ಕಾಂಗ್ರೆಸ್ನವರೇ ನಿಜವಾದ ಹಿಂದೂಗಳು; ರಾಜಕಾರಣಕ್ಕೆ ಹಿಂದುತ್ವ, ಶ್ರೀರಾಮನ ಬಳಸಿಕೊಂಡಿಲ್ಲ -ಸಚಿವ ರಾಮಲಿಂಗಾರೆಡ್ಡಿ
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಈ ದೇಶದಲ್ಲಿ ಲಕ್ಷಾಂತರ ರಾಮನ ದೇವಾಲಯಗಳಿವೆ. ಬಿಜೆಪಿಯವರಿಗೆ ಇತ್ತೀಚೆಗೆ ರಾಮನ ನೆನಪಾಗಿದೆ. ವೋಟ್ಗಾಗಿ ರಾಮನ ನೆನಪು ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೂ ಕಾಂಗ್ರೆಸ್ನವರೇ ನಿಜವಾದ ಹಿಂದೂಗಳು. ರಾಜಕಾರಣಕ್ಕೆ ಯಾವತ್ತೂ ಹಿಂದುತ್ವ, ಶ್ರೀರಾಮನ ಬಳಸಿಕೊಂಡಿಲ್ಲ ಎಂದರು.
ಹುಬ್ಬಳ್ಳಿ, ಜ.08: ಕಾಂಗ್ರೆಸ್ನವರೇ ನಿಜವಾದ ಹಿಂದೂಗಳು. ರಾಜಕಾರಣಕ್ಕೆ ಯಾವತ್ತೂ ಹಿಂದುತ್ವ, ಶ್ರೀರಾಮನ ಬಳಸಿಕೊಂಡಿಲ್ಲ ಎಂದು ಹುಬ್ಬಳ್ಳಿಯಲ್ಲಿ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಲಕ್ಷಾಂತರ ರಾಮನ ದೇವಾಲಯಗಳಿವೆ. ಬಿಜೆಪಿಯವರಿಗೆ ಇತ್ತೀಚಿನ ದಿನಗಳಲ್ಲಿ ಶ್ರೀರಾಮನ (Lord Rama) ನೆನಪಾಗಿದೆ. ಬಿಜೆಪಿಯವರು ವೋಟ್ಗಾಗಿ ರಾಮನ ನೆನಪು ಮಾಡಿಕೊಂಡಿದ್ದಾರೆ. ನಾವು ಸಾವಿರಾರು ವರ್ಷದಿಂದ ರಾಮ, ಆಂಜನೇಯ ಪೂಜೆ ಮಾಡ್ತಿದ್ದೇವೆ ಎಂದರು.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಈ ದೇಶದಲ್ಲಿ ಲಕ್ಷಾಂತರ ರಾಮನ ದೇವಾಲಯಗಳಿವೆ. ಬಿಜೆಪಿಯವರಿಗೆ ಇತ್ತೀಚೆಗೆ ರಾಮನ ನೆನಪಾಗಿದೆ. ವೋಟ್ಗಾಗಿ ರಾಮನ ನೆನಪು ಮಾಡಿಕೊಂಡಿದ್ದಾರೆ. ಸಾವಿರಾರು ವರ್ಷಗಳಿಂದ ನಾವು ರಾಮ ಆಂಜನೇಯ ಪೂಜೆ ಮಾಡ್ತಿದ್ದೀವಿ. ನಾವು ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳಲ್ಲ. ಬಿಜೆಪಿಗೆ ಏನೂ ಬಂಡವಾಳ ಇಲ್ಲ, ಅದಕ್ಕೆ ಧರ್ಮ ತರುತ್ತಾರೆ. ನಾವು ಶ್ರದ್ಧಾ ಭಕ್ತಿಯಿಂದ ಶ್ರೀರಾಮನನ್ನು ಪೂಜೆ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಮುಜರಾಯಿ ಇಲಾಖೆಯ ದೇವಸ್ಥಾನದ ಹುಂಡಿ ಹಣ ಆ ದೇಗುಲಕ್ಕೇ ಬಳಕೆಯಾಗಬೇಕು: ರಾಮಲಿಂಗಾ ರೆಡ್ಡಿ ಮಹತ್ವದ ಘೋಷಣೆ
ಬಿಜೆಪಿಯವರು ಅಧಿಕಾರಕ್ಕೆ ಬಂದಾಗ ಏನೂ ಕೆಲಸ ಮಾಡಲಿಲ್ಲ. ಕೆಲಸ ಮಾಡೋರಿಗೂ ಬಿಡಲ್ಲ. ಆಗೋದಕ್ಕೆ ಹರಕತ್ತು, ಆಗದೆ ಇರೋದಕ್ಕೆ ಕುಮ್ಮಕ್ಕು ಬಿಜೆಪಿಯ ಕಥೆ. ಕೆಲಸ ಮಾಡಲಿಲ್ಲ, ಹೀಗಾಗಿ ಜನರು ಬಿಜೆಪಿಯವರನ್ನು ಮನೆಗೆ ಕಳಿಸಿದ್ರು.ಕಳೆದ ನಾಲ್ಕು ವರ್ಷದಿಂದ ಒಂದೇ ಒಂದು ಬಸ್ ಖರೀದಿ ಮಾಡಿಲ್ಲ. ಕಳೆದ ನಾಲ್ಕು ವರ್ಷದಲ್ಲಿ ಒಂದೇ ಒಂದು ನೇಮಕಾತಿ ಮಾಡಲಿಲ್ಲ. ಪ್ರತಿ ದಿನ 60 ಲಕ್ಷ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಗಳಲ್ಲಿ ಓಡಾಡ್ತಿದ್ದಾರೆ. ಇವರ ಶಾಪ ಬಿಜೆಪಿಗೆ ತಟ್ಟತ್ತೆ. ಬಿಜೆಪಿಗೆ ತಡೆದುಕೊಳ್ಳಲು ಆಗ್ತಿಲ್ಲ, ಅವರಿಗೆ ಹೊಟ್ಟೆ ಉರಿ. ಪ್ರಹ್ಲಾದ ಜೋಶಿ ಗಿಮಿಕ್ ಮಾಡ್ತಿದಾರೆ. ಕೇಂದ್ರದ ಮಂತ್ರಿ ಅಂಕಿ ಸಂಖ್ಯೆ ಇಟ್ಕೊಂಡು ಮಾತಾಡಬೇಕು. ಕರಸೇವಕ ಅಂತಾರೆ, ಅವರ ಮೇಲೆ ಎಷ್ಟು ಕೇಸ್ ಇದೆ? ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.
ಮೂರು ಜನ ಡಿಸಿಎಮ್ ಕೇಳೋದ್ರಲ್ಲಿ ತಪ್ಪಿಲ್ಲ. ಮಾಡೋದ ಬಿಡೋದು ಹೈಕಮಾಂಡ್ ಗೆ ಬಿಟ್ಟಿದ್ದು. ನಾನು ಉಪಮುಖ್ಯಮಂತ್ರಿ ಆಕಾಂಕ್ಷಿ ಅಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ