ಭೈರಿದೇವರಕೊಪ್ಪದ ದರ್ಗಾ ತೆರವು ಕಾರ್ಯಾಚರಣೆ ಅಂತ್ಯ; ಧರ್ಮ ಗುರುಗಳ ಸಮ್ಮುಖದಲ್ಲಿ 3 ಗೋರಿಗಳ ಸ್ಥಳಾಂತರ

Bairidevarkoppa Dargah Demolition: ಯಂತ್ರಗಳ ಮೂಲಕ ಧರ್ಮ ಗುರುಗಳ ಸಮ್ಮುಖದಲ್ಲಿ 3 ಗೋರಿಗಳ ಸ್ಥಳಾಂತರ ಮಾಡಲಾಗಿದೆ. ಆದ್ರೆ ಇನ್ನೂ ದರ್ಗಾ ಸುತ್ತಮುತ್ತ ಪೊಲೀಸರು ಬ್ಯಾರಿಕೇಡ್ ತೆರವು ಮಾಡಿಲ್ಲ.

ಭೈರಿದೇವರಕೊಪ್ಪದ ದರ್ಗಾ ತೆರವು ಕಾರ್ಯಾಚರಣೆ ಅಂತ್ಯ; ಧರ್ಮ ಗುರುಗಳ ಸಮ್ಮುಖದಲ್ಲಿ 3 ಗೋರಿಗಳ ಸ್ಥಳಾಂತರ
ಭೈರಿದೇವರಕೊಪ್ಪದ ದರ್ಗಾ ತೆರವು
Follow us
TV9 Web
| Updated By: ಆಯೇಷಾ ಬಾನು

Updated on:Dec 22, 2022 | 9:02 AM

ಹುಬ್ಬಳ್ಳಿ: ಬಹು ವರ್ಷಗಳಿಂದ ವಿವಾದದ ಸುಳಿಯಲ್ಲಿದ್ದ ಹುಬ್ಬಳ್ಳಿ- ಧಾರವಾಡ ಬಿಆರ್‌ಟಿಎಸ್ ಯೋಜನಾ ವ್ಯಾಪ್ತಿಯಲ್ಲಿ ಬರುವ ಭೈರಿದೇವರಕೊಪ್ಪದ ಹಜರತ್ ಸೈಯ್ಯದ್ ಮಹಮುದ್ ಶಾ ಖಾದ್ರಿ ದರ್ಗಾ ತೆರವು ಕಾರ್ಯಾಚರಣೆ ಅಂತ್ಯಗೊಂಡಿದೆ. ಯಂತ್ರಗಳ ಮೂಲಕ ಧರ್ಮ ಗುರುಗಳ ಸಮ್ಮುಖದಲ್ಲಿ 3 ಗೋರಿಗಳ ಸ್ಥಳಾಂತರ ಮಾಡಲಾಗಿದೆ. ಆದ್ರೆ ಇನ್ನೂ ದರ್ಗಾ ಸುತ್ತಮುತ್ತ ಪೊಲೀಸರು ಬ್ಯಾರಿಕೇಡ್ ತೆರವು ಮಾಡಿಲ್ಲ. ದರ್ಗಾ ಕಡೆ ಸಾರ್ವಜನಿಕರು ಬಾರದಂತೆ ಎಚ್ಚರವಹಿಸಲಾಗಿದೆ. ಶತತ 48 ಗಂಟೆಗಳ ಬಳಿಕ ಶಾಂತಿಯುತವಾಗಿ ದರ್ಗಾ ತೆರವು ಕಾರ್ಯಾಚರಣೆ ಮುಗಿದಿದೆ.

ಘಟನೆ ಹಿನ್ನೆಲೆ

ನಿನ್ನೆ(ಡಿ.12) ಬೆಳ್ಳಂ ಬೆಳಗ್ಗೆ JCB ಮೂಲಕ ದರ್ಗಾವನ್ನು ತೆರವುಗೊಳಿಸುವ ಕಾರ್ಯಾಚರಣೆ ಶುರುವಾಗಿತ್ತು. ದರ್ಗಾ ತೆರವಿಗೆ ನಿನ್ನೆ ತಡರಾತ್ರಿಯಿಂದ ಎಚ್‌ಡಿ ಬಿಆರ್‌ಟಿಎಸ್‌ ಕಂಪನಿ ಹಾಗೂ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ವು. ಹುಬ್ಬಳ್ಳಿ-ಧಾರವಾಡ ಸೇರಿದಂತೆ ಐದಾರು ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಪೊಲೀಸರ ಸರ್ಪಗಾವಲಿನಲ್ಲಿ ದರ್ಗಾ ನೆಲಸಮಗೊಂಡಿತು. ಅತೀ ಸೂಕ್ಷ್ಮ ವಿಚಾರ ಆದ್ದರಿಂದ ತೆರವು ಕಾರ್ಯಾಚರಣೆಯನ್ನ ಗಂಭೀರವಾಗಿ ತೆಗೆದುಕೊಂಡ ಧಾರವಾಡ ಜಿಲ್ಲಾಡಳಿತ ಹಾಗೂ ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ಅವಳಿ ನಗರದಲ್ಲಿ ನಿಷೇಧಾಜ್ಞೆ ವಿಧಿಸಿತ್ತು. ಜನ ನಿದ್ದೆ ಮಂಪರಿನಿಂದ ಹೊರ ಬರುವಷ್ಟರಲ್ಲೇ ಸ್ಥಳವನ್ನ ತಮ್ಮ ಕಂಟ್ರೋಲ್ ಗೆ ತೆಗೆದುಕೊಂಡಿದ್ದ ಪೊಲೀಸರು, ಮುಸ್ಲಿಂ ನಾಯಕರ ಮತ್ತು ಸಮಯದಾಯದವರ ವಿರೋಧದ ಮಧ್ಯೆಯೂ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ರು. ಇನ್ನು, ಸರ್ಕಾರದ ಈ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ ಶಾಸಕ ಪ್ರಸಾದ ಅಬ್ಬಯ್ಯ, ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಭೈರಿದೇವರಕೊಪ್ಪ ದರ್ಗಾವು ಯೋಜನಾ ವ್ಯಾಪ್ತಿಗೆ ಬರುತ್ತೆ ಎಂದು ಬಿಆರ್‌ಟಿಎಸ್‌ನವರು ಭೂಸ್ವಾಧೀನ ಪ್ರಕ್ರಿಯೆ ಜರುಗಿಸಲು 2016ರಲ್ಲಿ ದರ್ಗಾ ಕಮಿಟಿಯವರಿಗೆ ನೋಟಿಸ್ ನೀಡಿತ್ತು. ಇದನ್ನು ಪ್ರಶ್ನಿಸಿ ದರ್ಗಾದವರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಈ ವ್ಯಾಜ್ಯ ಸ್ಥಳೀಯ ನ್ಯಾಯಾಲಯದಿಂದ ಹೈ ಕೋರ್ಟ್‌ವರೆಗೆ ಹೋಗಿತ್ತು. ಡಿ. 16ರಂದು ಹೈಕೋರ್ಟ್ ಉದ್ದೇಶಿತ ಸ್ಥಳವನ್ನು ಸ್ವಾಧೀನ ಪಡಿಸಿಕೊಳ್ಳುವಂತೆ ತೀರ್ಪು ನೀಡಿತ್ತು. ಬಿಆರ್‌ಟಿಎಸ್ ಮಾರ್ಗವು ಹುಬ್ಬಳ್ಳಿ ಮತ್ತು ಧಾರವಾಡ ನಗರ ವ್ಯಾಪ್ತಿಯಲ್ಲಿ 36 ಮೀಟರ್ ಅಗಲವಿದ್ದು, ಮಧ್ಯದಲ್ಲಿ 44 ಮೀಟರ್ ಅಗಲವಿದೆ. ಭೈರಿದೇವರಕೊಪ್ಪ ದರ್ಗಾವು 44 ಮೀಟರ್ ವ್ಯಾಪ್ತಿಯಲ್ಲಿ ಬರುತ್ತದೆ. ರಸ್ತೆ ಮಧ್ಯದಿಂದ ಎರಡೂ ಕಡೆ 22 ಮೀಟರ್ ಪ್ರದೇಶವು ಬಿಆರ್‌ಟಿಎಸ್ ಯೋಜನಾ ವ್ಯಾಪ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಭೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ನಡೆಸಲು ಅಗತ್ಯ ಸಹಕಾರ ನೀಡುವಂತೆ ಬಿಆರ್‌ಟಿಎಸ್‌ ಅಧಿಕಾರಿಗಳು ಕೋರಿದ್ದರು. ದರ್ಗಾ ಕಮಿಟಿಯವರೊಂದಿಗೂ ಮಾತುಕತೆ ನಡೆಸುದ್ರು. ಆದ್ರೂ ಕೆಲ ಮುಸ್ಲಿಂ ಮುಖಂಡರು, ದೇವಸ್ಥಾನ, ವಿಗೃಹಗಳನ್ನ ಬೇರೆಡೆ ಸ್ಥಳಾಂತರಿಸಬಹುದು. ಆದ್ರೆ ದರ್ಗಾದಲ್ಲಿನ ಧರ್ಮಗುರುಗಳ ಗೋರಿಯನ್ನ ಹೇಗೆ ಸ್ಥಳಾತರಿಸೋದು. ಸ್ವಲ್ಪ ಸಮಯ ನೀಡಿದ್ರೆ ವೈಜ್ಞಾನಿಕವಾಗಿ ಗೋರಿ ಸ್ಥಳಾಂತರ ಮಾಡಬಹುದಿತ್ತು ಅಂತ ಬೇಸರ ವ್ಯಕ್ತಪಡಿಸಿದ್ರು.

ಇದನ್ನೂ ಓದಿ: Bengaluru: ಕುಡುಕ ತಂದೆಯ ಹುಚ್ಚಾಟಕ್ಕೆ ಆಸ್ಪತ್ರೆ ಸೇರಿದ ಮಗ

ಇನ್ಮು ವಿವಾದಿತ ದರ್ಗಾ ತೆರವಿಗೆ ಬೆಳ್ಳಂ ಬೆಳಗ್ಗೆ ಜಿಲ್ಲಾಡಳಿತ ಮುಂದಾಗಿದ್ರೂ, ಗೋರಿ ತೆರವಿಗೂ ಮುನ್ನ ಮುಸ್ಲಿಂ ಧರ್ಮದ ವಿಧಿ ವಿಧಾನವನ್ನ ಪಾಲಿಸಲು ಐವರು ಮೌಲ್ವಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಇನ್ನು ದರ್ಗಾ ತೆರವು ಕಾರ್ಯಾಚರಣೆಗೂ ಹಲವು ವರ್ಷಗಳ ಮೊದಲೇ ಅದಕ್ಕೆ ಸೂಕ್ತ ಪರಿಹಾರದ ಮೊತ್ತ ಮತ್ತು ಜಾಗೆಯನ್ನ ಸರ್ಕಾರ ಈಗಾಗಲೇ ನೀಡಿದೆ.

ಬಿ.ಆರ್.ಟಿ.ಎಸ್ ಯೋಜನೆಯಲ್ಲಿ ಇನ್ನಷ್ಟು ಧಾರ್ಮಿಕ ಸ್ಥಳಗಳ ತೆರವು ಕಾರ್ಯಾಚರಣೆ ಕೈಗೊಳ್ಳುವುದು ಅವಶ್ಯವಿದ್ದು, ಅದನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ಹೆಗಡೆ ಹೇಳಿದ್ದಾರೆ. ದರ್ಗಾದ ಮೂರು ಗೋರಿಗಳನ್ನು ಎಥಾವತ್ತಾಗಿ ಹಿಂದಕ್ಕೆ ಸ್ಥಳಾಂತರ ಮಾಡಲಾಗಿದೆ. ಧಾರ್ಮಿಕ ಸೂಕ್ಷ್ಮ ವಿಚಾರ ಆಗಿರುವ ಹಿನ್ನೆಲೆಯಲ್ಲಿ ಅವಳಿ ನಗರದಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿತ್ತು. ಮುಂದೆ ಎರಡು ಮಂದಿರಗಳ ತೆರವು ಕಾರ್ಯಾಚರಣೆ ಜಿಲ್ಲಾಡಳಿತ ಅದಕ್ಕೆ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತೋ ಅನ್ನೋದು ಕುತೂಹಲ ಕೆರಳಿಸಿದೆ.

ವರದಿ: ರಹಮತ್ ಕಂಚಗಾರ್, ಟಿವಿ9 ಹುಬ್ಬಳ್ಳಿ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:02 am, Thu, 22 December 22

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ