ನಮ್ಮ ದೇಶದ ಬಗ್ಗೆ ಮೂಗು ತೂರಿಸಲು ಅವರಿಗೆ ಯಾವುದೇ ಹಕ್ಕಿಲ್ಲ: ಪರಿಷತ್ ಸದಸ್ಯ ರವಿಕುಮಾರ್
ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟಕ್ಕೆ ಸಂಬಂಧಿಸಿ ವಿದೇಶಿ ಪಾಪ್ ಗಾಯಕಿ ರಿಹಾನ್ನಾ ಹೇಳಿಕೆ ಸರಿಯಲ್ಲ ಎಂದು ಪರಿಷತ್ ಸದಸ್ಯ ರವಿಕುಮಾರ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟಕ್ಕೆ ಸಂಬಂಧಿಸಿ ವಿದೇಶಿ ಪಾಪ್ ಗಾಯಕಿ ರಿಹಾನಾ ಹೇಳಿಕೆ ಸರಿಯಲ್ಲ. ನಮ್ಮ ದೇಶದಲ್ಲಿ ನಡಿಯುತ್ತಿರುವ ರೈತರ ಹೋರಾಟ ಇದು. ನಮ್ಮ ದೇಶದ ಫೆಡರಲ್ ವ್ಯವಸ್ಥೆ ಖಂಡಿಸಲು ಅವರು ಯಾರು ಎಂದು ಪರಿಷತ್ ಸದಸ್ಯ ರವಿಕುಮಾರ್ ಹೇಳಿಕೆ ನೀಡಿದ್ದಾರೆ.
ಗಣರಾಜ್ಯೋತ್ಸವ ದಿನ ಕೆಂಪು ಕೋಟೆ ಮೇಲೆ ರಾಷ್ಟ್ರ ಧ್ವಜ ಕಿತ್ತೊಗೆದು, ಬೇರೆಯ ಧ್ವಜವನ್ನ ಹಾರಿಸಲಾಗಿದೆ. ನಮ್ಮ ದೇಶದ ಆಸ್ತಿ ನಷ್ಟ ಮಾಡಲಾಗಿದೆ ಈ ಕುರಿತಂತೆ ವಿದೇಶಿ ಪಾಪ್ ಗಾಯಕಿ ರಿಹಾನಾ ಹೇಳಿಕೆ ಸರಿಯಲ್ಲ.
ನಮ್ಮ ದೇಶದ ನಟ, ನಟಿಯರು, ಕ್ರಿಕೆಟಿಗ ಸಚಿನ್ ಸೇರಿದಂತೆ ಎಲ್ಲರೂ ಖಂಡಿಸಿದ್ದಾರೆ. ನಮ್ಮ ದೇಶದ ಬಗ್ಗೆ ಮೂಗು ತೂರಿಸಲು ಅವರಿಗೆ ಯಾವುದೇ ಹಕ್ಕಿಲ್ಲ. ನಮ್ಮ ದೇಶದ ವಿಪಕ್ಷ ನಾಯಕರಾದ ರಾಹುಲ್ ಗಾಂಧಿಯನ್ನ ಮೊದಲು ಖಂಡಿಸಬೇಕು. ಮುಖವಾಡ ಹಾಕಿಕೊಂಡಿರೋ ರೈತ ನಾಯಕರನ್ನು ಖಂಡಿಸುತ್ತೇನೆ ಎಂದು ಪರಿಷತ್ ಸದಸ್ಯ ರವಿಕುಮಾರ್ ಹೇಳಿದ್ದಾರೆ.
ಟ್ವೀಟ್ ವಾರ್: ದಿಲ್ಜಿತ್ ಹಾಡು ರಿಹಾನ್ನಾಗೆ ಅರ್ಪಣೆ, ದೇಶಪ್ರೇಮ ಸಾಬೀತಿಗೆ ಕಂಗನಾ ಸವಾಲು