ಧಾರವಾಡ: ಜಿಲ್ಲಾ ಕಸಾಪ ಚುನಾವಣೆಗೆ ನಿಯಮಬಾಹಿರ ಸ್ಪರ್ಧೆ; ಕೋರ್ಟ್​ನಿಂದ ತಡೆಯಾಜ್ಞೆ

Dharwad News: ಕಸಾಪ ಹಿಂದಿನ ಅಧ್ಯಕ್ಷ ಲಿಂಗರಾಜ ಅಂಗಡಿ ಸ್ಪರ್ಧೆ ಪ್ರಶ್ನಿಸಿ ನಾಗರಾಜ ಕಿರಣಗಿ ರಿಟ್ ಸಲ್ಲಿಸಿದ್ದರು. ಎರಡು ಬಾರಿ ಅಧ್ಯಕ್ಷರಾಗಿದ್ದ ಲಿಂಗರಾಜ ಅಂಗಡಿ, 3ನೇ ಬಾರಿ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.

ಧಾರವಾಡ: ಜಿಲ್ಲಾ ಕಸಾಪ ಚುನಾವಣೆಗೆ ನಿಯಮಬಾಹಿರ ಸ್ಪರ್ಧೆ; ಕೋರ್ಟ್​ನಿಂದ ತಡೆಯಾಜ್ಞೆ
ಧಾರವಾಡ ಹೈಕೋರ್ಟ್‌
Follow us
TV9 Web
| Updated By: ganapathi bhat

Updated on:Oct 27, 2021 | 8:14 PM

ಧಾರವಾಡ: ಇಲ್ಲಿನ ಜಿಲ್ಲಾ ಕಸಾಪ ಚುನಾವಣೆಗೆ ತಡೆಯಾಜ್ಞೆ ವಿಧಿಸಲಾಗಿದೆ. ಧಾರವಾಡ ಹೈಕೋರ್ಟ್‌ನಿಂದ ತಡೆಯಾಜ್ಞೆ ಹಾಕಲಾಗಿದೆ. ನವೆಂಬರ್ 21 ರಂದು ನಡೆಬೇಕಿದ್ದ ಕಸಾಪ ಚುನಾವಣೆ ಸಂಬಂಧ ನಿಯಮಬಾಹಿರ ಸ್ಪರ್ಧೆ ವಿರುದ್ಧ ರಿಟ್ ಅರ್ಜಿ ಸಲ್ಲಿಕೆಯಾಗಿತ್ತು. ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಗರಾಜ ಕಿರಣಗಿ ಎಂಬವರು ಧಾರವಾಡ ಹೈಕೋರ್ಟ್​ಗೆ ರಿಟ್ ಸಲ್ಲಿಸಿದ್ದರು. ಅರ್ಜಿದಾರರ ಪರ ಎ.ಆರ್. ಪಾಟೀಲ್ ವಾದ ಮಂಡಿಸಿದ್ದರು.

ಕಸಾಪ ಹಿಂದಿನ ಅಧ್ಯಕ್ಷ ಲಿಂಗರಾಜ ಅಂಗಡಿ ಸ್ಪರ್ಧೆ ಪ್ರಶ್ನಿಸಿ ನಾಗರಾಜ ಕಿರಣಗಿ ರಿಟ್ ಸಲ್ಲಿಸಿದ್ದರು. ಎರಡು ಬಾರಿ ಅಧ್ಯಕ್ಷರಾಗಿದ್ದ ಲಿಂಗರಾಜ ಅಂಗಡಿ, 3ನೇ ಬಾರಿ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ನಿರಂತರ 2 ಬಾರಿ ಸ್ಪರ್ಧಿಸದಂತೆ ಕಸಾಪ ನಿಯಮ ಇದೆ. ಆದರೂ ಲಿಂಗರಾಜ ಅಂಗಡಿ 3ನೇ ಬಾರಿ ಸ್ಪರ್ಧಿಸಿರುವ ಹಿನ್ನೆಲೆ ರಿಟ್ ಅರ್ಜಿ ಸಲ್ಲಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದ ನಾಗರಾಜ ಕಿರಣಗಿ, ನಾಮಪತ್ರ ತಿರಸ್ಕರಿಸುವಂತೆ ಮನವಿ ಮಾಡಿದ್ದರು. ಚುನಾವಣಾಧಿಕಾರಿ ಕ್ರಮ‌ ಕೈಗೊಳ್ಳದ ಹಿನ್ನೆಲೆ ರಿಟ್​ ಅರ್ಜಿ ಸಲ್ಲಿಸಲಾಗಿದೆ. ಇದೀಗ ನ್ಯಾಯಾಲಯ ನಾಗರಾಜ ಕಿರಣಗಿ ಅರ್ಜಿ ಪುರಸ್ಕರಿಸಿದೆ. ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್‌ರಿಂದ ತಡೆಯಾಜ್ಞೆ ವಿಧಿಸಲಾಗಿದೆ.

ಇದನ್ನೂ ಓದಿ: ಅಕ್ರಮ ಕಟ್ಟಡ ತೆರವು ವಿಚಾರ: ಬಿಬಿಎಂಪಿ ಕಾರ್ಯವೈಖರಿಗೆ ಹೈಕೋರ್ಟ್​ ಗರಂ

ಇದನ್ನೂ ಓದಿ: ಸರ್ಕಾರಿ ಲಿವರ್ ಕಸಿ ಆಸ್ಪತ್ರೆ ಆರಂಭಿಸಲು ವಿಳಂಬ; ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಹೈಕೋರ್ಟ್

Published On - 7:03 pm, Wed, 27 October 21