AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದಾಯ ಕೊರತೆ ಇದ್ದರೂ ಬಿಜೆಪಿ ಸರ್ಕಾರವನ್ನು ಹೊಗಳುವ ಜಾಹೀರಾತುಗಳಿಗಾಗಿ ₹12.78 ಕೋಟಿ ಖರ್ಚು ಮಾಡಿದ ಕರ್ನಾಟಕ

ಕರ್ನಾಟಕ ಸರ್ಕಾರವು ಪ್ರಧಾನಿ ಮೋದಿಯವರ ಜನ್ಮದಿನದ ಶುಭಾಶಯ ಕೋರಿರುವ ಜಾಹೀರಾತಿಗಾಗಿ ರಾಜ್ಯದ ಬೊಕ್ಕಸದಿಂದ ಒಟ್ಟು 44.85 ಲಕ್ಷ  ಖರ್ಚು ಮಾಡಿದೆ ಎಂದು ಆರ್‌ಟಿಐ ಪ್ರತಿಕ್ರಿಯೆಯೊಂದು ತಿಳಿಸಿದೆ.

ಆದಾಯ ಕೊರತೆ ಇದ್ದರೂ ಬಿಜೆಪಿ ಸರ್ಕಾರವನ್ನು ಹೊಗಳುವ ಜಾಹೀರಾತುಗಳಿಗಾಗಿ ₹12.78 ಕೋಟಿ ಖರ್ಚು ಮಾಡಿದ ಕರ್ನಾಟಕ
ಅಮಿತ್ಶಾ ಅವರನ್ನು ಸ್ವಾಗತಿಸುತ್ತಿರುವ ಬೊಮ್ಮಾಯಿ (ಸಂಗ್ರಹ ಚಿತ್ರ)
TV9 Web
| Edited By: |

Updated on: Oct 12, 2021 | 5:26 PM

Share

ಬೆಂಗಳೂರು: ಕೊವಿಡ್ ಸಾಂಕ್ರಾಮಿಕ ಸಂಕಷ್ಟ ಮತ್ತು ಆದಾಯದಲ್ಲಿ ಇಳಿಕೆಯ ಹೊರತಾಗಿಯೂ, ಕರ್ನಾಟಕ ಸರ್ಕಾರವು ತನ್ನ ಜಾಹೀರಾತು ವೆಚ್ಚದಲ್ಲಿ ಯಾವುದೇ ರೀತಿ ಕಡಿತ ಮಾಡಿಲ್ಲ. ಆರ್‌ಟಿಐ ದಾಖಲೆಗಳ ಪ್ರಕಾರ ರಾಜ್ಯ ಸರ್ಕಾರವು ಆದಾಯ ಕೊರತೆ ಇದ್ದರೂ, ಸರ್ಕಾರ ಮತ್ತು ಪಕ್ಷಕ್ಕೆ ಸಂಬಂಧಿಸಿದ ಮೈಲುಗಲ್ಲುಗಳನ್ನು ಆಚರಿಸಲು ಸುಮಾರು 12.78 ಕೋಟಿ ರೂ ಖರ್ಚುಮಾಡಿದೆ. ಅನೇಕ ಕಲ್ಯಾಣ ಯೋಜನೆಗಳಿಗೆ ಹಣದ ಕೊರತೆ ಇದೆ ಎಂದು ಸರ್ಕಾರ ಹೇಳಿಕೊಂಡಿರುವಾಗ ಪತ್ರಕರ್ತ ಮಹಾಂತೇಶ್ ಅವರ ಕೇಳಿರುವ ಆರ್‌ಟಿಐ ಪ್ರಶ್ನೆಗಳ ಸರಣಿಯು ರಾಜ್ಯ ಸರ್ಕಾರವು ಪಿಆರ್​​ ಕಾರ್ಯಗಳಿಗೆ ಧನಸಹಾಯ ನೀಡುತ್ತಿರುವುದನ್ನು ಬಹಿರಂಗಪಡಿಸಿದೆ. ಜುಲೈ 26, 2020 ರಂದು, ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪನವರ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಿದ್ದಕ್ಕೆ ಅದ್ದೂರಿ ಸಮಾರಂಭ ನಡೆಸಲಾಯಿತು. ಯಡಿಯೂರಪ್ಪ ಸರ್ಕಾರದ ಎರಡು ವರ್ಷಗಳ ಪೂರ್ಣಗೊಳಿಸುವಿಕೆಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಸಲಾಯಿತು. ಅಲ್ಲಿ ಯಡಿಯೂರಪ್ಪ ಅವರು ತಮ್ಮ ಭಾವನಾತ್ಮಕ ಭಾಷಣದಲ್ಲಿ ರಾಜೀನಾಮೆ ನೀಡಿದರು. ಆದರೆ ಬುಕ್‌ಲೆಟ್ ಪ್ರಕಟಣೆ, ಯಡಿಯೂರಪ್ಪನವರನ್ನು ಸಿಎಂ ಎಂದು ಹೊಗಳಿದ ಚಿತ್ರ ಮತ್ತು ಈವೆಂಟ್‌ನ ಜಾಹೀರಾತುಗಳಿಗೆ ಆರ್‌ಟಿಐ ಪ್ರತಿಕ್ರಿಯೆಯ ಪ್ರಕಾರ ರಾಜ್ಯದ ಬೊಕ್ಕಸದಿಂದ 7.88 ಕೋಟಿ ರೂ. ಖರ್ಚು ಮಾಡಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಸಾಂಕ್ರಾಮಿಕ ಸಮಯದಲ್ಲಿ ಜೀವ ಕಳೆದುಕೊಂಡ ಬಿಎಂಟಿಸಿ ಉದ್ಯೋಗಿಗಳಿಗೆ ಭರವಸೆ ನೀಡಿದ ಪರಿಹಾರ ಇನ್ನೂ ಬಾಕಿ ಇದೆ. ಆದರೆ ಬಿಎಂಟಿಸಿ ಬಸ್ ಟರ್ಮಿನಲ್‌ಗಳು ಮತ್ತು ಬಸ್ ನಿಲ್ದಾಣಗಳ ಬಳಿ ಕೊವಿಡ್ -19 ಜಾಗೃತಿ ಮೂಡಿಸುವ ಜಾಹೀರಾತುಗಳಿಗಾಗಿ ರಾಜ್ಯ ಸರ್ಕಾರ 78.4 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಮತ್ತೊಂದು ಆರ್‌ಟಿಐ ಪ್ರತಿಕ್ರಿಯೆ ಬಹಿರಂಗಪಡಿಸಿದೆ. ವಿಪರ್ಯಾಸವೆಂದರೆ, ಬಸ್ಸುಗಳು ಸೀಮಿತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಖರ್ಚಿನ ಹೆಚ್ಚಿನ ಭಾಗವಾಗಿತ್ತು. ಮೆಜೆಸ್ಟಿಕ್, ಯಶವಂತಪುರ, ಶಾಂತಿ ನಗರ, ಶಿವಾಜಿನಗರ, ಕೆಂಗೇರಿ, ಮತ್ತು ಕೆಲವು ಇತರ ಬಸ್ ನಿಲ್ದಾಣಗಳಲ್ಲಿ 60 ಸೆಕೆಂಡುಗಳ ವಿಡಿಯೋ ಪ್ಲೇ ಮಾಡಲು 50 ಕ್ಕೂ ಹೆಚ್ಚು ಟೆಲಿವಿಷನ್ ಸ್ಕ್ರೀನ್‌ಗಳನ್ನು ಬಳಸಲಾಗಿದೆ.

ಕರ್ನಾಟಕ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಹೊಗಳುವ 15 ರಿಂದ 30 ನಿಮಿಷಗಳವರೆಗೆ ವಿಡಿಯೊ ಪ್ಲೇ ಮಾಡಲು ಸುದ್ದಿ ವಾಹಿನಿಗಳನ್ನು ನಿಯೋಜಿಸಲಾಗಿದೆ. ಟಿವಿ 9 ಕನ್ನಡ, ಪಬ್ಲಿಕ್ ಟಿವಿ, ಸುವರ್ಣ ನ್ಯೂಸ್, ಪವರ್ ಟಿವಿಯನ್ನು ಒಳಗೊಂಡಂತೆ ಕನ್ನಡ ಚಾನೆಲ್‌ಗಳಲ್ಲಿ ಜಾಹೀರಾತು ಪ್ರಸಾರ ಮಾಡಲು ಒಟ್ಟು 57.02 ಲಕ್ಷ ರೂಪಾಯಿಗಳನ್ನು ನೀಡಲಾಯಿತು ಎಂದು ಆರ್‌ಟಿಐ ಪ್ರತಿಕ್ರಿಯೆಯಲ್ಲಿ ಹೇಳಿದೆ. ಚೆನ್ನೈನಲ್ಲಿ ಖಾಸಗಿ ಸುದ್ದಿ ವಾಹಿನಿ ನಡೆಸಿದ ಸಮಾವೇಶಕ್ಕಾಗಿ, ರಾಜ್ಯ ಸರ್ಕಾರವು ಕರ್ನಾಟಕ ಸರ್ಕಾರದ ಕೆಲಸಗಳನ್ನು ಪ್ರದರ್ಶಿಸುವ ವಿಡಿಯೊಗಳನ್ನು ಪ್ಲೇ ಮಾಡಲು 50 ಲಕ್ಷ ರೂಪಾಯಿಗಳನ್ನು ನೀಡಿತ್ತು.

ಕರ್ನಾಟಕ ಸರ್ಕಾರವು ಪ್ರಧಾನಿ ಮೋದಿಯವರ ಜನ್ಮದಿನದ ಶುಭಾಶಯ ಕೋರಿರುವ ಜಾಹೀರಾತಿಗಾಗಿ ರಾಜ್ಯದ ಬೊಕ್ಕಸದಿಂದ ಒಟ್ಟು 44.85 ಲಕ್ಷ  ಖರ್ಚು ಮಾಡಿದೆ ಎಂದು ಆರ್‌ಟಿಐ ಪ್ರತಿಕ್ರಿಯೆಯೊಂದು ತಿಳಿಸಿದೆ. ಕನ್ನಡ ಪ್ರಭ, ಪ್ರಜಾವಾಣಿ ಮತ್ತು ಉದಯ ವಾಣಿ ಮೊದಲಾದ ವಿವಿಧ ಕನ್ನಡ ಪತ್ರಿಕೆಗಳಲ್ಲಿ ಮೋದಿಯವರಿಗೆ ಹಾರೈಸುವ ಜಾಹೀರಾತುಗಳಿಗೂ ಮಾಹಿತಿ ಮತ್ತು ಪ್ರಸಾರ ಇಲಾಖೆ ಬಜೆಟ್ ನಿಂದ ಬಂದಿದೆ.

50 ಕೋಟಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಬಂದಾಗ, ರಾಜ್ಯವು ಕೇವಲ 89.46 ಲಕ್ಷ ರೂಪಾಯಿಗಳನ್ನು ಕೇವಲ ಜಾಹೀರಾತು ಜಾಹೀರಾತುಗಳಲ್ಲಿ ಖರ್ಚು ಮಾಡಿದೆ. ಭೇಟಿ ವೇಳೆ ಅಮಿತ್ ಶಾ ಬೆಂಗಳೂರು ಮತ್ತು ದಾವಣಗೆರೆಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದರು.

ಕುಟುಂಬದಲ್ಲಿ ಸಂಪಾದನೆ ಮಾಡುವ ಸದಸ್ಯರನ್ನು ಕಳೆದುಕೊಂಡ ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳಿಗೆ ಪರಿಹಾರ ಮೊತ್ತವು ‘ಕಾರ್ಯವಿಧಾನ ವಿಳಂಬ’ದಿಂದ ಇನ್ನೂ ಬಾಕಿ ಉಳಿದಿದೆ ಆದರೆ ಸಾಂಕ್ರಾಮಿಕ ಸಮಯದಲ್ಲಿ ಮಾಡಿದ ಸರ್ಕಾರ ಮಾಡಿದ ಉತ್ತಮ ಕೆಲಸವನ್ನು ಅಭಿನಂದಿಸಲು ಸರ್ಕಾರ 1.6 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಈ ಮೊತ್ತವು ಆರ್‌ಟಿಐ ಪ್ರತಿಕ್ರಿಯೆಯ ಪ್ರಕಾರ 2020 ಜುಲೈ 25 ಮತ್ತು 27ರ ನಡುವೆ ಕನ್ನಡ ಪತ್ರಿಕೆಗಳಲ್ಲಿ ಸತತ ನಾಲ್ಕು ಪುಟಗಳಲ್ಲಿ ಪೂರ್ಣ-ಪುಟ ಜಾಹೀರಾತುಗಳಿಗೆ ಬಳಸಲಾಗಿದೆ.

ಕರ್ನಾಟಕ ಸರ್ಕಾರ ಜಾಹೀರಾತುಗಾಗಿ ಎಷ್ಟು ಖರ್ಚು ಮಾಡಿದೆ ಎಂಬುದರ ಕುರಿತು ಮೇಲೆ ತಿಳಿಸಿದ ಅಂಕಿಅಂಶಗಳು ಕೇವಲ ಆರು ಆರ್‌ಟಿಐ ಅರ್ಜಿಗಳ ಸರಣಿಯಲ್ಲಿ ಪಡೆಯಲಾಗಿದೆ. ಆದಾಗ್ಯೂ ಸಾಂಕ್ರಾಮಿಕ ಸಮಯದಲ್ಲಿ ನಿಜವಾಗಿ ಎಷ್ಟು ಖರ್ಚು ಮಾಡಲಾಗಿದೆ ಎಂಬುದರ ಸಂಪೂರ್ಣ ಅಂಕಿಅಂಶವಲ್ಲ ಎಂದು ದಿ ನ್ಯೂಸ್ ಮಿನಿಟ್ ವರದಿ ಹೇಳಿದೆ.

ಇದನ್ನೂ ಓದಿ: IT Raid: ಡಿ ಕೆ ಶಿವಕುಮಾರ್ ಸಾಮಾಜಿಕ ಜಾಲತಾಣ ನಿರ್ವಹಣಾ ಸಂಸ್ಥೆಯ ಮೇಲೆ ಐಟಿ ಅಧಿಕಾರಿಗಳ ದಾಳಿ

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ