ಪತ್ನಿಯನ್ನು ಜತೆ ಕಳುಹಿಸದ್ದಕ್ಕೆ ಮಾವನ ಕತ್ತು ಸೀಳಿದ ಅಳಿಯ; ಅಡ್ಡ ಬಂದ ಬಾಮೈದನ ಮೇಲೂ ದಾಳಿ
ತಂದೆಯ ಜೀವ ಉಳಿಸಲು ಬಂದ ಮಗ ಪ್ರವಿಣ್ ದಳವಾಯಿಯ ಕುತ್ತಿಗೆಗೂ ಅಳಿಯ ಬ್ಲೇಡ್ನಿಂದ ದಾಳಿ ಮಾಡಿದ್ದಾನೆ. ಸದ್ಯ ಈ ಪ್ರಕರಣ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಹುಬ್ಬಳ್ಳಿ: ಪತ್ನಿಯನ್ನು ತನ್ನ ಜೊತೆ ಕಳುಹಿಸಲು ನಿರಾಕರಿಸಿದ ಮಾವ ಮತ್ತು ಬಾಮೈದನ ಮೇಲೆ ಅಳಿಯ ಹಲ್ಲೆ ಮಾಡಿದ್ದಾನೆ. ಈ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ನಡೆದಿದೆ. ಜಗದೀಶ್ ಕಂಬಳಿ ಎಂಬಾತನ ಜೊತೆ ಶಿವಪ್ಪ ದಳವಾಯಿ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ್ದ. ಆದರೆ ಕೆಲವು ದಿನಗಳಿಂದ ಕೌಟುಂಬಿಕ ಸಮಸ್ಯೆಯ ಹಿನ್ನೆಲೆ ತವರು ಮನೆ ಹಳ್ಳಿಕೇರಿಯಲ್ಲಿ ಮಗಳು ಉಳಿದುಕೊಂಡಿದ್ದಳು. ತನ್ನ ಪತ್ನಿಯನ್ನ ಕರೆದುಕೊಂಡು ಹೋಗಲು ಜಗದೀಶ್ ಕಂಬಳಿ ಗ್ರಾಮಕ್ಕೆ ಬಂದಿದ್ದ. ಆದರೆ ಮಗಳನ್ನು ಕಳುಹಿಸಲು ಶಿವಪ್ಪ ನಿರಾಕರಿಸುತ್ತಾನೆ ಈ ವೇಳೆ ಮಾತಿಗೆ ಮಾತು ಬೆಳೆದು ಕೋಪದಿಂದ ಅಳಿಯ ಮಾವನ ಕತ್ತು ಸೀಳಿದ್ದಾನೆ.
ತಂದೆಯ ಜೀವ ಉಳಿಸಲು ಬಂದ ಮಗ ಪ್ರವಿಣ್ ದಳವಾಯಿಯ ಕುತ್ತಿಗೆಗೂ ಅಳಿಯ ಬ್ಲೇಡ್ನಿಂದ ದಾಳಿ ಮಾಡಿದ್ದಾನೆ. ಸದ್ಯ ಈ ಪ್ರಕರಣ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮಾರಕಾಸ್ತ್ರದಿಂದ ಕೊಚ್ಚಿ ಪತ್ನಿ ಹತ್ಯೆ ಮಂಗಳೂರು: ಕುಡಿದ ಅಮಲಿನಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ತಾಲೂಕಿನ ಧರೆಗುಡ್ಡೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಠ ಎಂಬಲ್ಲಿ ಸಂಭವಿಸಿದೆ. ದಿನ್ರಾಜ್ ಎಂಬಾತ ತನ್ನ ಪತ್ನಿ ಸುನಿತಾಳನ್ನು ಕೊಚ್ಚಿ ಕೊಲೆಗೈದಿದ್ದಾನೆ. ತಲೆಗೆ ಪೆಟ್ಟಾಗಿದ್ದರಿಂದ ಅಧಿಕ ರಕ್ತಸ್ರಾವವಾಗಿ ಸುನಿತಾ ಸಾವನ್ನಪ್ಪಿದ್ದಾಳೆ. ಈ ಪ್ರಕರಣ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿ ದಿನ್ರಾಕ್ ಬಂಧಿಸಿದ್ದಾರೆ.
ಅಪರಿಚಿತ ವ್ಯಕ್ತಿ ಸಾವು ಮೈಸೂರು: ಜಿಲ್ಲೆ ಹುಣಸೂರು ಟೌನ್ ಬಳಿಯ ಲಕ್ಷ್ಮಣ ತೀರ್ಥ ನದಿಗೆ ಬಿದ್ದು ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾನೆ. ಪೊಲೀಸ್ ಸಿಬ್ಬಂದಿ ನದಿಯಿಂದ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ. ಮೃತರ ಗುರುತು ಪತ್ತೆಗೆ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ
ವಯಸ್ಸಿಗೂ ಮೀರಿದ ಪ್ರತಿಭೆ; ಪುಟ್ಟ ಬಾಲಕಿಯ ಜಿಮ್ನಾಸ್ಟಿಕ್ ವಿಡಿಯೋ ವೈರಲ್
ಮಗನ ಸಾವಿನ ಆಘಾತದಲ್ಲಿದ್ದ ತಾಯಿ ವಿಜಯನಗರದಲ್ಲಿ ನಡೆದ ಅಪಘಾತದಲ್ಲಿ ಕೊನೆಯುಸಿರು
(A Man sliced on his father in law at Hubli)