ಹಣ ಪಡೆದು ಬಟ್ಟೆಗಳ ಬಾಕ್ಸ್ ನೀಡದ ಹುಬ್ಬಳ್ಳಿಯ ರೆಡಿಮೇಡ್ ಬಟ್ಟೆ ಕಂಪನಿಗೆ ದಂಡ ವಿಧಿಸಿದ ಗ್ರಾಹಕರ ಆಯೋಗ; ಎಷ್ಟು ಗೊತ್ತಾ?
ಹುಬ್ಬಳ್ಳಿ(Hubballi)ಯ ಸ್ಯಾಮ್ ಔಟ್‍ಫಿಟ್ ಫ್ಯಾಶನ್ ಪ್ರೈವೇಟ್ ಲಿಮಿಟೆಡ್ ಇವರಿಂದ ರೂ. 38,640 ರೂ ಮೌಲ್ಯದ ಬಟ್ಟೆಗಳ ಬಾಕ್ಸ್(Clothes Box)ಗಳನ್ನು ಖರೀದಿಸಿದ್ದರು. ಆದರೆ, ಸ್ಯಾಮ್ ಔಟ್‍ಫಿಟ್ ಫ್ಯಾಶನ್‌ನವರು ಒಪ್ಪಂದದಂತೆ ಬಟ್ಟೆಗಳ ಬಾಕ್ಸ್ ಸರಬರಾಜು ಮಾಡಿರಲಿಲ್ಲ. ಆ ಕುರಿತು ವಿಚಾರಿಸಿದಾಗ 2022 ಸೆಪ್ಟೆಂಬರ್ 20 ರಂದು ಕೇವಲ ರೂ. 9,396 ಯ ರಸೀದಿ ಕೊಟ್ಟಿದ್ದರು. ಹಲವು ಬಾರಿ ವಿಚಾರಿಸಿದರೂ ಇಬ್ಬರೂ ಎದುರುದಾರರು ಅರುಣ್ ಕುಂಬಾರ ಅವರಿಗೆ ಬಟ್ಟೆಗಳ ಬಾಕ್ಸ್ ಕೊಟ್ಟಿರಲಿಲ್ಲ.
ಧಾರವಾಡ, ನ.07: ಜಿಲ್ಲೆಯ ಕಲಘಟಗಿ ತಾಲೂಕಿನ ಅಕ್ಕಿ ಓಣಿಯ ನಿವಾಸಿ ಅರುಣ್ ಕುಂಬಾರ ಎನ್ನುವವರು 2022 ಆಗಸ್ಟ್ 28 ರಂದು ಮಲೀಕ್ ಇಸ್ಮಾಯಿಲ್ ಎನ್ನುವವರ ಮಧ್ಯಸ್ಥಿಕೆಯಲ್ಲಿ ಹುಬ್ಬಳ್ಳಿ(Hubballi)ಯ ಸ್ಯಾಮ್ ಔಟ್‍ಫಿಟ್ ಫ್ಯಾಶನ್ ಪ್ರೈವೇಟ್ ಲಿಮಿಟೆಡ್ ಇವರಿಂದ ರೂ. 38,640 ರೂ ಮೌಲ್ಯದ ಬಟ್ಟೆಗಳ ಬಾಕ್ಸ್(Clothes Box)ಗಳನ್ನು ಖರೀದಿಸಿದ್ದರು. ಆದರೆ, ಸ್ಯಾಮ್ ಔಟ್‍ಫಿಟ್ ಫ್ಯಾಶನ್‌ನವರು ಒಪ್ಪಂದದಂತೆ ಬಟ್ಟೆಗಳ ಬಾಕ್ಸ್ ಸರಬರಾಜು ಮಾಡಿರಲಿಲ್ಲ. ಆ ಕುರಿತು ವಿಚಾರಿಸಿದಾಗ 2022 ಸೆಪ್ಟೆಂಬರ್ 20 ರಂದು ಕೇವಲ ರೂ. 9,396 ಯ ರಸೀದಿ ಕೊಟ್ಟಿದ್ದರು. ಹಲವು ಬಾರಿ ವಿಚಾರಿಸಿದರೂ ಇಬ್ಬರೂ ಎದುರುದಾರರು ಅರುಣ್ ಕುಂಬಾರ ಅವರಿಗೆ ಬಟ್ಟೆಗಳ ಬಾಕ್ಸ್ ಕೊಟ್ಟಿರಲಿಲ್ಲ. ಅದರಿಂದ ತನಗೆ ಮೋಸವಾಗಿದೆ. ಕಂಪನಿಯವರ ನಡುವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಅರುಣ್ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಈ ದೂರಿನ ಬಗ್ಗೆ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು ವಿಚಾರಣೆ ನಡೆಸಿ, ‘ಕಂಪನಿಯವರು ಅರುಣ್ ಅವರಿಂದ ಹಣ ಪಡೆದ ವಿಷಯವನ್ನು ಅಲ್ಲಗಳೆದಿಲ್ಲ. ಹಣ ಪಡೆದ ನಂತರ ಆ ಮೊತ್ತದ ಬಟ್ಟೆಗಳ ಬಾಕ್ಸ್ ಕೊಡುವುದು ಅವರ ಕರ್ತವ್ಯವಾಗಿರುತ್ತದೆ. ಬಟ್ಟೆಗಳ ಬಾಕ್ಸ್ ಸರಬರಾಜು ಮಾಡದೇ ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಇದನ್ನೂ ಓದಿ:ಧಾರವಾಡ: ದೋಷಯುಕ್ತ ಇವಿ ವಾಹನ: ಹೊಸ ಬೈಕ್ ನೀಡಲು ಟಿವಿಎಸ್‌ಗೆ ಗ್ರಾಹಕರ ಆಯೋಗ ಆದೇಶ
ಪೂರ್ತಿ ಹಣ ಸಂದಾಯ ಮಾಡುವಂತೆ ಆದೇಶಿಸಿದ ಆಯೋಗ
ಹೌದು, ಸುದೀರ್ಘ ವಿಚಾರಣೆಯ ನಂತರ ತೀರ್ಪು ನೀಡಿದ ಗ್ರಾಹಕರ ಆಯೋಗ, ‘ಒಂದು ತಿಂಗಳೊಳಗಾಗಿ ಅರುಣ್ ಕುಂಬಾರ ಅವರು ಸಂದಾಯ ಮಾಡಿದ 38,640 ರೂಗಳನ್ನು ಹಣ ಕೊಟ್ಟ ದಿನದಿಂದ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಪೂರ್ತಿ ಹಣ ಸಂದಾಯ ಮಾಡುವಂತೆ ಆದೇಶಿಸಿದೆ. ಅಷ್ಟೇ ಅಲ್ಲದೆ ಅರುಣ್ ಅವರಿಗಾದ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ 10 ಸಾವಿರ ರೂ ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ಎಂದು 5 ಸಾವಿರ ರೂ ಕೊಡುವಂತೆ ಆಯೋಗ ತೀರ್ಪಿನಲ್ಲಿ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ