ಕಾರ್ಮಿಕ ಇಲಾಖೆಯ 101 ಲ್ಯಾಪ್ ಟಾಪ್ ಕಳ್ಳತನ ಪ್ರಕರಣ; 26 ಮಂದಿ ಅರೆಸ್ಟ್​

ಹುಬ್ಬಳ್ಳಿಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿತರಿಸಲು ತಂದಿದ್ದ 101 ಲ್ಯಾಪ್‌ಟಾಪ್​ಗಳು ಕಾರ್ಮಿಕ ಇಲಾಖೆ ಕಚೇರಿಯಿಂದಲೇ ಕಳ್ಳತನ ಆಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಕುರಿತು ತನಿಖೆ ಕೈಗೊಂಡಿದ್ದ ಹಳೇ ಹುಬ್ಬಳ್ಳಿ ಪೊಲೀಸರು ಇಬ್ಬರು ಎಸ್​ಡಿಎ ಸೇರಿದಂತೆ 26 ಜನರನ್ನು ಬಂಧಿಸಿದ್ದಾರೆ.

ಕಾರ್ಮಿಕ ಇಲಾಖೆಯ 101 ಲ್ಯಾಪ್ ಟಾಪ್ ಕಳ್ಳತನ ಪ್ರಕರಣ; 26 ಮಂದಿ ಅರೆಸ್ಟ್​
ಕಾರ್ಮಿಕ ಇಲಾಖೆಯ 101 ಲ್ಯಾಪ್ ಟಾಪ್ ಕಳ್ಳತನ ಪ್ರಕರಣ; 26 ಮಂದಿ ಅರೆಸ್ಟ್​
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 28, 2024 | 6:13 PM

ಹುಬ್ಬಳ್ಳಿ, ಸೆ.28: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿತರಿಸಲು ತಂದಿದ್ದ 101 ಲ್ಯಾಪ್‌ಟಾಪ್​ಗಳು (laptops) ಕಾರ್ಮಿಕ ಇಲಾಖೆ ಕಚೇರಿಯಿಂದಲೇ ಕಳ್ಳತನ ಆಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಇದಕ್ಕೆ ಕಿಡಿಕಾರಿದ್ದ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಫೆಡರೇಶನ್, ‘ಕಾರ್ಮಿಕ ಇಲಾಖೆಯ ಅಧಿಕಾರಿಗಳ ಅಪ್ರಾಮಾಣಿಕತೆ ಮತ್ತು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಆರೋಪಿಸಿತ್ತು. ಇದೀಗ ಘಟನೆಗೆ ಸಂಬಂಧಪಟ್ಟಂತೆ 26 ಜನ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜೊತೆಗೆ ಕಳ್ಳತನವಾಗಿದ್ದ ಲ್ಯಾಪ್ ಟಾಪ್​ಗಳನ್ನು ಹಳೇ ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ‘ಕಾರ್ಮಿಕರ ಮಕ್ಕಳಿಗಾಗಿ ಇದ್ದ 101 ಲ್ಯಾಪ್ ಟಾಪ್ ಕಳುವಾಗಿದ್ದವು. ಈ ಬಗ್ಗೆ ಕಾರ್ಮಿಕ ಇಲಾಖೆ ಅಸಿಸ್ಟೆಂಟ್ ಕಮಿಷ್​ನರ್ ದೂರು ನೀಡಿದ್ದರು. ಈ ಹಿನ್ನಲೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುರೇಶ ಹುಳ್ಳೂರ ತಂಡ ರಚಿಸಲಾಗಿತ್ತು. ಸೆಪ್ಟೆಂಬರ್​ನಲ್ಲಿ ಬೆಳಗಾವಿಯಿಂದ ತಂದು ಕಾರ್ಮಿಕ ಇಲಾಖೆಯಲ್ಲಿ ಇಡಲಾಗಿದ್ದು, ಆಗಸ್ಟ್​ನಲ್ಲಿ ಪರಿಶೀಲನೆ ಮಾಡಿದಾಗ ಅವು ಕಳುವಾಗಿದ್ದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಐಷಾರಾಮಿ ಜೀವನಕ್ಕಾಗಿ ಕಳ್ಳತನದ ಹಾದಿ ಹಿಡಿದ ಕೇಂದ್ರ ಸರ್ಕಾರದ ಉದ್ಯೋಗಿ

ಇವು ಹಾವೇರಿ ಜಿಲ್ಲೆಯ ಕೂಲಿ ಕಾರ್ಮಿಕರಿಗೆ ನೀಡುವಂತ ಸುಮಾರು 55 ಲಕ್ಷ ಮೌಲ್ಯದ ಹೆಚ್ ಪಿ ಕಂಪನಿಯ ಲ್ಯಾಪ್ ಟಾಪ್​ಗಳಾಗಿದ್ದವು. ತನಿಖೆ ಕೈಗೊಂಡು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದಾಗ ಅಲ್ಲೇ ಕೆಲಸ ಮಾಡುವ ದೀಪಕ್ ಮತ್ತು ಕೃಷ್ಣ ಎಂಬುವವರು ಕಳ್ಳತನ ಮಾಡಿರುವುದು ಗೊತ್ತಾಗಿದೆ. ಇಲಾಖೆಯಲ್ಲಿ ಮತ್ಯಾರಾದರೂ ಸಹಾಯ ಮಾಡಿರುವ ಬಗ್ಗೆ ತನಿಖೆ ಮಾಡಿದ್ದೇವೆ. ಇಬ್ಬರು ಎಸ್​ಡಿಎ ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ 4 ಸಿಬ್ಬಂದಿಗಳು ಕೃತ್ಯ ಮಾಡಿದ್ದರು.

6 ತಿಂಗಳಲ್ಲಿ 101 ಲ್ಯಾಪ್ ಟಾಪ್​ ಕಳ್ಳತನ

ಇನ್ನು ಇವರು 101 ಲ್ಯಾಪ್ ಟಾಪ್​ಗಳನ್ನ 6 ತಿಂಗಳು ಕಾಲದಲ್ಲಿ ಕಿಟಕಿಯಿಂದ ಇಳಿದು ಕದ್ದಿದ್ದಾರೆ. ಇಲಾಖೆಯಿಂದ ಮಾರಾಟ ಮಾಡೋಕೆ ಹೇಳಿದ್ದಾರೆ ಎಂದು ಮೊದಲಿಗೆ 4 ಲ್ಯಾಪ್ ಟಾಪ್ ಗಳನ್ನು ಮಾರಾಟ ಮಾಡಿದ್ದಾರೆ. ಇನ್ನುಳಿದ ಸುಮಾರು 16 ಜನ ಲ್ಯಾಪ್ ಟಾಪ್ ಕಳ್ಳತನಕ್ಕೆ ಪ್ರೇರಣೆ ಹಿನ್ನೆಲೆ ವಶಕ್ಕೆ ಪಡೆದಿದ್ದೇವೆ. ತನಿಖೆಯಲ್ಲಿ 6 ಜನ ಇಲಾಖೆ ಸಿಬ್ಬಂದಿ ಸೇರಿ ಒಟ್ಟು 26 ಜನರನ್ನ ಬಂಧಿಸಲಾಗಿದೆ. 83 ಲ್ಯಾಪ್ ಟಾಪ್, ಎರಡು ಆಟೋ, ಎರಡು ಬೈಕ್ ಹಾಗೂ ಒಂದು ಕಾರನ್ನ ವಶಕ್ಕೆ ಪಡೆದಿದ್ದೇವೆ. ಹಿರಿಯ ಅಧಿಕಾರಿಗಳ ಕೈವಾಡ ಈ ಕೃತ್ಯದಲ್ಲಿ ಕಂಡು ಬಂದಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ