ಕಲಬುರಗಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನೀರಿಗೆ ಬರ: ಆಪರೇಷನ್ ಥಿಯೇಟರ್ ಬಂದ್​

ಸರ್ಕಾವೇನೋ ಹಿಂದುಳಿದ ಕಲ್ಯಾಣ ಕರ್ನಾಟಕದ ಹೃದಯ ಸಂಬಂಧಿ ರೋಗಿಗಳು ದೂರದ ಬೆಂಗಳೂರಿಗೆ ಬರೋಕೆ ತೊಂದರೆಯಾಗುತ್ತೆ ಎಂದು ಕಲಬುರಗಿಯಲ್ಲೇ ಜಯದೇವ ಹೃದ್ರೋಗ ಆಸ್ಪತ್ರೆ ಆರಂಭಿಸಿತ್ತು. ಅಲ್ಲದೇ ಪ್ರತಿ ನಿತ್ಯ 300 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಆದರೆ ಸದ್ಯ ನೀರಿಲ್ಲದೇ ಶಸ್ತ್ರಚಿಕಿತ್ಸೆ ಸ್ಥಗಿತಗೊಳಿಸಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಇಂತಹ ದುಸ್ಥಿತಿ ಎದುರಾಗಿದೆ.

ಕಲಬುರಗಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನೀರಿಗೆ ಬರ: ಆಪರೇಷನ್ ಥಿಯೇಟರ್ ಬಂದ್​
ಕಲಬುರಗಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನೀರಿಗೆ ಬರ: ಆಪರೇಷನ್ ಥಿಯೇಟರ್ ಬಂದ್​
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jun 17, 2024 | 5:30 PM

ಕಲಬುರಗಿ, ಜೂನ್​ 17: ಅದು ಆ ಭಾಗದ ಬಡ ಜನರಿಗೆ ಉಪಯೋಗ ಆಗಲಿ ಅಂತ ಆರಂಭಿಸಿರುವ ಜಯದೇವ ಹೃದ್ರೋಗ ಆಸ್ಪತ್ರೆ (Jayadeva Hospital). ಆದರೆ ಕಳೆದ ಮೂರು ದಿನಗಳಿಂದ ಆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡುವುದನ್ನೇ ಬಂದ್ ಮಾಡಲಾಗಿದೆ. ಏಕೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿಲ್ಲ ಎಂದು ಆಸ್ಪತ್ರೆಗೆ ಬರುವ ರೋಗಿಗಳು ಪ್ರಶ್ನೆ ಮಾಡುವಂತಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ತವರು ಜಿಲ್ಲೆಯಲ್ಲಿರುವ ನಗರದ ಜಯದೇವ ಹೃದ್ರೋಗ ಆಸ್ಪತ್ರೆಯ ಅದ್ವಾನವೊಂದು ಬಟಾಬಯಲಾಗಿದೆ.

ಆಸ್ಪತ್ರೆಯಲ್ಲಿ ನೀರಿಗೆ ಬರ

ಸರ್ಕಾವೇನೋ ಹಿಂದುಳಿದ ಕಲ್ಯಾಣ ಕರ್ನಾಟಕದ ಹೃದಯ ಸಂಬಂಧಿ ರೋಗಿಗಳು ದೂರದ ಬೆಂಗಳೂರಿಗೆ ಬರೋಕೆ ತೊಂದರೆಯಾಗುತ್ತೆ ಎಂದು ಕಲಬುರಗಿಯಲ್ಲೇ ಜಯದೇವ ಹೃದ್ರೋಗ ಆಸ್ಪತ್ರೆ ಆರಂಭಿಸಿತ್ತು. ಅಲ್ಲದೇ ಪ್ರತಿ ನಿತ್ಯ 300 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಅದರಲ್ಲೂ ಒಪಿಡಿಗೆ ಬರುತ್ತಿದ್ದರು. ಅದರಲ್ಲಿ 30-40 ಜನ ದಾಖಲು ಕೂಡ ಆಗ್ತಾರೆ. ಆದರೆ ಸದ್ಯ ಅವರಲ್ಲಿ ದೊಡ್ಡ ಆತಂಕದ ಕಾರ್ಮೋಡ ಎದುರಾಗಿದೆ.

ಇದನ್ನೂ ಓದಿ: ಕಲಬುರಗಿ: ಅಪಯಾದ ಮಟ್ಟ ಮೀರಿ ಹರಿಯುತ್ತಿರುವ ಹಳ್ಳ, ಹಗ್ಗದ ಸಹಾಯದಿಂದ ಜಮೀನಿಗೆ ತೆರಳುತ್ತಿರುವ ಜನ

ಯಾಕೆಂದ್ರೆ ಆಸ್ಪತ್ರೆಯಲ್ಲಿ ಹುಡುಕಿದ್ರು ಒಂದು ಹನಿ ನೀರು ಸಿಗುತ್ತಿಲ್ಲ. ಇನ್ನೂ ಆತಂಕ ಹಾಗೂ ನಾಚಿಕೆ ಪಡುವ ವಿಷಯ ಏನು ಅಂದ್ರೆ ಆಪರೇಷನ್ ಥಿಯೇಟರ್​ನಲ್ಲಿಯೂ ನೀರು ಸರಬರಾಜು ಬಂದ್ ಆಗಿದೆ. ಪರಿಣಾಮ ಕಳೆದ ಮೂರು ದಿನಗಳಿಂದ ವೈದ್ಯರು ಶಸ್ತ್ರಚಿಕಿತ್ಸೆ ಮಾಡೋದನ್ನೆ ನಿಲ್ಲಿಸಿದ್ದಾರಂತೆ. ಅತೀ ತುರ್ತು ಎನ್ನಿಸುವಂತ ಶಸ್ತ್ರಚಿಕಿತ್ಸೆ ಹೊರತು ಪಡಿಸಿದರೆ ಸಂಪೂರ್ಣವಾಗಿ ಆಪರೇಷನ್ ಥಿಯೇಟರ್ ಬಂದ್ ಮಾಡಲಾಗಿದೆ.

ಹೀಗಾಗೇ ಹೃದಯ ಸಂಬಂಧಿಗಳ ಎದೆಬಡಿತ ಜಾಸ್ತಿಯಾಗಿದೆ. ಆಸ್ಪತ್ರೆಯಲ್ಲಿ ನೀರಿಲ್ಲದ ಕಾರಣ ನಾವೇ ಕೆಳಗಡೆ ಹೋಗಿ ನೀರು ಖರೀದಿ ಮಾಡಿಕೊಂಡು ಬರಬೇಕಾದ ಅನಿವಾರ್ಯ ಸ್ಥಿತಿ ಬಂದಿದೆ ಎನ್ನುತ್ತಾರೆ ಆಸ್ಪತ್ರೆಗೆ ಬಂದ ಜನರು.

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಭಾರೀ ಮಳೆ: ಗೋಕರ್ಣ ಮಹಾಬಲೇಶ್ವರ ದೇಗುಲಕ್ಕೆ ನುಗ್ಗಿದ ನೀರು; ಆತ್ಮಲಿಂಗ ಜಲಾವೃತ

ಇನ್ನು ಕಳೆದ ಮೂರು ದಿನಗಳಿಂದ ಕಲಬುರಗಿಯ ಜಯದೇವ ಆಸ್ಪತ್ರೆಯಲ್ಲಿ ಇದೇ ಸಮಸ್ಯೆ ಇದೆ. ಎಷ್ಟೇ ಭಾರಿ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದ್ರು ನೀರು ಸರಬರಾಜು ಮಾಡ್ತಿಲ್ಲವಂತೆ. ಹೀಗಾಗಿ ಕ್ಯಾನ್​ಗಳ ಮೂಲಕ ನೀರು ಸರಬರಾಜು ಮಾಡೋದು, ಆಸ್ಪತ್ರೆಯ ವಾರ್ಡ್​ಗಳಲ್ಲಿ ಬ್ಯಾರೆಲ್​ನಲ್ಲಿ ನೀರು ಶೇಖರಣೆ ಮಾಡೋ ಹುಚ್ಚು ಸಾಹಸವನ್ನ ಆಸ್ಪತ್ರೆಯ ಸಿಬ್ಬಂದಿ ಮಾಡುತ್ತಿದೆ.

ಮೂರು ದಿನದಿಂದ ಆಪರೇಷನ್ ಥಿಯೇಟರ್ ಬಂದ

ಆಸ್ಪತ್ರೆಯ ಪ್ರಭಾರಿ ನಿರ್ದೇಶಕರನ್ನ ಕೇಳಿದರೆ ಕಲಬುರಗಿ ಭಾಗದಲ್ಲಿ ಭಾರಿ ಮಳೆಯಾಗಿದ್ದರಿಂದ ಮಣ್ಣು ಮಿಶ್ರಿತ ನೀರು ಬರುತ್ತಿದೆ. ಹೀಗಾಗಿ ಆ ನೀರು ಆಪರೇಷನ್ ಥಿಯೇಟರ್​ನಲ್ಲಿ ಬಳಕೆ ಮಾಡೋಕೆ ಆಗೋದಿಲ್ಲ. ಹೀಗಾಗಿ ಅತೀ ತುರ್ತುಲ್ಲದ ಶಸ್ತ್ರಚಿಕಿತ್ಸೆಯನ್ನ ಮೂರು ದಿನದಿಂದ ಬಂದ್ ಮಾಡಿದ್ದೇವೆ. ರೋಗಿಗಳಿಗೆ ನೀರಿನ ಸಮಸ್ಯೆ ಆಗಿದ್ದರಿಂದ ಡ್ರಮ್​ಗಳಲ್ಲಿ ನೀರು ತುಂಬಿಸಿಟ್ಟಿದ್ದೆವೆ ಎನ್ನುತ್ತಾರೆ.

ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದ್ದಿಷ್ಟು 

ಘಟನೆ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಪ್ರತಿಕ್ರಿಯಿಸಿದ್ದು, ನಾನು ಈಗಾಗಲೇ ಆಸ್ಪತ್ರೆಯ ನಿರ್ದೇಶಕರೊಂದಿಗೆ ಮಾತನಾಡಿದ್ದೆನೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೆವೆ ಎಂದಿದ್ದಾರೆ.

ಹೃದ್ರೋಗ ಸಮಸ್ಯೆ ಅಂತ ಆಸ್ಪತ್ರೆಗೆ ಬರೋ ರೋಗಿಗಳಿಗೆ ಈ ಸುದ್ದಿ ಕೇಳಿದ್ರೆ ನಿಜಕ್ಕೂ ನಿಂತಲ್ಲಿಯೇ ಎದೆಬಡಿತ ಜಾಸ್ತಿಯಾಗತ್ತೆ. ನೀರಿಲ್ಲ ಅಂತ ಶಸ್ತ್ರಚಿಕಿತ್ಸೆಯನ್ನೆ ಬಂದ್ ಮಾಡಿರೋದು ನಿಜಕ್ಕೂ ನಾಚಿಕೆಯ ಸಂಗತಿ. ಇನ್ಮೇಲಾದ್ರು ಸಚಿವರು ಮುಂದೆ ಯಾವುದಾದ್ರು ಅನಾಹುತ ಸಂಭವಿಸುವ ಮುಂಚೆಯೇ ಎಚ್ಚೆತ್ತುಕೊಂಡ್ರೆ ಒಳ್ಳೆಯದು‌‌.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು
ಶ್ರೀಗಳು ಹೇಳಿದ ಮಾತ್ರಕ್ಕೆ ಸಿಎಂ ಬದಲಾವಣೆ ಆಗಲ್ಲ: ಶಾಮನೂರು ಶಿವಶಂಕರಪ್ಪ
ಶ್ರೀಗಳು ಹೇಳಿದ ಮಾತ್ರಕ್ಕೆ ಸಿಎಂ ಬದಲಾವಣೆ ಆಗಲ್ಲ: ಶಾಮನೂರು ಶಿವಶಂಕರಪ್ಪ
‘ಸೂಪರ್​ ಆಗಿದೆ’: ಬೆಂಗಳೂರಲ್ಲಿ ‘ಕಲ್ಕಿ 2898 ಎಡಿ’ ನೋಡಿ ಕನ್ನಡಿಗರು ಖುಷ್
‘ಸೂಪರ್​ ಆಗಿದೆ’: ಬೆಂಗಳೂರಲ್ಲಿ ‘ಕಲ್ಕಿ 2898 ಎಡಿ’ ನೋಡಿ ಕನ್ನಡಿಗರು ಖುಷ್
ಮಂಗಳೂರು: ಜಲದಿಗ್ಭಂದನಕ್ಕೊಳಗಾದ ಮನೆ, ಮನೆಯಲ್ಲಿ ಒಂಟಿ ಮಹಿಳೆ ವಾಸ!
ಮಂಗಳೂರು: ಜಲದಿಗ್ಭಂದನಕ್ಕೊಳಗಾದ ಮನೆ, ಮನೆಯಲ್ಲಿ ಒಂಟಿ ಮಹಿಳೆ ವಾಸ!
ಸಿದ್ದರಾಮಯ್ಯ ಕರೆದಿರುವ ಸಭೆಗೆ ಹೋಗ್ತೀರಾ ಅಂದಾಗ ಕುಮಾರಸ್ವಾಮಿ ಉಡಾಫೆ ಉತ್ತರ
ಸಿದ್ದರಾಮಯ್ಯ ಕರೆದಿರುವ ಸಭೆಗೆ ಹೋಗ್ತೀರಾ ಅಂದಾಗ ಕುಮಾರಸ್ವಾಮಿ ಉಡಾಫೆ ಉತ್ತರ