ಹುಬ್ಬಳ್ಳಿಯಲ್ಲಿ ಪಾಕ್ ಪರ ಘೋಷಣೆ ಪ್ರಕರಣ: ವಕಾಲತ್ತು ಅರ್ಜಿ ಸಲ್ಲಿಸಲಿರೋ ವಕೀಲರು

ಹುಬ್ಬಳ್ಳಿಯಲ್ಲಿ ಪಾಕ್ ಪರ ಘೋಷಣೆ ಪ್ರಕರಣ: ವಕಾಲತ್ತು ಅರ್ಜಿ ಸಲ್ಲಿಸಲಿರೋ ವಕೀಲರು

ಧಾರವಾಡ: ಆ ಪೋಷಕರು ತಮ್ಮ ಮಕ್ಕಳು ಏನಾದ್ರು ಸಾಧನೆ ಮಾಡಲಿ ಅಂತಾ ಸಾವಿರಾರು ಕಿಲೋಮೀಟರ್ ದೂರದಿಂದ ನಮ್ಮ ರಾಜ್ಯಕ್ಕೆ ಕಳುಹಿಸಿದ್ರು. ಹೀಗೆ ವಿದ್ಯಾಭ್ಯಾಸಕ್ಕೆ ಅಂತಾ ಬಂದವರು ಸುಮ್ಮನೆ ಕಾಲೇಜ್ ಆಯ್ತು, ತಾವಾಯ್ತು ಅಂತಾ ಇರದೆ ವೈರಿ ರಾಷ್ಟ್ರದ ಪರ ಘೋಷಣೆ ಕೂಗಿದ್ದರು. ಹೀಗೆ ಬಹುದೊಡ್ಡ ತಪ್ಪು ಮಾಡಿದವರ ಪರವಾಗಿ ವಕೀಲರ ಬಲ ಕೂಡ ಸಿಗಲಿದ್ದು, ಬೆಂಗಳೂರಿನಿಂದ ವಕೀಲರ ತಂಡ ಹುಬ್ಬಳ್ಳಿಯತ್ತ ಹೊರಟಿದೆ. ಆವತ್ತು ಹುಬ್ಬಳ್ಳಿಯ ಜನರಿಗೆ ಶಾಕ್ ಕಾದಿತ್ತು. ಇದ್ದಕ್ಕಿದ್ದಂತೆ ಕಾಲೇಜು ವಿದ್ಯಾರ್ಥಿಗಳ ತಂಡವೊಂದು ಪಾಕ್ ಪರ […]

sadhu srinath

|

Feb 28, 2020 | 10:09 AM

ಧಾರವಾಡ: ಆ ಪೋಷಕರು ತಮ್ಮ ಮಕ್ಕಳು ಏನಾದ್ರು ಸಾಧನೆ ಮಾಡಲಿ ಅಂತಾ ಸಾವಿರಾರು ಕಿಲೋಮೀಟರ್ ದೂರದಿಂದ ನಮ್ಮ ರಾಜ್ಯಕ್ಕೆ ಕಳುಹಿಸಿದ್ರು. ಹೀಗೆ ವಿದ್ಯಾಭ್ಯಾಸಕ್ಕೆ ಅಂತಾ ಬಂದವರು ಸುಮ್ಮನೆ ಕಾಲೇಜ್ ಆಯ್ತು, ತಾವಾಯ್ತು ಅಂತಾ ಇರದೆ ವೈರಿ ರಾಷ್ಟ್ರದ ಪರ ಘೋಷಣೆ ಕೂಗಿದ್ದರು. ಹೀಗೆ ಬಹುದೊಡ್ಡ ತಪ್ಪು ಮಾಡಿದವರ ಪರವಾಗಿ ವಕೀಲರ ಬಲ ಕೂಡ ಸಿಗಲಿದ್ದು, ಬೆಂಗಳೂರಿನಿಂದ ವಕೀಲರ ತಂಡ ಹುಬ್ಬಳ್ಳಿಯತ್ತ ಹೊರಟಿದೆ.

ಆವತ್ತು ಹುಬ್ಬಳ್ಳಿಯ ಜನರಿಗೆ ಶಾಕ್ ಕಾದಿತ್ತು. ಇದ್ದಕ್ಕಿದ್ದಂತೆ ಕಾಲೇಜು ವಿದ್ಯಾರ್ಥಿಗಳ ತಂಡವೊಂದು ಪಾಕ್ ಪರ ಘೋಷಣೆ ಕೂಗಿ ವಿಡಿಯೋ ಮಾಡಿತ್ತು. ಈ ವಿಡಿಯೋ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಆರೋಪಿಗಳ ಪರ ವಕಾಲತ್ತು ವಹಿಸದಂತೆ ಹುಬ್ಬಳ್ಳಿ ವಕೀಲರ ಸಂಘ ತೀರ್ಮಾನಿಸಿತ್ತು. ಇಷ್ಟೇ ಅಲ್ಲ ಆರೋಪಿಗಳ ಪರವಾದಿಸಲು ಬಂದ ವಕೀಲರ ವಿರುದ್ಧ ವಿರೋಧ ವ್ಯಕ್ತವಾಗಿತ್ತು. ಆದ್ರೆ, ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಿದ್ದ ಬೆಂಗಳೂರು ಹೈಕೋರ್ಟ್, ಕಾನೂನು ಉಲ್ಲಂಘನೆ ಮಾಡದಂತೆ ಹಾಗೂ ಸಂವಿಧಾನಕ್ಕೆ ಅಗೌರವ ತರದಂತೆ ಖಡಕ್ ಎಚ್ಚರಿಕೆ ನೀಡಿತ್ತು. ಹೀಗಾಗಿ, ಬೆಂಗಳೂರಿನಿಂದ ಆರೋಪಿಗಳ ಪರ ವಾದಿಸಲು ವಕೀಲರ ವಿಶೇಷ ತಂಡ ಎಂಟ್ರಿ ಕೊಡ್ತಿದೆ.

ವಕಾಲತ್ತು ಅರ್ಜಿ ಸಲ್ಲಿಸಲು ಆಗಮಿಸಲಿರುವ ವಕೀಲರು: ಅಂದಹಾಗೆ ಪಾಕ್ ಪರ ಘೋಷಣೆ ಕೂಗಿರುವ ಆರೋಪ ಹೊತ್ತಿರುವ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಪರ ವಕಾಲತ್ತಿಗೆ ಅರ್ಜಿ ಸಲ್ಲಿಸಲು ಇಂದು ವಕೀಲರ ತಂಡ ಹುಬ್ಬಳ್ಳಿಗೆ ಎಂಟ್ರಿ ಕೊಡಲಿದೆ. ಇಂದು ಬೆಳಗ್ಗೆ 11ಕ್ಕೆ ಜಿಲ್ಲಾ ಕೋರ್ಟ್​ಗೆ ಆಗಮಿಸುವ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ. ಹಾಗೇ ಈ ಮೊದಲು ಧಾರವಾಡ ವಕೀಲರ ಸಂಘದಿಂದ ವಿರೋಧ ವ್ಯಕ್ತವಾಗಿತ್ತು. ಆದ್ರೆ, ಬೆಂಗಳೂರು ಹೈಕೋರ್ಟ್ ಮೊರೆ ಹೋಗಿದ್ದವರಿಗೆ ಗೆಲುವು ಸಿಕ್ಕಂತಾಗಿದೆ.

‘ವಿಚಾರಣೆಗೆ ಅಡ್ಡಿಪಡಿಸುವವರ ಅಡ್ರೆಸ್ ಬರೆದಿಟ್ಟುಕೊಳ್ಳಿ..!’ ಇನ್ನು ಕೆಲದಿನಗಳ ಹಿಂದೆ ನಡೆದಿದ್ದ ಘಟನೆಯನ್ನ ಗಂಭೀರವಾಗಿ ಪರಿಗಣಿಸಿರುವ ಕೋರ್ಟ್, ಕರ್ತವ್ಯಕ್ಕೆ ಅಡ್ಡಿ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಪ್ರತಿಭಟನೆ ನಡೆಸುವ ವಕೀಲರ ಮಾಹಿತಿಯನ್ನ ಬರೆದು ಅದರ ಸಂಪೂರ್ಣ ವಿವರ ನೀಡಿ ಅಂತಾ ಆದೇಶ ನೀಡಲಾಗಿದೆ. ನಿನ್ನೆ ವಿಡಿಯೋ ಕಾನ್ಫರೆನ್ಸ್ ನಡೆದ ನಂತ್ರ ವಿಚಾರಣೆ ಮುಂದೂಡಿ ಆದೇಶ ಹೊರಡಿಸಲಾಯಿತು.

ಒಟ್ನಲ್ಲಿ ಅವಳಿ ನಗರದ ಜನತೆಯ ನಿದ್ದೆ ಹಾರಿ ಹೋಗಿದೆ. ಕಾಶ್ಮೀರಿ ಹುಡುಗರು ಮಾಡಿರುವ ಪ್ರಮಾದದಿಂದ ಸೂಕ್ಷ್ಮಪರಿಸ್ಥಿತಿ ಏರ್ಪಟ್ಟಿದ್ದು, ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಹಾಗೇ ಪಾಕ್ ಪರ ಘೋಷಣೆ ಕೂಗಿದ್ದ ಆರೋಪಿಗಳನ್ನ ರಿಪೇರಿ ಮಾಡಲಾಗುತ್ತಿದೆ.

Follow us on

Related Stories

Most Read Stories

Click on your DTH Provider to Add TV9 Kannada