AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​, ಬಿಜೆಪಿ ಎರಡೂ ಸರ್ಕಾರದಲ್ಲೂ ಹಿಂದೂ ಕಾರ್ಯಕರ್ತರ ಹತ್ಯೆ ಆಗಿದೆ: ಪ್ರಮೋದ್​ ಮುತಾಲಿಕ್​

ಕಾಂಗ್ರೆಸ್​ ಸರ್ಕಾರ ಬಂದ ಮೇಲೆ ಹಿಂದೂ ವಿರೋಧಿ ವಾತಾವರಣ ಸೃಷ್ಠಿಯಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಆತಂಕ ಇತ್ತು. ಬಿಜೆಪಿ ಸರ್ಕಾರವಿದ್ದಾಗಲೂ ಹಿಂದೂ ಕಾರ್ಯಕರ್ತರ ಹತ್ಯೆ ಆಗಿದೆ. ಅದಕ್ಕಾಗಿ ಬಿಜೆಪಿಯವರನ್ನು ಕರ್ನಾಟಕದಲ್ಲಿ ನೆಲಸಮ ಮಾಡಿದ್ದಾರೆ ಎಂದು ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್​ ಮುತಾಲಿಕ್​ ಹೇಳಿದ್ದಾರೆ.

ಕಾಂಗ್ರೆಸ್​, ಬಿಜೆಪಿ ಎರಡೂ ಸರ್ಕಾರದಲ್ಲೂ ಹಿಂದೂ ಕಾರ್ಯಕರ್ತರ ಹತ್ಯೆ ಆಗಿದೆ: ಪ್ರಮೋದ್​ ಮುತಾಲಿಕ್​
ಪ್ರಮೋದ ಮುತಾಲಿಕ್​​
ಶಿವಕುಮಾರ್ ಪತ್ತಾರ್
| Updated By: ವಿವೇಕ ಬಿರಾದಾರ|

Updated on: Jul 11, 2023 | 2:06 PM

Share

ಹುಬ್ಬಳ್ಳಿ: ಕಾಂಗ್ರೆಸ್​ (Congress) ಸರ್ಕಾರ ಬಂದ ಮೇಲೆ ಹಿಂದೂ (Hindu) ವಿರೋಧಿ ವಾತಾವರಣ ಸೃಷ್ಠಿಯಾಗಿದೆ. ಬಿಜೆಪಿ (BJP) ಅಧಿಕಾರದಲ್ಲಿದ್ದಾಗಲೂ ಆತಂಕ ಇತ್ತು. ಬಿಜೆಪಿ ಸರ್ಕಾರವಿದ್ದಾಗಲೂ ಹಿಂದೂ ಕಾರ್ಯಕರ್ತರ ಹತ್ಯೆ ಆಗಿದೆ. ಅದಕ್ಕಾಗಿ ಬಿಜೆಪಿಯವರನ್ನು ಕರ್ನಾಟಕದಲ್ಲಿ ನೆಲಸಮ ಮಾಡಿದ್ದಾರೆ. ಕಾಂಗ್ರೆಸ್​​ನವರು‌ ಮುಸ್ಲಿಮರ ಪರವಾಗಿ ಇದ್ದಾರೆ ಎಂದು ಶ್ರೀರಾಮ್​ ಸೇನೆ ಸ್ಥಾಪಕ ಪ್ರಮೋದ್​ ಮುತಾಲಿಕ್ (Pramod Mutalik)​ ಹೇಳಿದ್ದಾರೆ. ಚಿಕ್ಕೋಡಿಯ ಕಾಮಕುಮಾರ್ ನಂದಿ ಸ್ವಾಮೀಜಿ ಹತ್ಯೆ ಹಿನ್ನೆಲೆ ವರೂರಿನ ನವಗ್ರಹ ತೀರ್ಥ ಕ್ಷೇತ್ರದ ಗುಣಧರನಂದಿ ಮಹಾರಾಜ್ ಸ್ವಾಮೀಜಿಯನ್ನು ಭೇಟಿಯಾಗಿ ಪ್ರಮೋದ್ ಮುತಾಲಿಕ್ ಸಂತಾಪ ಸೂಚಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯವರ ನಾಲಾಯಕರು. ಮಾತಾಡೋಕೆ ನಿಮಗೆ ನೈತಿಕತೆ ಇಲ್ಲ. ನೀವು ಹಿಂದೂ ಕಾರ್ಯಕರ್ತರ ಜೊತೆ ಗಟ್ಟಿಯಾಗಿ ನಿಂತಿದ್ದರೇ ತಲೆ ಮೇಲೆ ಹೊತ್ತುಕೊಳ್ಳುತ್ತಿದ್ದೇವು. ಸತ್ಯಶೋಧನೆ ಏನ ಮಾಡುತ್ತೀರಿ. ಕಾಂಗ್ರೆಸ್ ಮೇಲೆ ಹಾಕುತ್ತೀರಿ, ನಾಟಕ ಮಾಡುತ್ತೀರಿ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಸರ್ಕಾರದ ಮುಂದೆ ನಾಲ್ಕು ಬೇಡಿಕೆ ಇಟ್ಟ ವರೂರು ಜೈನ ಸ್ವಾಮೀಜಿ: ಜಿ ಪರಮೇಶ್ವರ ಹೇಳಿಕೆ

ಕಾಂಗ್ರೆಸ್​ನವರು‌ ಮುಸ್ಲಿಂ ಪರವಾಗಿ ಇದ್ದೀರಿ. ಯಾಕೆ ಮುಸ್ಲಿಂ ಹೆಸರು ಹೇಳತ್ತೀಲ್ಲ. ಯಾಕೆ ಹಿಂದೂ ಹೆಸರು ಹೇಳಿದ್ರೀ. ಉಪಮುಖ್ಯಮಂತ್ರಿಗಳೇ ನಿಮ್ಮ ಬ್ರದರ್ ಕೊಲೆ ಮಾಡಿದ್ದಾರೆ. ನಮ್ಮ ಬ್ರದರ್ ಅಂತೀದ್ರಲ್ಲಾ, ನಿಮ್ಮ ಬ್ರದರ್ ಕೊಲೆ ಮಾಡಿದ್ದಾರೆ. ನಾವ ಸುಮ್ಮನೆ ಬಿಡಲ್ಲ. ನಾವ ಪಾಠ ಕಲಿಸುತ್ತೇವೆ. ಕಾಂಗ್ರೆಸ್ ತುಷ್ಟೀಕರಣ ಹೆಚ್ಚಾಗಿದೆ ಎಂದು ಎಚ್ಚರಿಕೆ ನೀಡಿದರು.

ಕಠಿಣ ಶಿಕ್ಷೆ ಅಂದರೇ ಏನು, ನಮ್ಮ ಸಿಸ್ಟಮ್ ಸರಿ ಇಲ್ಲ. ಒಂದು ವರ್ಷದಲ್ಲಿ ಅವರು ಹೊರಗೆ ಬರುತ್ತಾರೆ. ಉತ್ತರ ಪ್ರದೇಶ ಮಾದರಿಯಲ್ಲಿ ಮೂರು ಆರೋಪಿಗಳ ಮನೆಗೆ ಬುಲ್ಡೋಜರ್ ಹತ್ತಿಸಬೇಕು. ಕ್ರೌರ್ಯ ಕ್ರೌರ್ಯನೆ ಯಾರೇ ಇರಲಿ ಅವರ ಮನೆ ಮೇಲೆ ಬುಲ್ಡೋಜರ್ ಹತ್ತಿಸಬೇಕು. ಸನ್ಯಾಸಿ ಕೊಲ್ಲಲು‌ ಯಾವ ಮಾನಸಿಕತಿ ಇದೆ. ಇದು ಕರ್ನಾಟಕಕ್ಕೆ ಕಳಂಕ ಎಂದರು.

ವಿಧಾನಸಭೆಯಲ್ಲಿ ನಮಾಜ್​ಗೆ ಅವಕಾಶ ಕೊಡವ ವಿಚಾರವಾಗಿ ಮಾತನಾಡಿದ ಅವರು ವಿಧಾನಸೌಧ ಏನ ಮೆಕ್ಕಾ ಮದೀನಾ ? ಇದನ್ನೇನು ಮೆಕ್ಕಾ ಮದೀನಾ ಅಂತಾ ತಿಳಿದುಕೊಂಡಿದ್ದೀರಾ ? ಇದು ಡೆಂಜರಸ್ ಮಾನಸಿಕತೆ. ವಿಧಾನಸೌಧ ಪವಿತ್ರ ದೇಗುಲ, ಅಲ್ಲಿ ನಮಾಜ್ ಮಾಡುತ್ತೀರಾ ನೀವು. ಕಡತದಿಂದ ವಾಪಸ್ ಆ ಮಾತು ತಗಿಬೇಕು. ಅವರಿಗೆ ಶಿಕ್ಷೆಯಾಗಬೇಕು. ಇದೇ ಕೋಮುವಾದ. ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ