ಸೋಯಾಬೀನ್ ಮೂಟೆಗಳಿಗೆ ದುಷ್ಕರ್ಮಿಗಳಿಂದ ಬೆಂಕಿ; 200ಕ್ಕೂ ಹೆಚ್ಚು ಮೂಟೆ ಬೆಂಕಿಗಾಹುತಿ
ನೇಮಿನಾಥ ಜಲ್ಲಿ 14 ಎಕರೆ ಜಮೀನಿನಲ್ಲಿ ಸೋಯಾಬೀನ್ ಬೆಳೆದಿದ್ದರು. ಫಸಲನ್ನು ಕಟಾವು ಮಾಡಿ ಚೀಲಗಳಲ್ಲಿ ತುಂಬಿ ಹೊಲದಲ್ಲಿಯೇ ಇಟ್ಟಿದ್ದರು. ಇದೀಗ ಬೆಂಕಿಯಿಂದಾಗಿ ಎಲ್ಲವೂ ಸುಟ್ಟು ಹೋಗಿದೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸ್ಥಿತಿ ನಿರ್ಮಾಣವಾಗಿದೆ.
ಧಾರವಾಡ : ಬೆಂಕಿ ಬಿದ್ದು 200 ಕ್ಕೂ ಹೆಚ್ಚು ಸೋಯಾಬೀನ್ ಚೀಲಗಳು ಸುಟ್ಟು ಕರಕಲಾದ ಘಟನೆ ಧಾರವಾಡ ತಾಲೂಕಿನ ಲೋಕೂರು ಗ್ರಾಮದಲ್ಲಿ ನಡೆದಿದೆ. ಎರಡು ದಿನಗಳ ಹಿಂದಷ್ಟೇ ಕಟಾವು ಮಾಡಿ ಮೂಟೆಗಳಿಗೆ ತುಂಬಿಟ್ಟಿದ್ದ ಸೋಯಾಬೀನ್ ಚೀಲಗಳಿಗೆ ತಡರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಅನುಮಾನ ವ್ಯಕ್ತವಾಗಿದೆ. ಬೆಂಕಿ ಹತ್ತಿ ಕೆಲವೇ ನಿಮಿಷಗಳಲ್ಲಿ 200 ಕ್ಕೂ ಹೆಚ್ಚು ಚೀಲಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಲೋಕೂರು ಗ್ರಾಮದ ನೇಮಿನಾಥ ಜಲ್ಲಿ ಎಂಬುವವರಿಗೆ ಸೇರಿದ ಸೋಯಾಬೀನ್ ಸಂಪೂರ್ಣ ನಾಶವಾಗಿದೆ.
ನೇಮಿನಾಥ ಜಲ್ಲಿ 14 ಎಕರೆ ಜಮೀನಿನಲ್ಲಿ ಸೋಯಾಬೀನ್ ಬೆಳೆದಿದ್ದರು. ಫಸಲನ್ನು ಕಟಾವು ಮಾಡಿ ಚೀಲಗಳಲ್ಲಿ ತುಂಬಿ ಹೊಲದಲ್ಲಿಯೇ ಇಟ್ಟಿದ್ದರು. ಇದೀಗ ಬೆಂಕಿಯಿಂದಾಗಿ ಎಲ್ಲವೂ ಸುಟ್ಟು ಹೋಗಿದೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸ್ಥಿತಿ ನಿರ್ಮಾಣವಾಗಿದೆ.
ಬೆಂಕಿ ಕಾಣಿಸಿಕೊಂಡ ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರು. ಆದರೆ ಬೆಂಕಿ ನಿಯಂತ್ರಣಕ್ಕೆ ಬರಲೇ ಇಲ್ಲ. ಇದರಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಸೋಯಾಬೀನ್ ಸುಟ್ಟು ಹೋಗಿದೆ. ಇದೀಗ ಪ್ರಕರಣ ಗರಗ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಘಟನೆಗೆ ನಿಖರವಾದ ಕಾರಣವನ್ನು ಪತ್ತೆ ಹಚ್ಚಲು ತನಿಖೆ ಶುರು ಮಾಡಿದ್ದಾರೆ.
ಇದನ್ನೂ ಓದಿ: ಅನ್ನದಾತನ ಬದುಕಿಗೆ ಕೊಳ್ಳಿ ಇಟ್ಟ ವಿದ್ಯುತ್ ತಂತಿಗಳು : ಬೆಳೆದು ನಿಂತಿದ್ದ ಅಡಿಕೆ, ಬಾಳೆ ಬೆಳೆ ಬೆಂಕಿಗಾಹುತಿ!
ಶಿವಮೊಗ್ಗದ ಸಾಗರದಲ್ಲಿ ಭಾರೀ ಸ್ಫೋಟ! ಧಗ ಧಗನೇ ಉರಿದ ಬೆಂಕಿ
Published On - 8:40 am, Wed, 27 October 21