ಧಾರವಾಡ: ಕಲ್ಲಿನ‌ ಕ್ವಾರಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Jun 17, 2024 | 7:21 PM

ಧಾರವಾಡ ತಾಲೂಕಿನ ಮನಸೂರು ಗ್ರಾಮದ ಹೊರವಲಯದಲ್ಲಿರುವ ಕಲ್ಲಿನ‌ ಕ್ವಾರಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ಮಾರಕಾಸ್ತ್ರಗಳನ್ನ ಹಿಡಿದು ಮುಸುಕುಧಾರಿಗಳಿಂದ ದರೋಡೆಗೆ ಯತ್ನಿಸಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಸಿಸಿ ಕ್ಯಾಮರಾದಲ್ಲಿ ಭಯಾನಕ ದೃಶ್ಯಗಳು ಸೆರೆ ಆಗಿವೆ. ಘಟನೆಯಿಂದ ಬೆಚ್ಚಿಬಿದ್ದಿರುವ ಸ್ಥಳೀಯರು ಪೊಲೀಸರು ರಾತ್ರಿ ಗಸ್ತು ಹೆಚ್ಚು ಮಾಡುವಂತೆ ಒತ್ತಾಯಿಸಲಾಗಿದೆ.

ಧಾರವಾಡ: ಕಲ್ಲಿನ‌ ಕ್ವಾರಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವು
ಧಾರವಾಡ: ಕಲ್ಲಿನ‌ ಕ್ವಾರಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವು
Follow us on

ಧಾರವಾಡ, ಜೂನ್​ 17: ಕಲ್ಲಿನ‌ ಕ್ವಾರಿಯಲ್ಲಿ ಈಜಲು (swimming) ಹೋಗಿದ್ದ ಇಬ್ಬರು ಬಾಲಕರು ಸಾವನ್ನಪ್ಪಿರುವಂತಹ ಘಟನೆ ಧಾರವಾಡ ತಾಲೂಕಿನ ಮನಸೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ. ಸತೀಶ್(16), ಉಮೇಶ್(16) ಮೃತರು (death). ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದಾರೆ. ಓರ್ವನ ಮೃತದೇಹ ಪತ್ತೆ ಆಗಿದ್ದು, ಇನ್ನೊಬ್ಬನ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ.

ಮಾರಕಾಸ್ತ್ರಗಳನ್ನ ಹಿಡಿದು ಮುಸುಕುಧಾರಿಗಳಿಂದ ದರೋಡೆಗೆ ಯತ್ನ

ಮೈಸೂರು: ಮಾರಕಾಸ್ತ್ರಗಳನ್ನ ಹಿಡಿದು ಮುಸುಕುಧಾರಿಗಳಿಂದ ದರೋಡೆಗೆ ಯತ್ನಿಸಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಸಿಸಿ ಕ್ಯಾಮರಾದಲ್ಲಿ ಭಯಾನಕ ದೃಶ್ಯಗಳು ಸೆರೆ ಆಗಿವೆ. ಘಟನೆಯಿಂದ ಬೆಚ್ಚಿಬಿದ್ದಿರುವ ಸ್ಥಳೀಯರು ಪೊಲೀಸರು ರಾತ್ರಿ ಗಸ್ತು ಹೆಚ್ಚು ಮಾಡುವಂತೆ ಒತ್ತಾಯಿಸಲಾಗಿದೆ.

ಇದನ್ನೂ ಓದಿ: ಅಪಘಾತ ಮಾಡಿ ಆಸ್ಪತ್ರೆಗೆ ಬಾಲಕನ್ನು ಕರೆತಂದು ಪೊಲೀಸರಿಗೆ ಶರಣಾದ ಚಾಲಕ

ಒಂದು ಕೈಯಲ್ಲಿ ಮಾರಕಾಸ್ತ್ರ, ಮತ್ತೊಂದು ಕೈಯಲ್ಲಿ ಟಾರ್ಚ್​​ ಹಿಡಿದು ಮನೆಗಳ ಮುಂದೆ ಮುಸುಕುಧಾರಿಗಳು ಓಡಾಡಿದ್ದಾರೆ. ಒಂದು ಮನೆಗೆ ಒಳಗೆ ಹೋಗಿ ಏನು ಸಿಗದೆ ಬರಿಗೈಲಿ ವಾಪಸ್ಸಾಗಿದ್ದಾರೆ. ನಂಜನಗೂಡು ಪಟ್ಟಣದ ಹಲವು ಬಡಾವಣೆಗಳಲ್ಲಿ ಕಳ್ಳರ ಚಲನವಲನದ ದೃಶ್ಯ ಸೆರೆಯಾಗಿದೆ.

ಸಾರಿಗೆ ಬಸ್​ ಟೈರ್ ಸ್ಫೋಟಗೊಂಡು ಮಹಿಳೆ ಕಾಲಿಗೆ ಗಾಯ

ಗದಗ: ಬಸ್​ ಟೈರ್ ಬ್ಲಾಸ್ಟ್ ಆದ ಹಿನ್ನೆಲೆ ಮಹಿಳೆ ಕಾಲಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಹುಬ್ಬಳ್ಳಿ ಹಾಗೂ ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಮಾರ್ಗ ಮಧ್ಯ ಹಳ್ಳಿಗುಡಿ ಬಳಿ ನಡೆದಿದೆ. ಗದಗ ನಗರದಿಂದ ಗಂಗಾವತಿ ಪಟ್ಟಣಕ್ಕೆ ಕೆಎಸ್​ಆರ್​ಟಿಸಿ ಬಸ್​ ಚಲಿಸುತ್ತಿತ್ತು.

ಇದನ್ನೂ ಓದಿ: ಶಿವಮೊಗ್ಗದ ಮಹಿಳೆ, ವಿಜಯಪುರದ ಯುವಕ: ಫೇಸ್‌ಬುಕ್​ ಲವ್​​ ಕೊಲೆಯಲ್ಲಿ ಅಂತ್ಯ

ಬಸ್ ವೇಗವಾಗಿ ಸಂಚರಿಸುತ್ತಿರುವಾಗ ಏಕಾಏಕಿ ಹಿಂದಿನ ಚಕ್ರದ ಟೈರ್ ಬ್ಲಾಸ್ಟ್ ಆಗಿದೆ. ಈ ವೇಳೆ ಹಿಂಬದಿ ಸೀಟ್​ನಲ್ಲಿ ಕೂತಿದ್ದ ಮಹಿಳೆ ಕಾಲಿಗೆ‌ ಗಂಭೀರ ಗಾಯವಾಗಿದೆ. ಬ್ಲಾಸ್ಟ್ ಆದ ರಭಸಕ್ಕೆ ಬಸ್​ನ ಒಳಗಡೆ ಕೂತಿದ್ದ ಮಹಿಳೆ ಕಾಲಿಗೆ ಗಂಭೀರ ಗಾಯವಾಗಿದೆ. ಅದೃಷ್ಟವಶಾತ್ ಸ್ವಲ್ಪದರಲ್ಲೇ ಅನಾಹುತ ತಪ್ಪಿದ್ದು, ಉಳಿದೆಲ್ಲ ಪ್ರಯಾಣಿಕರು ಬಚಾವ್ ಆಗಿದ್ದಾರೆ.

ತಕ್ಷಣ ಮಹಿಳೆಯನ್ನ ಆ್ಯಂಬ್ಯುಲೆನ್ಸ್ ಮೂಲಕ ಗದಗ ಜೀಮ್ಸ್ ಆಸ್ಪತ್ರೆಗೆ ದಾಖಲಿಸಿದ ಬಸ್ ಚಾಲಕ ಚಿಕಿತ್ಸೆ ಕೊಡಿಸಿದ್ದಾರೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.