ದರ್ಗಾದ ಹುಂಡಿಗೆ ಬೆಂಕಿ: 2000, 500, 200, 100 ರೂ. ಸೇರಿದಂತೆ ಹುಂಡಿಯಲ್ಲಿದ್ದ ನೋಟುಗಳೆಲ್ಲ ಸುಟ್ಟು ಕರಕಲು
ದರ್ಗಾದ ಹುಂಡಿಗೆ ಬೆಂಕಿ ಬಿದ್ದಿರುವ ಘಟನೆ ದಾವಣಗೆರೆ ಜಿಲ್ಲೆಯ ದೊಡ್ಡಬಾತಿಯ ಚಮಶಾ ವಲಿ ದರ್ಗಾದಲ್ಲಿ ನಡೆದಿದೆ. ಅಗ್ನಿ ಅವಘಡದಲ್ಲಿ ಹುಂಡಿಯಲ್ಲಿದ್ದ ನೋಟುಗಳು ಸುಟ್ಟು ಕರಕಲಾಗಿದೆ.
ದರ್ಗಾದ ಹುಂಡಿಗೆ ಬೆಂಕಿ ಬಿದ್ದಿರುವ ಘಟನೆ ದಾವಣಗೆರೆ ಜಿಲ್ಲೆಯ ದೊಡ್ಡಬಾತಿಯ ಚಮಶಾ ವಲಿ ದರ್ಗಾದಲ್ಲಿ ನಡೆದಿದೆ. ಅಗ್ನಿ ಅವಘಡದಲ್ಲಿ ಹುಂಡಿಯಲ್ಲಿದ್ದ ನೋಟುಗಳು ಸುಟ್ಟು ಕರಕಲಾಗಿದೆ. ದಾವಣಗೆರೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ದರ್ಗಾದ ಹುಂಡಿಗೆ ಬೆಂಕಿ ಬಿದ್ದ ಪರಿಣಾಮ 2000, 500, 200, 100 ರೂಪಾಯಿ ಸೇರಿದಂತೆ ಅದರಲ್ಲಿದ್ದ ಇತರೆ ಮೌಲ್ಯದ ನೋಟುಗಳೆಲ್ಲ ಬೆಂಕಿಗಾಹುತಿಯಾಗಿದೆ. ಆದರೆ, ಹುಂಡಿಗೆ ಬೆಂಕಿ ಹೇಗೆ ತಗುಲಿತು ಎಂದು ತಿಳಿದುಬಂದಿಲ್ಲ. ಸದ್ಯ, ಸುಟ್ಟ ನೋಟುಗಳನ್ನು ಪೊಲೀಸರು ಪರಿಶೀಲನೆ ನಡೆಸಿದರು. ಜೊತೆಗೆ, ದರ್ಗಾದ ಸಿಸಿಟಿವಿಯನ್ನು ಸಹ ಪರಿಶೀಲನೆ ಮಾಡಿದರು.
ಬಳ್ಳಾರಿ ಮೂಲದ ಮನೆಗಳ್ಳ ಬೆಣ್ಣೆನಗರಿಯಲ್ಲಿ ಅರೆಸ್ಟ್ ಇತ್ತ, ದಾವಣಗೆರೆಯ ಕೆಟಿಜೆ ನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಬಳ್ಳಾರಿ ಮೂಲದ ಮನೆಗಳ್ಳನನ್ನು ಬಂಧಿಸಿದ್ದಾರೆ. 22 ವರ್ಷದ ಹನುಮಂತ ಬಂಧಿತ ಆರೋಪಿ. ಹನುಮಂತನಿಂದ 3.46 ಲಕ್ಷ ರೂ. ಮೌಲ್ಯದ 77 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಬಳ್ಳಾರಿಯ ಕೌಲ್ಬಜಾರ್ನ ಮನೆಯಲ್ಲಿ ಕಳವು ಮಾಡಿದ್ದ. ಅಷ್ಟೇ ಅಲ್ಲ, ಬೆಂಗಳೂರು ಸೇರಿ ಹಲವೆಡೆ ಕಳವು ಮಾಡಿದ್ದ.
ಆಸ್ತಿ ವಿಚಾರದಲ್ಲಿ ಪುತ್ರನ ಜೊತೆ ಸೇರಿ ಪತ್ನಿ ಕೊಲೆ ಪ್ರಕರಣ: ನಾಲ್ವರು ಅಂದರ್ ಆಸ್ತಿ ವಿಚಾರದಲ್ಲಿ ಪುತ್ರನ ಜೊತೆ ಸೇರಿ ಪತ್ನಿಯನ್ನು ಕೊಲೆಗೈದ ಪ್ರಕರಣಕ್ಕ ಸಂಬಂಧಿಸಿದಂತೆ ದಾವಣಗೆರೆಯ ಹದಡಿ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಏನಿದು ಪ್ರಕರಣ? ಫೆ.17ರಂದು ಕಬ್ಬೂರಿನ ಸಿದ್ದಮ್ಮ(35) ಎಂಬುವವರ ಕೊಲೆಯಾಗಿತ್ತು. ಜಿಲ್ಲೆಯ ಬಿಸ್ಲೇರಿ ಗ್ರಾಮದ ಬಳಿ ಭದ್ರಾ ಕಾಲುವೆಯಲ್ಲಿ ಸಿದ್ದಮ್ಮನ ಮೃತದೇಹ ಪತ್ತೆಯಾಗಿತ್ತು. ಇದೀಗ, ಸಿದ್ದಮ್ಮ ಪತಿ ಕೆಂಚವೀರಪ್ಪ, ಪುತ್ರ ವಿಕಾಶ್, ಮಾವ ಶೇಖರಪ್ಪ ಹಾಗೂ ಸಂಬಂಧ ರಾಜಪ್ಪ ಅಲಿಯಾಸ್ ನಾಗರಾಜಪ್ಪ ಸೇರಿ ಮಹಿಳೆಯ ಕೊಲೆ ಮಾಡಿದ್ದರು ಎಂದು ತಿಳಿದುಬಂದಿದೆ.
ಸಿದ್ದಮ್ಮರನ್ನು ಕೊಂದು ಮೃತದೇಹವನ್ನು ನಾಲೆಗೆ ಎಸೆದಿದ್ದರು. ಸರ್ಕಾರಿ ಶಾಲೆ ಬಿಸಿಯೂಟದ ಸಹಾಯಕಿ ಆಗಿದ್ದ ಸಿದ್ದಮ್ಮ ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಗಂಡನಿಂದ ಪ್ರತ್ಯೇಕವಾಗಿದ್ದರು. ಸಿದ್ದಮ್ಮ ಕಳೆದ 10 ವರ್ಷಗಳಿಂದ ಪತಿಯಿಂದ ಬೇರೆಯಾಗಿದ್ದರು.
ಕದ್ದ ಕಾರಿನಲ್ಲಿ ಸುತ್ತಾಡಿ ಮನೆಗಳಿಗೆ ಕನ್ನ ಹಾಕುತ್ತಿದ್ದ ರಾಜಸ್ಥಾನಿ ಗ್ಯಾಂಗ್ ಅಂದರ್ ಬೆಂಗಳೂರಿನಲ್ಲಿ ರಾಜಸ್ಥಾನ ಮೂಲದ ನಾಲ್ವರು ಕಳ್ಳರನ್ನು ಸಿಟಿ ಮಾರ್ಕೆಟ್ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಜಸ್ಥಾನ ಮೂಲದ ಜಿತೇಂದ್ರ ಕುಮಾರ್, ಪ್ರಕಾಶ್, ಅಮರರಾಮ್, ರಮೇಶ್ ಕುಮಾರ್ ಬಂಧಿತ ಕಳ್ಳರು.
ಬಂಧಿತರು ರಸ್ತೆ ಬದಿ ನಿಲ್ಲಿಸುವ ಕಾರುಗಳನ್ನು ಗುರಿಯಾಗಿ ಕದಿಯುತ್ತಿದ್ರು. ಕದ್ದ ಕಾರಿನಲ್ಲಿ ಸುತ್ತಾಡಿ ಬೀಗ ಹಾಕಿರುವ ಮನೆಗಳ ಗುರುತು ಮಾಡುತ್ತಿದ್ದರು. ಮರು ದಿನ ರಾತ್ರಿ ವೇಳೆ ಅವುಗಳಿಗೆ ಕನ್ನ ಹಾಕುತ್ತಿದ್ದರು. ಕಳ್ಳತನದ ಬಗ್ಗೆ ಮಾರ್ಕೆಟ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಈ ನಡುವೆ, ರಾಜಸ್ಥಾನದ ಈ ಖತರ್ನಾಕ್ ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಮೇಲೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿಗಳಿಂದ 2 ಕಾರು ಸೇರಿ 28 ಲಕ್ಷ ರೂ. ಮೌಲ್ಯದ ಕಳವು ಮಾಲು ಜಪ್ತಿ ಮಾಡಲಾಗಿದೆ.
ಮೂಗಿನಹಳ್ಳಿ ಬಳಿ ಕಾರು ಡಿಕ್ಕಿ: ಬೈಕ್ ಸವಾರ ಸಾವು ಮೂಗಿನಹಳ್ಳಿ ಬಳಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಮೂಗಿನಹಳ್ಳಿ ಬಳಿ ನಡೆದಿದೆ. ಎಳೇಸಂದ್ರ ಗ್ರಾ.ಪಂ ಮಾಜಿ ಅಧ್ಯಕ್ಷ ಅಪ್ಪಿ(40) ಮೃತ ಸವಾರ. ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಎರೆಹಳ್ಳಿಯಲ್ಲಿ ಒಂದೇ ಜಾಗದಲ್ಲಿ 250 ಕುರಿಗಳು ಸಾವು ಎರೆಹಳ್ಳಿಯಲ್ಲಿ ಒಂದೇ ಜಾಗದಲ್ಲಿ 250 ಕುರಿಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎರೆಹಳ್ಳಿ ಭಳಿ ನಡೆದಿದೆ. ಕುರಿಗಳು ಬೆಳಗ್ಗೆಯಿಂದಲೇ ಒಂದೊಂದೇ ಸಾಯುತ್ತಿವೆ ಎಂದು ಹೇಳಲಾಗಿದೆ. ಶಿರಾ-ಹಿರಿಯೂರಿನಿಂದ ಬಂದಿದ್ದ ಕುರಿಗಳ ಹಿಂಡು ನಿನ್ನೆ ಸಂಜೆ ಮಳೆಯಲ್ಲಿ ನೆನೆದಿದ್ದವು. ಅಧಿಕಾರಿಗಳು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸ್ತಿದ್ದಾರೆ.
ಅವಧಿ ಮೀರಿದ ಸಿರಪ್ ಮಾರುತ್ತಿದ್ದ ಇಬ್ಬರು ಬಂಧನ ಅವಧಿ ಮೀರಿದ ಸಿರಪ್ ಮಾರುತ್ತಿದ್ದ ಇಬ್ಬರು ಬಂಧನವಾಗಿದೆ. ವಿಜಯಪುರದ CEN ಠಾಣೆ ಪೊಲೀಸರಿಂದ ಬಂಧನವಾಗಿದೆ. ಪುಲಿಕೇಶಿ ನಗರದಲ್ಲಿ ಮೊಹಮ್ಮದ್ ಸಾದಿಕ್(35), ಮೊಹಮ್ಮದ್ ಯುಸೂಫ್ ಕೊತ್ತಲ(35) ಬಂಧಿತ ಆರೋಪಿಗಳು.
ಬಂಧಿತರಿಂದ 4 ಲಕ್ಷ ರೂ. ಮೌಲ್ಯದ ಅವಧಿ ಮುಗಿದ ಸಿರಪ್ ಜಪ್ತಿ ಮಾಡಲಾಗಿದೆ. ನಶೆ ಏರಿಸಿಕೊಳ್ಳಲು ಯುವಕರು ಸಿರಪ್ ಖರೀದಿಸುತ್ತಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: ಹಿಂದುತ್ವದ ಬಗ್ಗೆ ಮಾತನಾಡೋರ ಹೃದಯದಲ್ಲಿ ಹಿಂದುತ್ವ ಇದ್ಯಾ? -H.D.ಕುಮಾರಸ್ವಾಮಿ ಪ್ರಶ್ನೆ
Published On - 9:54 pm, Tue, 23 February 21