಸಿಕವಾಗಿ ಕುಗ್ಗಿದ್ದರು. ಇದರಿಂದ ಮನನೊಂದ ಪತಿ, ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೈಲು ಹಳಿಗೆ ತಲೆಕೊಟ್ಟು ಮೃತಪಟ್ಟಿದ್ದಾರೆ. ಬ್ಯಾಂಕ್ ಸೇರಿದಂತೆ ಖಾಸಗಿಯಾಗಿಯೂ ಸಾಲ ಮಾಡಿದ್ದ ಕರಬಸಪ್ಪ, ಕಳೆದ ರಾತ್ರಿ ವಿಧಿವಶರಾಗಿದ್ದಾರೆ.

ಮೃತ ಕರಬಸಪ್ಪ (ಮಧ್ಯದಲ್ಲಿ ಇರುವವರು)

ಗ್ರಾಮ ಪಂಚಾಯತಿ ಚುನಾವಣೆ ಪತ್ರ

Published On - 11:35 am, Sat, 9 January 21