
ಬೆಂಗಳೂರು, ಆ.22: ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರ ಹಾಗೂ ಅಜೀಮ್ ಪ್ರೇಮ್‌ಜೀ ಫೌಂಡೇಶನ್ ಜಂಟಿಯಾಗಿ ಬೃಹತ್ ಕೊಡುಗೆ ನೀಡಿದೆ. 2026-27ನೇ ಸಾಲಿನ ‘ದೀಪಿಕಾ ವಿದ್ಯಾರ್ಥಿವೇತನ’ (Deepika Scholarship) ಯೋಜನೆಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಅಧಿಕೃತ ಚಾಲನೆ ನೀಡಿದ್ದಾರೆ.
ಈ ಯೋಜನೆಯಡಿ ಅರ್ಹ ಪದವಿ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ ವಾರ್ಷಿಕ 30,000 ರೂ. ವಿದ್ಯಾರ್ಥಿವೇತನ ದೊರೆಯಲಿದೆ. ಸರ್ಕಾರಿ ಶಾಲಾ ಮತ್ತು ಕಾಲೇಜುಗಳಲ್ಲಿ 10ನೇ ತರಗತಿ ಹಾಗೂ 12ನೇ ತರಗತಿಯನ್ನು (PUC) ವ್ಯಾಸಂಗ ಮಾಡಿ, ಪ್ರಸ್ತುತ ಪದವಿ (Degree) ಕೋರ್ಸ್‌ಗಳಿಗೆ ದಾಖಲಾಗಿರುವ ಎಲ್ಲಾ ವಿದ್ಯಾರ್ಥಿನಿಯರು ಅರ್ಹರು.
ಉನ್ನತ ಶಿಕ್ಷಣಕ್ಕಾಗಿ ಪ್ರತಿ ವರ್ಷ 30,000 ರೂ. ಆರ್ಥಿಕ ನೆರವು ಸಿಗಲಿದೆ. ಮೊದಲ ಹಂತದಲ್ಲಿ ಅಜೀಮ್ ಪ್ರೇಮ್‌ಜೀ ಫೌಂಡೇಶನ್ ವತಿಯಿಂದ ಸುಮಾರು 37,000 ವಿದ್ಯಾರ್ಥಿನಿಯರಿಗೆ ನೇರವಾಗಿ ಈ ವಿದ್ಯಾರ್ಥಿವೇತನ ತಲುಪಲಿದೆ.
ಇನ್ನುಳಿದ ಪದವಿ ಕಾಲೇಜುಗಳಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿನಿಯರಿಗೆ ಕರ್ನಾಟಕ ಸರ್ಕಾರವೇ ನೇರವಾಗಿ ಈ ವಿದ್ಯಾರ್ಥಿವೇತನ ಒದಗಿಸಲಿದೆ. 2026-27ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಆಗಸ್ಟ್ 30, 2026 ಕೊನೆಯ ಅವಕಾಶವಾಗಿದೆ. ಈಗ ಅರ್ಜಿ ಸಲ್ಲಿಸಲು ಸಾಧ್ಯವಾಗದ ವಿದ್ಯಾರ್ಥಿನಿಯರಿಗಾಗಿ ಜನವರಿ 2027 ರಲ್ಲಿ ಎರಡನೇ ಹಂತದ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲು ಚಿಂತನೆ ನಡೆಸಲಾಗಿದೆ.
ವಿದ್ಯಾರ್ಥಿನಿಯರು 10ನೇ ತರಗತಿ (SSLC) ಮತ್ತು 12ನೇ ತರಗತಿಯನ್ನು (PUC) ಕಡ್ಡಾಯವಾಗಿ ಸರ್ಕಾರಿ ಶಾಲೆಗಳು ಅಥವಾ ಸರ್ಕಾರಿ ಪಿಯು ಕಾಲೇಜುಗಳಲ್ಲೇ ಪೂರ್ಣಗೊಳಿಸಿರಬೇಕು.
ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ (Higher Education Institution) ಪ್ರಥಮ ವರ್ಷದ ಪದವಿಗೆ ದಾಖಲಾಗಿರಬೇಕು.
ಇದನ್ನೂ ಓದಿ: ರಾಜ್ಯದ 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ!
ಅರ್ಹ ಕೋರ್ಸ್‌ಗಳು (ಕನಿಷ್ಠ 3 ವರ್ಷಗಳ ಅವಧಿ):
ಸಾಮಾನ್ಯ ಪದವಿ (General Degree – BA, BSc, BCom, etc.)
ವೃತ್ತಿಪರ ಪದವಿ (Professional Degree – BE, BTech, etc.)
ಡಿಪ್ಲೊಮಾ ಕೋರ್ಸ್‌ಗಳು (Diploma Courses – ಕನಿಷ್ಠ ಅವಧಿ ನಿಯಮಾವಳಿಗಳಂತೆ)
ಅರ್ಹ ವಿದ್ಯಾರ್ಥಿನಿಯರು ಅಜೀಮ್ ಪ್ರೇಮ್‌ಜೀ ಫೌಂಡೇಶನ್‌ನ ಅಧಿಕೃತ ಪೋರ್ಟಲ್ ಮೂಲಕವೇ ನೇರವಾಗಿ ಅರ್ಜಿ ಸಲ್ಲಿಸಬಹುದು. ಅಧಿಕೃತ ವೆಬ್‌ಸೈಟ್ ಲಿಂಕ್: Azim Premji Scholarship Portal
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ