ನಿಜಾಮುದ್ದಿನ್ ನಂಜು: ಕುಂದಾನಗರಿಯಲ್ಲಿ ಇಂದು ಮತ್ತೊಂದು ಪಾಸಿಟಿವ್ ಕೇಸ್
ಬೆಳಗಾವಿ: ಕುಂದಾನಗರಿಯಲ್ಲಿ ಕೊರೊನಾ ನಂಟು ದಿನೇದಿನೆ ಹೆಚ್ಚಾಗುತ್ತಿದ್ದು, ಇಂದು ಮತ್ತೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಹಿರೇಬಾಗೇವಾಡಿ ತಾಲೂಕಿನ 13 ವರ್ಷದ ಬಾಲಕಿಗೆ ಸೋಂಕು ತಗುಲಿದೆ. 47 ವರ್ಷದ P 364 ವ್ಯಕ್ತಿಯಿಂದ ಈ ಸೋಂಕು ಹಬ್ಬಿದೆ. ಪಿ.364 ವ್ಯಕ್ತಿಯ ದೂರದ ಸಂಬಂಧಿ ಈ ಬಾಲಕಿ. P 364 ವ್ಯಕ್ತಿಯ ಮನೆಗೆ ಬಾಲಕಿ ರಜೆಗೆ ಬಂದಿದ್ದಾಗ ಸೋಂಕು ಅಂಟಿದೆ. ನಿಜಾಮುದ್ದಿನ್ ನಂಜು: P 128 ದೆಹಲಿಯ ನಿಜಾಮುದ್ದಿನ್ ಮರ್ಕಜ್ ಗೆ ಹೋಗಿ ಮರಳಿದ್ದ ಯುವಕನ ದ್ವಿತೀಯ ಸಂಪರ್ಕಕ್ಕೆ ಬಂದಿದ್ದ […]
ಬೆಳಗಾವಿ: ಕುಂದಾನಗರಿಯಲ್ಲಿ ಕೊರೊನಾ ನಂಟು ದಿನೇದಿನೆ ಹೆಚ್ಚಾಗುತ್ತಿದ್ದು, ಇಂದು ಮತ್ತೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಹಿರೇಬಾಗೇವಾಡಿ ತಾಲೂಕಿನ 13 ವರ್ಷದ ಬಾಲಕಿಗೆ ಸೋಂಕು ತಗುಲಿದೆ.
47 ವರ್ಷದ P 364 ವ್ಯಕ್ತಿಯಿಂದ ಈ ಸೋಂಕು ಹಬ್ಬಿದೆ. ಪಿ.364 ವ್ಯಕ್ತಿಯ ದೂರದ ಸಂಬಂಧಿ ಈ ಬಾಲಕಿ. P 364 ವ್ಯಕ್ತಿಯ ಮನೆಗೆ ಬಾಲಕಿ ರಜೆಗೆ ಬಂದಿದ್ದಾಗ ಸೋಂಕು ಅಂಟಿದೆ.
ನಿಜಾಮುದ್ದಿನ್ ನಂಜು: P 128 ದೆಹಲಿಯ ನಿಜಾಮುದ್ದಿನ್ ಮರ್ಕಜ್ ಗೆ ಹೋಗಿ ಮರಳಿದ್ದ ಯುವಕನ ದ್ವಿತೀಯ ಸಂಪರ್ಕಕ್ಕೆ ಬಂದಿದ್ದ P 364. ಇದೀಗ, P 364ರ ಇಡೀ ಕುಟುಂಬಕ್ಕೆ ಸೋಂಕು ವ್ಯಾಪಿಸಿದಂತಾಗಿದೆ. ಇದರೊಂದಿಗೆ ಇಡೀ ಹಿರೇಬಾಗೇವಾಡಿ ತಾಲೂಕು ಈಗ ಕೊರೊನಾ ಸೋಂಕಿನಿಂದ ಥಕಥಕ ಕುಣಿಯುವಂತಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ 4 ದಿನಗಳ ಬಳಿಕ ಮತ್ತೊಂದು ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 74ಕ್ಕೇರಿಕೆಯಾಗಿದೆ. ಹಿರೇಬಾಗೇವಾಡಿ ಗ್ರಾಮವೊಂದರಲ್ಲೇ ಕೊರೊನಾ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. 74 ಸೋಂಕಿತರ ಪೈಕಿ ಓರ್ವ ವೃದ್ಧೆ ಸಾವಿಗೀಡಾಗಿದ್ದು, 34 ಸೋಂಕಿತರು ಗುಣಮುಖರಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸದ್ಯ 39 ಕೊರೊನಾ ಆ್ಯಕ್ಟೀವ್ ಪ್ರಕರಣಗಳು ಇವೆ.
Published On - 3:14 pm, Thu, 7 May 20