ಧಾರವಾಡ: ಸಾವಿನಲ್ಲೂ ಒಂದಾದ ರೈತ ದಂಪತಿ

ಧಾರವಾಡ ತಾಲ್ಲೂಕಿನ ದೇವರಹುಬ್ಬಳ್ಳಿ ಗ್ರಾಮದ 82 ವರ್ಷದ ಈಶ್ವರ ಆರೇರ್ ಮತ್ತು 73 ವರ್ಷದ ಪಾರ್ವತಿ ಆರೇರ್ ಎಂಬ ರೈತ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಪಾರ್ವತಿ ಆರೇರ್ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಭಾನುವಾರ ರಾತ್ರಿ ಊಟ ಮಾಡಿ ಮಲಗಿದ್ದ ದಂಪತಿ ಬೆಳಿಗ್ಗೆ ಎದ್ದಿಲ್ಲ. ಅವರಿಗೆ ನಾಲ್ವರು ಹೆಣ್ಣು ಮಕ್ಕಳು ಮತ್ತು 12 ಮೊಮ್ಮಕ್ಕಳಿದ್ದಾರೆ. ಈ ದುರ್ಘಟನೆಯಿಂದ ಕುಟುಂಬಕ್ಕೆ ಆಘಾತವಾಗಿದೆ.

ಧಾರವಾಡ: ಸಾವಿನಲ್ಲೂ ಒಂದಾದ ರೈತ ದಂಪತಿ
ಮೃತ ದಂಪತಿ
Edited By:

Updated on: Feb 17, 2025 | 3:01 PM

ಧಾರವಾಡ, ಫೆಬ್ರವರಿ 17: ಧಾರವಾಡ (Dharwad) ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದ ರೈತ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ. ಈಶ್ವರ ಆರೇರ್ (82), ಪಾರ್ವತಿ ಆರೇರ್ (73) ಮೃತ ದಂಪತಿ. ಪಾರ್ವತಿ ಆರೇರ್ ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಪತ್ನಿ ಪಾರ್ವತಿ ಆರೇರ್
ಪತ್ನಿ ಆರೈಕೆಯನ್ನು ಪತಿ ಈಶ್ವರ ಆರೇರ್ ಮತ್ತು ಮಕ್ಕಳು ಮಾಡುತ್ತಿದ್ದರು. ಭಾನುವಾರ ರಾತ್ರಿ ಒಟ್ಟಿಗೆ ಊಟ ಮಾಡಿ ದಂಪತಿ ಮಲಗಿದ್ದರು. ಬೆಳಿಗ್ಗೆ ಎಬ್ಬಿಸಲು ಹೋದಾಗ ದಂಪತಿ ಮೇಲೆದ್ದಿಲ್ಲ. ರೈತ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ದಂಪತಿಗೆ ನಾಲ್ವರು ಪುತ್ರಿಯರು, 12 ಮಂದಿ ಮೊಮ್ಮಕ್ಕಳು ಇದ್ದಾರೆ.

ನದಿಗೆ ಈಜಲು ತೆರಳಿದ್ದ ಮೂವರ ಪೈಕಿ ಓರ್ವ ಮೃತಪಟ್ಟಿದ್ದು, ಇಬ್ಬರು ನೀರು ಪಾಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್​ಆರ್​ ಪುರ‌ ತಾಲೂಕಿನ ಗಡಿಗೇಶ್ವರ ಗ್ರಾಮದಲ್ಲಿ ನಡೆದಿದೆ. ಯುವಕ ಜಲಾಲ್‌ (25) ಮೃತದುರ್ದೈವಿ. ಜಲಾಲ್​ ಸ್ನೇಹಿತರ ಜತೆ ಈಜಲು ಭದ್ರಾ ನದಿಗೆ ತೆರಳಿದ್ದನು.  ಭದ್ರಾ ನದಿಯಲ್ಲಿ ಈಜುವಾಗ ನೀರಿನ ಸುಳಿಯಲ್ಲಿ ಸಿಲುಕಿ ಜಲಾಲ್​ ಮೃತಪಟ್ಟಿದ್ದಾನೆ. ಮೃತ ಜಲಾಲ್​ಗಾಗಿ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು ಶೋಧ ಕಾರ್ಯ ನಡೆಸಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಂಪ್ಲಾಪುರದಲ್ಲಿ ನಡೆದಿದೆ. ಗುಳೇದಗುಡ್ಡ ಮೂಲದ ಕಸ್ತೂರಿ (43) ಮೃತ ದುರ್ದೈವಿ. ಬಸವರಾಜು, ಶಾಂತಮ್ಮ, ವಿಶ್ವನಾಥ್, ಪಾವನಿ ಎಂಬುವರಿಗೆ ಗಾಯವಾಗಿದೆ. ಗಾಯಗೊಂಡ ನಾಲ್ವರಿಗೆ ಕುಣಿಗಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿಗೆ ತೆರಳ್ತಿದ್ದಾಗ ಅಪಘಾತ ಸಂಭವಿಸಿದೆ. ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:47 am, Mon, 17 February 25