ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್​​: 100 ಗಡಿದಾಟಿದ ಟೊಮೆಟೊ, ಗೃಹಿಣಿಯರು ಆಕ್ರೋಶ

ಟೊಮೆಟೊ ಒಂದು ಕೆಜಿಗೆ ಬರೋಬ್ಬರಿ 100 ರೂ, ಈರುಳ್ಳಿ ಬೆಲೆ ಬರೋಬ್ಬರಿ 60 ರೂ ಏರಿಕೆ ಆಗಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆ ಆಗಿದೆ. ಮಳೆ ಬರುತ್ತಿರುವ ಪರಿಣಾಮ ಟೊಮೆಟೊ ಸರಿಯಾಗಿ ಬೆಳೆ‌ ಬಂದಿಲ್ಲ. ಹೀಗಾಗಿ ಟೊಮೆಟೊ ಬೆಲೆ ಕೆಜಿಗೆ 100 ರೂ‌ ಏರಿಕೆ ಆಗಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದು, ಬೆಲೆ‌ ಕೇಳಿಯೇ ಗ್ರಾಹಕರು ಸುಸ್ತಾಗುತ್ತಿದ್ದಾರೆ. 

ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್​​: 100 ಗಡಿದಾಟಿದ ಟೊಮೆಟೊ, ಗೃಹಿಣಿಯರು ಆಕ್ರೋಶ
ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್​​: 100 ಗಡಿದಾಟಿದ ಟೊಮೆಟೊ, ಗೃಹಿಣಿಯರು ಆಕ್ರೋಶ
Follow us
Poornima Agali Nagaraj
| Updated By: ಗಂಗಾಧರ​ ಬ. ಸಾಬೋಜಿ

Updated on: Jun 17, 2024 | 6:45 PM

ಬೆಂಗಳೂರು, ಜೂನ್​ 17: ರಾಜ್ಯ ಸರ್ಕಾರ ತೈಲ ಮಾರಾಟದ ಮೇಲಿನ ತೆರಿಗೆ ಹೆಚ್ಚಳ (Petrol Diesel Price Increase) ಮಾಡಿದೆ. ಲೋಕಸಭೆ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದು, ಬಿಜೆಪಿ (bjp) ಸೇರಿದಂತೆ ಸಾರ್ವಜನಿಕರ ಆಕ್ರೋಶಕ್ಕೂ ಗುರಿ ಆಗಿದೆ. ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡಲಾಗುತ್ತಿದೆ. ಇದೀಗ ತೈಲ ದರ ಹೆಚ್ಚಳದೊಂದು ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್​ ಎದುರಾಗಿದೆ.

ಟೊಮೆಟೊ ಒಂದು ಕೆಜಿಗೆ ಬರೋಬ್ಬರಿ 100 ರೂ, ಈರುಳ್ಳಿ ಬೆಲೆ ಬರೋಬ್ಬರಿ 60 ರೂ ಏರಿಕೆ ಆಗಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆ ಆಗಿದೆ. ಮಳೆ ಬರುತ್ತಿರುವ ಪರಿಣಾಮ ಟೊಮೆಟೊ ಸರಿಯಾಗಿ ಬೆಳೆ‌ ಬಂದಿಲ್ಲ. ಹೀಗಾಗಿ ಟೊಮೆಟೊ ಬೆಲೆ ಕೆಜಿಗೆ 100 ರೂ‌ ಏರಿಕೆ ಆಗಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದು, ಬೆಲೆ‌ ಕೇಳಿಯೇ ಗ್ರಾಹಕರು ಸುಸ್ತಾಗುತ್ತಿದ್ದಾರೆ.

ದರ ಹೀಗೆ ಜಾಸ್ತಿ ಆದ್ರೆ ಜೀವನ‌ ಮಾಡುವುದಕ್ಕೆ ಆಗುತ್ತಾ: ಮಹಿಳಾ ಗ್ರಾಹಕರು ಆಕ್ರೋಶ

ಈ ಕುರಿತಾಗಿ ಮಹಿಳೆಯರು ಮಾತನಾಡಿದ್ದು, ನಿನ್ನೆ ಪೆಟ್ರೋಲ್ ಮತ್ತು ಡಿಸೇಲ್ ಜಾಸ್ತಿಯಾಗಿದೆ. ಇಂದು ಟೊಮೆಟೊ, ಈರುಳ್ಳಿ ದರ ಜಾಸ್ತಿ ಆಗಿದೆ. ಹೀಗಾದ್ರೆ ಜೀವನ‌ ಮಾಡುವುದಕ್ಕೆ ಆಗುತ್ತಾ ಎಂದಿದ್ದಾರೆ. ಕಳೆದ ವರ್ಷ ಟೊಮೆಟೊ ಬೆಲೆ‌ 200 ರೂ. ಗಡಿ ದಾಟಿತ್ತು.

ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಬೆಲೆ ದುಬಾರಿ; ರಾಜ್ಯ ಸರ್ಕಾರದ ನಡೆಗೆ ಸಾರ್ವಜನಿಕರಿಂದ ಆಕ್ರೋಶ

ಈಗ ಮತ್ತೆ ಟೊಮಾಟೋ ಬೆಲೆ‌ ಜಾಸ್ತಿಯಾಗುತ್ತಿದೆ. ವ್ಯಾಪಾರಸ್ಥರನ್ನ ಕೇಳಿದರೆ ಮಳೆ ಬರ್ತಿದೆ ಹೀಗಾಗಿ ಟೊಮೆಟೊ ಬರ್ತಿಲ್ಲ ಎನ್ನುತ್ತಿದ್ದಾರೆ. ಬೀನ್ಸ್, ಕ್ಯಾರೆಟ್, ಬಾಟಾಣಿ ಎಲ್ಲವೂ 100 ರೂ. ಗಡಿದಾಟಿದೆ. ಹೀಗಾದ್ರೆ ಜೀವನ‌ ಮಾಡುವುದು ಹೇಗೆ ಹೇಳಿ. ಉಚಿತ ಯೋಜನೆ ತೆಗೆದು ಮೊದಲು ತರಕಾರಿ ಬೆಲೆ ಕಡಿಮೆ ಮಾಡಿ ಎಂದು ಗೃಹಿಣಿಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ

ತೆರಿಗೆ ಹಂಚಿಕೆ ವಿಚಾರದಲ್ಲಿ ಈ ಹಿಂದೆ ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ಸಮರ ಸಾರಿತ್ತು. ಚೊಂಬಿನ ಜಾಹೀರಾತು ಕೊಟ್ಟು ಕುಟುಕಿತ್ತು. ಇದೇ ಅಸ್ತ್ರವನ್ನ ಬಿಜೆಪಿ ಕಾರ್ಯಕರ್ತರು ತಿರುಗಿಸಿ ಬಿಟ್ಟಿದ್ದಾರೆ. ಮಂಗಳೂರಿನಲ್ಲಿ ಚೊಂಬಿನಲ್ಲಿ ಹಣ ಸಂಗ್ರಹಿಸಿ, ಚಿಪ್ಪಿಗೆ ಪೆಟ್ರೋಲ್ ತುಂಬಿಸಿಕೊಂಡ್ರು. ಕಾರಿಗೆ ಹಗ್ಗ ಕಟ್ಟಿ ಎಳೆದು, ಸ್ಕೂಟ್ ತಳ್ಳಿಕೊಂಡು ಜಾಥಾ ಮಾಡಿದ್ರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ