ಹುಬ್ಬಳ್ಳಿಯಲ್ಲಿ ಕೋಮುಗಲಭೆ ಪ್ರಕರಣ; ಗಲಭೆಯ ಮಾಸ್ಟರ್‌ಮೈಂಡ್‌ ಮೌಲ್ವಿ ವಸೀಂ ಪಠಾಣ್ ಪೊಲೀಸರ ವಶಕ್ಕೆ​

| Updated By: ಗಂಗಾಧರ​ ಬ. ಸಾಬೋಜಿ

Updated on: Apr 21, 2022 | 8:52 PM

ಗಲಭೆ ಬಳಿಕ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಮೌಲ್ವಿ ವಸೀಂ, ನಿನ್ನೆ ರಾತ್ರಿಯೇ ಮುಂಬೈನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು, ಬಳಿಕ ಇನ್ಸ್‌ಪೆಕ್ಟರ್‌ ಅಶೋಕ್‌ ನೇತೃತ್ವದ 8 ಜನರ ತಂಡ ಹುಬ್ಬಳ್ಳಿಗೆ ಕರೆತರಲಾಗಿದೆ.

ಹುಬ್ಬಳ್ಳಿಯಲ್ಲಿ ಕೋಮುಗಲಭೆ ಪ್ರಕರಣ; ಗಲಭೆಯ ಮಾಸ್ಟರ್‌ಮೈಂಡ್‌ ಮೌಲ್ವಿ ವಸೀಂ ಪಠಾಣ್ ಪೊಲೀಸರ ವಶಕ್ಕೆ​
ಮಾಸ್ಟರ್‌ಮೈಂಡ್‌ ಮೌಲ್ವಿ ವಸೀಂ ಪಠಾಣ್
Follow us on

ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸಾಪ್ (WhatsApp)​ ಸ್ಟೇಟಸ್​ನಿಂದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆಯ ಮಾಸ್ಟರ್‌ಮೈಂಡ್‌ ಮೌಲ್ವಿ ವಸೀಂ ಪಠಾಣ್​ನ್ನು ಹಳೇ ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಗಲಭೆ ಬಳಿಕ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಮೌಲ್ವಿ ವಸೀಂ, ನಿನ್ನೆ ರಾತ್ರಿಯೇ ಮುಂಬೈನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು, ಬಳಿಕ ಇನ್ಸ್‌ಪೆಕ್ಟರ್‌ ಅಶೋಕ್‌ ನೇತೃತ್ವದ 8 ಜನರ ತಂಡ ಹುಬ್ಬಳ್ಳಿಗೆ ಕರೆತರಲಾಗಿದೆ. ಮುಂಬಯಿನಲ್ಲಿ ಅಡಗಿ ಕುಳಿತಿದ್ದ ವಸೀಂ ಪಠಾಣ್, ಹುಬ್ಬಳ್ಳಿಯ ಅದೊಬ್ಬ ವ್ಯಕ್ತಿಯ ಜೊತೆ ಸಂರ್ಪದಲ್ಲಿದ್ದ. ಅದೆ ಮಾಹಿತಿ ಆಧರಿಸಿ ಆತನನ್ನ ಖಾಕಿ ಪಡೆ ಖೆಡ್ಡಾಗೆ ಕೆಡವಿತ್ತು. ಸಮದ್ದು ಕಿನಾರೆಯಲ್ಲಿ ಬಚ್ಚಿಟ್ಟುಕೊಂಡಿದ್ದವನನ್ನ ಸಿಸಿಆರ್​ಬಿ ಇನ್ಸ್ಪೆಕ್ಟರ್ ಅಲ್ತಾಫ್ ನೇತೃತ್ವದ ತಂದ ಮೆಗಾ ಬೇಟೆಯಾಡಿದೆ. ಬಂಧಿಸಿದ್ದಿವಿ ಅಂದ್ರೆ ಕಿರಕ್ ಆಗಬಹುದು ಅನ್ನೋ ಲೆಕ್ಕಚಾರಕ್ಕೆ ಖಾಕಿ ಫ್ಲ್ಯಾನ್ ಮಾಡಿದ್ದು, ನಾನೇ ಶರಣಾಗತಿ ಆಗುತ್ತೇನೆ ಅಂತ  ಆತನಿಂದಲೇ ಹೇಳಿಕೆ ಕೊಡಿಸಿ ಠಾಣೆಗೆ ಖಾಕಿ ಪಡೆ ಕರೆತಂದಿದೆ.

ನಮಗೆ ಆತ ಬೆಳಗಾವಿ ಕಡೆ ಬರ್ತಿದ್ದಾನೆ ಎನ್ನೋ ಮಾಹಿತಿ ಇತ್ತು. ಬೆಳಗಾವಿಯಲ್ಲಿ ಅಲಟ್೯ ಆಗಿದ್ದ ನಮ್ಮ ತಂಡ ಆತನನ್ನ ಬಂಧಿಸಿದೆ‌. ಇಲ್ಲಿವರೆಗೆ 12 ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಈ ವರೆಗೂ 134 ಜನ ಬಂಧನ ಆಗಿದೆ. ಪ್ರಕರಣ ತನಿಖೆ ಮುಂದುವರೆದಿದೆ. ಹಳೇ ಹುಬ್ಬಳ್ಳಿಯಲ್ಲಿ ಬಂದೋಬಸ್ತ್ ನೀಡಲಾಗಿದೆ. ಸದ್ಯ ಪರಿಸ್ಥಿತಿ ಶಾಂತವಿದೆ. ಇನ್ನು ಎರಡು ದಿನ 144 ಸೆಕ್ಷನ್ ಮುಂದುವರೆಯಲಿದೆ. ನಾವು ಇಗಲೇ ಏನೂ ಹೇಳಲ್ಲ. ಸದ್ಯ ರೌಡಿ ಶೀಟರ್ ಗಳ ಬಗ್ಗೆ ಹೇಳಲ್ಲ. ನಾಳೆ ಅಭಿಷೇಕ ಹಿರೇಮಠ ಪರೀಕ್ಷೆ ಇರುವ ಕಾರಣ ನ್ಯಾಯಾಲಯ ಆದೇಶ ನೀಡಿದೆ. ಪರೀಕ್ಷೆ ಹಿನ್ನೆಲೆ ಸೂಕ್ತ ಭದ್ರತೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಸದ್ಯ ಎಷ್ಟು ಜನರಿಗೆ ತನಿಖೆ ಮಾಡಲಾಗುತ್ತದೆ ಎಂದು ತನಿಖೆ ಮುಗಿದ ಮೇಲೆಯೇ ಹೇಳಲಾಗುತ್ತದೆ ಎಂದು ಹುಬ್ಬಳ್ಳಿಯಲ್ಲಿ ಲಾಬೂರಾಮ್ ಹೇಳಿಕೆ ನೀಡಿದ್ದಾರೆ.

ಪ್ರಚೋದನಕಾರಿ ವಾಟ್ಸಾಪ್  ಸ್ಟೇಟಸ್​ನಿಂದ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿ 3 ತಿಂಗಳಿಂದ ಸಾಲು ಸಾಲು ಕ್ಯಾಂಪೇನ್ಗಳೇ ಈ ಗಲಾಟೆಗೆ ಕಾರಣ ಎಂದು ಹೇಳಲಾಗುತ್ತಿದೆ. ಇದಲ್ಲದೆ ಶ್ರೀರಾಮನವಮಿ ದಿನದಂದು ಗಲಾಟೆ ನಡೆಯುತ್ತಿತ್ತು. ಹುಬ್ಬಳ್ಳಿಯ ಪೆಂಡಾರ್ ಗಲ್ಲಿಯ ಮಸೀದಿ ಮೇಲೆ ಜೈ ಶ್ರೀರಾಮ್ ಎಂದು ಕಿಡಿಗೇಡಿಗಳು ಲೇಸರ್ ಲೈಟ್ ಹಾಕಿದ್ದರು. ಇದನ್ನು ಮುಸ್ಲಿಂ ಸಮುದಾಯದ ಹಿರಿಯ ಮುಖಂಡರು ತಡೆದಿದ್ದರು. ನಂತರ ವಿವಾದಿತ ಪೋಸ್ಟ್ ಹಾಕುತ್ತಿದ್ದಂತೆ ಮುಸ್ಲಿಂ ಸಮುದಾಯ ರೊಚ್ಚಿಗೆದ್ದಿತು.

ಪೋಸ್ಟ್ ಹಾಕಿದವರನ್ನು ಮುಗಿಸಲು ಸ್ಕೆಚ್ ಹಾಕಲಾಗಿತ್ತು. ಹುಬ್ಬಳ್ಳಿಯ ಗಲ್ಲಿಗಲ್ಲಿಯಲ್ಲೂ ಗಲಾಟೆಗೆ ಸಂಚು ರೂಪಿಸಲಾಗಿತ್ತು. ಪೋಸ್ಟ್ ಹಾಕಿದ್ದ ಅಭಿಷೇಕ್ ಹಿರೇಮಠನನ್ನು ಪೊಲೀಸರು ರಕ್ಷಿಸಿದ್ದರು. ಹೀಗಾಗಿ ಉದ್ರಿಕ್ತರ ಗುಂಪು ಪೊಲೀಸರನ್ನು ಟಾರ್ಗೆಟ್ ಮಾಡಿತ್ತು. ಇಬ್ಬರು ಪೊಲೀಸರನ್ನು ಕೊಲ್ಲಲು ಯತ್ನಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ವಸೀಂ ಪಠಾಣ್, ಇರ್ಫಾನ್, ಮೊಹಮ್ಮದ್ ಆರೀಫ್ ಹುಬ್ಬಳ್ಳಿ ಕಿಂಗ್ಸ್ ಎಂಬ ವಾಟ್ಸಾಪ್ ಗ್ರೂಪ್​ನಲ್ಲಿ ಈ ಬಗ್ಗೆ ಕರೆ ನೀಡಿದ್ದರು. ಮೂವರ ಸೂಚನೆ ಮೇರೆಗೆ ನೂರಾರು ಜನರು ಜಮಾವಣೆ ಆಗಿದ್ದರು. ಗಲಾಟೆ ವೇಳೆ ಮೌಲ್ವಿ, ಇನ್ಸ್​ಪೆಕ್ಟರ್​ ಜತೆ ವಾಗ್ವಾದ ನಡೆಸಿದ್ದ ಎಂಐಎಂ ಮುಖಂಡ ಮೊಹಮ್ಮದ್ ಆರೀಫ್​ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:

2017ರಲ್ಲಿ ಕೊಡನಾಡು ಎಸ್ಟೇಟ್ ಬಂಗಲೆಯಲ್ಲಿ ನಡೆದ ಕೊಲೆ ಪ್ರಕರಣ: ಜಯಲಲಿತಾ ಮಾಜಿ ಸಹಾಯಕಿ ವಿಕೆ ಶಶಿಕಲಾ ವಿಚಾರಣೆ

Published On - 4:16 pm, Thu, 21 April 22