AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯಲ್ಲಿ ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಕೇಸ್: ಇಂದಿನಿಂದ 2ನೇ ಹಂತದ ವಿಚಾರಣೆ ಆರಂಭಿಸಲಿರುವ ಖಾಕಿ

ಆರೋಪಿಗಳಾದ ಮಹಾಂತೇಶ, ಮಂಜುನಾಥ ಮನೆಯಲ್ಲಿ ಪೊಲೀಸರು ಈ ಹಿಂದೆ ಶೋಧ ಮಾಡಿದ್ದು, ಪೊಲೀಸರ ಪ್ರಶ್ನೆಗಳ ಸುರಿಮಳೆಗೆ ಇಬ್ಬರು ಆರೋಪಿಗಳು ಸುಸ್ತಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಕೇಸ್: ಇಂದಿನಿಂದ 2ನೇ ಹಂತದ ವಿಚಾರಣೆ ಆರಂಭಿಸಲಿರುವ ಖಾಕಿ
ವಾಸ್ತುತಜ್ಞ ಚಂದ್ರಶೇಖರ ಗುರೂಜಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 13, 2022 | 12:35 PM

Share

ಹುಬ್ಬಳ್ಳಿ: ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ (Chandrashekhar Guruji)  ಹತ್ಯೆ ಪ್ರಕರಣ ಸಂಬಂಧ ಇಂದಿನಿಂದ ಖಾಕಿ ಪಡೆ ಎರಡನೇ ಹಂತದ ವಿಚಾರಣೆ ಆರಂಭಿಸಲಿದ್ದಾರೆ. ಹಂತಕರ ಉತ್ತರ ಸಮರ್ಪಕ ಅನ್ನಿಸಿದ ಹಿನ್ನಲೆ ನಿನ್ನೆಯಷ್ಟೆ ಮತ್ತೆ ಆರು ದಿನಗಳ ಕಾಲ ಖಾಕಿ ಪಡೆ ತಮ್ಮ ಕಸ್ಟಡಿಗೆ ಪಡೆದಿದ್ದು, ಮತ್ತೆ ಇಂದಿನಿಂದ ತೀವ್ರ ವಿಚಾರಣೆ ನಡೆಸಲಿದ್ದಾರೆ. ಖಾಕಿ ಏನೇ ಪ್ರಶ್ನೆ ಮಾಡಿದರು ಹಂತಕರು ಸಿದ್ದ ಉತ್ತರ ನೀಡುತ್ತಿದ್ದಾರೆ. ಹೀಗಾಗಿ ಇಂದಿನ ತಾಂತ್ರಿಕ ಸಾಕ್ಷ್ಯ ಮುಂದಿಟ್ಟು ವಿಚಾರಣೆ ಮಾಡಲಿದ್ದಾರೆ. ಹುಬ್ಬಳ್ಳಿ-ಧಾರವಾಡ ಕಮೀಷನರ್ ಲಾಬೂರಾಮ್ ಸೂಚನೆ ಮೇರೆಗೆ ಹಂತಕರನ್ನು ಖಾಕಿ ಪಡೆ ಮತ್ತೆ ಆರು ದಿನ ವಶಕ್ಕೆ ಪಡೆದಿದ್ದಾರೆ. ಕೊಲೆಗೆ ನಿಖರ ಕಾರಣ ಸಿಗದಿದ್ದ ಹಿನ್ನಲೆ, ಮತ್ತೆ ವಿಚಾರಣೆ ಮಾಡಲಾಗುತ್ತಿದ್ದು, ಹಂತಕರು ಅಷ್ಟೊಂದು ಭೀಕರವಾಗಿ ಕೊಲ್ಲೊಕೆ ನಿಖರ ಕಾರಣ ಹೇಳುತ್ತಿಲ್ಲ. ಹೀಗಾಗಿ ಕೆಲ ತಾಂತ್ರಿಕ ಸಾಕ್ಷ್ಯ ಕಲೆ ಹಾಕಿರೋ ಖಾಕಿ ಪಡೆ, ಅದೇ ಸಾಕ್ಷ್ಯ ಮುಂದಿಟ್ಟು ಇಂದಿನಿಂದ ಮತ್ತೆ ವಿಚಾರಣೆ ಮಾಡಲಿದ್ದಾರೆ. ಕೊಲೆಯಲ್ಲು ಬೇನಾಮಿ ಆಸ್ತಿ, ರಾಜಕಾರಣಿಗಳ ಕೈವಾಡದ ಬಗ್ಗೆಯೂ ವಿಚಾರಣೆ ಮಾಡಲಿದ್ದು, ಇಂದಿನ ಹಂತಕರ ವಿಚಾರಣೆ ತೀವ್ರಗೊಳ್ಳಲಿದೆ.

ಇದನ್ನೂ ಓದಿ; ಚಂದ್ರಶೇಖರ ಗುರೂಜಿ ಬರ್ಬರ ಹತ್ಯೆ ಪ್ರಕರಣ: ಹಂತಕರಿಗೆ ಕನಿಷ್ಟ ಜೀವಾವಧಿ ಶಿಕ್ಷೆ ಪಕ್ಕಾ, ಗಲ್ಲು ಶಿಕ್ಷೆಗೆ ಛಾನ್ಸ್​ ಇಲ್ಲವಾ?

ಆರೋಪಿಗಳಾದ ಮಹಾಂತೇಶ, ಮಂಜುನಾಥ ಮನೆಯಲ್ಲಿ ಪೊಲೀಸ್ ಶೋಧ:

ಆರೋಪಿಗಳಾದ ಮಹಾಂತೇಶ, ಮಂಜುನಾಥ ಮನೆಯಲ್ಲಿ ಪೊಲೀಸರು ಈ ಹಿಂದೆ ಶೋಧ ಮಾಡಿದ್ದು, ಪೊಲೀಸರ ಪ್ರಶ್ನೆಗಳ ಸುರಿಮಳೆಗೆ ಇಬ್ಬರು ಆರೋಪಿಗಳು ಸುಸ್ತಾಗಿದ್ದಾರೆ. ಆರೋಪಿಗಳಿಗೆ ಮ್ಯಾರಥಾನ್ ಗ್ರಿಲ್​ ಮಾಡುತ್ತಿರುವ ಪೊಲೀಸರು, ವಿಚಾರಣೆ ವೇಳೆ ಉದ್ಯೋಗದ ಬಗ್ಗೆ ಇಬ್ಬರು ಹಂತಕರು ಬಾಯ್ಬಿಟ್ಟಿದ್ದಾರೆ. ಗುರೂಜಿ ಸ್ವಭಾವ, ವ್ಯಕ್ತಿತ್ವ, ದೌರ್ಬಲ್ಯಗಳನ್ನು ಸೂಕ್ತವಾಗಿ ಗ್ರಹಿಸಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಅತ್ಯಾಪ್ತನಾಗಿದ್ದ ಮಂಜುನಾಥ, ಧಾರವಾಡ ತಾಲೂಕಿನ ದೇವಗಿರಿ ಗ್ರಾಮದ ನಿವಾಸಿ. ಮುಗ್ಧತೆಯ ನಾಟಕವಾಡಿ ಆರ್ಥಿಕ ಸಹಾಯ ಪಡೆದಿದ್ದ. ಗುರೂಜಿ ಅಪಾರ್ಟ್‌ಮೆಂಟ್‌ನಲ್ಲಿ ಮಹಾಂತೇಶ ಶಿರೂರ ನೆಲೆಸಿದ್ದ. ಕೋರ್ಟ್​ ಅನುಮತಿ ಮೇರೆಗೆ ಮನೆಯಲ್ಲಿ ದಾಖಲೆ ಪರಿಶೀಲನೆ ಮಾಡಿದ್ದು, ಮನೆಯಲ್ಲಿ ಅಗತ್ಯ ದಾಖಲೆಗಳು ಪೊಲೀಸರಿಗೆ ಲಭ್ಯವಾಗುತ್ತಿಲ್ಲ. ಹೀಗಾಗಿ ಮತ್ತೆ ಹಂತಕರ ವಿಚಾರಣೆಯನ್ನ ಖಾಕಿ ಪಡೆ ಮುಂದುವರೆಸಿದ್ದರು.

ಇದನ್ನೂ ಓದಿ: Chandrashekhar Guruji:‘ಗುರೂಜಿಯನ್ನ ನನ್ನ ಗಂಡನೇ ಕೊಲೆ ಮಾಡಿದ್ದಾನೆ’ ಎಂದ ಮಹಾಂತೇಶ ಪತ್ನಿ ವನಜಾಕ್ಷಿ

ಚಂದ್ರಶೇಖರ ಗುರೂಜಿ ಅವರ ಸ್ವಭಾವ, ವ್ಯಕ್ತಿತ್ವ, ದೌರ್ಬಲ್ಯಗಳನ್ನೆಲ್ಲ ಸೂಕ್ತವಾಗಿ ಗ್ರಹಿಸಿ, ಅತ್ಯಂತ ಕಡಿಮೆ ಅವಧಿಯಲ್ಲಿಯೇ ಗುರೂಜಿಗೆ ಮಂಜುನಾಥ ಅತ್ಯಾಪ್ತನಾಗಿದ್ದ. ಬಡತನದಿಂದ ಕುಟುಂಬಕ್ಕೆ ನಾನೇ ಆಧಾರ ಸ್ತಂಭ, ನಿಮ್ಮನೇ ನಂಬಿದ್ದೇನೆ ಎಂಬಿತ್ಯಾದಿ ನಾಟಕೀಯ ಮಾತುಗಳ ಮೂಲಕ ಗುರೂಜಿ ಮನಗೆದ್ದಿದ್ದ. ಗುರೂಜಿ ಹುಬ್ಬಳಿಗೆ ಬಂದಾಗ ತನ್ನೂರು ಧುಮ್ಮವಾಡಕ್ಕೆ ಕರೆದೊಯ್ದು ಕುಟುಂಬದ ಆರ್ಥಿಕ ಸ್ಥಿತಿ-ಗತಿಗಳನ್ನು ಹಂತಕ ವಿವರಿಸಿದ್ದ. ಮುಗ್ಧತೆಯ ನಾಟಕವಾಡಿ, ಆರ್ಥಿಕ ಸಹಾಯ ಪಡೆದಿದ್ದ. ಮಹಾಂತೇಶ ಶಿರೂರನ ಸಂಚಿನ ಮರ್ಮ ಅರಿಯದ ಗುರೂಜಿ, ಮಹಾಂತೇಶನನ್ನು ನಂಬಿದ್ದರು.

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!