ಧಾರವಾಡ ಕೃಷಿ ಮೇಳ: ಸಿಎಂ ಸಿದ್ದರಾಮಯ್ಯರನ್ನೂ ಬಿಡದೆ ಆಕರ್ಷಿಸಿದ ವಿಸ್ಮಯಕಾರಿ ಕೀಟ ಪ್ರಪಂಚ

ಮಾನವನೇ ಕೀಟ ಲೋಕದ ಅತಿಥಿ. ಮಾನವನನ್ನು ಮೊದಲು ಈ ಭೂಮಿಗೆ ಸ್ವಾಗತಿದ್ದು ಕೀಟಗಳೇ. ಹೀಗಾಗಿ ವೈಜ್ಞಾನಿಕ ಲೋಕದಲ್ಲಿ ಕೀಟಗಳಿಗೆ ಅದರದ್ದೇ ಆದ ಸ್ಥಾನವಿದೆ. ಇಂಥ ಕೀಟಗಳ ಜಗತ್ತನ್ನು ತೋರಿಸಲು ಧಾರವಾಡದ ಕೃಷಿ ಮೇಳದಲ್ಲಿ ವಿಸ್ಮಯಕಾರಿ ಕೀಟ ಪ್ರಪಂಚ ಪ್ರದರ್ಶನ ಮಾಡಲಾಗುತ್ತಿದೆ.

ಧಾರವಾಡ ಕೃಷಿ ಮೇಳ: ಸಿಎಂ ಸಿದ್ದರಾಮಯ್ಯರನ್ನೂ ಬಿಡದೆ ಆಕರ್ಷಿಸಿದ ವಿಸ್ಮಯಕಾರಿ ಕೀಟ ಪ್ರಪಂಚ
ಧಾರವಾಡ ಕೃಷಿ ಮೇಳದಲ್ಲಿ ಕೀಟ ಪ್ರಪಂಚ ಪ್ರದರ್ಶನ ಮತ್ತು ಕೀಟಗಳ ಆಹಾರ ಪದಾರ್ಧ
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: Rakesh Nayak Manchi

Updated on:Sep 11, 2023 | 12:08 PM

ಮಾನವನಿಗೂ 200 ದಶಲಕ್ಷ ವರ್ಷ ಮುಂಚೆಯೇ ಕೀಟಗಳು ಈ ಭೂಮಿಯ ಮೇಲೆ ಜನಿಸಿವೆ. ಮಾನವನೇ ಕೀಟ ಲೋಕದ ಅತಿಥಿ. ಮಾನವನನ್ನು ಮೊದಲು ಈ ಭೂಮಿಗೆ ಸ್ವಾಗತಿದ್ದು ಕೀಟಗಳೇ. ಹೀಗಾಗಿ ವೈಜ್ಞಾನಿಕ ಲೋಕದಲ್ಲಿ ಕೀಟಗಳಿಗೆ ಅದರದ್ದೇ ಆದ ಸ್ಥಾನವಿದೆ. ಇಂಥ ಕೀಟಗಳ ಜಗತ್ತನ್ನು ತೋರಿಸಲು ಧಾರವಾಡದ ಕೃಷಿ ಮೇಳದಲ್ಲಿ (Dharwad Agriculture Fair) ‘ವಿಸ್ಮಯಕಾರಿ ಕೀಟ ಪ್ರಪಂಚ’ ಪ್ರದರ್ಶನ (Insect exhibition) ಏರ್ಪಡಿಸಲಾಗಿದೆ.

ಸೆ. 9 ರಿಂದ ನಾಲ್ಕು ದಿನಗಳ ಕಾಲ ನಡೆಯುತ್ತಿರುತ್ತಿರುವ ಈ ಮೇಳದಲ್ಲಿ ಅನೇಕ ಬಗೆಯ ಪ್ರದರ್ಶನಗಳಿವೆಯಾದರೂ ಈ ಕೀಟ ಪ್ರಪಂಚದ ಪ್ರದರ್ಶನವೇ ಒಂದು ಹೊಸ ಬಗೆಯದ್ದು. ಕಳೆದ ವರ್ಷ ಈ ಹೊಸ ಪ್ರಯೋಗವನ್ನು ಮಾಡಿದಾಗ ಜನರ ಸ್ಪಂದನೆ ನೋಡಿ ಈ ಬಾರಿ ಅದಕ್ಕೆ ಮತ್ತೊಂದಿಷ್ಟು ಸೇರ್ಪಡೆ ಮಾಡಿ, ಹೊಸ ಬಗೆಯ ಕೀಟ ಪ್ರಪಂಚದ ಪ್ರದರ್ಶನ ಆಯೋಜಿಸಲಾಗಿದೆ. ಮಕ್ಕಳು ಸೇರಿದಂತೆ ಎಲ್ಲರನ್ನೂ ಆಕರ್ಷಿಸುತ್ತಿರೋ ಈ ಪ್ರದರ್ಶನ, ಈ ಬಾರಿ ಕೃಷಿ ಮೇಳದ ಹೈಲೈಟ್ ಅಂದರೆ ತಪ್ಪಾಗಲಾರದು.

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಹತ್ತಾರು ವರ್ಷಗಳಿಂದ ಕೃಷಿ ಮೇಳ ನಡೆಯುತ್ತಿದೆ. ರೈತರು ಹಾಗೂ ಸಾಮಾನ್ಯ ಜನರನ್ನು ಆಕರ್ಷಿಸುವ ಹತ್ತಾರು ಸಂಗತಿಗಳನ್ನು ಮೇಳದಲ್ಲಿ ಇಲ್ಲಿಯವರೆಗೂ ಗುರುತಿಸಲಾಗಿದೆ. ಅಂಥವುಗಳ ಪೈಕಿ ಕಳೆದ ವರ್ಷದಿಂದ ಸೇರ್ಪಡೆಯಾಗಿದ್ದೇ ಈ ಕೀಟ ಪ್ರಪಂಚ ಪ್ರದರ್ಶನ. ಅಷ್ಟೇ ಅಲ್ಲದೆ, ಕೀಟಗಳ ಆಹಾರ ಪದಾರ್ಥಗಳು ಸಿಎಂ ಸಿದ್ದರಾಮಯ್ಯ ಅವರನ್ನು ಆಕರ್ಷಿಸಿದೆ.

ಇದನ್ನೂ ಓದಿ: ಬಣ್ಣ ಬಣ್ಣದ ಹೂವಿನ ಲೋಕ ಸೃಷ್ಠಿಸಿದ ಧಾರವಾಡದ ಕೃಷಿ ಮೇಳ; ಇಲ್ಲಿದೆ ಫೋಟೋಸ್​

ಧಾರವಾಡ, ಸೆ.11: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಹತ್ತಾರು ವರ್ಷಗಳಿಂದ ಕೃಷಿ ಮೇಳ ನಡೆಯುತ್ತಿದೆ. ರೈತರು ಹಾಗೂ ಸಾಮಾನ್ಯ ಜನರನ್ನು ಆಕರ್ಷಿಸುವ ಹತ್ತಾರು ಸಂಗತಿಗಳನ್ನು ಮೇಳದಲ್ಲಿ ಇಲ್ಲಿಯವರೆಗೂ ಗುರುತಿಸಲಾಗಿದೆ. ಅಂಥವುಗಳ ಪೈಕಿ ಕಳೆದ ವರ್ಷದಿಂದ ಸೇರ್ಪಡೆಯಾಗಿದ್ದೇ ಈ ಕೀಟ ಪ್ರಪಂಚ ಪ್ರದರ್ಶನ. ಅಷ್ಟೇ ಅಲ್ಲದೆ, ಕೀಟಗಳ ಆಹಾರ ಪದಾರ್ಥಗಳು ಸಿಎಂ ಸಿದ್ದರಾಮಯ್ಯ ಅವರನ್ನು ಆಕರ್ಷಿಸಿದೆ.

ನಿತ್ಯವೂ ನಾವು ಅನೇಕ ಬಗೆಯ ಕೀಟಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಅವುಗಳ ಜೀವನ ಕ್ರಮ, ಆಹಾರ ಪದ್ಧತಿ, ಸಂತಾನೋತ್ಪತ್ತಿಯಂಥ ವಿಚಾರಗಳ ಬಗ್ಗೆ ಅರಿವು ತುಂಬಾನೇ ಕಡಿಮೆ. ಇನ್ನು ಚಿಟ್ಟೆಯಂಥ ಅನೇಕ ಕೀಟಗಳನ್ನು ನೋಡಿದಾಗ ಅಚ್ಚರಿ ಜೊತೆಗೆ ಕಣ್ಣಿಗೆ ಖುಷಿಯೂ ಆಗುತ್ತದೆ. ಇಂಥ ನೂರಾಟು ಕೀಟಗಳನ್ನು ಅವುಗಳ ಬಗೆಗಿನ ಮಾಹಿತಿ ಜೊತೆಗೆ ಒಂದೇ ಸೂರಿನಡಿ ಇಟ್ಟಾಗ ಅದೆಂಥ ಲೋಕ ಅನಾವರಣಗೊಳ್ಳಬಹುದು ಅನ್ನೋದಕ್ಕೆ ಕೃಷಿ ಮೇಳದಲ್ಲಿನ ಕೀಟ ಪ್ರಪಂಚ ಪ್ರದರ್ಶನವೇ ಸಾಕ್ಷಿಯಾಗಿದೆ.

ಹತ್ತಾರು, ಸಾವಿರಾರು ಕೀಟಗಳ ಬಗ್ಗೆ ಕುತೂಹಲಕಾರಿ, ಅಪೂರ್ವ ಸಂಗತಿಗಳನ್ನು ಒಳಗೊಂಡು ಅವುಗಳ ಜೀವಶಾಸ್ತ್ರ, ಸಂತೋನೋತ್ಪತ್ತಿ ಹಾಗೂ ಮಾನವನ ಜೊತೆಗಿನ ಸಂಬಂಧವನ್ನು ವಿಶಿಷ್ಠವಾಗಿ, ವಿಭಿನ್ನವಾಗಿ ಹಾಗೂ ಜನಾಕರ್ಷಣೆಯಾಗಿ ಕೃಷಿ ವಿವಿ ಕೀಟಶಾಸ್ತ್ರ ವಿಭಾಗದ ವತಿಯಿಂದ ಈ ಪ್ರದರ್ಶನದಲ್ಲಿ ತೋರಿಸಲಾಗಿದೆ.

ಸಾಮಾನ್ಯವಾಗಿ ನಾವು ನಿತ್ಯ ನೋಡುವ, ಗಮನಿಸುವ ಚಿಟ್ಟೆ, ದುಂಬಿ, ಜೇಣುನೊಣ, ಇರುವೆ, ಮಿಡತೆ, ಕುಂಬಾರ ಹುಳು, ಜಿರಳೆ, ಶಿವನ ಕುದುರೆ, ರೇಷ್ಮೆಯಂತಹ ಹಲವು ಕೀಟಗಳನ್ನು ಬಳಸಿಕೊಂಡು ರೈತರ ಜ್ಞಾನಾಭಿವೃದ್ಧಿ ಕೇಂದ್ರದ ಕಟ್ಟಡದಲ್ಲಿ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಪ್ರದರ್ಶನದಲ್ಲಿ ಕೀಟ ಪ್ರಪಂಚದ ಹತ್ತಾರು ಮಾದರಿಗಳು ಜನರನ್ನು ತೀವ್ರವಾಗಿ ಸೆಳೆಯುತ್ತಿವೆ. ಮಕ್ಕಳಂತೂ ಖುಷಿ ಹಾಗೂ ಅಚ್ಚರಿಯಿಂದ ಕೀಟಗಳನ್ನು ವೀಕ್ಷಿಸಿ, ಮಾಹಿತಿ ಪಡೆಯುತ್ತಿದ್ದಾರೆ.

ಆಕರ್ಷಣೆಯ ಕೇಂದ್ರ ಬಿಂದು ‘ಚಿಟ್ಟೆಸ್ವಾಮಿ ಕ್ರೀಡಾಂಗಣ’

ಈ ಬಾರಿಯ ಕೀಟ ಪ್ರದರ್ಶನದಲ್ಲಿ ಅತಿ ಹೆಚ್ಚು ಗಮನ ಸೆಳೆಯುತ್ತಿರೋದು ‘ಚಿಟ್ಟೆಸ್ವಾಮಿ ಕ್ರೀಡಾಂಗಣ’. ಎಲ್ಲರಿಗೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಗೊತ್ತು. ಆದರೆ ಅದೇ ಮಾದರಿಯಲ್ಲಿ ಕೀಟಗಳನ್ನು ಬಳಸಿಕೊಂಡು ‘ಚಿಟ್ಟೆಸ್ವಾಮಿ ಕ್ರೀಡಾಂಗಣ’ ತಯಾರಿಸಲಾಗಿದೆ. ಅನೇಕ ಜಾತಿಯ ಕೀಟಗಳನ್ನು ಬಳಸಿಕೊಂಡು ಈ ಹೆಸರಿನಲ್ಲಿ ಕೀಟ ಕ್ರೀಡಾಂಗಣವನ್ನು ಕೀಟಶಾಸ್ತ್ರ ವಿಭಾಗದ ಎಂಎಸ್ಸಿ ವಿದ್ಯಾರ್ಥಿಗಳಾದ ನವೀನ್, ಕೃತಿಕಾ ಸಿದ್ಧಪಡಿಸಿದ್ದಾರೆ.

ಕ್ರೀಡಾಂಗಣದ ಮಾದರಿಯಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಶಿವನ ಕುದುರೆ, ಬೌಲಿಂಗ್ ಮಾಡುತ್ತಿರೋ ಕುಂಬಾರ ಹುಳು, ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿರೋ ದೊಂಬಿ ಹುಳು, ಪ್ರೇಕ್ಷಕರಾಗಿ ಸ್ಟೇಡಿಯಂನಲ್ಲಿ ಕುಳಿತಿರೋ ವಿವಿಧ ಕೀಟಗಳು ಜನರಿಗೆ ಅಚ್ಚರಿ ಮೂಡಿಸುತ್ತಿವೆ. ಇನ್ನು ಇದರ ಪಕ್ಕದಲ್ಲಿಯೇ ಪಿಎಚ್​ಡಿ ವಿದ್ಯಾರ್ಥಿಗಳಾದ ಮಂದಾರ, ರತ್ನಕಲಾ ಅವರ ಕೀಟ ಸರ್ಕಸ್ ಮಾದರಿಯು ಗಮನ ಸೆಳೆಯುತ್ತಿದೆ.

ಇನ್ನು ಕೆಲ ವಿದ್ಯಾರ್ಥಿಗಳು ಕೀಟ ವೃಕ್ಷ ಸಹ ಮಾಡಿದ್ದು, ಅದರಲ್ಲಿ ಜೋಕಾಲಿಯತಾಗುತ್ತಿರೋ ಕೀಟಗಳು ಜನರನ್ನು ಆಕರ್ಷಿಸುತ್ತಿವೆ. ಇದರೊಂದಿಗೆ ಜನುವಾರುಗಳಿಗೆ ಹರಡುವ ರೋಗಗಳಿಗೆ ಕಾರಣವಾಗುವ ಕೀಟಗಳು ಯಾವವು? ಮನುಷ್ಯರಿಗೆ ಯಾವ ಕೀಟಗಳಿಂದ ರೋಗ ಬರುತ್ತದೆ ಎಂಬದರ ಬಗ್ಗೆ ಮಾಹಿತಿ, ಜೇನು ನೊಣಗಳ ಪ್ರಯೋಜನ ಹಾಗೂ ಕಪ್ಪು ಸೈನಿಕ ಕೀಟದಿಂದ ಕಸದಿಂದ ಗೊಬ್ಬರ ತಯಾರಿಸುವ ಮಾಹಿತಿಯನ್ನೂ ನೀಡಲಾಗುತ್ತಿದೆ. ಇನ್ನು ವಿವಿಧ ಬಗೆಯ ಕೀಟಗಳಿಂದ ಆಭರಣಗಳನ್ನು ಕೂಡ ತಯಾರಿಸಲಾಗಿದೆ. ಬಣ್ಣ ಬಣ್ಣದ ಕೀಟಗಳಿಂದ ನಕ್ಲೇಸ್, ಸರ, ಕಿವಿಯೋಲೆ ಸೇರಿದಂತೆ ಅನೇಕ ಬಗೆಯ ಆಭರಣಗಳನ್ನು ತಯಾರಿಸಲಾಗಿದೆ.

ಸಿಎಂ ಸಿದ್ದರಾಮಯ್ಯರನ್ನು ಆಕರ್ಷಿಸಿದ ಕೀಟಗಳ ಆಹಾರ ಪದಾರ್ಥ

ಮುಂಬರುವ ದಿನಗಳಲ್ಲಿ ಕೀಟ ಪ್ರಪಂಚವೇ ಮಾನವನಿಗೆ ಆಹಾರವಾಗುವ ಸಾಧ್ಯತೆ ಇದೆ. ಅತ್ಯಂತ ಹೆಚ್ಚು ಪ್ರೋಟಿನ್ ಹೊಂದಿರುವ ಕೀಟಗಳನ್ನು ಮನುಷ್ಯ ಪ್ರಮುಖ ಆಹಾರವನ್ನಾಗಿ ಈಗಾಗಲೇ ಅನೇಕ ದೇಶಗಳಲ್ಲಿ ಬಳಸುತ್ತಿದ್ದಾನೆ. ಬದಲಾಗುತ್ತಿರೋ ಆಹಾರ ಪದ್ಧತಿ ಹಿನ್ನೆಲೆಯಲ್ಲಿ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಜೀವಂತ ಹಾಗೂ ಅಜೀವ ಕೀಟಗಳನ್ನು ಬಳಸಿ ಹಲವು ಆಹಾರ ಪದಾರ್ಥಗಳನ್ನು ತಯಾರಿಸಿ, ಪ್ರದರ್ಶನಕ್ಕೆ ಇಡಲಾಗಿದೆ.

ರೇಷ್ಮೆ ಹುಳುವಿನ ಡ್ರೈ ಚಿಲ್ಲಿ, ರೇಷ್ಮೆ ಹುಳುಗಳ ಸೂಪ್, ಕೆಂಪು ಇರುವೆಗಳ ಫ್ರೈ, ಮಿಡತೆ ಹಾಗೂ ಜಿರಳೆ ಡ್ರೈ, ಶಿವನ ಕುದುರೆಯ ತಂದೂರಿ ಹಾಗೂ ಕಪ್ಪು ಸೈನಿಕ ನೊಣದ ಮಸಾಲಾ ಒಂದು ಕ್ಷಣ ಮೈ ಜುಮ್ಮೆನ್ನಿಸುತ್ತವೆ. ಚೀನಾ, ಜಪಾನ್ ದೇಶಗಳಲ್ಲಿ ಜನರು ತಿನ್ನುವ ಹುಳುಗಳ ಆಹಾರವನ್ನು ಇಲ್ಲಿಯೂ ಪ್ರದರ್ಶಿಸಿದ್ದು ಅದ್ಭುತವಾಗಿತ್ತು. ಈ ಪ್ರದರ್ಶನದ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇನ್ನು ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶಶಿಕಾಂತ ಉಡಿಕೇರಿ, ಭೂಮಿ ಮೇಲೆ ಮಾನವ ಹುಟ್ಟುವುದಕ್ಕಿಂತ ಮುಂಚೆಯೇ ಸುಮಾರು 200 ದಶಲಕ್ಷ ವರ್ಷಗಳ ಮುಂಚೆಯೇ ಈ ಕೀಟಗಳು ಹುಟ್ಟಿವೆ. ಈ ಭೂಮಿಗೆ ಅವೇ ಮೊದಲ ಅಧಿಕಾರಸ್ಥ ಜೀವಿಗಳು. ಮಾನವನನ್ನು ಸ್ವಾಗತಿಸಿದ್ದು ಇದೇ ಕೀಟಗಳು. ಹೀಗಾಗಿ ಕೀಟಗಳ ಜಗತ್ತೇ ವಿಭಿನ್ನವಾಗಿದೆ ಎಂದರು.

ದಿನನಿತ್ಯ ನಾವು ಅನೇಕ ಕೀಟಗಳೊಂದಿಗೆ ಬದುಕುತ್ತಿದ್ದೇವಾದರೂ ಅವುಗಳ ಕುತೂಹಲಕಾರಿ ಜೀವನಶೈಲಿ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನರಿಗೆ ಈ ಕೀಟ ಪ್ರಪಂಚದ ಅರಿವು ಇರಲಿ ಅನ್ನೋ ಉದ್ದೇಶದಿಂದ ಈ ಪ್ರದರ್ಶನವನ್ನು ಕಳೆದ ವರ್ಷ ಆರಂಭಿಸಿದೆವು. ಜನರಿಂದ ತುಂಬಾನೇ ಒಳ್ಳೆಯ ಸ್ಪಂದನೆ ಬಂದಿದ್ದಕ್ಕೆ ಈ ಬಾರಿ ಮತ್ತೊಂದಿಷ್ಟು ಬಗೆಯ ಹೊಸತನಗಳೊಂದಿಗೆ ಪ್ರದರ್ಶನ ಆಯೋಜಿಸಿದ್ದೇವೆ ಎಂದರು.

ನಿತ್ಯವೂ ಸಾವಿರಾರು ಜನರು ಬಂದು ಇಲ್ಲಿನ ಬಗೆ ಬಗೆಯ ಕೀಟಗಳನ್ನು ನೋಡಿ ಅಚ್ಚರಿ ಪಡೋದಲ್ಲದೇ ಅವುಗಳ ಬಗ್ಗೆ ನಮ್ಮ ವಿದ್ಯಾರ್ಥಿಗಳ ಬಳಿ ಮಾಹಿತಿ ಪಡೆಯುತ್ತಿರೋದನ್ನು ನೋಡಿದರೆ ನಮ್ಮ ಈ ಶ್ರಮ ಸಾರ್ಥಕ ಅನ್ನಿಸುತ್ತಿದೆ. ಮುಂದಿನ ಕೃಷಿ ಮೇಳದಲ್ಲಿ ಇಂಥ ಮತ್ತೊಂದಿಷ್ಟು ಹೊಸ ಪ್ರಯೋಗಳನ್ನು ಮಾಡೋ ಮೂಲಕ ಈ ಪ್ರದರ್ಶನದವನ್ನು ಮತ್ತಷ್ಟು ಮೆರಗು ಪಡೆಯುವಂತೆ ಮಾಡುತ್ತೇವೆ ಎಂದರು.

ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಕೀಟಶಾಸ್ತ್ರ ವಿಭಾಗದ ಎಂಎಸ್​ಸಿ ವಿದ್ಯಾರ್ಥಿನಿ ಮಮತಾ, ಜನರಿಗೆ ಇಷ್ಟೊಂದು ಕುತೂಹಲವಿದೆಯಲ್ಲವೇ ಅಂತಾ ಅಚ್ಚರಿಯಾಗುತ್ತಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಕೀಟಗಳಿಗೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಅವರ ಪ್ರಶ್ನೆಗಳಿಗೆ ಉತ್ತರಿಸಿದಾಗ ಅವರೆಲ್ಲ ಅಚ್ಚರಿಯಿಂದ ನೋಡುತ್ತಾರೆ. ನಿತ್ಯ ತಮ್ಮೊಂದಿಗೆ ಇರೋ ಕೀಟಗಳು ಇಷ್ಟೊಂದು ವಿಭಿನ್ನವಾಗಿ ಬದುಕುತ್ತವೆ ಅನ್ನೋದು ಅವರಿಗೆ ಗೊತ್ತೇ ಇರೋದಿಲ್ಲ. ಹೀಗಾಗಿ ಕೀಟಗಳ ಜೀವನಕ್ರಮದ ಬಗ್ಗೆ ಹೇಳಿದಾಗ ಒಂದು ಕ್ಷಣ ಅಚ್ಚರಿಗೊಳ್ಳುತ್ತಾರೆ ಎಂದರು.

ಕೆಲವು ವಿದ್ಯಾರ್ಥಿಗಳಂತೂ ಪದೇ ಪದೇ ಬಂದು ಪ್ರಶ್ನೆ ಕೇಳುವುದನ್ನು ನೋಡಿದರೆ ಈ ಕೀಟ ಪ್ರಪಂಚ ಎಷ್ಟೊಂದು ಅದ್ಭುತ ಅನ್ನೋದು ಗೊತ್ತಾಗುತ್ತದೆ. ನಾವು ಕೂಡ ಈ ಪ್ರದರ್ಶನದ ಒಂದು ಭಾಗವಾಗಿರೋದ್ರಿಂದ ನಮಗೆ ಹೆಮ್ಮೆ ಅನ್ನಿಸುತ್ತಿದೆ. ಅಷ್ಟೇ ಅಲ್ಲ, ನಮ್ಮ ವಿಭಾಗದ ಎಲ್ಲರ ಶ್ರಮ ಸಾರ್ಥಕ ಎನಿಸುತ್ತದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:07 pm, Mon, 11 September 23

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು