ಕದ್ದು ಮುಚ್ಚಿ ದರ್ಶನ್​ ಭೇಟಿ: ಜೈಲಿನ CCTV ಕಣ್ತಪ್ಪಿಸಿ ದಾಸನನ್ನ ನೋಡಲು ಹೋಗಿದ್ಯಾರು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಆರೋಪಿ ಸೆಲೆಬ್ರಿಟಿಯಾಗಿರುವುದಿರಂದ ಪ್ರತ್ಯೇಕ ಬ್ಯಾರಕ್​ನಲ್ಲಿ ಇರಿಸಲಾಗಿದೆ. ಆದ್ರೆ, ದರ್ಶನ್​ ನೋಡಲು ಕೈದಿಗಳಷ್ಟೇ ಅಲ್ಲ ಪೊಲೀಸ್ ಸಿಬ್ಬಂದಿ ಸಹ ಹರಸಾಹಸಪಟ್ಟು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾದ್ರೆ, ಕದ್ದುಮುಚ್ಚಿ ದರ್ಶನ್ ನೋಡಲು ಹೋಗಿದ್ಯಾರು? ಕಳ್ಳಾಟ ಬಯಲಿಗೆ ಬಂದಿದ್ಹೇಗೆ? ಎನ್ನುವ ವಿವರ ಇಲ್ಲಿದೆ.

ಕದ್ದು ಮುಚ್ಚಿ ದರ್ಶನ್​ ಭೇಟಿ: ಜೈಲಿನ CCTV ಕಣ್ತಪ್ಪಿಸಿ ದಾಸನನ್ನ ನೋಡಲು ಹೋಗಿದ್ಯಾರು?
Darshan
Edited By:

Updated on: Jan 30, 2026 | 3:44 PM

ಬೆಂಗಳೂರು (ಜನವರಿ 30):  ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್  (Actor Darshan) ಅವರನ್ನು ನೋಡುವ ಹಂಬಲ ಇದೀಗ ಪೊಲೀಸರಿಗೇ ಮುಳುವಾಗಿದೆ. ನಿಯಮ ಮೀರಿ ದರ್ಶನ್ ನನ್ನು ನೋಡಲು ಹೋದ ಯಲಹಂಕ ಠಾಣೆ ಪೊಲೀಸ್ ಕಾನ್​ಸ್ಟೇಬಲ್ (constable) ಹಾಗೂ ಅವರಿಗೆ ಸಾಥ್ ನೀಡಿದ್ದ ಜೈಲು ವಾರ್ಡನ್ ವಿರುದ್ಧ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ (Alok Kumar) ಕಠಿಣ ಕ್ರಮ ಕೈಗೊಂಡಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರನ್ನು ನಿಯಮಬಾಹಿರವಾಗಿ ಭೇಟಿ ಮಾಡಲು ಪೊಲೀಸ್ ಪೇದೆಯೊಬ್ಬರಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಜೈಲು ವಾರ್ಡನ್ ನನ್ನು ವರ್ಗಾವಣೆ ಮಾಡಲಾಗಿದೆ. ಡಿಜಿಪಿ ಅಲೋಕ್ ಕುಮಾರ್ ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈ ಕರ್ತವ್ಯಲೋಪ ಬೆಳಕಿಗೆ ಬಂದಿದೆ. ಕೂಡಲೇ ಪರಪ್ಪನ ಅಗ್ರಹಾರ ಜೈಲಿನ ವಾರ್ಡನ್​ ಪ್ರಭುಶಂಕರ ಚೌಹಾಣ್​ ಎನ್ನುವರನ್ನು ಚಾಮರಾಜನಗರ ಕಾರಾಗೃಹಕ್ಕೆ ಎತ್ತಂಗಡಿ ಮಾಡಿದ್ದಾರೆ. ಅಲ್ಲದೇ ಇಲಾಖೆ ತನಿಖೆಗೆ ಸೂಚಿಸಿದ್ದಾರೆ.

ನಡೆದಿದ್ದೇನು?

ಕಳೆದ ಜನವರಿ 24 ರಂದು ಯಲಹಂಕ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಒಬ್ಬರು ಬೇರೊಂದು ಪ್ರಕರಣದ ಆರೋಪಿಗಳನ್ನು ಜೈಲಿಗೆ ಬಿಡಲು ಪರಪ್ಪನ ಅಗ್ರಹಾರಕ್ಕೆ ಬಂದಿದ್ದರು. ಈ ವೇಳೆ ಜೈಲಿನಲ್ಲಿ ಕೆಲಸ ಮಾಡುತ್ತಿದ್ದ ವಾರ್ಡರ್ ಪ್ರಭಾಕರ್ ಚೌಹಾನ್ ಬಳಿ, ನನಗೆ ನಟ ದರ್ಶನ್ ಅವರನ್ನು ನೋಡಬೇಕು ತೋರಿಸಿ ಪ್ಲೀಸ್ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪಿದ ಪ್ರಭಾಕರ್, ಸಿಸಿಟಿವಿ ಕ್ಯಾಮರಾಗಳ ಕಣ್ಣು ತಪ್ಪಿಸಿ ರಹಸ್ಯವಾಗಿ ಪೇದೆಯನ್ನು ದರ್ಶನ್ ಇದ್ದ ಬ್ಯಾರಕ್‌ ಬಳಿ ಕರೆದೊಯ್ದಿದ್ದರು.

ಇದನ್ನೂ ಓದಿ: ಇದೇ ಮೊದಲ ಬಾರಿಗೆ ಜೈಲಿನಲ್ಲಿ ಹೊಸ ರೂಲ್ಸ್: ದರ್ಶನ್ ಸೇರಿದಂತೆ ಇತರೆ ಕೈದಿಗಳಿಗೆ ವಿಶೇಷ ಸೌಲಭ್ಯಕ್ಕೆ ಬ್ರೇಕ್

ಜೈಲು ಸಿಬ್ಬಂದಿ ಎತ್ತಂಗಡಿ!

ಪ್ರಕರಣವೊಂದರ ಆರೋಪಿಯನ್ನು ಜೈಲಿಗೆ ಬಿಡಲು ಯಲಹಂಕ ಕಾನ್ಸ್​​ಟೇಬಲ್ ಗಣೇಶ್ ಎಂಬುವವರು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದು, ಈ ವೇಳೆ ಈ ವೇಳೆ ನಟ ದರ್ಶನ್ ನನ್ನು ತೋರಿಸುವಂತೆ ಮನವಿ ಮಾಡಿದ್ದಾರೆ. ಬಳಿಕ ವಾರ್ಡನ್​ ಪ್ರಭುಶಂಕರ ಚೌಹಾಣ್​, ಸಿಸಿ ಕ್ಯಾಮರಾ ಕಣ್ತಪ್ಪಿಸಿ ಪೇದೆಯನ್ನು ದರ್ಶನ್​ ಇರುವ ಬ್ಯಾರಕ್​​​ಗೆ ಬಳಿ ಕರೆದುಕೊಂಡು ಹೋಗಿದ್ದಾರೆ.ಈ ವಿಚಾರ ತಿಳಿದ ಡಿಜಿಪಿ ಅಲೋಕ್ ಕುಮಾರ್, ವಾರ್ಡನ್​​ ಪ್ರಭುಶಂಕರ ಚೌಹಾಣ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಚಾಮರಾಜನಗರ ಕಾರಾಗೃಹಕ್ಕೆ ವರ್ಗಾವಣೆ ಮಾಡಿದ್ದಾರೆ. ಅಲ್ಲದೇ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. ಇನ್ನು ದರ್ಶನ್​​​ ನೋಡಲು ಹೋಗಿದ್ದ ಕಾನ್ಸ್​​ಟೇಬಲ್ ವಿರುದ್ಧದವೂ ಸಹ ಕ್ರಮಕ್ಕೆ ಸೂಚಿಸಿದ್ದಾರೆ.

ಪೇದೆ ವಿರುದ್ಧವೂ ಕ್ರಮಕ್ಕೆ ಸೂಚನೆ

ಕೇವಲ ಜೈಲು ಸಿಬ್ಬಂದಿ ಮಾತ್ರವಲ್ಲದೆ, ಅನಧಿಕೃತವಾಗಿ ದರ್ಶನ್ ನೋಡಲು ಹೋದ ಯಲಹಂಕದ ಪೊಲೀಸ್ ಪೇದೆಯ ವಿರುದ್ಧವೂ ಶಿಸ್ತು ಕ್ರಮ ಜರುಗಿಸುವಂತೆ ಈಶಾನ್ಯ ವಿಭಾಗದ ಡಿಸಿಪಿಗೆ ಅಲೋಕ್ ಕುಮಾರ್ ಅವರು ಖಡಕ್ ಸೂಚನೆ ನೀಡಿದ್ದಾರೆ. ಈ ಮೂಲಕ ಜೈಲಿನೊಳಗೆ ಎಷ್ಟೇ ದೊಡ್ಡ ಸೆಲೆಬ್ರಿಟಿ ಇದ್ದರೂ ನಿಯಮಗಳು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಡಿಜಿಪಿ ಅಲೋಕ್ ಕುಮಾರ್ ಈ ಕ್ರಮದ ಮೂಲಕ ರವಾನಿಸಿದ್ದಾರೆ.

ತಮ್ಮ ಕಚೇರಿಯಿಂದ ವೀಕ್ಷಿಸಿದ್ದ ಡಿಜಿಪಿ

ತಮ್ಮ ಕಚೇರಿಯಲ್ಲಿ ಅಳವಡಿಸಿರುವ ಸಿಸಿಟಿವಿಗಳಿಂದ ದರ್ಶನ್ ಸೆಲ್‌ಗೆ ಖಾಕಿ ಸಮವಸ್ತ್ರದಲ್ಲಿದ್ದ ಸಿಬ್ಬಂದಿ ಭೇಟಿಯನ್ನು ಡಿಜಿಪಿ ಅಲೋಕ್ ಕುಮಾರ್ ವೀಕ್ಷಿಸಿದ್ದರು. ಬಳಿಕ ಗಣರಾಜ್ಯೋತ್ಸವ ನಿಮಿತ್ತ ಜೈಲಿಗೆ ತೆರಳಿದ್ದಾಗ ದರ್ಶನ್‌ಗೆ ತಮ್ಮ ಭೇಟಿಗೆ ಬಂದಿದ್ದವರ ಬಗ್ಗೆ ಡಿಜಿಪಿ ವಿಚಾರಿಸಿದ್ದಾರೆ. ಆಗ ತಮಗೆ ಪರಿಚಯದವರಲ್ಲ. ಬಂದು ಹಾಯ್ ಹೇಳಿದರು. ನಾನು ಮಾತನಾಡಿಸಿದೆ ಅಷ್ಟೇ ಎಂದಿದ್ದಾರೆ. ಆಗ ವಾರ್ಡನ್‌ ಪ್ರಭುರನ್ನು ಕರೆಸಿ ವಿಚಾರಿಸಿದಾಗ ಸತ್ಯ ಬಯಲಿಗೆ ಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Fri, 30 January 26