Dharwad: ಜಿಲ್ಲೆಯಲ್ಲಿ ಹೆಚ್ಚಿದ ಸೈಬರ್ ಕ್ರೈಮ್; ಆರು ತಿಂಗಳಲ್ಲಿ ಬರೊಬ್ಬರಿ 6.66 ಕೋಟಿ ರೂಪಾಯಿ ವಂಚನೆ

ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆಂದು ಮೊದಲಿನಿಂದಲೂ ಹೇಳುತ್ತಾರೆ. ಇತ್ತೀಚೆಗೆ ಜಗತ್ತು ಡಿಜಿಟಲ್ ಆದಂತೆ ಕಳ್ಳರ ಕರಾಮತ್ತು ನಡೆಯೋದಿಲ್ಲವೆಂದು ಹೇಳುತ್ತಿದ್ದರು. ಆದರೆ, ಈಗ ಈ ಡಿಜಿಟಲ್ ವ್ಯವಸ್ಥೆಯ ಮೂಲಕವೇ ಜನರ ಹಣದ ಮೇಲೆ ಕಳ್ಳರು ಕನ್ನ ಹಾಕುತ್ತಿದ್ದು, ಅದರಲ್ಲಿಯೂ ಅತೀ ಹೆಚ್ಚು ವಿದ್ಯಾವಂತರು ಇರುವ ಧಾರವಾಡದಲ್ಲಿಯೇ ಸೈಬರ್ ಕಳ್ಳರ ಹಾವಳಿ ಹೆಚ್ಚಾಗಿದೆ.

Dharwad: ಜಿಲ್ಲೆಯಲ್ಲಿ ಹೆಚ್ಚಿದ ಸೈಬರ್ ಕ್ರೈಮ್; ಆರು ತಿಂಗಳಲ್ಲಿ ಬರೊಬ್ಬರಿ 6.66 ಕೋಟಿ ರೂಪಾಯಿ ವಂಚನೆ
ಧಾರವಾಡ ಎಸ್​ಪಿ. ವಂಚನೆಗೊಳಗಾದವರು
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 28, 2023 | 6:59 AM

ಧಾರವಾಡ: ಇತ್ತೀಚೆಗೆ ಡಿಜಿಟಲ್ ವ್ಯವಸ್ಥೆಗೆ ಜನ ಅಪ್ಡೇಟ್ ಆದ ಬಳಿಕ ಆನ್ಲೈನ್ ವ್ಯವಹಾರವೇ ಹೆಚ್ಚಾಗಿದೆ. ಅದರಲ್ಲಿಯೂ ಈ ಅನ್ ಲೈನ್ ವ್ಯವಹಾರ ಹೆಚ್ಚಾಗಿ ಸುಶಿಕ್ಷಿತರೇ ನಡೆಸುತ್ತಾರೆ. ಇಂತಹ ಅತೀ ಹೆಚ್ಚು ಸುಶಿಕ್ಷಿತರು ಇರುವ ಧಾರವಾಡ ಜಿಲ್ಲೆಯಲ್ಲಿರೂ ಆನ್ ಲೈನ್ ವ್ಯವಹಾರ ಮಾಡುವ ಶಿಕ್ಷಿತರ ಸಂಖ್ಯೆ ಹೆಚ್ಚಿದೆ. ಆದರೆ, ಅದರ ಬೆನ್ನಲ್ಲಿಯೇ ಈಗ ಆನ್ ಲೈನ್ ಮೂಲಕ ವಂಚನೆ ಮಾಡುವವರ ಜಾಲಕ್ಕೆ ಸಿಲುಕಿರುವವರ ಸಂಖ್ಯೆಯೂ ಇದೇ ಧಾರವಾಡದಲ್ಲಿ ಹೆಚ್ಚಾಗಿದೆ. ಇವರ ಹೆಸರು ಶ್ರೀನಿವಾಸ ಇಂಚೂರು. ಧಾರವಾಡದ ನಿವಾಸಿಯಾಗಿರುವ ಇವರು ಹೋಟೆಲ್ ಉದ್ಯಮಿ. ಇತ್ತೀಚಿಗೆ ಅವರ ಮೊಬೈಲ್​ಗೆ ಒಂದು ಸಂದೇಶ ಬಂದಿತ್ತು. ಖಾಸಗಿ ಬ್ಯಾಂಕ್​ವೊಂದರಲ್ಲಿ ನಿಮಗೆ ಕಡಿಮೆ ಬಡ್ದಿ ದರದಲ್ಲಿ 5 ಲಕ್ಷ ರೂಪಾಯಿ ಲೋನ್ ಸಿಗುತ್ತದೆಯೆಂದು ಅದರಲ್ಲಿ ಹೇಳಲಾಗಿತ್ತು. ಅವರಿಗೆ ಸಾಲ ಅವಶ್ಯಕತೆ ಇದ್ದಿದ್ದರಿಂದ ಆ ಲಿಂಕ್ ಮೂಲಕ ಹೋದಾಗ ಅವರಿಗೆ ಗೊತ್ತಿಲ್ಲದಂತೆ ಅವರ ಖಾತೆಯಿಂದ 17 ಸಾವಿರ ರೂಪಾಯಿ ಕಟ್ ಆಗಿದೆ. ಇದರಿಂದಾಗಿ ಅವರಿಗೆ ಅತ್ತ ಸಾಲವೂ ಇಲ್ಲ, ಇತ್ತ ಖಾತೆಯಲ್ಲಿ ಹಣವೂ ಮಾಯವಾಗಿದೆ.

ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 224 ಆನ್ ಲೈನ್ ವಂಚನೆ ಪ್ರಕರಣ

ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಧಾರವಾಡ ಜಿಲ್ಲೆಯಲ್ಲಿ ಒಟ್ಟು 224 ಆನ್ ಲೈನ್ ವಂಚನೆ ಪ್ರಕರಣಗಳಲ್ಲಿ ಜನ ಒಟ್ಟು 6.66 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಇದು ನಗರ ಪ್ರದೇಶ ಮಾತ್ರವಲ್ಲ ಹಳ್ಳಿ ಹಳ್ಳಿಯಲ್ಲಿರುವ ಜನರ ಬ್ಯಾಂಕ್ ಅಕೌಂಟ್​ಗಳಿಗೂ ಅವರ ಮೊಬೈಲ್ ಸಂಪರ್ಕವನ್ನೇ ಬಳಸಿಕೊಂಡು ಸೈಬರ್ ಕಳ್ಳರು ಕನ್ನ ಹಾಕುತ್ತಿದ್ದಾರೆ. ಲಿಂಕ್​ವೊಂದನ್ನು ಕಳುಹಿಸಿ ಕ್ಲಿಕ್ ಮಾಡಿ ಎಂದು ಹೇಳುವ ಮೂಲಕ ಇಲ್ಲವೇ, ಓಟಿಪಿ ಕಳುಹಿಸುವ ಮೂಲಕ ಎಲ್ಲಿಯೂ ಕುಳಿತು ಇವರ ಅಕೌಂಟ್​ದಲ್ಲಿನ ಹಣ ಕಸಿದುಕೊಳ್ಳುತ್ತಿದ್ದಾರೆ. ಇನ್ನು ಧಾರವಾಡ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತಲೂ ಈ ವರ್ಷ ಸೈಬರ್ ಕ್ರೈಂನ ವಂಚನೆ ಹೆಚ್ಚಾಗಿದೆ.

ಇದನ್ನೂ ಓದಿ:Cyber Crime: ಮತ್ತೊಂದು ಸೈಬರ್ ಕ್ರೈಮ್ ಪ್ರಕರಣ ದಾಖಲು: ಓಟಿಪಿ ಹಾಕಿ 1 ಲಕ್ಷ ರೂ. ಕಳೆದುಕೊಂಡ ಮಹಿಳೆ

ಕಳೆದ ವರ್ಷ 12 ತಿಂಗಳ ಅವಧಿಯಲ್ಲಿ ಜಿಲ್ಲೆಯ ಜನ ಆನ್ ಲೈನ್ ವಂಚನೆಯಲ್ಲಿ 6.60 ಕೋಟಿ ರೂಪಾಯಿ ಕಳೆದುಕೊಂಡಿದ್ದರು. ಆದರೆ, ಈ ವರ್ಷ ಆರೇ ತಿಂಗಳಿನಲ್ಲಿ ಅದನ್ನು ಮೀರಿ ಹೋಗಿದೆ. 224 ಪ್ರಕರಣಗಳ ಪೈಕಿ ಒಂದಷ್ಟು ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು, 1.91 ಕೋಟಿ ರೂಪಾಯಿ ಹಣವನ್ನ ರಿಕವರಿ ಮಾಡಿಕೊಂಡಿದ್ದಾರೆ. ಇನ್ನು ಈ ಸೈಬರ್ ವಂಚನೆ ಪ್ರಕರಣವನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಗಂಭೀರವಾಗ ಪರಿಗಣಿಸಿದ್ದು, ಮುಂದಿನ ಒಂದು ವಾರದಲ್ಲಿ ಇದಕ್ಕೆ ಸಂಬಂಧಿಸಿದಂತೆಯೇ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆಗೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಕಾನೂನು ಮತ್ತು ಪೊಲೀಸ್ ವ್ಯವಸ್ಥೆ ಎಷ್ಟೇ ಜಾಗರೂಕವಾಗಿದ್ದರೂ ಸಹ ಸೈಬರ್ ಕಳ್ಳರು, ಪೊಲೀಸರಿಗಿಂತ ಜಾಣರಾಗಿ ಕಾರ್ಯ ಮಾಡುತ್ತಿದ್ದಾರೆ. ಇನ್ನು ಅವರಿಗೆ ಜನರನ್ನು ಸಲೀಸಾಗಿ ಮೋಸ ಮಾಡಿ, ಅವರ ಖಾತೆಗಳಿಗೆ ಕನ್ನ ಹಾಕೋದು ಚೆನ್ನಾಗಿ ಗೊತ್ತಾಗಿ ಹೋಗಿದೆ. ಜನರು ಕೂಡ ಈ ಬಗ್ಗೆ ಜಾಗೃತರಾಗಿ, ಇಂತಹ ಯಾವುದೇ ಆಮಿಷಕ್ಕೆ ಒಳಗಾಗದೇ ಹುಷಾರಾಗಿರಬೇಕಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!