AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನರ ಸಂಚಾರಕ್ಕೆ ಮುಕ್ತವಾಯ್ತು ಹೈಟೆಕ್ ಹೈವೆ: ಚೆನೈ, ಆಂಧ್ರ, ಮಂಗಳೂರು ಪ್ರಯಾಣ ಇನ್ನಷ್ಟು ಫಾಸ್ಟ್!

ಇಷ್ಟು ದಿನ ಆಂಧ್ರದ ಚಿತ್ತೂರು ತಮಿಳುನಾಡಿನ ಚೆನೈನಿಂದ ಮಂಗಳೂರಿಗೆ ಹೋಗಲು ಬರ್ತಿದ್ದ ವಾಹನ ಸವಾರರು ಸಿಟಿ ಒಳಗಡೆ ಪ್ರವೇಶವಾಗಿ ಪೀಣ್ಯ ಫ್ಲೈ ಓವರ್​ ಮೂಲಕ ನೆಲಮಂಗಲ ತಲುಪಿ ಹೆದ್ದಾರಿಯಲ್ಲಿ ಗಂಟೆ ಗಟ್ಟಲೆ ಕಾದು ತೆರಳುತ್ತಿದ್ದರು. ಆದರೆ ಇದೀಗ ಸಿಟಿ ಹೊರವಲಯದಲ್ಲಿ ನೂತನ ಹೆದ್ದಾರಿ ನಿರ್ಮಾಣವಾಗಿದ್ದು ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರವರೆಗೂ ಸಂಪೂರ್ಣ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದೆ.

ನವೀನ್ ಕುಮಾರ್ ಟಿ
| Edited By: |

Updated on:Mar 28, 2024 | 9:26 PM

Share

ದೇವನಹಳ್ಳಿ, ಮಾರ್ಚ್​ 28: ಸಿಲಿಕಾನ್ ಸಿಟಿ ಅಂದರೆ ಇತ್ತೀಚೆಗೆ ಟ್ರಾಪಿಕ್​​ನಿಂದಾಗಿ ವಾಹನ ಸವಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಪೀಕ್ ಅವರ್​​ನಲ್ಲಿ ಪೀಣ್ಯ ಕಡೆಯಿಂದ ಹಾಸನ- ತುಮಕೂರು ಹೆದ್ದಾರಿ (highway) ತಲುಪಲು ಸವಾರರು ಹೈರಣಾಗುತ್ತಿದ್ದರು. ಆದರೆ ಈಗ ಸಿಟಿ ಹೊರ ವಲಯದಲ್ಲಿ ಜನರಿಗೆ ಸಂಚಾರಕ್ಕೆ ಹೈಟೆಕ್ ಹೈವೆ ಮುಕ್ತವಾಗಿದೆ. ಆ ಮೂಲಕ ಹೆದ್ದಾರಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡುವ ಜೊತೆಗೆ ಸುರಕ್ಷತೆಗೂ ಒತ್ತು ನೀಡಲಾಗಿದೆ. ಹೊಸಕೋಟೆಯಿಂದ ದೇವನಹಳ್ಳಿ, ದೊಡ್ಡಬಳ್ಳಾಪುರ ಮೂಲಕ ದಾಬಸ್ ಪೇಟೆವರೆಗೂ ಹೆದ್ದಾರಿ ನಿರ್ಮಾಣವಾಗಿದೆ.

ಅಂದಹಾಗೆ ಇಷ್ಟು ದಿನ ಆಂಧ್ರದ ಚಿತ್ತೂರು ತಮಿಳುನಾಡಿನ ಚೆನೈನಿಂದ ಮಂಗಳೂರಿಗೆ ಹೋಗಲು ಬರ್ತಿದ್ದ ವಾಹನ ಸವಾರರು ಸಿಟಿ ಒಳಗಡೆ ಪ್ರವೇಶವಾಗಿ ಪೀಣ್ಯ ಫ್ಲೈ ಓವರ್​ ಮೂಲಕ ನೆಲಮಂಗಲ ತಲುಪಿ ಹೆದ್ದಾರಿಯಲ್ಲಿ ಗಂಟೆ ಗಟ್ಟಲೆ ಕಾದು ತೆರಳುತ್ತಿದ್ದರು. ಆದರೆ ಇದೀಗ ಸಿಟಿ ಹೊರವಲಯದಲ್ಲಿ ನೂತನ ಹೆದ್ದಾರಿ ನಿರ್ಮಾಣವಾಗಿದ್ದು ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರವರೆಗೂ ಸಂಪೂರ್ಣ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದೆ.

ಇದನ್ನೂ ಓದಿ: ದೇವನಹಳ್ಳಿ: ಯೂಟ್ಯೂಬ್ ನೋಡಿ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ಭರ್ಜರಿ ಸೇಬು ಬೆಳೆದ ರೈತ

ಕೋಲಾರ ಬೆಂಗಳೂರು ಹೆದ್ದಾರಿಯಿಂದ ಆರಂಭವಾಗುವ ನೂತನ ಹೆದ್ದಾರಿ ದೇವನಹಳ್ಳಿ ದೊಡ್ಡಬಳ್ಳಾಪುರ ಮೂಲಕ ಪಟ್ಟಣಗಳನ್ನ ಪ್ರವೇಶಿಸದೆ ಹೊರವಲಯದ ಫ್ಲೈ ಓವರ್​ಗಳ ಮೂಲಕ ಸಾಗಿದ್ದು ಎಲ್ಲೆಡೆ ಕಿಲೋ ಮೀಟರ್​ಗೆ ಒಂದರಂತೆ ಹೈಟೆಕ್ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಜೊತೆಗೆ ಒಂದು ಬದಿಯಲ್ಲಿ ಎರಡು ಹಾಗೂ ಮೂರು ಪಥಗಳ ಹೆದ್ದಾರಿಯನ್ನ ಮಾಡಲಾಗಿದ್ದು ಇಷ್ಟು ದಿನ ಹೊಸಕೋಟೆಯಿಂದ ದಾಬಸ್ ಪೇಟೆಗೆ ಮೂರು ಗಂಟೆಗೂ ಹೆಚು ಕಾಲ ಸಂಚರಿಸುತ್ತಿದ್ದ ವಾಹನ ಸವಾರರು ಇದೀಗ ಒಂದು ಗಂಟೆಯಲ್ಲೆ ಹೊಸಕೋಟೆಯಿಂದ ದಾಬಸ್ ಪೇಟೆಯನ್ನ ತಲುಪುತ್ತಿದ್ದಾರೆ.

ನೂತನ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ನಂಬರ್ ಪ್ಲೇಟ್​ನ್ನು ಸಹ ದೂರದಿಂದಲೆ ರೀಡ್ ಮಾಡಬಹುದಾದಂತ ಹೈಟೆಕ್ ಕ್ಯಾಮೆರಾಗಳನ್ನ ಅಳವಡಿಸಿದ್ದು ಟೋಲ್ ಪ್ಲಾಜಾ ಬಳಿ ಕೂತು ವಾಹನಗಳ ಮೇಲೆ ಹದ್ದಿನ ಕಣ್ಣಿಡಬಹುದಾಗಿದೆ. ಜೊತೆಗೆ ಹೆದ್ದಾರಿಯಲ್ಲಿ ಉಂಟಾಗುವ ಅಪಘಾತ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೂ ನೂತನ ಹೆದ್ದಾರಿ ಸಹಕಾರಿಯಾಗ್ತಿದೆ. ಜೊತೆಗೆ ಸಂಪೂರ್ಣ ಹೆದ್ದಾರಿಯ ಪ್ಲಾಜಾ ಕಛೇರಿ, ಸಿಸಿ ಕ್ಯಾಮರಾ ಹಾಗೂ ಬೀದಿ ದೀಪಗಳು ಸೋಲಾರ್ ಪವರ್​ನಿಂದ ಕಾರ್ಯ ನಿರ್ವಹಿಸುತ್ತಿದ್ದು, ಸಾಕಷ್ಟು ವಿದ್ಯುತ್ ಸಹ ಉಳಿತಾಯವಾಗುತ್ತಿದೆ.

ಇದನ್ನೂ ಓದಿ: Karaga: ಕರಗ ಹೊರಲು ಮೂರು ಗುಂಪುಗಳ ಕಿತ್ತಾಟ, ಐತಿಹಾಸಿಕ ಬೂದಿಗೆರೆ ದ್ರೌಪದಮ್ಮ ಕರಗ ರದ್ದು

ರಾಜ್ಯದ ಮೊದಲ ಬೂತ್ ಲೆಸ್ ಟೋಲ್ ಪ್ಲಾಜಾ ಹೆದ್ದಾರಿ ಸಹ ಇದಾಗಿದ್ದು, ಸಿಲಿಕಾನ್ ಸಿಟಿಯಿಂದ ಧರ್ಮಸ್ಥಳ, ಮಂಗಳೂರು, ತುಮಕೂರು ಹೆದ್ದಾರಿ ತಲುಪುವ ವಾಹನ ಸವಾರರಿಗೆ ನೂತನ ಹೈಟೆಕ್ ಹೆದ್ದಾರಿ ಸಹಕಾರಿಯಾಗಿದ್ದು ನೂತನ ಹೆದ್ದಾರಿ ಬಗ್ಗೆ ವಾಹನ ಸವಾರರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆ ಗಂಟೆ ಗಟ್ಟಲೆ ಕಾದು ನಿಲ್ಲಬೇಕು ಅಂತ ಗೊಣಗಾಡುವ ವಾಹನ ಸವಾರರಿಗೆ ಇದೀಗ ಸಿಟಿ ಹೊರವಲಯ ಹೈವೆಗಳನ್ನ ತಲುಪಲು ನೂತನ ಹೆದ್ದಾರಿ ಸಂಪೂರ್ಣ ಸಂಚಾರಕ್ಕೆ ಮುಕ್ತವಾಗಿರುವುದು ಖುಷಿ ತಂದಿಕೊಟ್ಟಿರುವುದಂತ್ತು ಸುಳ್ಳಲ್ಲ.

ಟೋಲ್​ ಶುಲ್ಕ

  • ವಾಹನದ ಪ್ರಕಾರ                     ಏಕಪ್ರಯಾಣ                  ಹಿಂದಿರುಗುವ ಪ್ರಯಾಣ
  • ಕಾರು                                                 70                                                105
  • ಲಾರಿ                                                  115                                               175
  • ಬಸ್​, ಟೆಂಪೋ                                 240                                               360
  • ಬಾರಿ ಗಾತ್ರದ ವಾಹನ                      380                                              565

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:55 pm, Thu, 28 March 24

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್