ಕೀ ಗ್ರಾಹಕರ ಬಳಿಯೇ ಇದೆ, ಆದರೆ SBI ಲಾಕರ್ ನಲ್ಲಿಟ್ಟಿದ್ದ 56 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮಂಗಮಾಯಾವಾಗಿದೆ!
Hubballi SBI locker: ಹುಬ್ಬಳ್ಳಿಯ ಈಶ್ ಕೋಹ್ಲಿ 56 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕೇಶ್ವಾಪೂರದ ಎಸ್ ಬಿಐ ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದರು. ಲಾಕರ್ ಓಪನ್ ಮಾಡಿಸಲು ಬೇಕಾದ ಕೀಲಿ ಈಶ್ ಅವರ ಕಡೆಯಲ್ಲಿದ್ದರೂ ಲಾಕರ್ ಓಪನ್ ಆಗಿದ್ದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ದಾಖಲೆಗಳು ಮಾಯವಾಗಿದೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಈಶ್ ಕೋಹ್ಲಿ ದೂರು ದಾಖಲಿಸಿದ್ದಾರೆ.
ಎಚ್ಚರ ಗ್ರಾಹಕರೇ ಎಚ್ಚರ…! ನಿಮ್ಮ ಆಭರಣ ಹಾಗೂ ದಾಖಲೆಗಳು ಬ್ಯಾಂಕ್ ಲಾಕರ್ ನಲ್ಲಿ ಸೇಫ್ ಇರುತ್ತದೆ ಅಂದಕೊಂಡು ನಿರ್ಲಕ್ಷ್ಯ ಮಾಡಿದರೆ ನಿಜಕ್ಕೂ ದೊಡ್ಡ ಸಮಸ್ಯೆ ಎದುರಿಸುವುದು ಖಂಡಿತ. ಬ್ಯಾಂಕ್ ಲಾಕರ್‌ನಲ್ಲಿ ಚಿನ್ನಾಭರಣ ಇಡುವ ಗ್ರಾಹಕರೇ ಎಚ್ಚರ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ಇಲ್ಲಿದೆ ನೋಡಿ. ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿದ ಚಿನ್ನಾಭರಣವನ್ನ ಮನೆಯಲ್ಲಿ ಇಟ್ಟರೆ ಕಳ್ಳರ ಕಾಟ. ಅದಕ್ಕೆ ಭದ್ರತೆ ಇರಲಿ ಅಂತ ಜನರು ಮೊರೆ ಹೋಗುವುದು ಬ್ಯಾಂಕ್ ಲಾಕರ್‌ಗೆ (locker). ಆದ್ರೆ ಇಲ್ಲಿ ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣವೇ ಮಾಯವಾಗಿದೆ! ಹೌದು.. ಬರೋಬ್ಬರಿ 56 ಲಕ್ಷ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿದೆ. ಹುಬ್ಬಳ್ಳಿಯ ಶಾಂತಿ ನಗರದ ನಿವಾಸಿ ಈಶ್ ಕೋಹ್ಲಿ ಎನ್ನುವವರ 56 ಲಕ್ಷ ಮೌಲ್ಯದ ಚಿನ್ನಾಭರಣವೇ ಮಾಯವಾಗಿವೆ. ಕೇಶ್ವಾಪೂರದ ಎಸ್.ಬಿ.ಐ ಬ್ಯಾಂಕ್ ನಲ್ಲಿ (Hubballi SBI) ಲಾಕರ್ ನಲ್ಲಿ ಇಟ್ಟಿದ್ದ ಚಿನ್ನಾಭರಣ ಮಂಗಮಾಯಾವಾಗಿದೆ. ಲಾಕರ್ ಓಪನ್ ಮಾಡಿಸಲು ಬೇಕಾದ ಕೀಲಿ ಈಶ್ ಅವರ ಕಡೆಯಲ್ಲಿದ್ದರೂ ಲಾಕರ್ ಓಪನ್ ಆಗಿದ್ದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ದಾಖಲೆಗಳು ಮಾಯವಾಗಿದೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಈಶ್ ಕೋಹ್ಲಿ ದೂರು ನೀಡಿದ್ದು, ಎಫ್‌ಐಆರ್ (FIR) ಕೂಡ ದಾಖಲಾಗಿದೆ.
ಕೇಶ್ವಾಪುರದ ಎಸ್‌ಬಿಐ ಬ್ಯಾಂಕನಲ್ಲಿದ್ದ 2 ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನ ಆಗಿದೆ ಎಂದು ಪ್ರಕರಣ ದಾಖಲಾಗಿದೆ. 2013 ರಲ್ಲಿ ಎಸ್‌ಬಿಐ ಬ್ಯಾಂಕ್‌ನಲ್ಲಿ ತಂದೆ-ತಾಯಿ ಹೆಸರನಲ್ಲಿ ಎರಡೂ ಲಾಕರ್‌ಗಳನ್ನು ತೆಗೆದುಕೊಂಡಿದ್ದ ಈಶ್ ಕೋಹ್ಲಿ, 2014 ರಲ್ಲಿ 56 ಲಕ್ಷ ರೂ ಮೌಲ್ಯದ ಚಿನ್ನಾಭರಣ ಇಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೂ ಲಾಕರ್‌ಗೆ ಬಾಡಿಗೆ ಸಹ ತುಂಬಿದ್ದರು.
ಆದ್ರೆ ಈಗ ಬ್ಯಾಂಕ್ ಗೆ ಹೋಗಿ ಲಾಕರ್ ನಿಂದ ಚಿನ್ನಾಭರಣ ತೆಗೆದುಕೊಂಡು ಬರಲಿಕ್ಕೆ ಹೋದಾಗ ಆಘಾತಕ್ಕೆ ಒಳಗಾಗಿದ್ದಾರೆ. ಎರಡು ಲಾಕರ್‌ಗಳ ಪೈಕಿ ಒಂದು ಲಾಕರ್ ಓಪನ್ ಆಗಿದೆ. ಇನ್ನೊಂದು ಲಾಕರ್ ಓಪನ್ ಆಗದ ಸ್ಥಿತಿಯಲ್ಲಿದೆ. ಇದರಿಂದಾಗಿ ಬ್ಯಾಂಕ್ ಮೇಲೆ ಆರೋಪಿಸಿ ದೂರು ನೀಡಿದ್ದಾರೆ. ಈ ಬಗ್ಗೆ ಎಸ್.ಬಿ.ಐ ಬ್ಯಾಂಕ್ ಮುಖ್ಯಸ್ಥರು ಹೇಳುವುದು ಹೀಗೆ. ಯಾವ ಲಾಕರ್ ಖಾಲಿ ಇರುತ್ತೆದೆಯೋ ಅದು ಒಪನ್ ಇರತ್ತೆ. ನಾವು ಲಾಕರ್ ಇದೆ ಎಂದು ಹೊರಗಡೆ ಬೋರ್ಡ್ ಹಾಕಿದ್ದೇವೆ. ಒಂದು ರೂಪಾಯಿ ವ್ಯತ್ಯಾಸ ಆಗೋದಿಲ್ಲ. ನಾವು ಚೆಕ್ ಮಾಡ್ತೀವಿ, ಸ್ವಲ್ಪ ಸಮಯ ಕೊಡಿ ಅಂತಾರೆ SBI AGM ದೀಲಿಪ್ ಕೆಂಬಾವಿ ಅವರು.
ಒಟ್ಟಿನಲ್ಲಿ ಎಸ್.ಬಿ.ಐ ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿರುವ ಚಿನ್ನಾಭರಣ ಹಾಗೂ ದಾಖಲೆಗಳು ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಕಾನೂನು ಕ್ರಮ ಕೈಗೊಳ್ಳಬೇಕಿದೆ.