AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ ಹಿಂದಿ‌ ಪ್ರಚಾರ ಸಭೆ : ಹಿಂದಿನ ಆಡಳಿತ ಮಂಡಳಿ ಅಕ್ರಮ, ಕೋಟಿ ಕೋಟಿ ನುಂಗಿದವರಿಗೆ ಬೆಂಗಳೂರು ಸಿಬಿಐನಿಂದ ಶಾಕ್

Dharwad Dakshin Bharat Hindi Prachar Sabha: ಇಂಥ ಅಕ್ರಮ ಆಂಧ್ರ ಪ್ರದೇಶದಲ್ಲಿಯೂ ನಡೆದಿತ್ತು. ಅಲ್ಲಿಯೂ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿಸಲಾಗಿತ್ತು. ಇದೀಗ ಕರ್ನಾಟಕದಲ್ಲಿಯೂ ಕೂಡ ಕೇಸ್ ದಾಖಲಾಗಿದ್ದು, ಯಾರ ಯಾರ ಬುಡಕ್ಕೆ ನೀರು ಬರಲಿದೆ ಎನ್ನುವ ಕುತೂಹಲ ಉಂಟಾಗಿದೆ.

ಧಾರವಾಡ ಹಿಂದಿ‌ ಪ್ರಚಾರ ಸಭೆ : ಹಿಂದಿನ ಆಡಳಿತ ಮಂಡಳಿ ಅಕ್ರಮ, ಕೋಟಿ ಕೋಟಿ ನುಂಗಿದವರಿಗೆ ಬೆಂಗಳೂರು ಸಿಬಿಐನಿಂದ ಶಾಕ್
ಕೋಟಿ ಕೋಟಿ ನುಂಗಿದವರಿಗೆ ಬೆಂಗಳೂರು ಸಿಬಿಐನಿಂದ ಶಾಕ್
TV9 Web
| Edited By: ಸಾಧು ಶ್ರೀನಾಥ್​|

Updated on: Jan 26, 2023 | 11:10 AM

Share

ಹಿಂದಿ ಭಾಷೆ (Hindi Language) ದಕ್ಷಿಣ ಭಾರತದಲ್ಲೂ ಬೆಳೆಯಬೇಕು ಅನ್ನೋ ಕಾರಣಕ್ಕೆ ಸ್ಥಾಪಿತವಾಗಿದ್ದೇ ದಕ್ಷಿಣ ಹಿಂದಿ ಪ್ರಚಾರ ಸಭಾ (Dharwad Dakshin Bharat Hindi Prachar Sabha-DBHPS). ಮಹಾತ್ಮಾ ಗಾಂಧಿ ನೇತೃತ್ವದಲ್ಲಿ ಆರಂಭ ಆಗಿದ್ದ ಈ ಪ್ರಚಾರ ಸಭೆ ಇದೀಗ ಅವ್ಯವಹಾರಗಳಿಂದ ಸುದ್ದಿಗೆ ಬಂದಿದೆ. ಹಿಂದಿ ಭಾಷೆ ಕಲಿಕೆಯನ್ನು ಉತ್ತೇಜಿಸುವುದಕ್ಕಾಗಿ ಕೇಂದ್ರ ಸರ್ಕಾರ ಆಯಾ ಸಮಯಕ್ಕೆ ಹಣವನ್ನ ಬಿಡುಗಡೆ ಮಾಡುತ್ತಾ ಬಂದಿದೆ. ಅದರಂತೆ 2004-05 ಹಾಗೂ 2016-17ರಲ್ಲಿ ಬಿಡುಗಡೆ ಮಾಡಿದ್ದ 5.78 ಕೋಟಿ ರೂಪಾಯಿಯನ್ನು ಅನ್ಯ ಉದ್ದೇಶಕ್ಕೆ ಅಕ್ರಮವಾಗಿ (Misappropriation) ಬಳಸಿಕೊಂಡಿರುವ ಆರೋಪ ಇದೀಗ ಕೇಳಿ ಬಂದಿದೆ. ಇದರ ಆಧಾರದ ಮೇಲೆ ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ (ಡಿಬಿಎಚ್‌ಪಿಎಸ್) ಮಾಜಿ ಕಾರ್ಯಾಧ್ಯಕ್ಷ ಶಿವಯೋಗಿ ನೀರಲಕಟ್ಟಿ, ಡಾ. ಆನಂದ ಕುಲಕರ್ಣಿ, ಗುರನಗೌಡ ಸೇರಿದಂತೆ ಇತರರ ವಿರುದ್ಧ ಸಿಬಿಐ (CBI) ಎಫ್‌ಐಆರ್ (FIR) ದಾಖಲಿಸಿದೆ. ಚೆನ್ನೈನಲ್ಲಿರುವ ಡಿಬಿಎಚ್‌ಪಿಎಸ್ ಕೇಂದ್ರ ಕಚೇರಿ ಹಾಗೂ ದಕ್ಷಿಣ ಭಾರತದ ವಿವಿಧೆಡೆ ಇರುವ ಪ್ರಾದೇಶಿಕ ಸಂಸ್ಥೆಗಳಲ್ಲಿ ಅನುದಾನ ದುರ್ಬಳಕೆಯಾಗಿರುವ ಕುರಿತು ಕೇಂದ್ರ ಶಿಕ್ಷಣ ಸಚಿವಾಲಯದ ಜಾಗೃತ ಅಧಿಕಾರಿ ನೀತಾ ಪ್ರಸಾದ್ ಸಿಬಿಐಗೆ 2022ರ ಫೆಬ್ರುವರಿಯಲ್ಲಿ ದೂರು ನೀಡಿದ್ದರು. ಈ ಕುರಿತು ಸಿಬಿಐನ ಮಧುರೈ ಭ್ರಷ್ಟಾಚಾರ ನಿಗ್ರಹ ದಳ ಪ್ರಾಥಮಿಕ ತನಿಖೆ ನಡೆಸಿದೆ.

ತನಿಖಾಧಿಕಾರಿಯಾಗಿದ್ದ ಡಿವೈಎಸ್‌ಪಿ ಎ. ದಂಡಪಾಣಿ ಸಲ್ಲಿಸಿದ್ದ ದೂರು ಆಧರಿಸಿ ಸಿಬಿಐನ ಬೆಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಎಫ್‌ಐಆರ್ ದಾಖಲಿಸಿ, ತನಿಖೆ ಆರಂಭಿಸಿದೆ. ಶಾಲಾ, ಕಾಲೇಜುಗಳಲ್ಲಿ ಹಿಂದಿ ಕಲಿಕೆಯನ್ನು ಪ್ರೋತ್ಸಾಹಿಸಿ ವಿಶೇಷ ತರಗತಿ ನಡೆಸಲು ಹಾಗೂ ಹಿಂದಿ ಕೋರ್ಸ್‌ಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಡಿಬಿಎಚ್‌ಪಿಎಸ್‌ಗೆ ಅನುದಾನ ಬಿಡುಗಡೆ ಮಾಡುತ್ತಿದೆ. ಶೇ. 75ರಷ್ಟು ಅನುದಾನ ಕೇಂದ್ರದಿಂದ ದೊರಕಿದರೆ, ಶೇ 25ರಷ್ಟನ್ನು ಡಿಬಿಎಚ್‌ಪಿಎಸ್ ತನ್ನ ಸ್ವಂತ ಮೂಲದಿಂದ ಬಳಸಬೇಕು.

2004- 2005 ಹಾಗೂ 2016-17ರ ಅವಧಿಯಲ್ಲಿ ಈ ರೀತಿ ಬಿಡುಗಡೆಯಾಗಿದ್ದ 5.78 ಕೋಟಿ ರೂಪಾಯಿ ಹಣವನ್ನು ಧಾರವಾಡ ಡಿಬಿಎಚ್‌ಪಿಎಸ್ ಅಧೀನದ ಆಯುರ್ವೇದ ಕಾಲೇಜು, ಹೋಮಿಯೋಪಥಿಕ್ ಕಾಲೇಜು, ಕಾನೂನು ಕಾಲೇಜು ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ವೇತನ ಪಾವತಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ ಎಂಬ ಉಲ್ಲೇಖ ಎಫ್‌ಐಆರ್‌ನಲ್ಲಿದೆ.

ಸಂಸ್ಥೆಯ ಅಧ್ಯಕ್ಷರಾಗಿದ್ದ ಆರ್.ಎಫ್. ನೀರಲಕಟ್ಟಿ, ಅವರ ಮಗ ಶಿವಯೋಗಿ ಆರ್. ನೀರಲಕಟ್ಟಿ (ಕಾರ್ಯಾಧ್ಯಕ್ಷರಾಗಿದ್ದರು) ಹಾಗೂ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ. ಆರ್.ಎಫ್. ನೀರಲಕಟ್ಟಿ ಮೃತಪಟ್ಟಿರುವುದರಿಂದ ಶಿವಯೋಗಿ ಮತ್ತು ಇತರರ ವಿರುದ್ಧ ಮಾತ್ರ ಎಫ್‌ಐಆರ್ ದಾಖಲಿಸಲಾಗಿದೆ.

ಇಂಥ ಅಕ್ರಮ ಆಂಧ್ರ ಪ್ರದೇಶದಲ್ಲಿಯೂ ನಡೆದಿತ್ತು. ಅಲ್ಲಿಯೂ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿಸಲಾಗಿತ್ತು. ಇದೀಗ ಕರ್ನಾಟಕದಲ್ಲಿಯೂ ಕೂಡ ಕೇಸ್ ದಾಖಲಾಗಿದ್ದು, ಯಾರ ಯಾರ ಬುಡಕ್ಕೆ ನೀರು ಬರಲಿದೆ ಎನ್ನುವ ಕುತೂಹಲ ಉಂಟಾಗಿದೆ.

ಇನ್ನು ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ ಹಾಲಿ ಅಧ್ಯಕ್ಷ ಈರೇಶ ಅಂಚಟಗೇರಿ, ಸಿಬಿಐನವರು ನಮಗೆ ಕೆಲವು ದಾಖಲೆ ಕೇಳಿದ್ದರು. ಬ್ಯಾಂಕ್ ಖಾತೆಯ ವಿವರಗಳನ್ನೂ ಕೇಳಿದ್ದರು. ಅವುಗಳನ್ನೆಲ್ಲ ನೀಡಿದ್ದೇವೆ. ಈಗಾಗಲೇ ಯಾವ್ಯಾವ ರಾಜ್ಯಗಳಲ್ಲಿ ಇಂಥ ಅಕ್ರಮ ನಡೆದಿವೆಯೋ ಅಲ್ಲೆಲ್ಲ ತನಿಖೆ ನಡೆದು, ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿಯೂ ಅಕ್ರಮ ನಡೆದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕಿದೆ. ಆದರೆ ಇದೆಲ್ಲ ಹಿಂದೆ ಇದ್ದ ಆಡಳಿತ ಮಂಡಳಿ ಮಾಡಿರೋ ಅಕ್ರಮ. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕು ಅಂತಾರೆ.

ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9, ಧಾರವಾಡ

Follow Us
TV9 Web
TV9 Web

TV9 Kannada

Read More
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು