ಹುಬ್ಬಳ್ಳಿ: ಚಿಕ್ಕೋಡಿಯ ಜೈನಮುನಿ (Chikkodi Jain Swamiji) ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು (Police) ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಡಿವೈಎಸ್ಪಿ ನೇತೃತ್ವದಲ್ಲಿ ಜೈನಮುನಿ ಹತ್ಯೆ ಪ್ರಕರಣದ ತನಿಖೆ ಆಗುತ್ತಿದೆ. ತನಿಖೆಯ ಬಳಿಕ ಇನ್ನೂ ಕೆಲವು ವಿಚಾರಗಳು ಬಯಲಿಗೆ ಬರಬಹುದು. ಗೃಹ ಇಲಾಖೆ ಪ್ರಮಾಣಿಕ ಪ್ರಯತ್ನ ಮಾಡುತ್ತಿದೆ. ಇದು ಯಾರ ವೈಫಲ್ಯದಿಂದ ನಡೆದ ಘಟನೆಯಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ (G Parameshwara) ಹೇಳಿದರು. ಧಾರವಾಡ (Dharwad) ಜಿಲ್ಲೆಯ ಹುಬ್ಬಳ್ಳಿ (Hubli) ತಾಲೂಕಿನ ವರೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾನೂನು ಸುವ್ಯವಸ್ಥೆ ಎಡಿಜಿಪಿಯವರನ್ನು ಸ್ಥಳಕ್ಕೆ ಕಳಸಿಕೊಟ್ಟಿದ್ದೇನೆ. ಅವರು ನಮಗೆ ಮಾಹಿತಿ ನೀಡಿದ್ದಾರೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಕರೆ ಮಾಡಿ ವಿಚಾರಿಸಿದರು ಎಂದರು.
ಗುಣಧರನಂದಿ ಸ್ವಾಮೀಜಿ ಅವರ ಜತೆ ನಾನು ಮಾತಾಡಿ ವಿನಂತಿ ಮಾಡಿಕೊಂಡೆ. ಗುಣಧರನಂದಿ ಸ್ವಾಮೀಜಿ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಿದ್ದಾರೆ. ನಾವು ನಿಮ್ಮ ಜೊತೆ ಇದ್ದೇವೆ, ಸರ್ಕಾರ ಜೈನ ಸಮುದಾಯದ ಜೊತೆ ಇರುವ ಭರವಸೆ ನೀಡಿದ್ದೇನೆ. ನಾನು ಅವರಿಗೆ ಆಭಾರಿ. ಸ್ವಾಮೀಜಿ ನಾಲ್ಕು ಬೇಡಿಕೆ ಇಟ್ಟಿದ್ದಾರೆ. ಜೈನ ಸ್ವಾಮೀಜಿಗಳ ಯಾತ್ರೆ ವೇಳೆ ರಕ್ಷಣೆ ಕೊಡಬೇಕು ಎಂದು ತಿಳಸಿದ್ದಾರೆ. ಜೈನ ಸಮುದಾಯದ ಸಂಘ ಸಂಸ್ಥೆಗಳ ಲಿಖಿತ ರೂಪದಲ್ಲಿ ತಿಳಿಸಿದರೇ ನಾವು ರಕ್ಷಣೆ ಕೊಡುತ್ತೇವೆ. ಅವರು ತಂಗೋ ಜಾಗ ಅಧಿಕೃತ ಆಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಜೈನ ಸ್ವಾಮೀಜಿ ಶಾಲಾ ಕಾಲೇಜುಗಳಲ್ಲಿ ಉಳಿದುಕೊಳ್ಳುತ್ತಾರೆ. ಈ ವಿಚಾರವಾಗಿ ನಾನು ಮಧು ಬಂಗಾರಪ್ಪ ಜೊತೆ ಮಾತಾಡುತ್ತೇನೆ. ಜೈನ ಮಂಡಳಿ ಮಾಡಬೇಕು ಎಂದು ಹೇಳಿದ್ದಾರೆ. ಈಗಾಗಲೇ ಹಿಂದೂಳಿದ ವರ್ಗಗಳ ನಿಮಗ ಮಂಡಳಿ ಇದೆ. ಮುಖ್ಯಮಂತ್ರಿ ಗಮನಕ್ಕೆ ತಂದು ಜೈನ ಸಮುದಾಯದ ಮಂಡಳಿ ಮಾಡೋಕೆ ಕ್ರಮ ಕೈಗೊಳ್ಳುತ್ತೇವೆ. ಬಜೆಟ್ ಮೊದಲೆ ಆಗಿದ್ದರೇ ನಾವು ಪ್ರಕಟಣೆ ಮಾಡುತ್ತಿದ್ವಿ. ಜೈನ ಮಂದಿರಗಳಿಗೆ ರಕ್ಷಣೆ ಕೊಡಬೇಕು ಎಂದಿದ್ದಾರೆ. ನಾವು ಜೈನ ಮಂದಿರಕ್ಕೆ ರಕ್ಷಣೆ ಕೊಡುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಇಂತಹ ಘಟನೆ ಆಗಬಾರದು. ಇಲಾಖೆ ವತಿಯಿಂದ ಮುಂದಿನ ದಿನದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ಪ್ರಣಾಳಿಕೆ ಅಧ್ಯಕ್ಷನಾಗಿ ನಾನೇ ಬರೆದಿದ್ದು. ಈ ಮಾತಿಗೆ ಸರ್ಕಾರ ನಿಲ್ಲುತ್ತದೆ. ಇಡೀ ಸರ್ಕಾರ ಇದೇ ಮಾತಿಗೆ ದುಡಿಯುತ್ತಿದೆ. ಇಡೀ ದೇಶ ನೋಡುತ್ತಿದೆ. ಇಂತಹ ಘೋರ ಹತ್ಯೆಯಾಗಿದೆ, ಹೀಗಾಗಿ ಪ್ರಪಂಚ ಇದನ್ನು ಗಮನಿಸುತ್ತಿದೆ ಎಂದರು.
ಇದನ್ನೂ ಓದಿ: ಅಕ್ರಮವಾಗಿ ತಂಗಿದ್ದ 105 ವಿದೇಶಿಗರು ಗಡಿಪಾರು, 240 ಪ್ರಕರಣಗಳು ದಾಖಲು: ಜಿ ಪರಮೇಶ್ವರ್
ಇದಕ್ಕೆ ರಾಜಕೀಯ ಬಣ್ಣ ಕೊಡಬಾರದು. ಯಾರು ರಾಜಕೀಯ ಮಾಡೋಕೆ ಹೋಗುತ್ತಿದ್ದಾರೆ. ಅವರಿಗೆ ಒಂದು ಮಾತು ಹೇಳುತ್ತೇನೆ, ಇದರಲ್ಲಿ ನಿಮ್ಮ ಬೇಳೆ ಬೇಯಿಸಿಕೊಳ್ಳಬೇಡಿ. ಇಂತಹದರಲ್ಲಿ ರಾಜಕೀಯ ಬೇಡ. ಹಿಂದೆ ಕೈಗಳು ಇವೆ ಎಂದು ಮಾತಾಡೋದನ್ನು ನಿಲ್ಲಸಬೇಕು. ಯಾರೂ ಗಂಭೀರ ಕೃತ್ಯ ಮಾಡಿದ್ದಾರೆ ಅನ್ನೋದು ತನಿಖೆಯಲ್ಲಿ ಗೊತ್ತಾಗತ್ತೆ. ಗೃಹ ಸಚಿವನಾಗಿ ನಾನು ವಿವರಣೆ ಮಾಡಲ್ಲ. ಇಲಾಖೆ ಅಧಿಕಾರಿಗಳಿಗೆ ಬಿಡುತ್ತೇನೆ ಎಂದು ತಿರುಗೇಟು ನೀಡಿದರು.
ಆರೋಪಿಗಳನ್ನ ಸರ್ಕಾರ ರಕ್ಷಣೆ ಮಾಡ್ತಿರೋ ಆರೋಪ ವಿಚಾರವಾಗಿ ಮಾತನಾಡಿದ ಅವರು ಇಂತಹ ಮಾತುಗಳನ್ನ ಹೇಳಬಾರದು. ಜನ ಪ್ರತಿನಿಧಿಗಳು ಯಾರೂ ಕೂಡಾ ಹೀಗೆ ಮಾತಾಡಬಾರದು. ಜೈನ ಮುನಿ ಹತ್ಯೆಯನ್ನು ಸಿಬಿಐಗೆ ವಹಿಸೋ ಅನಿವಾರ್ಯತೆ ಇಲ್ಲ. ಯುವಾ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಕೊಲೆಯಾಗಿದ್ದರೇ ಪೊಲೀಸರು ತನಿಖೆ ಮಾಡುತ್ತಾರೆ. ಆರೋಪಿಗಳನ್ನು ಅರೆಸ್ಟ್ ಮಾಡುತ್ತಾರೆ ಎಂದು ಭರವಸೆ ನೀಡಿದರು.
ಜೈನ ಮುನಿ ಹತ್ಯೆಯ ಕೃತ್ಯ ಆಗಿರೋದು ಎಲ್ಲ ಪಕ್ಷದವರು ಖಂಡನೆ ಮಾಡುತ್ತಿದ್ದಾರೆ. ಇದಕ್ಕೆ ನೂರು ಕೋಟಿ ಧನ್ಯವಾದ. ಇಂತಹ ಕೃತ್ಯ ಆಗಬಾರದು. ಜಿ ಪರಮೇಶ್ವರ ಅವರ ಭೇಟಿ ಬಳಿಕ ನಾನು ಉಪವಾಸ ಹಿಂಪಡೆಯುತ್ತೇನೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಿ. ಪರಮೇಶ್ವರ ನಮ್ಮ ಜೊತೆ ಮಾತಾಡಿದ್ದಾರೆ. ಹೀಗಾಗಿ ನಾನು ಉಪವಾಸ ಸತ್ಯಾಗ್ರಹ ಹಿಂದೆ ಪಡೆಯತ್ತೇನೆ. ಈ ಹೋರಾಟ ರಾಜಕೀಯ ಹೋರಾಟ ಆಗಲಾರದು. ಮಠಕ್ಕೆ ಎಲ್ಲ ಪಕ್ಷದವರ ಸಹಕಾರ ಇದೆ. ಬಿಜೆಪಿ, ಕಾಂಗ್ರೆಸ್ ಎಲ್ಲ ಪಕ್ಷದ ಸಹಕಾರ ಇದೆ ಎಂದು ವರೂರಿನಲ್ಲಿ ಗುಣಧರನಂದಿ ಸ್ವಾಮೀಜಿ ಹೇಳಿದರು.
ಇಲ್ಲಿರುವ ರಸ್ತೆಗೆ ಸಿದ್ದರಾಮಯ್ಯ ಅವರು ಅನುದಾನ ಕೊಟ್ಟಿದ್ದಾರೆ. ಎಲ್ಲ ಪಕ್ಷದವರೂ ನನಗೆ ಸಹಕಾರ ಕೊಟ್ಟಿದ್ದಾರೆ. ಜೈನಮುನಿ ಹತ್ಯೆ ಮಾಡಿದಗರಿಗೆ ಕಠಿಣ ಶಿಕ್ಷೆಯಾಗಬೇಕು. ನಾವು ಅಹಿಂಸಾವಾದಿಗಳು. ಕೊಲೆ ಮಾಡಿದವರ ಮನ ಪರಿವರ್ತನೆ ಆಗಬೇಕು. ನಾನು ಕೊಲೆ ಮಾಡಿದವರಿಗೆ ಕ್ಷಮಾದಾನ ಕೊಡುತ್ತೇನೆ. ನಮ್ಮ ಬೇಡಿಕೆಗೆ ಪರಮೇಶ್ವರ ಎಸ್ ಅಂದಿದ್ದಾರೆ. ಹೋಮ್ ಮಿನಿಸ್ಟರ್ ಮೇಲೆ 100 ಪರ್ಸೆಂಟ್ ಗ್ಯಾರಂಟಿ ಇದೆ. ಅವರು ನಮಗೆ ಬರವಣಿಗೆ ಮೂಲಕ ನಮ್ಮ ಬೇಡಿಕೆಗೆ ಸ್ಪಂದಿಸುತ್ತಾರೆ ಅನ್ನುವ ನಂಬಿಕೆ ಇದೆ. ಕ್ಯಾಬಿನೆಟ್ ಇದ್ರು ಇಲ್ಲಿ ಬಂದಿದ್ದಾರೆ,ಅವರಿಗೆ ಕೋಟಿ ವಂದನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:50 am, Mon, 10 July 23